ಶಿವಮೊಗ್ಗದಲ್ಲಿ SDPI ಜಿಲ್ಲಾ ಪ್ರತಿನಿಧಿಗಳ ಸಭೆ ಯಶಸ್ವಿ | ಜನಪರ ನಿರ್ಣಯಗಳ ಅಂಗೀಕಾರ
ಇಂದು ಶಿವಮೊಗ್ಗ ನಗರದ ಎನ್.ಟಿ ರಸ್ತೆಯ ಫಲಕ್ ಪ್ಯಾಲೇಸ್ ಸಭಾಂಗಣದಲ್ಲಿ SDPI ಶಿವಮೊಗ್ಗ ಜಿಲ್ಲಾ ಪ್ರತಿನಿಧಿಗಳ ಸಭೆ ಯಶಸ್ವಿಯಾಗಿ ಜರುಗಿತು.
ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್ ರವರು ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು.
ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟನಾ ಭಾಷಣ ಮಾಡುತ್ತಾ, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ಬದ್ಧತೆ, ನಿಷ್ಠೆ, ತ್ಯಾಗ ಮನೋಭಾವ, ಉತ್ತಮ ನಿರ್ವಹಣಾ ಕೌಶಲ್ಯ ಹಾಗೂ ಸಮಯಪ್ರಜ್ಞೆ ಅತ್ಯಗತ್ಯವೆಂದು ತಿಳಿಸಿದದೆನು.
ಪಕ್ಷದ ಸಿದ್ಧಾಂತ ಮತ್ತು ಗುರಿಗಳನ್ನು ಜನರಿಗೆ ತಲುಪಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲ ಹಂತಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬೇಕೆಂದು ಒತ್ತಿ ಹೇಳಿದೆನು.
ರಾಜ್ಯ ಕಾರ್ಯದರ್ಶಿ ಅಕ್ರಂ ಮೈಸೂರು ಹಾಗೂ ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಸದಸ್ಯೆ ಹಸೀನಾಬಾನು ರವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಕಳೆದ 18 ತಿಂಗಳ ಪಕ್ಷದ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ವರದಿ ಮಂಡಿಸಲಾಯಿತು. ನಂತರ ಜನಪರವಾದ ಪ್ರಮುಖ 7 ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳು:
1. ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗಕ್ಕೆ ನೀಡಿ:
ಮಂಗಳೂರಿಗೆ ಸಂಚಾರಿ ಪೀಠ ನೀಡುವುದು ಗೊಂದಲಕ್ಕೆ ದಾರಿ. ಶಿವಮೊಗ್ಗವು ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಬಸ್, ರೈಲು, ವಿಮಾನ ಸಂಪರ್ಕ ಹೊಂದಿರುವ ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠವನ್ನು ತುರ್ತಾಗಿ ಮಂಜೂರು ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಜೀಲಾನ್ ಖಾನ್ ಆಗ್ರಹಿಸಿದರು.
2. ಆರೋಗ್ಯ ಸೌಲಭ್ಯ ಬಲಪಡಿಸಿ:
ಪ್ರತಿ ಹಳ್ಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕ ಮತ್ತು ಉತ್ತಮ ಪೀಠೋಪಕರಣ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಪಾಧ್ಯಕ್ಷ ಸಲೀಂ ಖಾನ್ ಒತ್ತಾಯಿಸಿದರು.
3. ಮಹಾನಗರ ಪಾಲಿಕೆ ಚುನಾವಣೆ ತಕ್ಷಣ ನಡೆಸಿ:
3 ವರ್ಷದಿಂದ ಚುನಾವಣೆ ನಡೆಯದೇ ವಾರ್ಡ್ಗಳು ಅನಾಥವಾಗಿವೆ. ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಾರ್ಪೊರೇಟರ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಭ್ರಷ್ಟಾಚಾರದ ಕೂಪವಾಗಿರುವ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಅಹ್ಮದ್ ಆಗ್ರಹಿಸಿದರು.
4. SIR ಪ್ರಕ್ರಿಯೆಯಲ್ಲಿ ಮತದಾರರಿಗೆ ತೊಂದರೆ ಬೇಡ:
SIR ಮ್ಯಾಪಿಂಗ್ನಲ್ಲಿ ಶಿವಮೊಗ್ಗ ಜಿಲ್ಲೆಯ ಒಬ್ಬ ಮತದಾರನೂ ಹೊರಗುಳಿಯಬಾರದು. BLOಗಳು ನಿರ್ಲಕ್ಷ್ಯ ವಹಿಸದೇ ಪ್ರತಿ ಬೂತ್ ಮಟ್ಟದಲ್ಲಿ ಜನರಿಗೆ ಸಹಕರಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಮೀರ್ ಒತ್ತಾಯಿಸಿದರು.
5. ವಾರ್ಡ್ಗಳಲ್ಲಿ ಹೆರಿಗೆ ಆಸ್ಪತ್ರೆ ವ್ಯವಸ್ಥೆ ಮಾಡಿ:
ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಜೊತೆಗೆ ತಜ್ಞ ಗೈನಕಾಲಜಿಸ್ಟ್ ವೈದ್ಯರನ್ನು ನೇಮಿಸಬೇಕು ಎಂದು ಜಿಲ್ಲಾ ಖಜಾಂಚಿ ಅಬ್ದುಲ್ ರಹೀಂ ಆಗ್ರಹಿಸಿದರು.
6. IIT-AIIMS ಮಾದರಿ ಸಂಸ್ಥೆ ಶಿವಮೊಗ್ಗಕ್ಕೆ ತನ್ನಿ:
ಯುವಜನತೆಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಲು IIT, AIIMS ಮಾದರಿಯ ಸಂಸ್ಥೆಗಳನ್ನು ಶಿವಮೊಗ್ಗಕ್ಕೆ ತರಬೇಕು ಎಂದು ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಗೌಸ್ ಒತ್ತಾಯಿಸಿದರು.
7. SDPI ವತಿಯಿಂದ BLA ನೇಮಕ:
SIR ಪ್ರಕ್ರಿಯೆಯಲ್ಲಿ ಜನರಿಗೆ ಸಹಾಯ ಮಾಡಲು ಸಾಧ್ಯವಾದ ಪ್ರತಿ ಬೂತ್ ಮತ್ತು ವಾರ್ಡ್ಗಳಲ್ಲಿ SDPI ವತಿಯಿಂದ ಬೂತ್ ಲೆವೆಲ್ ಅಸಿಸ್ಟೆಂಟ್ - BLA ಗಳನ್ನು ನೇಮಿಸಿ ಸಹಕಾರ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಸಮಿತಿ ಸದಸ್ಯ ಇಸಾಕ್ ಅಹ್ಮದ್ ತಿಳಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ SDPI ಪಕ್ಷದ ಹೋರಾಟ ನಿರಂತರ.
#SDPI #Shivamogga #DistrictRepresentativesMeet #AfsarKodlipete #HighCourtBench #ShivamoggaCorporationElection #HealthForAll #SIR #BLA #Education #PeoplesVoice #Karnataka
BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ @siddaramaiah ಸರಕಾರ ಪರಾಂಬರಿಸಿ ನೋಡಬೇಕು.
#StandwithRiyazKadambu
@hc_yogesh ರವರೆ ನೀವೂ ಜಾತ್ಯತೀತ ಪಕ್ಷದಲ್ಲಿ ಇದ್ದು ಕೊಂಡು ಎಲ್ಲ ಸಮುದಾಯಕ್ಕೆ ಸಮಾನವಾಗಿ ನೋಡುತ್ತಿರಿ ಎಂದು ಭಾವಿಸಿದೆವು ಆದರೆ ನಿಮ್ಮ ನಡೆ ಹಿಜಾಬ್ ಹಾಗೂ ಮುಸ್ಲಿಂ ವಿರೋಧಿ ಕೃತ್ಯದ ಬಗ್ಗೆ ಇಲ್ಲದು ಯಾಕೆ ? ನೆನಪಿರಲಿ ನೀವೂ ಸೋತಿದಿರಿ ಆದರೆ ನಿಮಗೆ ನೀಡಿದ ಮತ ಮುಸ್ಲಿಂ ಸಮುದಾಯದೇ ಹೊರತು ನಿಮ್ಮ ಸಮುದಾಯದ ಅಲ್ಲ
ಸಂಯುಕ್ತ ನಾಗರೀಕ ವೇದಿಕೆ ದ.ಕ ಜಿಲ್ಲಾ ಸಮಿತಿಯು ಉಳ್ಳಾಲ ತಾಲ್ಲೂಕಿನ ಕೆ.ಸಿ.ರೋಡ್'ನಲ್ಲಿ ಇಂದು (11/4/25) ಹಮ್ಮಿಕೊಂಡಿದ್ದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ರವರ ಅರ್ಥವತ್ತಾದ ಭಾಷಣ...
#IndiaAgainstWaqfBill#WaqfBoard#RejectWaqfBill
ಕಾಂಗ್ರೆಸ್ ನ್ನು ಗೆಲ್ಲಿಸಿದ ಮುಸ್ಲಿಮರವಸ್ಥೆ!
ಮುಸ್ಲಿಮರ ಅವಹೇಳನ ಮಾಡಿದ ಪ್ರಭಾಕರ್ ಭಟ್,ಸೂಲಿಬೆಲೆ ಮೇಲೆ FIR ಆದ್ರೂ ಬಂಧಿಸುವುದಿಲ್ಲ.RSS ವಿರುದ್ಧಪ್ಲಕಾರ್ಡ್ ಹಿಡಿದಕ್ಕೆ SDPI ಹುಬ್ಳಿ ನಾಯಕ ಗಫೂರ್ ರನ್ನು ಸಂಘಿಗಳು ಕೇಸು ಕೊಟ್ಟರೆ FIR ಹಾಕಿ ಕ್ಷಣಾರ್ಧದಿ ಬಂಧಿಸುತ್ತೆ ಕಾಂಗ್ರೆಸ್ ಸರ್ಕಾರ.
#ReleaseGafoorimmediately
ಬಾಡಿಗೆ ಮನೆ ಯಾವತಿದರು ಬಾಡಿಗೆ ಮನೆಯೇ ಒಬ್ಬ ಎಂ.ಎಲ್.ಸಿ ಆಗಿರುವಂತ ನಾಯಕಿ ಬಾಲ್ಕಿಸ್ ಬಾನು ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಯಾವರೀತಿ ಕಡೆಗಣಿಸಿದರೆ ಇದು ಮುಸ್ಲಿಂ ಎಂಬ ಕಾರಣಕ್ಕೋ ಅಥವಾ ಮಾಹಿಳೆ ಎಂದೂ ತಿಳಿಯುತ್ತಿಲ್ಲ .ಮುಸ್ಲಿಂಸಮುದಾಯ ಕೇವಲ ಮತಪಡೆಯಲು ಮಾತ್ರವಾ ಕಾಂಗ್ರೆಸ್ ಬಳಸುವುದು? @IncShimogga@siddaramaiah@INCKarnataka
ಬಹುದಿನಗಳ ನಂತರ ಒಂದು ಒಳ್ಳೆಯ ಸುದ್ದಿ ಇದಾಗಿದೆ
ಇದಕ್ಕೂ ಮೊದಲು ತನ್ನ ಬಚ್ಚಲು ಬಾಯಿಂದ ಮುಸ್ಲಿಂ ಸಮುದಯವನ್ನು ನಿಂದಿಸುತ್ತಿದ್ದ #ಈಶ್ವರಪ್ಪ ರನ್ನು ಈಗ ಅದೇ ದಾರಿಯಲ್ಲಿ ಸಾಗುತ್ತಿದ್ದ #ಯತ್ನಾಳ್ ರನ್ನು ದೇವರು ಸರಿಯಾಗಿ ಉತ್ತರ ನೀಡಿದಾನೆ. ಬಾಯಿಬಿಟ್ಟರೆ ವಾರ್ಕ್ಫ್ ವಿರುದ್ಧದ ಹೇಳಿಕೆಗೆ ಸರಿಯಾದ ಪಾಠ ಸಿಕ್ಕಿ ರಾಜಕೀಯ ಅಂತ್ಯವಾಗಿದೆ
ಓಯ್ @pumpwell_sharan ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ನಮಗೆ ಬೇಕಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಸುಮಾರು 400 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಆಳ್ವಿಕೆ ನಡೆಸಿದವರ ವಂಶಸ್ಥರು ನಾವು ಎಂಬುದು ನಿನಗೆ ನೆನಪಿರಲಿ...
#MiladCelebrationIsOurRight
ಮಾನ್ಯ ಉಚ್ಚ ನ್ಯಾಯಾಲಯೂ ಬಾಬರಿ ಮಸೀದಿಯ ತೀರ್ಪು ನೀಡುವಾಗ ಹೇಳಿತ್ತು ಬಾಬರಿಯನ್ನು ಹೊಡೆದಿದ್ದು ಅಸಂವಿಧಾನಿಕ ಕೃತ್ಯ ಎಂದು, ಇಂತಹ ಪಚೋದನಿಕ ಹೇಳಿಕೆಗಳು ಹಿಂದೂ ಧರ್ಮದ ಹಬ್ಬ ಗಳಲ್ಲಿ ಹಾಕುವಾಗ,ಜಿಲ್ಲೆಯಲ್ಲಿ ಮುಸ್ಲಿಂ ರಾಜರ ಚಿತ್ರಗಳ ಮತ್ತು ಹೆಸರುಗಳು ಹಾಕುವುದರಿಂದ ತಡೆಹಿಡಿದಿರುವದು ಯಾವ ಶಾಂತಿ ಕಾಪಾಡುವ ವಿಧಾನ @Shivamogga_SP
Many people in my life apart from my education taught me many lessons so to all my teachers and those people, It is because of there lessons that I am in this position today
#HappyTeachersDay#ಶಿಷಕರದಿನಾಚಾರಣೆ
ರಾಜ್ಯದಲ್ಲಿ ಕೋಮುವಾದಿಆಡಳಿತ ಬೇಡವೆಂದು ಅತಿಹೆಚ್ಚು ಬಹುಮತದಿಂದ ಕಾಂಗ್ರೆಸ್ @INCKarnataka ಸರಕಾರವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಲಾಯಿತು,ಆದರೆ ಕಾಂಗ್ರೆಸ್ ಸರಕಾರದ ಇಂತಹ ನಡೆಗಳಿಂದ ಕೋಮುವಾದಿ ಪಕ್ಷಯಾರೆಂದು ಅರಿಯುವುದು ಅವಶ್ಯಕವಾಗಿದೆ.
ಇಂತಹ ನಗೆಗಳಿಂದಲ್ಲೇ @IncKanakapura ನಿಂದಜನರು ಮುಖಮಾಡಿ ಪರ್ಯಾಯರಾಜಕೀಯಕ್ಕೆ ಹೋಗುತ್ತಿರುವುದು
ಸ್ವಾತಂತ್ರ್ಯವಾಗಿರುವ ದೇಶದಲ್ಲಿ ರಾತ್ರಿ ಹೊರಗೆ ಹೋಗುವುದು ಸುರಕ್ಷಿತವಲ್ಲ ವೆಂದು ತಾನು ಕಾರ್ಯನಿರ್ವಹಿಸುವ ಆಸ್ಪತ್ರೆಯಲ್ಲಿ ಉಳಿದರೆ ಅಲ್ಲಿಯೂ ಸುರಕ್ಷಿತವಲ್ಲ ಎಂಬ ಕ್ರೌರ್ಯತೋರಿಸಿ ಹೆಣ್ಣಿಗೆ ತನ್ನ ಶಂಡತನ ತೋರಿಸಿದ ಕಾಮುಕರನ್ನು ಸ್ವಲ್ಪವೂ ಯೋಚಿಸದೆ ನಡು ರಸ್ತೆಯಲ್ಲಿ ಕೋಲ್ಲಬೇಕು ಆಗಲೇ ನಿಜವಾದ ಸ್ವತಂತ್ರ ಸಿಗುವುದು
#JusticeForMoumita
On this day, on 28 June 2023, the terrorists of a attacked our brother Chandra Shekhar Azad ji.
Once our brother was injured on this date, today the injured lion is roaring in Parliament.