ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿರುವುದು ತುಂಬಾ ವಿಷಾದಕರ. ಮಹಾಂತೇಶ ಬೀಳಗಿ ಅವರು ದಕ್ಷತೆ, ನೈತಿಕತೆ ಮತ್ತು ಸಮರ್ಪಣೆಯಿಂದ ಕೆಲಸ ಮಾಡಿದ ಗೌರವಾನ್ವಿತ ಅಧಿಕಾರಿಯಾಗಿದ್ದರು. ಅವರ ಅಗಲಿಕೆ ಆಡಳಿತ ವ್ಯವಸ್ಥೆಗೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಐಸಿಎಐ ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ನಮ್ಮ ಜಮಖಂಡಿಯ ಕುಮಾರಿ ರಶ್ಮಿ ಧರಣೇಶ ಪಾಟೀಲ ಉತ್ತೀರ್ಣರಾಗಿ ಜಮಖಂಡಿಯ ಕೀರ್ತಿ ಹೆಚ್ಚಿಸಿದ್ದಾರೆ. ಕು. ರಶ್ಮಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಹಾಗೂ ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗಳು.
ಇವತ್ತಿನ ದಿನ ನಮ್ಮೆಲ್ಲರ ನೆಚ್ಚಿನ ಯುವ ನಾಯಕಿಯಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ್ ಇವರ ಹುಟ್ಟುಹಬ್ಬದ ಅಂಗವಾಗಿ ಬಾಗಲಕೋಟೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮ್ಮ ನೆಚ್ಚಿನ ಸ್ನೇಹಿತರ ಜೊತೆಗೆ ಶುಭಾಶಯಗಳನ್ನು ಕೋರಿದ ಕ್ಷಣಗಳು... 💐💐💐 @VVKashappanavar
ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ದಾಳಿಯ ಕುರಿತು ಕುಂಬಾರ ಹಳ್ಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಜಾಗೃತರಾಗಿರಬೇಕು ಎಂದು ಮನವಿ ಮಾಡುತ್ತೇನೆ.
ದಿ.ಸಿದ್ದು.ಭೀ.ನ್ಯಾಮಗೌಡರು ಜೀವನದುದ್ದಕ್ಕೂ ಸಮಾಜದ, ಬಡವರ, ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನೆಗಳನ್ನು ಕೈಗೊಳ್ಳುತ್ತಿದ್ದರು. ತಂದೆಯವರ 3ನೆಯ ಪುಣ್ಯಸ್ಮರಣೆಯಂದು ಆಶೀರ್ವಾದ ಪಡೆಯುತ್ತಾ ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳನ್ನು, ಸಾರ್ವಜನಿಕ ಪ್ರೀತಿ,ವಿಶ್ವಾಸವನ್ನು ಯಶಸ್ವಿಯಾಗಿ ಕಾಪಾಡಿಕೊಂಡು ಹೋಗುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆ.