@APPANNA1S ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಹಾಸ್ಯ ಸಿನಿಮಾ "ಯಾರಿಗು ಹೇಳ್ಬೇಡಿ"... ಈ ಸಿನಿಮಾದ trailer launch ಬಾದಷಾ ಕಿಚ್ಚ ಸುದೀಪ್ ಸರ್ ಅತೀ ಶ್ರೀಘದಲ್ಲಿ ಮಾಡಲಿದ್ದಾರೆ ನಿಮ್ಮ ಹಾರೈಕೆ ಬೆಂಬಲ ಸಧಾ ನಮ್ಮೊಂದಿಗೆ 🙏🏻🫶🏻🙏🏻💕
👑 @KicchaSudeep 🤗🤗
ಶಕ್ತಿ ಯೋಜನೆ ಜಾರಿ ನಂತರದಿಂದ ನಾಡಿನ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿವೆ. ದೇವರ ದರ್ಶನ ಪಡೆದ ಧನ್ಯತಾಭಾವ ಭಕ್ತಾದಿಗಳದ್ದಾದರೆ, ಭಕ್ತಾದಿಗಳನ್ನೇ ನಂಬಿದ್ದ ಸ್ಥಳೀಯ ವ್ಯಾಪಾರಿಗಳ ಬದುಕು ಹಸನಾಗಿದೆ.
ಧರ್ಮಸ್ಥಳಕ್ಕೆ ಉಚಿತ ಬಸ್ ಪ್ರಯಾಣ ಕೈಗೊಂಡ ನನ್ನ ಅಕ್ಕತಂಗಿಯರ ಶುಭ ಹಾರೈಕೆಯಷ್ಟೇ ಸಾಕು ನನಗೆ.
#ಶಕ್ತಿ #FreeBusesForWomen
ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ನೊಂದಿರುವ ನಾಡಿನ ನನ್ನ ತಾಯಂದಿರ, ಅಕ್ಕ ತಂಗಿಯರ ಆರ್ಥಿಕ ಹೊರೆಯನ್ನು ತುಸು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ನಾವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ್ದೇನೆ.
ಅರ್ಹ ಫಲಾನುಭವಿಗಳು ತಪ್ಪದೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಪ್ರಜೆಗಳ ಹಿತ ಕಾಯುವುದು ರಾಜಕೀಯ ಧರ್ಮ. ಎಷ್ಟೇ ವಿರೋಧ, ಟೀಕೆಗಳು ಬಂದರೂ ಈ ನಮ್ಮ ನಿಲುವಿನಲ್ಲಿ ಎಳ್ಳಷ್ಟು ಬದಲಾಗದು.
ಇಂದಿನಿಂದ "ಗೃಹಜ್ಯೋತಿ" ಯೋಜನೆಯಡಿ ಗರಿಷ್ಠ 200 ಯುನಿಟ್ ವರೆಗೆ ಗೃಹಬಳಕೆಯ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದ್ದೇವೆ.
ಬೆಲೆಯೇರಿಕೆಯೆಂಬ ಕಗ್ಗತ್ತಲು ದೇಶವನ್ನು ಆವರಿಸಿರುವ ಈ ಹೊತ್ತಿನಲ್ಲಿ ನಾಡಿನ ಮನೆಗಳಿಗೆ ಬೆಳಕು ನೀಡುವ ಸದುದ್ದೇಶದ ಕಾರ್ಯಕ್ರಮವಿದು.
ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಬಳಸುವ ಮೂಲಕ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ನಾಡ ಬಾಂಧವರಲ್ಲಿ ವಿನಂತಿ.
ಸಂಕಷ್ಟದ ಕತ್ತಲು ಸರಿಯಲಿ,
ಸಂತಸದ ಬೆಳಕು ಬೆಳಗಲಿ..
#GruhaJyothi
#Bakrid festival is a symbol of sacrifice & may this inspire all of us to lend our hands to those in distress.
#EidMubarak to all my dear Muslim friends!!
#EidAlAdha
ಜನರ ಬಗ್ಗೆ ಕಾಳಜಿ,
ನಡತೆಯಲ್ಲಿ ಪ್ರಾಮಾಣಿಕತೆ,
ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ.
ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ,
ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ.
ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ.
ನಡೆ - ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ.
ಜನತೆಯ ಆಶೀರ್ವಾದ ಇರಲಿ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಕ್ ನ್ಯೂಸ್ಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನು ರೀತ್ಯ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ..
ಎಚ್ಚರಿಕೆ..!!
ರಚನಾತ್ಮಕ ಟೀಕೆಗಳಿಗೆ ನಾವು ಮುಕ್ತರಿದ್ದೇವೆ, ಆದರೆ ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಾವು ಖಂಡಿತಾ ಸಹಿಸುವುದಿಲ್ಲ.
ಭಾರತೀಯ ಆಹಾರ ನಿಗಮ (ಎಫ್ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ @CTRavi_BJP ಸವಾಲು ಹಾಕಿದ್ದರು.
ಇಲ್ಲಿದೆ ಎಫ್.ಸಿ.ಐ ಕಮಿಟ್ಮೆಂಟ್ ಪತ್ರ.
ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು.
ಸಿ.ಟಿ.ರವಿ ಮತ್ತಿತರ @BJP4Karnataka ನಾಯಕರು ಮೊದಲು ಕೇಂದ್ರ @BJP4India ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು,
ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ.
#ಅನ್ನಭಾಗ್ಯ
ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು.
ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ.
ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು.