Thousands of students and farmers have gathered at Freedom Park seeking justice in the AO-AAO recruitment.
Will the government finally talk to them and resolve the clear violation of C&R rules?
A truly farmer-friendly government would not ignore them.
@ShobhaBJP No jai kisan in the state, because of the irregularities in the recruitment process, request government to intervene and protect the right of agriculture graduates( icar accredited)
25+ days of peaceful protests. Hunger strikes. Students hospitalized. Yet the Karnataka Government continues to look away.
Thousands of ICAR-recognized Agriculture graduates are demanding nothing more than a fair and transparent recruitment process. Withdraw the controversial guidelines, postpone the KEA exam, and guarantee equal opportunity for every eligible candidate.
Justice cannot wait. Stop the politics. Stand with students.
#CongressFailsKarnataka
ಮಾನ್ಯ ಮುಖ್ಯಮಂತ್ರಿಗಳೇ,
ರಾಜ್ಯದ ಎಲ್ಲಾ ಐಸಿಎಆರ್ (ICAR) ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳ ಪದವೀಧರರು ಕಳೆದ 25ಕ್ಕೂ ಹೆಚ್ಚು ದಿನಗಳಿಂದ ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಮನವಿ, ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪತ್ರ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನೂ ವಿದ್ಯಾರ್ಥಿಗಳು ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳು ಆಸ್ಪತ್ರೆಗೂ ದಾಖಲಾಗಿದ್ದಾರೆ. ಆದರೂ ನಿಮ್ಮ ಸರ್ಕಾರದಿಂದ ಯಾವುದೇ ಪರಿಣಾಮಕಾರಿ ಸ್ಪಂದನೆ ದೊರೆತಿಲ್ಲ.
ಕೇವಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಫೋಟೋಶೂಟ್ ಮಾಡಿಸಿಕೊಳ್ಳುವುದು ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕು. ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವುದೇ ಸರ್ಕಾರದ ನಿಜವಾದ ಕರ್ತವ್ಯ.
ಕಳೆದ ವಾರ ದೆಹಲಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುವ ಮಾತುಗಳನ್ನು ಆಡಿದ ನೀವು, ಈಗ ನಮ್ಮ ರಾಜ್ಯದ ವಿದ್ಯಾರ್ಥಿಗಳು ಕಳೆದ 25ಕ್ಕೂ ಹೆಚ್ಚು ದಿನಗಳಿಂದ ಬೀದಿಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ಅವರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಏಕೆ ಮುಂದಾಗುತ್ತಿಲ್ಲ? ದೆಹಲಿಯಲ್ಲಿ ರಾಜಕೀಯ ಮಾಡುವುದಕ್ಕಿಂತ ಮೊದಲು, ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸಿ.
ಕೆಇಎ (KEA) ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ. ನೇಮಕಾತಿ ಮಾರ್ಗಸೂಚಿಯ ವಿರುದ್ಧ ರಾಜ್ಯದಾದ್ಯಂತ ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿರುವಾಗ, ಅವುಗಳನ್ನು ಬಗೆಹರಿಸದೆ ಪರೀಕ್ಷೆ ನಡೆಸುವುದು ನ್ಯಾಯಸಮ್ಮತವಲ್ಲ.
30.05.2026ರಂದು ಪ್ರಕಟವಾದ ಮೂಲ ಕೃಷಿ ಅಧಿಕಾರಿ ನೇಮಕಾತಿ ಅಧಿಸೂಚನೆಯಲ್ಲಿ Rai Technology Universityಯ B.E. Biotechnology ಪದವೀಧರರ ಕುರಿತು ಯಾವುದೇ ಉಲ್ಲೇಖ ಇರಲಿಲ್ಲ. ಆದರೆ 01.06.2026ರಂದು ಆ ವಿಶ್ವವಿದ್ಯಾಲಯವನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದಾಗಲೇ 20.06.2026ರಂದು B.E. Biotechnology ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಯಿತು. ಈ ಎಲ್ಲಾ ನಿರ್ಧಾರಗಳು ನಿಮ್ಮ ಸರ್ಕಾರದ ಅವಧಿಯಲ್ಲೇ ಜಾರಿಯಾಗಿವೆ.
ಒಂದು ವೇಳೆ ಹಿಂದಿನ ಸರ್ಕಾರದ ನಿಯಮಗಳೇ ಸಮಸ್ಯೆಯ ಮೂಲವಾಗಿದ್ದರೆ, ಕಳೆದ ಮೂರು ವರ್ಷಗಳಿಂದ ಅವುಗಳನ್ನು ತಿದ್ದುಪಡಿ ಮಾಡಲು ನಿಮ್ಮ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ? ಈಗ ಅದರ ಹೊಣೆಯನ್ನು ಇತರರ ಮೇಲೆ ಹೊರಿಸುವುದರಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗುವುದಿಲ್ಲ.
ವಿದ್ಯಾರ್ಥಿಗಳ ಬೇಡಿಕೆ ಸ್ಪಷ್ಟವಾಗಿದೆ, ವಿವಾದಾತ್ಮಕ ನೇಮಕಾತಿ ಮಾರ್ಗಸೂಚಿಯನ್ನು ತಕ್ಷಣ ಹಿಂಪಡೆಯಿರಿ, ನಿಗದಿಯಾಗಿರುವ ಕೆಇಎ ಪರೀಕ್ಷೆಯನ್ನು ರದ್ದುಪಡಿಸಿ, ಎಲ್ಲಾ ಐಸಿಎಆರ್ ಮಾನ್ಯತೆ ಪಡೆದ ಕೃಷಿ ಪದವೀಧರರಿಗೆ ಸಮಾನ ಅವಕಾಶ ಕಲ್ಪಿಸುವ ಹೊಸ ಮಾರ್ಗಸೂಚಿ ಪ್ರಕಟಿಸಿ. ನಂತರವೇ ಹೊಸದಾಗಿ ಪರೀಕ್ಷೆ ನಡೆಸಿ.
ನ್ಯಾಯ ಬೇಕು… ರಾಜಕೀಯ ಬೇಡ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka
#JusticeForAgriStudents
#CongressLies
#DKExpose
ಇದು ಕರ್ನಾಟಕದ ಕೃಷಿ ವಿದ್ಯಾರ್ಥಿಗಳ ಆಕ್ರಂದನ.
ಹೋರಾಟದ ವೇಳೆ ವಿದ್ಯಾರ್ಥಿನಿಯೊಬ್ಬರು ಅಸ್ವಸ್ಥರಾಗಿದ್ದಾರೆ.
@DKShivakumar ಅವರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. AO & AAO ಅಧಿಸೂಚನೆಯನ್ನು ತಕ್ಷಣ ಹಿಂಪಡೆದು ಕೃಷಿ ಪದವೀಧರರಿಗೆ ನ್ಯಾಯ ಒದಗಿಸಿ.
#SaveAgricultureGraduates#KEA#KarnatakaNews
ಸಿಎಂ @DKShivakumar ಅವರೇ, ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿ ಮೇಲೆ ಸುಖಾಸುಮ್ಮನೆ ಆರೋಪ ಮಾಡಬೇಡಿ.
ಅಧಿಕಾರದಲ್ಲಿರುವುದು ನಿಮ್ಮದೇ ಕಾಂಗ್ರೆಸ್ ಸರ್ಕಾರ, ಆದೇಶ ಹೊರಡಿಸಿದ್ದು ನೀವೇ.. ಆದರೂ ಪ್ರತಿಯೊಂದಕ್ಕೂ ಹಳೆಯ ಸರ್ಕಾರವನ್ನು ಆರೋಪಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವುದು ನಿಮ್ಮ ಆಡಳಿತಾತ್ಮಕ ದಿವಾಳಿತನಕ್ಕೆ ಸಾಕ್ಷಿ.
ದಿನಾಂಕ 30.05.2026 ರಂದು ಹೊರಡಿಸಲಾದ ಮೂಲ ನೇಮಕಾತಿ ಅಧಿಸೂಚನೆಯಲ್ಲಿ ಎಲ್ಲಿಯೂ ನಿಮ್ಮ ಸರ್ಕಾರ B.E. Biotechnology ಕೋರ್ಸ್ ಕುರಿತಾಗಲಿ ಅಥವಾ Rai Technology University ಪಾಲ್ಗೊಳ್ಳುವಿಕೆಯ ಕುರಿತಾಗಲಿ ಯಾವುದೇ ಉಲ್ಲೇಖ ಮಾಡಿರಲಿಲ್ಲ. ಆದರೆ, ತದನಂತರ ಅಂದರೆ 01.06.2026 ರಂದು Rai Technology Universityಯನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ 20.06.2026 ರಂದು B.E. Biotechnology ಕೋರ್ಸ್ಗೂ ಅವಕಾಶ ಕಲ್ಪಿಸಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಈಗ ನಿಮ್ಮ ಆಡಳಿತಾತ್ಮಕ ಲೋಪ ಬಯಲಾಗುತ್ತಿದ್ದಂತೆ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿ ಕಡೆಗೆ ಬೆರಳು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಿಮಗೆ ನಿಜವಾಗಿಯೂ ಯುವಜನರ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ, ಈ ರಾಜಕೀಯ ನಾಟಕವನ್ನು ನಿಲ್ಲಿಸಿ. ಕಳೆದ 20 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಕೃಷಿ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಿ, ಅವರಿಗೆ ತಕ್ಷಣವೇ ನ್ಯಾಯ ಒದಗಿಸಿ.
#DKExpose
#CongressLies
#CongressFailsKarnataka
@DKShivakumar Dear sir
Totally C and R rules violated in the AO / AAO Reqruitment... Like Raitech private college permitted to write the exam they are in the C and R rule...
And BE Biotechnology non Agri students were also allowed.... Exam is on 8 & 9 Aug..stop this process
@KEA_karnataka ಕೃಷಿ ಇಲಾಖೆಯ ನೇಮಕಾತಿಯಲ್ಲಿ ಹಿಂಬಾಗಿಲಿನಿಂದ Rai Tech ಮತ್ತು BE Biotech ಅವರನ್ನು ಸೇರಿಸಿ ಭ್ರಷ್ಟಾಚಾರವೇ ಎಸಗಿದ್ದಾರೆ. ಮೊದಲು ಅದನ್ನು ಸರಿಮಾಡಿ. ಆಗಸ್ಟ್ 8 ರಂದು HK ಮತ್ತು ಆಗಸ್ಟ್ 9 ರಂದು NHK ಪರೀಕ್ಷೆ ಇದೆ ಕೂಡಲೇ ಪರೀಕ್ಷೆ ತಡೆಹಿಡಿದು ನೈಜ ಕೃಷಿ ಪದವೀಧರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಇಲ್ಲವಾದರೆ ಕುರ್ಚಿ ಬಿಟ್ಟು ಬಿಡಿ
These are farmers kids. Don’t take them for granted.
Their fathers toil in peak summer and freezing winters to feed every mouth.
They’ve defied drought, floods, and climate itself.
And you really think their children will sit silent while you cheat us with injustice?
ಮಾನ್ಯ ಕೃಷಿ ಸಚಿವರೇ ನಿಮ್ಮ ಪ್ರಕಾರ ಕೃಷಿ ಇಲಾಖೆಯಲ್ಲಿ, ಕೃಷಿ ತಾಂತ್ರಿಕ ಅಭ್ಯರ್ಥಿಗಳಿಗೆ 2.3% ಮೀಸಲಾತಿ ಇತ್ತು. ಆದರೆ 2017 ರಲ್ಲಿ ನಡೆದ ನೇಮಕಾತಿಯಲ್ಲಿ ಯಾವ ಆಧಾರದಲ್ಲಿ ಕೃಷಿ ತಾಂತ್ರಿಕ ಅಭ್ಯರ್ಥಿಗಳನ್ನು ಪರಿಗಣಿಸಿಲ್ಲ?
ಸದನಕ್ಕೆ ತಪ್ಪು ಮಾಹಿತಿ ಯಾಕೆ ನೀಡುತ್ತೀರಿ? ಇದಕ್ಕೆ ಹೊಣೆ ಯಾರು? @BSBommai@bcpatilkourava@tv9kannada