Met Hon’ble Prime Minister Shri @narendramodi avaru in New Delhi today for the first time after assuming office as the Chief Minister of Karnataka.
We had a constructive discussion on Karnataka’s development priorities, including infrastructure, investment, urban mobility, irrigation, innovation, and welfare initiatives that directly impact the lives of our people.
Karnataka has always been a key contributor to India’s growth story, and I reiterated our commitment to further strengthening that role. I look forward to working closely with the Union Government in the spirit of cooperative federalism to accelerate development, attract greater opportunities, and fulfil the aspirations of the people of Karnataka.
Together, we can build a stronger Karnataka and contribute meaningfully to a stronger India.
@PMOIndia
Chief Minister Shri @DKShivakumar met Hon’ble Prime Minister Shri Narendra Modi avaru in New Delhi today for the first time after assuming office as the Chief Minister of Karnataka.
The meeting featured a constructive discussion on Karnataka’s development priorities, including infrastructure, investment, urban mobility, irrigation, innovation, and welfare initiatives aimed at improving the lives of the people.
The Chief Minister reaffirmed Karnataka’s commitment to remaining a leading contributor to India’s growth story and emphasised the importance of cooperative federalism in accelerating the State’s development journey. He expressed confidence that closer collaboration between the State and the Union Government would create greater opportunities, drive inclusive progress, and fulfil the aspirations of the people of Karnataka.
A stronger Karnataka will continue to strengthen the foundation of a stronger India.
ಪಂಚಮಸಾಲಿ ಪೀಠಗಳ ಗೊಂದಲ-ಭಾಗ 13 | ಮಠ ಪರಂಪರೆಯ ಹಿನ್ನೆಲೆ ಇಲ್ಲದ ಬಸವ ತತ್ವ ಪ್ರಚಾರಕ ಲಿಂಗಾನಂದ ಸ್ವಾಮಿ.
ನಾಡಿನಲ್ಲಿ ಅನೇಕ ಪರಂಪರಾಗತ ಲಿಂಗಾಯತ ವಿರಕ್ತ ಮಠಗಳಿವೆ, ಅನೇಕ ಮಠಾಧೀಶರು ಆಗಿಹೋಗಿದ್ದಾರೆ, ಆದರೆ ಅವರಾರಿಗೂ ಲಿಂಗಾನಂದ ಸ್ವಾಮಿಗಳಿರುವಷ್ಟು ಅನುಯಾಯಿಗಳಾಗಲಿ, ಭಕ್ತರಾಗಲಿ ಇಲ್ಲ ಎನ್ನುವುದು ಸತ್ಯ. ಅವರ ಕಾಲದಲ್ಲಿ ಮಾತೆ ಮಹಾದೇವಿ ತಾಯಿಯವರೂ ಒಳಗೊಂಡಂತೆ ಅನೇಕ ಜನ ಸಾಧಕರು ಜಾತಿ ಭೇದ ಮರೆತು ಬಸವ ತತ್ವದ ಕಡೆ ಆಕರ್ಷಿತರಾಗಿದ್ದು ವಿಶೇಷ. ಈ ಸಾಧನೆ ಬೇರೆ ಯಾವುದೇ ಮಠಾಧೀಶರು ಮಾಡಲಿಲ್ಲ ಎನ್ನುವುದೂ ಅಷ್ಟೆ ಸತ್ಯ.
ಪಂಚಮಸಾಲಿ ಸಮಾಜದ ಅತ್ಯಂತ ಪವರ್ಫುಲ್ ಬಸವವಾದಿ ಧಾರ್ಮಿಕ ವ್ಯಕ್ತಿ ಎಂದರೆ ಲಿಂಗೈಕ್ಯ ಲಿಂಗಾನಂದ ಸ್ವಾಮಿಗಳು. ಲಿಂಗಾನಂದ ಸ್ವಾಮಿಗಳು ೧೯೩೧ರ ಸೆಪ್ಟೆಂಬರ್ ೧೫ರಂದು ವಿಜಯಪುರ ಜಿಲ್ಲೆಯ ಬಸವನ ಬಾವೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಕಪ್ಪರದ ಕುಟುಂಬದಲ್ಲಿ ಜನಿಸಿದರು, ಇವರ ಮೂಲ ಹೆಸರು ಸಂಗನಗೌಡ ಕಪ್ಪರದ. ಕರ್ನಾಟಕ ವಿಶ್ವವಿದ್ಯಾಲಯ ಬಿ.ಎ. ಆನರ್ಸ್ ಪದವಿಧರರಾಗಿದ್ದ ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಆನಂತರ ಬಸವಣ್ಣನವರ ವಿಚಾರಗಳಿಂದ ಪ್ರಭಾವಿತರಾಗಿ ಆಧ್ಯಾತ್ಮಿಕ ಆಸಕ್ತಿ ಬೆಳೆಸಿಕೊಂಡರು. ಯಾವ ಮಠ ಪರಂಪರೆಯ ಹಿನ್ನೆಲೆ ಇಲ್ಲದೆ ತಮ್ಮ ಸ್ವಂತ ಶಕ್ತಿ ಹಾಗು ಸಾಮರ್ಥ್ಯದ ಮೇಲೆ ಇಡೀ ನಾಡಿನಾದ್ಯಂತ ಬಸವ ತತ್ವದ ಪ್ರಚಾರ ಹಾಗು ಪ್ರಸಾರಕ್ಕೆ ನಾಂದಿ ಹಾಡಿದರು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಡಾ. ಫ. ಗು. ಹಳಕಟ್ಟಿಯವರು ವಚನ ಸಂಶೋಧನೆ ಹಾಗು ಸಂಪಾದನೆ ಮಾಡುವ ಮೂಲಕ ಲಿಂಗಾಯತ ಧರ್ಮವನ್ನು ನಿಜ ಅರ್ಥದಲ್ಲಿ ಪುನರುತ್ಥಾನ ಮಾಡಿದ್ದರು. ಅದರ ಫಲವನ್ನು ನಾಡಿಗೆ ಉಣಿಸುವ ಮೂಲಕ ಚರ ಜಂಗಮರಾಗಿ ಬಸವ ಧರ್ಮ ಜನಮನ ತಲುಪಿಸುವಲ್ಲಿ ಲಿಂಗಾನಂದ ಸ್ವಾಮಿಗಳ ಕೊಡುಗೆ ಅನನ್ಯವಾದದ್ದು. ಬಸವಣ್ಣನವರು ಜನ್ಮಿಸಿದ ವಿಜಯಪುರ ಭೂಮಿ ಇಂದಿಗೂ ವೈದಿಕತೆಯ ಅಜ್ಞಾನದ ತೊಟ್ಟಿಲಾಗಿದೆ. ಇಲ್ಲಿನ ಲಿಂಗಾಯತರಿಗೆ, ವಿಶೇಷವಾಗಿ ಪಂಚಮಸಾಲಿ ಲಿಂಗಾಯತರಿಗೆ ಬಸವಣ್ಣ ಅಕ್ಷರಶಃ ಅಪರಿಚಿತ ಎನ್ನುವುದು ದುರಂತದ ಸಂಗತಿ.
ಅಂತಹ ವಿಜಯಪುರ ಮಣ್ಣಿನಲ್ಲಿ, ಅದೂ ಬಸವಣ್ಣನವರು ಹುಟ್ಟಿದ ಬಾಗೇವಾಡಿ ಪಟ್ಟಣದ ಅತ್ಯಂತ ಹತ್ತಿರದಲ್ಲಿರುವ ಮನಗೂಳಿ ಗ್ರಾಮಲ್ಲಿ ಹುಟ್ಟಿ ಇಡೀ ನಾಡಿನಾದ್ಯಂತ ಬಸವ ಪ್ರಜ್ಞೆಯನ್ನು ಜಾಗೃತಗೊಳಿಸಿದ ಏಕೈಕ ಆಧ್ಯಾತ್ಮಿಕ ನಾಯಕ ಲಿಂಗಾನಂದ ಸ್ವಾಮಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ನಾಡಿನಲ್ಲಿ ಅನೇಕ ಪರಂಪರಾಗತ ಲಿಂಗಾಯತ ವಿರಕ್ತ ಮಠಗಳಿವೆ, ಅನೇಕ ಮಠಾಧೀಶರು ಆಗಿಹೋಗಿದ್ದಾರೆ, ಆದರೆ ಅವರಾರಿಗೂ ಲಿಂಗಾನಂದ ಸ್ವಾಮಿಗಳಿರುವಷ್ಟು ಅನುಯಾಯಿಗಳಾಗಲಿ, ಭಕ್ತರಾಗಲಿ ಇಲ್ಲ ಎನ್ನುವುದು ಸತ್ಯ. ಅವರ ಕಾಲದಲ್ಲಿ ಮಾತೆ ಮಹಾದೇವಿ ತಾಯಿಯವರೂ ಒಳಗೊಂಡಂತೆ ಅನೇಕ ಜನ ಸಾಧಕರು ಜಾತಿ ಭೇದ ಮರೆತು ಬಸವ ತತ್ವದ ಕಡೆ ಆಕರ್ಷಿತರಾಗಿದ್ದು ವಿಶೇಷ. ಈ ಸಾಧನೆ ಬೇರೆ ಯಾವುದೇ ಮಠಾಧೀಶರು ಮಾಡಲಿಲ್ಲ ಎನ್ನುವುದೂ ಅಷ್ಟೆ ಸತ್ಯ. ಜಂಗಮ ಕುಲದವರು ಮಾತ್ರ ಮಠಾಧೀಶರಾಗಬೇಕು, ಹಾಗು ಪುರುಷರು ಮಾತ್ರ ವಿರಕ್ತ ಪೀಠ ಏರಬೇಕು ಎನ್ನುವ ಪಟ್ಟಭದ್ರರು ರೂಪಿಸಿದ ಸ್ಥಾಪಿತ ಕಟ್ಟಳೆಯನ್ನು ಬಹಳ ದಿನಗಳ ನಂತರ ಮುರಿದವರು ಲಿಂಗಾನಂದ ಸ್ವಾಮಿಗಳು. ಅವರ ದೃಢ ನಿಶ್ಚಯ ಹಾಗು ಆತ್ಮವಿಶ್ವಾಸದ ಕಾರಣ ಮಹಿಳಾ ವಿರಕ್ತ ಪೀಠ ಅಸ್ತಿತ್ವಕ್ಕೆ ಬಂದು ಅವರ ಶಿಷ್ಯೆ ಮಾತೆ ಮಹಾದೇವಿ ತಾಯಿಯವರು ಪ್ರಥಮ ಮಹಿಳಾ ಜಗದ್ಗುರುವಾಗಿ ಹೊರಹೊಮ್ಮಿದರು. ಲಿಂಗಾನಂದ ಸ್ವಾಮಿಗಳ ಪ್ರಭಾವದಿಂದ ಅನೇಕ ಜನ ಲಿಂಗಾಯತೇತರ ಸಾಧಕರು ಲಿಂಗಧಾರಿ ವಿರಕ್ತರಾಗಿ, ಖ್ಯಾತ ಪ್ರವಚನಕಾರರಾಗಿ ರೂಪುಗೊಂಡರು.
ಹನ್ನೆರಡನೆಯ ಶತಮಾನದ ನಂತರ, ಸಾಮೂಹಿಕ ರೂಪದಲ್ಲಿ ಇಂತಹ ಕ್ರಾಂತಿಕಾರಿ ಬೆಳವಣಿಗೆಗೆ ಲಿಂಗಾನಂದ ಸ್ವಾಮಿಗಳು ನಾಂದಿ ಹಾಡಿದರು ಎನ್ನುವುದು ಸಮಸ್ತ ಲಿಂಗಾಯತ ಧರ್ಮೀಯರಿಗೆ ಹೆಮ್ಮೆಯ ವಿಷಯವಾಗಿದೆ. ಲಿಂಗಾನಂದ ಸ್ವಾಮಿಗಳ ಆಕ್ರಮಣಕಾರಿ ಬಸವ ತತ್ವ ಪ್ರಚಾರದಿಂದ ಪಂಚಪೀಠಗಳ ವೀರಶೈವ ಸಾಂಪ್ರದಾಯವಾದಿ ಜಂಗಮರು ಕಂಗಾಲಾಗಿದ್ದರು. ಲಿಂಗಾನಂದ ಸ್ವಾಮಿಗಳು ಬಸವ ತತ್ವ ಪ್ರಚಾರ ಮಾಡುವುದನ್ನು ಕಂಡು ಕಾಟಾಚಾರಕ್ಕೆ ಬಸವಣ್ಣನವರ ಹೆಸರು ಹೇಳುತ್ತಿದ್ದ ಅನೇಕ ವಿರಕ್ತ ಮಠಾಧೀಶರು ತಾವೂ ಬಸವ ತತ್ವ ಪ್ರಚಾರವನ್ನು ಆರಂಭಿಸಿದರು, ಆಗ ಅದು ಅವರಿಗೆ ಅನಿವಾರ್ಯವಾಗಿತ್ತು. ಬಸವ ತತ್ವ ಪ್ರಚಾರಕ್ಕೆಂದೇ ಹುಟ್ಟಿರುವ ವಿರಕ್ತ ಮಠಗಳ ಮಠಾಧೀಶರು ಹಗಲು ಪಂಚಪೀಠಗಳ ಜಾತಿ ಜಂಗಮರೊಡನೆ ತಾತ್ವಿಕವಾಗಿ ಜಗಳವಾಡುತ್ತಾ, ರಾತ್ರಿ ರಕ್ತ ಸಂಬಂಧ, ಜಾತಿ ಸಂಬಂಧದ ನಂಟಿನಿಂದ ಅವರೊಂದಿಗೆ ಹತ್ತಿರದ ಒಡನಾಟ ಹೊಂದಿದ್ದರು. ಇದು ಮುಗ್ಧ ಲಿಂಗಾಯತ ಭಕ್ತರಿಗೆ ಅರ್ಥವಾಗಲು ಶತಮಾನಗಳೇ ಬೇಕಾದವು. ಲಿಂಗಾನಂದ ಸ್ವಾಮಿಗಳ ಕಾರ್ಯ ಅಂತಹ ಮುಗ್ಧ ಭಕ್ತರನ್ನು ಬಡಿದು ಎಚ್ಚರಿಸಿತು. ಅಪವಾದವೆನ್ನುವಂತೆ ಲಿಂಗಾನಂದ ಸ್ವಾಮಿಗಳು ಬರುವ ಪೂರ್ವದಲ್ಲಿ ಕೆಲವು ವಿರಕ್ತ ಮಠಾಧೀಶರು ಬಸವ ತತ್ವವನ್ನು ತಮ್ಮ ಕೈಲಾದಷ್ಟು ಪ್ರಚಾರ, ಪ್ರಸಾರ ಮಾಡಿದ್ದರು. ಆದರೆ ಅದು ಲಿಂಗಾಯತರಲ್ಲಿ ಆಚರಣಾತ್ಮಕವಾಗಿ ಬದಲಾವಣೆ ತಂದಿರಲಿಲ್ಲ. ಈ ರೀತಿ ಅತ್ಯಂತ ನಿಷ್ಠುರವಾಗಿ ಬಸವ ತತ್ವ ಪ್ರಚಾರ ಮಾಡಿ ಭಕ್ತರಲ್ಲಿ ಲಿಂಗಾಯತ ಆಚರಣೆಗಳು ನೆಲೆಯೂರುವಂತೆ ಮಾಡಿದವರಲ್ಲಿ ಇಲಕಲ್-ಚಿತ್ತರಗಿ ಮಠದ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಮಹಾಂತಪ್ಪಗಳು ಅಗ್ರಗಣ್ಯರು. ಅವರ ಮಹಾಂತ ಜೋಳಿಗೆ ಹಾಗು ಜಗುಲಿ ಝಳಝಳ ಕಾರ್ಯಕ್ರಮಗಳು ನಾಡಿನಾದ್ಯಂತ ಜನಪ್ರಿಯವಾಗಿದ್ದವು.
ಅದೇ ರೀತಿಯಲ್ಲಿ ಬಸವ ತತ್ವವನ್ನು ಬಹಳ ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದವರು ಸೌಹಾರ್ದತೆಯ ಹರಿಕಾರರಾದ ಗದುಗಿನ ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಸ್ವಾಮಿಗಳು. ಅವರ ಕಂಚಿನ ಕಂಠದ ಮಾತುಗಳು ಬಹಳ ತೂಕದ್ದಾಗಿದ್ದವು. ಅವರು ಕ್ರಿಯಾಶೀಲವಾಗಿರುವ ತನಕ ಬಸವದ್ರೋಹಿಗಳು ಧ್ವನಿ ಎತ್ತರಿಸಿ ಮಾತನಾಡಲು ಹೆದರುತ್ತಿದ್ದರು. ಅದೇ ಹಾದಿಯಲ್ಲಿ ಇಂದು ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮಿಗಳು ಹಾಗು ಇಲಕಲ್ಲಿನ ಗುರುಮಹಾಂತಪ್ಪಗಳು ಬಸವ ಪ್ರಣೀತ ಲಿಂಗಾಯತ ಧರ್ಮದ ಧ್ವಜವನ್ನು ಎತ್ತರಕ್ಕೆ ಹಿಡಿದಿದ್ದಾರೆ. ಗದುಗಿನ ಇಂದಿನ ಜಗದ್ಗುರುಗಳನ್ನು ಗುರಿಯಾಗಿಸಿಕೊಂಡು ಅವರನ್ನು ಬಸವ ತತ್ವದಿಂದ ವಿಮುಖಗೊಳಿಸಲು ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕನೊಬ್ಬ ಯಾರದೊ ಖಾಲಿ ತಲೆಯ ಹೆಸರಿನಲ್ಲಿ ಯಾರೂ ಓದದ ನಿಯತಕಾಲಿಕೆಯಲ್ಲಿ ಲೇಖನ ಬರೆಯುತ್ತಿದ್ದಾನೆ. ಅದರಿಂದ ಯಾರೂ ವಿಚಲಿತರಾಗುವುದಿಲ್ಲ. ಬಸವ ತತ್ವದ ಶಕ್ತಿಯನ್ನು ಜಗತ್ತಿನ ಯಾವ ಸಾಂಪ್ರದಾಯವಾದಿ ಶಕ್ತಿಗಳೂ ಕುಗ್ಗಿಸಲಾಗದು. ಶರಣರ ಗಣಾಚಾರವೆಂದರೆ ಬಸವದ್ರೋಹಿಗಳ ನಿದ್ರೆ ಕಳೆಯುವುದೇ ಆಗಿದೆ. ಆ ಮೂಲಕ ಬಸವ ತತ್ವ ಎತ್ತಿ ಹಿಡಿಯಬೇಕಾಗುತ್ತದೆ. ಬಸವ ತತ್ವ ಪ್ರಚಾರಕರ ನೈತಿಕತೆ ಕುಗ್ಗಿಸಲು ಈ ಜನರು ಮಾಡುತ್ತಿರುವ ಯಾವ ಪ್ರಯತ್ನವೂ ಸಫಲವಾಗಲು ಶರಣರ ಶಕ್ತಿ ಬಿಡುವುದಿಲ್ಲ.
ಲಿಂಗಾನಂದ ಸ್ವಾಮಿಗಳಿಗೆ ಯಾವ ವೀರಶೈವ ಸಾಂಪ್ರದಾಯವಾದಿ ಜಂಗಮರು ಬೆಂಬಲಿಸುವುದಾಗಲಿ, ಉತ್ತೇಜಿಸುವುದಾಗಲಿ ಮಾಡಲಿಲ್ಲ. ಕಾರಣ ಜಂಗಮೇತರರು ಮಠಾಧೀಶರಾಗುವುದನ್ನು ಇವರು ಎಂದಿಗೂ ಸಹಿಸಲಿಲ್ಲ. ಆಗ ಲಿಂಗಾನಂದ ಸ್ವಾಮಿಗಳ ಪ್ರವಚನ ಪ್ರತಿಭೆಯನ್ನು ಹೊರ ಜಗತ್ತಿಗೆ ತಿಳಿಯಲು ಹೆಚ್ಚಿನ ಅವಕಾಶಗಳನ್ನು ನೀಡಿ ಅವರನ್ನು ಮುನ್ನೆಲೆಗೆ ತಂದವರು ಸಿರಿಗೆರೆಯ ಲಿಂಗೈಕ್ಯ ಜಗದ್ಗುರುಗಳಾದ ಶಿವಕುಮಾರ ಶಿವಾಚಾರ್ಯರು. ಆನಂತರ ಲಿಂಗಾನಂದ ಸ್ವಾಮಿಗಳಿಗೆ ನಿರಂಜನ ಜಂಗಮ ದೀಕ್ಷೆ ನೀಡಿದವರು ಸುತ್ತೂರಿನ ಲಿಂಗೈಕ್ಯ ಜಗದ್ಗುರುಗಳಾದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಇವರೀರ್ವರೂ ಜಂಗಮೇತರ ಮಠಾಧೀಶರು ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಜಂಗಮ ದೀಕ್ಷೆಯ ನಂತರ ಲಿಂಗಾನಂದ ಸ್ವಾಮಿಗಳು ಬಸವಣ್ಣನವರ ವಚನಗಳು ಮತ್ತು ಲಿಂಗಾಯತ ಧರ್ಮದ ತತ್ವಗಳನ್ನು ನಾಡಿನಾದ್ಯಂತ ಪಸರಿಸಿದ ಧರ್ಮಕ್ರಾಂತಿಯ ಧೀರಯೋಗಿ ಹಾಗೂ ‘ಪ್ರವಚನ ಪಿತಾಮಹ’ ಎಂದು ಖ್ಯಾತರಾದರು. ಇವರು ವಿದ್ಯಾರ್ಥಿ ಆಗಿದ್ದಾಗ ಲಿಂಗಾಯತ ಉಚಿತ ಪ್ರಸಾದ ನಿಲಯದಲ್ಲಿ ಓದಿದವರು. ಆಗ ಅವರು ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದರಂತೆ. ಪ್ರಸಾದ ನಿಲಯದಲ್ಲಿ ಕೊರಳಲ್ಲಿ ಇಷ್ಟಲಿಂಗ ಧರಿಸುವುದು ಕಡ್ಡಾಯವಾಗಿದ್ದರಿಂದ “ದಿಸ್ ಇಸ್ ಗೇಟ್ ಪಾಸ್ ಟು ಡೈನಿಂಗ್ ಹಾಲ್” ಎಂದು ತಮ್ಮ ಕೊರಳಲ್ಲಿಯ ಲಿಂಗವನ್ನು ತೋರಿಸಿ ತಮಾಷೆ ಮಾಡುತ್ತಿದ್ದರಂತೆ.
ಮುಂದೆ ಅವರು ಪದವಿ ಮುಗಿಸಿ ಆಧ್ಯಾತ್ಮದ ಕಡೆಗೆ ವಾಲಿದಾಗ ವಿಜಯಪುರದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳಿಂದ ಲಿಂಗದೀಕ್ಷೆ ಪಡೆದರು ಎಂದು ತಿಳಿದುಬರುತ್ತದೆ. ಆತ್ಮೀಯ ಗೆಳೆಯರಾಗಿದ್ದ ಸಿದ್ದೇಶ್ವರ ಸ್ವಾಮಿಗಳು ಹಾಗು ಲಿಂಗಾನಂದ ಸ್ವಾಮಿಗಳು ಇಬ್ಬರು ಮಲ್ಲಿಕಾರ್ಜುನ ಸ್ವಾಮಿಗಳ ಶಿಷ್ಯರಾದರೂ ಅವರೀರ್ವರ ಅಧ್ಯಾತ್ಮಿಕ ಕ್ಷೇತ್ರಗಳು ಸಂಪೂರ್ಣ ಭಿನ್ನ ಹಾಗು ತದ್ವಿರುದ್ಧವಾಗಿದ್ದವು. ಇಬ್ಬರು ಲಿಂಗಾಯತ ಧರ್ಮದಲ್ಲಿಯೇ ಜನಿಸಿದ್ದರೂ ಲಿಂಗಾನಂದ ಸ್ವಾಮಿಗಳು ಲಿಂಗಾಯತ ಧರ್ಮದ ಪ್ರಚಾರ ಹಾಗು ಪ್ರಸಾರವನ್ನು ಆಯ್ಕೆ ಮಾಡಿಕೊಂಡರೆ, ಸಿದ್ಧೇಶ್ವರ ಸ್ವಾಮಿಗಳು ಬಸವಾದಿ ಶರಣರು ತಿರಸ್ಕರಿಸಿದ ಭಗವದ್ಗೀತೆ, ವೇದಾಂತದ ಮಾರ್ಗವನ್ನು ಆರಿಸಿಕೊಂಡರು. ಇವರಿಬ್ಬರ ವಿದ್ವತ್ತು, ವಾಕ್ಪಟುತ್ವ, ಪ್ರವಚನ ಪಾಂಡಿತ್ಯದ ಕಾರಣದಿಂದ ನಾಡಿನಾದ್ಯಂತದ ಈರ್ವರು ಜನಪ್ರೀಯವರಾದರು. ಬಹುಶಃ ಲಿಂಗಾನಂದ ಸ್ವಾಮಿಗಳು ಹಾಗು ಸಿದ್ಧೇಶ್ವರ ಸ್ವಾಮಿಗಳಂತೆ ಲಿಂಗಾಯತ ಧರ್ಮದ ಜಂಗಮೇತರ ವರ್ಗದಲ್ಲಿ ಹುಟ್ಟಿ ಇಡೀ ಕರ್ನಾಟಕದಲ್ಲಿ ಮನೆಮಾತಾದ ಮತ್ತೊಬ್ಬ ವೈದಿಕ ಅಥವಾ ಜಂಗಮ ವಿರಕ್ತರು ನಮಗೆ ಸಿಗುವುದಿಲ್ಲ. ಲಿಂಗಾನಂದ ಸ್ವಾಮಿಗಳು ಲಿಂಗಾಯತ ಧರ್ಮ ಮತ್ತು ಬಸವ ತತ್ವಗಳು ಮರೆಯಾಗುತ್ತಿದ್ದ ಕಾಲದಲ್ಲಿ, ನಿರಂತರ ಪ್ರವಚನಗಳ ಮೂಲಕ ಜ್ಞಾನ ದಾಸೋಹ ಮಾಡಿದವರು. ಇವರ ಕಂಚಿನ ಕಂಠದ ಪ್ರವಚನಗಳಿಗೆ ಮಾರುಹೋಗಿ ಲಕ್ಷಾಂತರ ಜನರು ಮೂಢನಂಬಿಕೆಗಳನ್ನು ತೊರೆದು, ಬಸವ ತತ್ವದ ಮಾರ್ಗವನ್ನು ಅನುಸರಿಸಿದರು. ಮಠ ಹಿನ್ನೆಲೆಯೇ ಇಲ್ಲದೆ ಇವರು ಬಸವ ಧರ್ಮದ ಮಹಾ ಜಗದ್ಗುರು ಪೀಠದ ಪ್ರಥಮ ಪೀಠಾಧೀಪತಿಗಳಾಗಿ ಕಾರ್ಯನಿರ್ವಹಿಸಿದ್ದರು. ದೇಶದಾದ್ಯಂತ ಸಂಚರಿಸಿ ಧರ್ಮ ಜಾಗೃತಿ ಮೂಡಿಸಿದ ಲಿಂಗಾನಂದ ಸ್ವಾಮಿಗಳು ಬಸವ ತತ್ವ ಪ್ರಚಾರಕ್ಕೆ ಬಹು ದೊಡ್ಡ ಕೊಡುಗೆ ನೀಡಿದವರು.
ಮುಂದುವರೆಯುವುದು…
ಪಂಚಮಸಾಲಿ ಪೀಠಗಳ ಗೊಂದಲ- ಭಾಗ 12 | ವೀರಶೈವ ಪಂಚಪೀಠಗಳ ಜಾತಿ ಜಂಗಮರಿಂದ ಲಿಂಗಾಯತ ಧರ್ಮಕ್ಕೆ ಹಾನಿ
ಜಾತಿ ನಿರ್ಮೂಲನೆ ಚಳವಳಿಯ ಲಿಂಗಾಯತ ಧರ್ಮದಲ್ಲಿ ಜಾತಿಯಾಧಾರದಲ್ಲಿ ಮಠಗಳ ವಟುಗಳಿಗೆ ತರಬೇತಿ ನೀಡುವ ಶಾಲೆ ಆರಂಭಗೊಂಡಿತು. ಬ್ರಾಹ್ಮಣರೊಂದಿಗೆ ಜಿದ್ದಿಗೆ ಬಿದ್ದು ಅಡ್ಡಪಲ್ಲಕ್ಕಿ ಹಾಗು ವ್ಯಾಸನತೋಳು ಮೆರವಣಿಗೆಯ ಅಸಂಗತ ಪದ್ದತಿಗಳನ್ನು ಲಿಂಗಾಯತ ಧರ್ಮದೊಳಗೆ ತೂರಿಸಲಾಯಿತು. ಉತ್ತರ ಕರ್ನಾಟಕದ ಲಿಂಗಾಯತರಿಗೆ ಪರಿಚಯವೇ ಇಲ್ಲದ ವೀರಶೈವ ಪದವನ್ನು ಬಳಸಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಲಾಯಿತು.
ವೀರಶೈವ ಪಂಚಪೀಠಗಳ ಜಾತಿ ಜಂಗಮರಿಂದ ಲಿಂಗಾಯತ ಧರ್ಮಕ್ಕೆ ಆದಷ್ಟು ಹಾನಿ ವೈದಿಕರಿಂದ ಆಗಿಲ್ಲ. ಈ ಜಾತಿ ಜಂಗಮರ ಮಡಿವಂತಿಕೆ, ಮೌಢ್ಯಗಳು, ಶ್ರೇಷ್ಠತೆಯ ವ್ಯಸನ, ಕಾಯಕಹೀನ ಬಾಳು, ಪ್ರಗತಿ ವಿರೋಧಿ ನಿಲುವು, ಬಸವದ್ವೇಷ, ಮುಂತಾದ ವೈದಿಕತೆಯ ನಕಲು ಆಚರಣೆಗಳಿಂದ ಕೊಡೆಕಲ್ಲು ಪರಂಪರೆ, ಸಿದ್ಧಾರೂಢರ ಪರಂಪರೆ, ಮುಂತಾದವು ಲಿಂಗಾಯತ ಧರ್ಮದಿಂದ ದೂರ ಸರಿದು, ಅದರ ಬೆಳವಣಿಗೆಯ ಮೇಲೆ ದೀರ್ಘಾವಧಿ ದುಷ್ಪರಿಣಾಮಗಳನ್ನು ಬೀರಿದವು. ಲಿಂಗಾಯತ ಸಮಾಜ ತನ್ನ ಮೂಲ ಆಶಯ, ನೆಲೆ, ಆಚರಣೆಗಳಿಂದ ವಿಮುಖವಾಯಿತು. ಲಿಂಗಾಯತ ಧರ್ಮದೊಳಗಿದ್ದ ಸೌಹಾರ್ದತೆಯ ವಾತಾವರಣ ಕಲುಷಿತಗೊಂಡು ಭಾರತದಾದ್ಯಂತ ಬೆಳೆಯಲು ಇದ್ದ ಅವಕಾಶಗಳಿಂದ ವಂಚಿತವಾಯಿತು. ಹದಿನೈದನೆಯ ಶತಮಾನದ ವಿಜಯನಗರದ ಪ್ರೌಢ ದೇವರಾಯನ ಆಡಳಿತ ಕಾಲದಲ್ಲಿ ಧರ್ಮದ ಪುನರುತ್ಥಾನದ ನೆಪದಲ್ಲಿ ಶರಣ ಸಿದ್ಧಾಂತ ಶೈವೀಕರಣ ಹಾಗು ವೈದಿಕೀಕರಣದಿಂದ ಅಶುದ್ಧಗೊಂಡಿತು. ಆನಂತರ ಶೂನ್ಯ ಸಂಪಾದನಾಕಾರರು ಸಂಕಲನ ಹಾಗು ಸಂಪಾದನೆಯ ಸಂದರ್ಭದಲ್ಲಿ ವಚನಗಳನ್ನು ಶೈವದ ನೆಲೆಯಲ್ಲಿ ಅನುಸಂಧಾನಿಸಿ ಅನೇಕ ನಾಟಕೀಯ, ಹಾಗು ಕಲ್ಪಾನಾತ್ಮಕ ನಿರೂಪಣೆಗಳನ್ನು ಸೃಷ್ಟಿಸಿದರು. ವಚನಗಳಲ್ಲಿ ವೀರಶೈವ ಪದ ಬಳಕೆ, ಸಂಸ್ಕೃತ ಶ್ಲೋಕಗಳ ಸೇರ್ಪಡೆ, ಮುಂತಾದ ಅನುಚಿತ, ಅನೈಸರ್ಗಿಕ ಅವಘಡಗಳು ಸಂಭವಿಸಿದವು.
ಅರಟಾಳ್ ರುದ್ರಗೌಡರ ಸಂಘಟನಾ ಸಾಮರ್ಥ್ಯವನ್ನು, ವಾರದ ಮಲ್ಲಪ್ಪ ಹಾಗು ಲಿಂಗರಾಜ ದೇಸಾಯಿಯವರ ಸಂಪತ್ತನ್ನು ವೀರಶೈವ ಜಾತಿ ಜಂಗಮರು ದುರುಪಯೋಗಪಡಿಸಿಕೊಂಡು ತಮ್ಮ ಉಪವರ್ಗದ ಹಿತಾಸಕ್ತಿಗಳನ್ನು ಸಾಧಿಸಿಕೊಂಡರು. ದೇವಾಲಯ ಸಂಸ್ಕೃತಿಯೆ ಇಲ್ಲದ ಧರ್ಮದಲ್ಲಿ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಬ್ರಾಹ್ಮಣ ಅರ್ಚಕರನ್ನು ಹೊರಹಾಕಿ ಜಾತಿ ಜಂಗಮ ಅರ್ಚಕರು ನೇಮಕವಾದರು. ಜಾತಿ ನಿರ್ಮೂಲನೆ ಚಳವಳಿಯ ಲಿಂಗಾಯತ ಧರ್ಮದಲ್ಲಿ ಜಾತಿಯಾಧಾರದಲ್ಲಿ ಮಠಗಳ ವಟುಗಳಿಗೆ ತರಬೇತಿ ನೀಡುವ ಶಾಲೆ ಆರಂಭಗೊಂಡಿತು. ಬ್ರಾಹ್ಮಣರೊಂದಿಗೆ ಜಿದ್ದಿಗೆ ಬಿದ್ದು ಅಡ್ಡಪಲ್ಲಕ್ಕಿ ಹಾಗು ವ್ಯಾಸನತೋಳು ಮೆರವಣಿಗೆಯ ಅಸಂಗತ ಪದ್ದತಿಗಳನ್ನು ಲಿಂಗಾಯತ ಧರ್ಮದೊಳಗೆ ತೂರಿಸಲಾಯಿತು. ಉತ್ತರ ಕರ್ನಾಟಕದ ಲಿಂಗಾಯತರಿಗೆ ಪರಿಚಯವೇ ಇಲ್ಲದ ವೀರಶೈವ ಪದವನ್ನು ಬಳಸಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಲಾಯಿತು. ಇಷ್ಟೆಲ್ಲವನ್ನು ಉಪಾಯವಾಗಿ ಸಾಧಿಸಿದ ಕಾರಣಿಕ ಪುರುಷರಿಗೆ (?) ಡಾ. ಫ. ಗು. ಹಳಕಟ್ಟಿಯವರ ವಚನ ಸಂಪಾದನೆಗೆ ಸಹಾಯ ಮಾಡುವ ದೊಡ್ಡ ಮನಸ್ಸು ಬರಲೆಯಿಲ್ಲ. ಕಾಟಾಚಾರಕ್ಕೆ ಬಾಯುಪಚಾರದ ಮಾತುಗಳು ಪ್ರದರ್ಶವಾದವೇ ಹೊರತು ಅವರಿಗೆ ಕನಿಷ್ಠ ಒಂದು ಪ್ರಿಂಟಿಂಗ್ ಪ್ರೆಸ್ ಮಾಡಿಸಿಕೊಡುವ ಪ್ರಯತ್ನಗಳು ನಡೆಯಲಿಲ್ಲ. ಆ ಕಾರಣದಿಂದ ಹಳಕಟ್ಟಿಯವರು ತಮ್ಮ ಸ್ವಂತ ದುಡಿಮೆಯಿಂದ ಕಟ್ಟಿದ್ದ ತಾವು ವಾಸಿಸುವ ಮನೆಯನ್ನು ಮಾರಬೇಕಾಯಿತು.
ಮುಂದೆ ಸಿದ್ಧಾರೂಢರು ತಮ್ಮ ಅಧ್ಯಾತ್ಮಿಕ ಸಾಧನೆಯಿಂದ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಅವರು ಭಕ್ತ ವರ್ಗಕ್ಕೆ ಸೇರಿದವರು ಎನ್ನುವ ಮತ್ಸರದಿಂದ ಅವರನ್ನು ಅವಮಾನಿಸುವ ಘಟನೆಗಳು ನಡೆದವು. ಒಂದೆರಡು ಬಾರಿ ಸಿದ್ಧಾರೂಢರಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡುವ ಪ್ರಯತ್ನಗಳೂ ನಡೆದಿವೆಂದು ನಮ್ಮ ಹಿರಿಯರು ಹೇಳುತ್ತಿದ್ದದ್ದು ಜ್ಞಾಪಕಕ್ಕೆ ಬರುತ್ತದೆ. ಸಿದ್ಧಾರೂಢರು ಲಿಂಗಾಯತ ಭಕ್ತರಿಗೆ ಲಿಂಗದೀಕ್ಷೆ ಮಾಡುವುದನ್ನು ತಡೆಯಲಾಯಿತಂತೆ. ಇದೆಲ್ಲದರಿಂದ ಬೇಸತ್ತು ಲಿಂಗಾಯತ ಮತ್ತು ವೇದಾಂತ ಸಿದ್ಧಾಂತಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದ ಸಿದ್ಧಾರೂಡರು ಇಷ್ಟಲಿಂಗ ತ್ಯಜಿಸಿ, ಲಿಂಗಾಯತ ಸಿದ್ಧಾಂತದಿಂದ ದೂರ ಉಳಿದು ಕೇವಲ ವೇದಾಂತವನ್ನು ಆಯ್ಕೆ ಮಾಡಿಕೊಂಡರು. ಅಷ್ಟಾದರೂ ಸಿದ್ಧಾರೂಢರ ಮೇಲಿನ ವೀರಶೈವ ಸಾಂಪ್ರದಾಯವಾದಿಗಳ ಸಿಟ್ಟು ತಣಿಯಲಿಲ್ಲ, “ದುರುಳ ಆರೂಢನನ್ನು ಸದೆ ಬಡಿದವರು….” ಎಂದು ಪೌರುಷದ ಪುರಾಣಗಳನ್ನು ಬರೆದುಕೊಂಡು ಹೆಮ್ಮೆಪಟ್ಟರು. ಮುಂದೆ ಶಿವಾನಂದ ಸ್ವಾಮಿಗಳು ಸಿದ್ಧಾರೂಢರನ್ನು ಅನುಸರಿಸಿದರು. ಲಿಂಗಾಯತ ಭಕ್ತವರ್ಗದ ಸಾಧಕರು ವೀರಶೈವ ಜಾತಿ ಜಂಗಮರ ಉಪಟಳದಿಂದ ಬೇಸತ್ತು ಲಿಂಗಾಯತ ಸಿದ್ಧಾಂತದಿಂದ ವಿಮುಖವಾಗಿ ಆರೂಢ ಪರಂಪರೆಯ ಕಡೆಗೆ ವಲಸೆ ಹೋದರು. ವೀರಶೈವ ಜಾತಿ ಜಂಗಮರ ಈ ಸಾಂಪ್ರದಾಯಕವಾದಿ ಧೋರಣೆಯು ಲಿಂಗಾಯತ ಧರ್ಮದಲ್ಲಿ ಬಹುದೊಡ್ಡ ಬಿರುಕು ಮೂಡಲು ಕಾರಣವಾಯಿತು. ಇದೇ ಕಾರಣಕ್ಕೆ ಉತ್ಕಟ ಬಸವ ಭಕ್ತರಾಗಿದ್ದ ಲಿಂಗಾಯತ ನೇಕಾರ ಉಪವರ್ಗದ ಅಕ್ಕಲಕೋಟೆಯ ರೇವಣಸಿದ್ಧ ಶರಣರು ಸಹ ಬಸವ ತತ್ವವನ್ನು ಬಿಟ್ಟು ಸಿದ್ಧಾರೂಢರ ಅನುಯಾಯಿಯಾದರು.
ಇಷ್ಟೆಲ್ಲಾ, ವಿದ್ವಾಂಸರು, ದಾರ್ಶನಿಕರು, ಸಾಧಕರು ಲಿಂಗಾಯತ ಧರ್ಮದಿಂದ ದೂರವಾದರೂ ವೀರಶೈವ ಜಾತಿವಾದಿಗಳು ತಮ್ಮ ನಡವಳಿಕೆಯಲ್ಲಿ ಒಂದಿನಿತೂ ಬದಲಾವಣೆ ಮಾಡಿಕೊಳ್ಳಲಿಲ್ಲ. ಹದಿನೆಂಟನೆಯ ಶತಮಾನದಲ್ಲಿ ಕಲಬುರ್ಗಿಯ ಶರಣಬಸವ ಹಾಗು ಕಡಕೋಳ ಮಡಿವಾಳಪ್ಪನರನ್ನೂ ಸಹ ವೀರಶೈವ ಸಾಂಪ್ರದಾಯವಾದಿಗಳು ಸತಾಯಿಸಿದ ಘಟನೆ ನಡೆದುಹೋಗಿತ್ತು. ಕಡಕೋಳ ಮಡಿವಾಳಪ್ಪ ಕರ್ನಾಟಕ ಕಂಡ ಶ್ರೇಷ್ಠ ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ಚಿಂತಕ. ಶಿಶುನಾಳ ಶರೀಫರಿಗಿಂತ ಅರ್ಧ ಶತಮಾನ ಮೊದಲೇ ಬಾಳಿ ಬದುಕಿದವ, ತನ್ನ ತತ್ವಪದಗಳ ಮೂಲಕ ಜಾತಿ ವ್ಯವಸ್ಥೆ ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಸಾರಿದವ. ಕ್ರಿ.ಶ. ಸುಮಾರು ೧೭೭೦ ರಿಂದ ೧೮೬೦ ಕಾಲದಲ್ಲಿ ಬದುಕಿದ್ದ ಮಡಿವಾಳಪ್ಪ ಕಲಬುರಗಿ ಜಿಲ್ಲೆಯ ಇಂದಿನ ಅಫಜಲಪೂರ ತಾಲೂಕಿನ ‘ಬಿದನೂರು’ ಗ್ರಾಮದಲ್ಲಿ ವಿಧವೆಯೊಬ್ಬಳ ಉದರದಲ್ಲಿ ಜನಿಸಿದ. ಈತನ ಆಧ್ಯಾತ್ಮಿಕ ಕಾರ್ಯಕ್ಷೇತ್ರ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿರುವ ಕಡಕೋಳ. ಈತನಿಗೆ ಲಿಂಗದೀಕ್ಷೆ ನೀಡುವಾಗ ವಿಧವೆಗೆ ಹುಟ್ಟಿದವ ಎನ್ನುವ ಕಾರಣ ಮುಂದಿಟ್ಟುಕೊಂಡು ವೀರಶೈವ ಜಾತಿ ಜಂಗಮರು ಅದನ್ನು ವಿರೋಧಿಸಿದರು. ಇದರಿಂದ ನೊಂದ ಮಡಿವಾಳಪ್ಪ ಬಿದನೂರನ್ನು ತೊರೆದು ದೇಶಾಂತರ ಹೊರಟು, ಆಧ್ಯಾತ್ಮಿಕ ಸಾಧನೆ ಮಾಡಿ, ಅಂತಿಮವಾಗಿ ಕಡಕೋಳದಲ್ಲಿ ನೆಲೆಸಿ, ತನ್ನ ಅನುಭಾವದ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತತ್ವಪದಗಳನ್ನು ರಚಿಸಿ ಹಾಡಿದ. ಕೊನೆಗೆ ಅರಳಗುಂಡಿಗೆಯ ಶರಣಬಸವರು ಈತನಿಗೆ ಲಿಂಗದೀಕ್ಷೆ ಕೊಟ್ಟರು.
ಶರಣಬಸವರು ಜಂಗಮರಲ್ಲ, ಅವರಿಗೆ ಲಿಂಗ ದೀಕ್ಷೆ ಕೊಡುವ ಅರ್ಹತೆ ಇಲ್ಲ ಎಂದು ಅವರನ್ನೂ ಸಹ ಅರಳಗುಂಡಿಗೆಯಿಂದ ಓಡಿಸಲಾಯಿತು. ಆದರೆ, ಕಾಲಾನಂತರದಲ್ಲಿ ಜಂಗಮರೊಬ್ಬರು ಮಡಿವಾಳಪ್ಪನಿಗೆ ಲಿಂಗದೀಕ್ಷೆ ನೀಡಿದರು ಎಂದು ಸುಳ್ಳು ಕತೆ ಸೃಷ್ಟಿಸಿದರು. ಶರಣಬಸವರು ಅರಳಗುಂಡಿಗೆ ತೊರೆದು ಕಲ್ಯಾಣಕ್ಕೆ ಹೊರಡುವ ಹಾದಿಯಲ್ಲಿ ಕಲಬುರ್ಗಿಯ ದೊಡ್ಡಪ್ಪ ಸಾಹುಕಾರರ ಮನೆಯಲ್ಲಿ ತಂಗಿರುವಾಗ ಅಕಾಲಿಕವಾಗಿ ಕ್ಷಯ ರೋಗದ ಸೋಂಕಿನಿಂದ ಲಿಂಗೈಕ್ಯರಾದರು. ಅವರ ಸಮಾದಿ ಮಾಡಿದ ಮೇಲೆ ಅಲ್ಲೊಂದು ಭವ್ಯ ಮಂದಿರ ನಿರ್ಮಾಣವಾಯಿತು. ಭಕ್ತ ವರ್ಗದ ಶರಣಬಸವರನ್ನು ಜಂಗಮರು ಪೂಜಜಿಸಬಾರದು ಎನ್ನುವ ಮಡಿವಂತಿಕೆಯಿಂದ ಶರಣಬಸವರ ವಿಗ್ರಹಕ್ಕೆ ಮತ್ತೊಬ್ಬ ಜಾತಿ ಜಂಗಮನ ವಿಗ್ರಹ ಜೋಡಿಸಿ ಆತ ಶರಣಬಸವರ ಗುರು ಎನ್ನುವ ಕತೆ ಕಟ್ಟಿದರು. ಅತ್ತ ಮಡಿವಾಳಪ್ಪ ಲಿಂಗದೀಕ್ಷೆ ಪಡೆದು ಲಿಂಗಸಾಧಕನಾದ. ಮಡಿವಾಳಪ್ಪನ ತತ್ವಪದಗಳು ೧೨ನೇ ಶತಮಾನದ ವಚನ ಸಾಹಿತ್ಯ ಮತ್ತು ಸ್ವರ ವಚನಗಳ ಸಂಗಮದಂತಿವೆ. ಈತ ರಚಿಸಿದ ತತ್ವ ಪದಗಳಲ್ಲಿ ಜಾತಿ ಪದ್ಧತಿಯ ವಿಡಂಬನೆ, ಗುರು ಮಹಿಮೆ, ಮತ್ತು ಸದಾಚಾರದ ಸಂದೇಶಗಳು ಪ್ರಮುಖವಾಗಿವೆ.

ಪಂಚಮಸಾಲಿ ಪೀಠಗಳ ಗೊಂದಲ -ಭಾಗ 11 | ಪಂಚಪೀಠಗಳು ಲಿಂಗಾಯತ ಉಪವರ್ಗಗಳ ಋಣದಲ್ಲಿವೆ
ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು ಮತ್ತು ಅಮಾಯಕತನವನ್ನು ದುರುಪಯೋಗ ಪಡಿಸಿಕೊಂಡು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಅವರನ್ನು ಶೋಷಿಸುತ್ತಿದ್ದಾರೆ.
ಸ್ವಾತಂತ್ರಪೂರ್ವದಲ್ಲಿ ಲಿಂಗಾಯತ ಧರ್ಮದ ಉನ್ನತಿ ಹಾಗು ಸಂಘಟನೆಗೆ ಸರ್ ಸಿದ್ಧಪ್ಪ ಕಂಬಳಿ, ಅರಟಾಳ್ ರುದ್ರಗೌಡ ಮುಂತಾದ ಪಂಚಮಸಾಲಿ ಉಪವರ್ಗದ ಹಿರಿಯರು ಮಾಡಿದ ಘನ ಕಾರ್ಯಗಳು ಸ್ವಾತಂತ್ರ್ಯ ನಂತರ ಸಹ ಮುಂದುವರೆದವು. ಅನೇಕ ಬಸವ ಪರಂಪರೆಯ ವಿರಕ್ತ ಮಠಗಳನ್ನು ಸ್ಥಾಪಿಸಿದ ಪಂಚಮಸಾಲಿ ಉಪವರ್ಗ ಕೆಲವು ಮಠಗಳ ಕರ್ಣಧಾರತ್ವವನ್ನು ವಹಿಸಿದ ಉದಾಹರಣೆಗಳಿವೆ. ಕಾಲಾನಂತರ ಆ ಮಠಗಳು ಜಂಗಮ ವರ್ಗದ ಪಾಲಾಗಿವೆ. ಇನ್ನು ಪಂಚಮಸಾಲಿ ಸಂಘಟನೆ ಹಾಗು ಪೀಠಗಳ ಸ್ಥಾಪನೆಗೆ ಮೊದಲು ಆ ಉಪವರ್ಗವು ವೀರಶೈವ ಪಂಚಪೀಠಗಳನ್ನು ಬೇಡಿದ್ದನ್ನು ನೀಡಿ ಸಾಕಿ ಸಲಹಿದೆ. ವೀರಶೈವ ಪಂಚಪೀಠಗಳ ಜಾತಿ ಜಂಗಮರ ಶ್ರೇಯೋಭಿವೃದ್ಧಿಯಲ್ಲಿ ಪಂಚಮಸಾಲಿ ಉಪವರ್ಗದ ಕೊಡುಗೆ ಮಹತ್ವದ್ದಾಗಿದೆ. ವೀರಶೈವ ಪಂಚಪೀಠಗಳು ಮುಗ್ಧ ಪಂಚಮಸಾಲಿಗರು ಕೊಟ್ಟ ಅಪಾರ ದೇಣಿಗೆಯಿಂದ ಆರ್ಥಿಕವಾಗಿ ಸೊಕ್ಕಿ ಬಲಾಢ್ಯಗೊಂಡಿವೆ. ದುರಂತವೆಂದರೆ ಪಂಚಮಸಾಲಿಗರ ಸಹಾಯದಿಂದಲೇ ಕೊಬ್ಬಿದ ವೀರಶೈವ ಪಂಚಪೀಠಗಳ ಜಾತಿ ಜಂಗಮರು ಮುಗ್ಧ ಪಂಚಮಸಾಲಿಗಳಿಗೆ ತಮ್ಮ ಐದು ಪೀಠಗಳಲ್ಲಿ ಒಂದು ಪೀಠ ಬಿಟ್ಟುಕೊಡಲಿಲ್ಲ. ಹೋಗಲಿ ಒಂದಷ್ಟು ಬಡ ಪಂಚಮಸಾಲಿ ಯುವಕರನ್ನು ಪಂಚಪೀಠಗಳ ಮಠಗಳಲ್ಲಾಗಲಿ ಅಥವಾ ಸಂಸ್ಥೆಗಳಲ್ಲಾಗಲಿ ಕೆಲಸ ಕೊಡಲಿಲ್ಲ, ಬದಲಾಗಿ ತಮ್ಮ ಪಂಚಪೀಠಗಳ ಮಠ, ಪೀಠ, ಮಾಹೇಶ್ವರ ಬ್ಯಾಂಕ್ ಮಂತಾದ ತಮ್ಮ ಜಾತಿಯ ಸಂಘ ಸಂಸ್ಥೆಗಳಲ್ಲಿ ಕೇವಲ ಜಾತಿ ಜಂಗಮರಿಗೆ ಮಾತ್ರ ಅವಕಾಶ ಕೊಡಲಾಯಿತು.
ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು ಮತ್ತು ಅಮಾಯಕತನವನ್ನು ದುರುಪಯೋಗ ಪಡಿಸಿಕೊಂಡು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಅವರನ್ನು ಶೋಷಿಸುತ್ತಿದ್ದಾರೆ. ಇವರ ಶೋಷಣೆ, ಮಡಿವಂತಿಕೆ, ಜಾತಿ ಶ್ರೇಷ್ಠತೆಗೆ ಬೇಸತ್ತು ಕೊಡೆಕಲ್ಲು ಬಸವಣ್ಣ, ಸಿದ್ಧಾರೂಢರು, ಹಾಗು ಅಕ್ಕಲಕೋಟೆಯ ರೇವಣಸಿದ್ಧ ಶರಣರು ಲಿಂಗಾಯತ ಧರ್ಮದಿಂದ ದೂರವಾದರು. ಕರ್ನಾಟಕದಲ್ಲಿ ವೀರಶೈವ ಜಾತಿ ಜಂಗಮರ ಮಡಿವಂತಿಕೆಯನ್ನು ಕೇಳಿ ತಿಳಿದ ಡಾ. ಅಂಬೇಡ್ಕರ್, ಛತ್ರಪತಿ ಶಾಹು ಮಹಾರಾಜರ ಅವರು, ಲಿಂಗಾಯತ ಧರ್ಮಕ್ಕೆ ಸೇರುವ ನಿರ್ಧಾರದಿಂದ ಹಿಂದೆ ಸರಿದರು. ಮುಂದೆ ಆರೂಢ ಪರಂಪರೆಯ ಮಠಾಧೀಶರು ಜಾತಿ ಜಂಗಮರಿಂದ ಅಂತರ ಕಾಯ್ದುಕೊಂಡರು. ವಿಜಯಪುರದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳು ಜಂಗಮರಲ್ಲದ ಕಾರಣ ಅವರಿಗೆ ಲಿಂಗದೀಕ್ಷೆ ಕೊಡಲು ಬರುವುದಿಲ್ಲ ಎಂದು ಅವರ ಕುರಿತು ಅಪಪ್ರಚಾರ ಮಾಡಲಾಯಿತು, ಅವರು ಹಡಪದ ಸಮಾಜಕ್ಕೆ ಸೇರಿದವರು ಎಂದು ಸುದ್ದಿ ಹರಿಬಿಡಲಾಯಿತು. ಈ ಎಲ್ಲವನ್ನು ಬಹಳ ಹತ್ತಿರದಿಂದ ನೋಡಿದ ಅವರ ಶಿಷ್ಯ ಸಿದ್ಧೇಶ್ವರ ಸ್ವಾಮಿಗಳು ವೀರಶೈವ ಮತ್ತು ಲಿಂಗಾಯತ ಮಠ ಪರಂಪರೆಯಿಂದ ಅಂತರ ಕಾಯ್ದುಕೊಂಡರು.
ಸಿದ್ಧೇಶ್ವರ ಸ್ವಾಮಿಗಳ ಶಿಷ್ಯರಲ್ಲಿ ಒಬ್ಬನಾದ ಕನೇರಿಯ ಕಾಡಸಿದ್ಧ ಎಂಬ ಹೆಸರಿನ ಅನಾಗರಿಕ ಕಾವಿಧಾರಿಯು, ಜಂಗಮ ಮಠಾಧೀಶರ ವಿರುದ್ಧ ಒಂದು ಸಮಾನ ಮನಸ್ಕ ಜಂಗಮೇತರ ಮಠಾಧೀಶರ ಗುಂಪು ಕಟ್ಟಿಕೊಂಡು ಜಾತಿ ಜಂಗಮರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ. ದುರಂತವೆಂದರೆ, ಲಿಂಗಾಯತ ಧರ್ಮ ಮತ್ತು ಬಸವ ತತ್ವದ ಮೇಲಿನ ದ್ವೇಷಕ್ಕಾಗಿ ಜಂಗಮದ್ವೇಷಿ ಕಾಡುಸಿದ್ಧನಿಗೆ ಅದೇ ಜಾತಿ ಜಂಗಮರು ಬೆಂಬಲಿಸುತ್ತಿರುವುದು. ಸಿದ್ಧೇಶ್ವರ ಸ್ವಾಮಿಗಳ ಸರಳತೆ ಮತ್ತು ವಿದ್ವತ್ತನ್ನು ಕೆಲವು ವಿರಕ್ತ ಮಠಗಳು ದುರ್ಬಳಕೆ ಮಾಡಿಕೊಂಡದ್ದೂ ಇದೆ. ಆದರೆ, ಸಿದ್ಧೇಶ್ವರ ಸ್ವಾಮಿಗಳನ್ನು ವೀರಶೈವ ಪಂಚಪೀಠಗಳ ಜಾತಿ ಜಂಗಮ ಮಠಾಧೀಶರು ಯಾವತ್ತೂ ಬೆಂಬಲಿಸಿಲ್ಲ ಹಾಗು ಗೌರವಿಸಿಲ್ಲ, ಕಾರಣ ಅವರು “ಜಾಗತಿಕ ಧರ್ಮಗಳ ಸಾರ ಸೂಕ್ತಿ” ಎನ್ನುವ ಕಿರು ಹೊತ್ತಿಗೆ ರಚಿಸಿ ಅದರಲ್ಲಿ ಬಸವಪ್ರಣೀತ ವಚನಾಧಾರಿತ ಲಿಂಗಾಯತ ಧರ್ಮದ ಸಾರ ಸೂಕ್ತಿಗಳನ್ನು ವಿವರಿಸಿ ಬಸವಣ್ಣ ಸ್ಥಾಪಿತ ಲಿಂಗಾಯತವು ಒಂದು ಸ್ವತಂತ್ರ ಧರ್ಮ ಎನ್ನುವುದನ್ನು ಸಾರಿ ಅದಕ್ಕೆ ಜಾಗತಿಕ ಧರ್ಮಗಳ ಸಾಲಿನಲ್ಲಿ ಸ್ಥಾನ ಕಲ್ಪಿಸಿದ್ದು. ಈ ಸಂಗತಿ ಸಿದ್ಧೇಶ್ವರ ಸ್ವಾಮಿಗಳ ಶಿಷ್ಯರೆಂದು ಹೇಳಿಕೊಂಡು ಅಂಡಲೆಯುವ ಕನೇರಿ ಕಾಡಸಿದ್ಧ ಇತ್ಯಾದಿ ಹಿಂದೂತ್ವಕ್ಕೆ ತಮ್ಮನ್ನು ತಾವು ಒತ್ತಿ ಇಟ್ಟುಕೊಂಡಿರುವ ಗಾಂಪರ ಗುಂಪು ಕಡೆಗಣಿಸುವ ಮೂಲಕ ಸಿದ್ಧೇಶ್ವರ ಸ್ವಾಮಿಗಳನ್ನು ನೇರವಾಗಿಯೇ ಅವಮಾನಿಸಿತ್ತಿವೆ.
ಪಂಚಪೀಠಗಳ ವೀರಶೈವ ಜಾತಿ ಜಂಗಮರಿಂದ ತುಚ್ಛವಾಗಿ ಪರಿಗಣಿಸಲ್ಪಟ್ಟು, ತಿರಸ್ಕೃತಗೊಂಡ ಗದುಗಿನ ಸದಾಶಿವಾನಂದ(ಕೈವಲ್ಯಾನಂದ), ಕನೇರಿಯ ಕಾಡಸಿದ್ಧ, ಅಮೃತಾನಂದ, ಮಲೆಯಾಳಿ ತೇಜೊಮಯಾನಂದ ಮುಂತಾದ ಹಿಂದುತ್ವವಾದಿ ವಿದ್ವಂಸಕ ಮನಸ್ಥಿತಿಯ ಕೋಮುವಾದಿ ಕಾವಿಗಳು ಯಾವುದೇ ಒಂದು ನಿರ್ದಿಷ್ಟ ಅಧ್ಯಾತ್ಮಿಕ ಹಿನ್ನೆಲೆ ಅಥವಾ ಒಂದು ದರ್ಶನ ಸಿದ್ಧಾಂತದ ಹಿನ್ನೆಲೆ ಇಲ್ಲದೆ, ಅಥವಾ ಸಿದ್ಧಾರೂಢರು ಪ್ರತಿಪಾದಿಸಿದ ಆರೂಢ/ವೇದಾಂತ ದರ್ಶನವನ್ನೂ ಅನುಸರಿಸದೆ ಸಿದ್ಧೇಶ್ವರ ಸ್ವಾಮಿಗಳ ಜ್ಞಾನಯೋಗಾಶ್ರಮದಲ್ಲಿ ತಿಂದು ಉಂಡು ದಂಡಪಿಂಡಗಳಂತೆ ಬೆಳೆದು ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಇವರುಗಳು ಸಿದ್ಧೇಶ್ವರ ಸ್ವಾಮಿಗಳ ಸರಳತೆ, ಸನ್ನಡತೆ, ಸೌಜನ್ಯ, ವಿದ್ವತ್ತು, ಯಾವುದನ್ನೂ ಅನುಸರಿಸದೆ, ಅನುಕರಿಸದೆ, ಅಳವಡಿಸಿಕೊಳ್ಳದೆ ಐಶಾರಾಮಿ ಬದುಕಿನ ಆಮೀಷಗಳ ಹಿಂದೆ ಬಿದ್ದು ಹಿಂದುತ್ವ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಅನ್ಯ ಧರ್ಮಗಳ ಮೇಲೆ ದ್ವೇಷ ಕಾರುತ್ತಾ ಅಂಡಲೆಯುತ್ತಿದ್ದಾರೆ. ಇವರೆಲ್ಲರೂ ಉತ್ತರಪ್ರದೇಶದಲ್ಲಿ ಒಬ್ಬ ಕಾವಿ ರಾಜಕಾರಣಿ ಮುಖ್ಯಮಂತ್ರಿ ಆಗಿದ್ದನ್ನು ಸಂಭ್ರಮಿಸುತ್ತಾ ಹಗಲುಗನಸು ಕಾಣುತ್ತಿದ್ದಾರೆ, ಆದರೆ ಇವರಿಗೆ ತಾವು ಬಸವಣ್ಣ, ಕನಕ, ಷರೀಫ್ ಮತ್ತು ಕುವೆಂಪು ಅವರ ವೈಚಾರಿಕ ನೆಲ ಕನ್ನಡ ನಾಡಿನಲ್ಲಿ ಇದ್ದೇವೆ ಎನ್ನುವುದು ಮರೆತು ಹೋಗಿದೆ. ಕನ್ನಡ ನಾಡು ಉತ್ತರ ಭಾರತದಂತೆ ಹಿಂದುತ್ವವಾದಿ ಕಾವಿಗಳಿಗೆ ಮಣೆ ಹಾಕುವ ವಿಚಾರಹೀನ ಪರಂಪರೆ ಹೊಂದಿಲ್ಲ ಎನ್ನುವ ಸಂಗತಿ ಈ ಮತಿಹೀನರು ತಿಳಿಯಬೇಕಿದೆ.
ವೀರಶೈವ ಜಾತಿ ಜಂಗಮರ ಮೇಲಿನ ಸಿಟ್ಟಿಗಾಗಿ ಪಂಚಮಸಾಲಿ ಉಭಯ ಪೀಠಗಳ ಸ್ವಾಮಿಗಳು ಯಾವ ನೆಲೆಯೂ ಇಲ್ಲದೆ ಅಂಡಲೆಯುವ ಈ ಉಡಾಳ ಹಿಂದುತ್ವವಾದಿ ಕಾವಿ ಪಟಾಲಂಗಳಂತೆ ತಾವೂ ಕೂಡ ಹಿಂದುತ್ವವಾದಿಗಳ ಆಮಿಷಗಳಿಗೆ ಬಲಿಯಾಗಿ ಅಡ್ಡ ಹಾದಿ ತುಳಿಯುವ ಅಗತ್ಯವಿರಲಿಲ್ಲ. ಏಕೆಂದರೆ ಪಂಚಮಸಾಲಿ ಪೀಠಗಳಿಗೆ ಬಸವಪ್ರಣೀತ ಲಿಂಗಾಯತ ಸಿದ್ಧಾಂತದ ಶ್ರೀಮಂತ ಹಿನ್ನೆಲೆ ಇದೆ. ಲಿಂಗಾಯತ ಸಂಪ್ರದಾಯದಲ್ಲಿ ಜಾತಿ ಜಂಗಮರು ಮಾತ್ರ ಮಠಾಧೀಶರಾಗಬೇಕು ಎನ್ನುವ ಕಡ್ಡಾಯ ನಿಯಮ ರೂಪಿಸಿದ ನಂತರ ದಾರ್ಶನಿಕ ವ್ಯಕ್ತಿತ್ವದ ಜಂಗಮೇತರ ಲಿಂಗಾಯತ ಸನ್ಯಾಸಿಗಳು ಅನಿವಾರ್ಯವಾಗಿ ವೇದಾಂತ ಒಪ್ಪಿಕೊಂಡರೆ ವಿನಃ ವೈದಿಕ ಮೌಢ್ಯಗಳನ್ನಲ್ಲ. ನಾವು ವೇದಾಂತಿಗಳು ಎನ್ನುವ ಇಂದಿನ ಆರೂಢ ಮಾರ್ಗದ ಸನ್ಯಾಸಿಗಳು ಲಿಂಗಾಯತ ಮಹಾಮಾರ್ಗವನ್ನು ಬಿಟ್ಟು ಹಿಂದುತ್ವದ ರಾಜಕೀಯ ಅಜೆಂಡಾದ ಭಾಗವಾಗಿ ಪ್ರತಿಪಾದಿಸಲ್ಪಡುತ್ತಿರುವ ಅಲ್ಪ ಮಾರ್ಗವನ್ನು ತುಳಿದು ಹಣ ಮಾಡುತ್ತಿದ್ದಾರೆ. ಇದೀಗ ಈ ಖದಿಮ ನಕಲಿ ಹಿಂದುತ್ವವಾದಿ ಕಾವಿಗಳನ್ನು ಬ್ರಾಹ್ಮಣವಾದಿ ಹಿಂದೂ ಸಂಘಟನೆಗಳು ಲಿಂಗಾಯತ ಮಠಾಧೀಶರು ಮತ್ತು ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಹೋರಾಟಗಾರರ ವಿರುದ್ಧ ಎತ್ತಿ ಕಟ್ಟಿವೆ. ಈಗ ಈ ಹಿಂದುತ್ವವಾದಿ ಕಾವಿಗಳು ಹಿಂದೂ ಸಂಘಟನೆಯ ಬಾಡಿಗೆ ಕಾಲಾಳುಗಳಾಗಿ ಲಕೋಟೆ ಆಶೆಗೆ ನಾಡಿನಾದ್ಯಂತ ಪೋಲಿಗಳಂತೆ ಅಂಡಲೆಯುತ್ತಿವೆ.
ಒಂದು ಸಂಗತಿಯನ್ನು ನಾವೆಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಸಾಂಪ್ರದಾಯಿಕ ಹಿನ್ನೆಲೆ ಇಲ್ಲದೆ ಬದುಕುವುದಕ್ಕಾಗಿ ಅಂಡಲೆಯುತ್ತಿದ್ದ ಪುಂಡ ಪೋಕರಿಗಳು ಸಿದ್ಧೇಶ್ವರ ಸ್ವಾಮಿಗಳ ಜ್ಞಾನಯೋಗಾಶ್ರಮದಲ್ಲಿ ಆಶ್ರಯ ಪಡೆದಿದ್ದವು. ಸಮಾಜ ಹಾಗು ಜನರ ಮೇಲೆ ಯಾವುದೆ ರೀತಿಯಲ್ಲಿ ಪ್ರಭಾವ ಬೀರುವಷ್ಟು ಶಕ್ತಿಯಾಗಲಿ, ಸಾಮರ್ಥ್ಯ ಅಥವಾ ಪ್ರಭಾವ ಇಲ್ಲದ ಆ ಎಲ್ಲಾ ಕಾವಿಗಳು ಈಗ ಅಪಾಯಕಾರಿ ಹಿಂದುತ್ವದ ಕಾಲಾಳುಗಳು. ಸಿದ್ಧೇಶ್ವರ ಸ್ವಾಮಿಗಳ ಗೌರವವನ್ನು ಈ ಕಾವಿಗಳು ಈಗ ನಾಶ ಮಾಡುತ್ತಿದ್ದಾರೆ. ಈ ನಾಡಿನ ಬ್ರಾಹ್ಮಣ ಮಠಾಧೀಶರು ಹಾಗು ಸಾಂಪ್ರದಾಯವಾದಿ ವೀರಶೈವ ಪಂಚಪೀಠಗಳ ಜಾತಿ ಜಂಗಮ ಮಠಾಧೀಶರು ಸಿದ್ಧೇಶ್ವರ ಸ್ವಾಮಿಗಳ ವಿದ್ವತ್ತು, ಸರಳತೆಯನ್ನು ಎಂದಿಗೂ ಗೌರವಿಸಲಿಲ್ಲ, ಬದಲಾಗಿ ಸ್ವಾಮಿಗಳನ್ನು ದ್ವೇಷಿಸುವ ಧೈರ್ಯ, ನೈತಿಕತೆಯೂ ಇಲ್ಲದೆ ಅನಿವಾರ್ಯವಾಗಿ ಮೌನವಹಿಸಿದ್ದರು. ಅವರ ಜನಪ್ರಿಯತೆ ಈ ಸಾಂಪ್ರದಾಯವಾದಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆದರೆ ಸಿದ್ಧೇಶ್ವರ ಸ್ವಾಮಿಗಳನ್ನು ಗುರುತಿಸಿ ಗೌರವಿಸಿದ್ದು ಬಸವ ಪರಂಪರೆಯ ಲಿಂಗಾಯತ ವಿರಕ್ತ ಮಠಗಳು. ಸಿದ್ಧೇಶ್ವರ ಸ್ವಾಮಿಗಳು ಕೊನೆಗೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ ಯಾವೊಬ್ಬ ಬ್ರಾಹ್ಮಣ ಮಠಾಧೀಶನಾಗಲಿ, ವೀರಶೈವ ಪಂಚಪೀಠಗಳ ಜಾತಿ ಜಂಗಮ ಮಠಾಧೀಶರಾಗಲಿ ಅಥವಾ ಹಿಂದುತ್ವವಾದಿ ಬಾಡಿಗೆ ಭಾಷಣಕಾರರಾಗಲಿ ಸೌಜನ್ಯಕ್ಕಾದರೂ ಬಂದು ಕಾಣಲಿಲ್ಲ. ಅಷ್ಟೇ ಅಲ್ಲದೆ ಸ್ವಾಮಿಗಳು ಲಿಂಗೈಕ್ಯರಾದಾಗ ಅವರ ಸಂಸ್ಕಾರದಲ್ಲೂ ಭಾಗವಹಿಸಲಿಲ್ಲ.
ಸಿದ್ಧೇಶ್ವರ ಸ್ವಾಮಿಗಳು ಬ್ರಾಹ್ಮಣ ಧರ್ಮದ ಭಗವದ್ಗೀತೆಯ ಮೇಲೆ ಸುದೀರ್ಘ ಅವಧಿ ಅವ್ಯಾಹತವಾಗಿ ಪ್ರವಚನ ಮಾಡಿದ್ದಾರೆ, ವೀರಶೈವ ಜಾತಿ ಜಂಗಮರ ಸಿದ್ಧಾಂತ ಶಿಖಾಮಣಿಯ ಮೇಲೆ ಸಾಕಷ್ಟು ಬರೆದಿದ್ದಾರೆ. ಆದರೂ ಈ ಹಿಂದುತ್ವವಾದಿಗಳಾಗಲಿ, ವೀರಶೈವರಾಗಲಿ ಅವರನ್ನು ಬಂದು ಕಾಣಲಿಲ್ಲ. ಕಾರಣ, ಬ್ರಾಹ್ಮಣೇತರ, ಜಂಗಮೇತರ ಯಾವ ಜನಪ್ರಿಯ ವಿದ್ವಾಂಸರನ್ನೂ ಈ ಸಾಂಪ್ರದಾಯವಾದಿಗಳು ಸಹಿಸುವುದಾಗಲಿ, ಗೌರವಿಸುವುದಾಗಲಿ ಮಾಡಿಲ್ಲ ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ದಾಖಲೆಗಳಿವೆ. ಆದರೆ ಬಸವ ಪ್ರಣೀತ ಲಿಂಗಾಯತ ಮಠಗಳ ಶ್ರೀಗಳು ಸಿದ್ಧೇಶ್ವರ ಸ್ವಾಮಿಗಳನ್ನು ಸೂಕ್ತವಾಗಿ ಗೌರವಿಸಿದ್ದಾರೆ, ಅವರ ಕೊನೆಗಾಲದಲ್ಲಿ ಬಂದು, ಅವರನ್ನು ಕಂಡು ಧೈರ್ಯದ ಮಾತುಗಳನ್ನಾಡಿದ್ದಾರೆ, ಸ್ವಾಮಿಗಳು ಲಿಂಗೈಕ್ಯರಾದಾಗ ಬಂದು ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಸಿದ್ಧೇಶ್ವರ ಶ್ರೀಗಳ ಆಶ್ರಮದಲ್ಲಿ ಲಿಂಗಾಯತ ಭಕ್ತರ ದೇಣಿಗೆಯ ಅನ್ನು ತಿಂದು ಬೆಳೆದ ಅನೇಕ ಪುಂಡಪೋಕರಿ ಕಾವಿಗಳು ಸಿದ್ಧೇಶ್ವರ ಸ್ವಾಮಿಗಳ ಮನಸ್ಸಿಗೆ ವಿರುಧ್ಧವಾಗಿ, ಹಿಂದುತ್ವವಾದಿ ಸಂಘಟನೆಗಳ ಬಾಡಿಗೆ ಕಾಲಾಳುಗಳಾಗಿ ಕಾರ್ಯ ಮಾಡುತ್ತಿವೆ. ವೈದಿಕರ ಅಣತಿಯಂತೆ ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಯ ಹೋರಾಟವನ್ನು ತೀವ್ರವಾಗಿ ವಿರೋಧಿಸುತ್ತಾ ಬಸವಾದಿ ಶರಣರ ಹೆಸರಲ್ಲಿ ವಿಚಿತ್ರ ಹಾಗು ವಿಲಕ್ಷಣ ರೀತಿಯ ಸಮಾವೇಷಗಳ ಹೆಸರಿನಲ್ಲಿ ನಾಡಿನಾದ್ಯಂತ ಲಜ್ಜೆ ಬಿಟ್ಟು ಹೆಜ್ಜೆ ಹಾಕುತ್ತಿವೆ. ಬ್ರಿಟೀಷರಿಗೆ ಒಡೆದಾಳುವ ನೀತಿ ಕಲಿಸಿದ ಕೋಮುವಾದಿ ವೈದಿಕ ಶಕ್ತಿಗಳು ಇಡೀ ಲಿಂಗಾಯತ ಧರ್ಮವನ್ನು ಚೂರು ಚೂರಾಗಿ ಒಡೆಯಲು ಪ್ರಯತ್ನಿಸುತ್ತಿರುವುದಕ್ಕೆ ಈ ಎಲ್ಲಾ ಘಟನೆಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ.
ಮುಂದುವರೆಯುವುದು….

ಪಂಚಮಸಾಲಿ ಪೀಠಗಳ ಗೊಂದಲ- ಭಾಗ 10 | ಅರಟಾಳ್ ರುದ್ರಗೌಡರ ಕೊಡುಗೆ ಮರೆತ ಸಮಾಜ
ಅರಟಾಳ್ ರುದ್ರಗೌಡರ ಪ್ರಯತ್ನದಿಂದ ಲಿಂಗಾಯತರು ಆಧುನಿಕ ಇಂಗ್ಲಿಷ್ ಶಿಕ್ಷಣ ಮತ್ತು ಸಾಂಪ್ರದಾಯಿಕ ಸಂಸ್ಕೃತ ಶಿಕ್ಷಣ ಪಡೆದು ಬ್ರಾಹ್ಮಣರಿಗೆ ಪ್ರತಿಸ್ಪರ್ಧಿಗಳಾಗಿ ಬೆಳೆದರು. ಗೌಡರು ಮುಂಬೈಯ ರಾಯಲ್ ಏಸಿಯಾಟಿಕ್ ಸೊಸೈಟಿಯ ಸದಸ್ಯರಾಗಿ, ಎಂಥಾಪೊಲಾಜಿಕಲ್ ಸೊಸೈಟಿ ಜರ್ನಲ್ದಲ್ಲಿ ಅನೇಕ ಲೇಖನಗಳನ್ನು ಬರೆದರು. ಅಂದಿನ ಸಾಮಾಜಿಕ ಪ್ರತಿಷ್ಠೆಯಾಗಿದ್ದ ಅಡ್ಡಪಲ್ಲಕ್ಕಿ ಉತ್ಸವ, ವ್ಯಾಸನತೋಳು ಮೆರವಣಿಗೆ, ದೇವರ ಪೂಜೆಯ ಹಕ್ಕು ಮೊದಲಾದ ಬ್ರಾಹ್ಮಣರ ಜೊತೆಗಿನ ಹೋರಾಟಗಳಲ್ಲಿ ಲಿಂಗಾಯತರಿಗೆ ಜಯವನ್ನು ದೊರಕಿಸಿಕೊಟ್ಟರು.
ಲಿಂಗಾಯತ ಪಂಚಮಸಾಲಿ ಉಪವರ್ಗದ ಮತ್ತೊಂದು ಖ್ಯಾತನಾಮ ಹೆಸರು ರಾವ್ ಬಹಾದ್ದೂರ್ ಅರಟಾಳ್ ರುದ್ರಗೌಡರು. ಬ್ರಿಟೀಷ್ ಆಡಳಿತದಲ್ಲಿ ದಕ್ಷ ಅಧಿಕಾರಿಯಾಗಿ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಹೆಸರುವಾಸಿಯಾಗಿದ್ದರು. ಲಿಂಗಾಯತ ಧರ್ಮ ಮತ್ತು ಸಮಾಜದ ಉನ್ನತಿಗಾಗಿ ಅರಟಾಳರು ಮಾಡಿದ ಕಾರ್ಯಗಳು ಅನುಪಮ. ಮೆಕಾಲೆ ಶಿಕ್ಷಣ ನೀತಿ ಜಾರಿಯಾಗಿ ಶಿಕ್ಷಣ ಸಾರ್ವತ್ರಿಕರಣಗೊಂಡ ಮೇಲೆ ಕರ್ನಾಟಕದಲ್ಲಿ ಅಕ್ಷರ ವಂಚಿತ ಬ್ರಾಹ್ಮಣೇತರ ಸಮುದಾಯದ ಜನರಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿ ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯವಾದದ್ದು. ಧಾರವಾಡದಲ್ಲಿ ಶಿಕ್ಷಣ ಅಧಿಕಾರಿಯಾಗಿದ್ದ ಡೆಪ್ಯುಟಿ ಚೆನ್ನಬಸಪ್ಪನವರು ಬಹುಜನರ ಶಿಕ್ಷಣಕ್ಕೆ ನೀಡಿದ ಕೊಡುಗೆ ಬೆಲೆ ಕಟ್ಟಲಾಗದು. ಅದನ್ನು ಮುಂದುವರೆಸಿದ ಗಿಲಗಂಚಿ ಗುರುಸಿದ್ದಪ್ಪರು ಮತ್ತು ಅರಟಾಳ್ ರುದ್ರಗೌಡರು ಬ್ರಾಹ್ಮಣರಿಗೆ ಸರಿಸಮಾನವಾಗಿ ಲಿಂಗಾಯತರು ಶಿಕ್ಷಣ ಪಡೆಯಬೇಕೆಂದು ತಳಮಟ್ಟದಲ್ಲಿ ಕಾರ್ಯ ಮಾಡಿದರು. ಅರಟಾಳ್ ರುದ್ರಗೌಡರ ದಕ್ಷತೆಗೆ ಬ್ರಿಟಿಷ್ ಆಡಳಿತ ಮಾರುಹೋಗಿತ್ತು. 1897 ರಲ್ಲಿ ಪ್ಲೇಗ್ ಮಹಾಮಾರಿ ವಕ್ಕರಿಸಿದಾಗ ಬ್ರಿಟಿಷ್ ಸರಕಾರ ಅಂದಿನ ಮುಂಬೈ ಪ್ರಾಂತ್ಯದಲ್ಲಿ ಪ್ರಸಿದ್ಧ ಪ್ಲೇಗ್ ಆಯುಕ್ತ ವಾಲ್ಟರ್ ಚಾರ್ಲ್ಸ್ ರಾಂಡ್ (ಭಾರತೀಯ ನಾಗರಿಕ ಸೇವೆಗಳ (ICS) ಅಧಿಕಾರಿ) ಅವರನ್ನು ಪುಣೆಯಲ್ಲಿ ಬುಬೊನಿಕ್ ಪ್ಲೇಗ್ ಸಾಂಕ್ರಾಮಿಕದ ಸಮಯದಲ್ಲಿ ವಿಶೇಷ ಪ್ಲೇಗ್ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿತ್ತು.
ಪ್ಲೇಗ್ ಏಕಾಏಕಿಯಾಗಿ ನಿಯಂತ್ರಿಸಲು ಅವರ ಆಕ್ರಮಣಕಾರಿ ಕ್ರಮಗಳು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮವಾಗಿ, ಅವರು ಮತ್ತು ಅವರ ಮಿಲಿಟರಿ ಬೆಂಗಾವಲು ಲೆಫ್ಟಿನೆಂಟ್ ಚಾರ್ಲ್ಸ್ ಅಯರ್ಸ್ಟ್ ಅವರನ್ನು ಜೂನ್ 22, 1897ರಂದು ಚಾಪೇಕರ್ ಸಹೋದರರು (ದಾಮೋದರ್, ಬಾಲಕೃಷ್ಣ ಮತ್ತು ವಾಸುದೇವ್) ಹತ್ಯೆ ಮಾಡಿದರು. ಚಾರ್ಲ್ಸ್ ಅವರು ಪ್ಲೇಗ್ ಜಾರಿ ಪಡೆಯೊಂದಿಗೆ ಕಟ್ಟುನಿಟ್ಟಾಗಿ ಖಾಸಗಿ ಮನೆಗಳಿಗೆ ಪ್ರವೇಶಿಸಿ ಕ್ರಮ ತೆಗೆದುಕೊಂಡಿದ್ದರು. ವೈಯಕ್ತಿಕ ಆಸ್ತಿಯನ್ನು ನಾಶಪಡಿಸುವುದು ಮತ್ತು ನಾಗರಿಕರನ್ನು ಸಾರ್ವಜನಿಕ ದೈಹಿಕ ಪರೀಕ್ಷೆಗಳಿಗೆ ಒಳಪಡಿಸಿದವು, ಇದು ಸ್ಥಳೀಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಕೆರಳಿಸಿದವು ಎಂದು ಚಿತ್ಪಾವನ ಬ್ರಾಹ್ಮಣ ಚಾಪ್ಲೇಕರ್ ಸಹೋದರರು ಚಾರ್ಲ್ಸ್ ರನ್ನು ಸಹಕರಿಸಲಿಲ್ಲ. ಚಾರ್ಲ್ಸ್ ಕೊಲೆಯಿಂದ ಉದ್ಭವಿಸಿದ ಕಾವನ್ನು ತಣಿಸಿ ಪರಿಣಾಮಕಾರಿಯಾಗಿ ಕಾರ್ಯ ಮಾಡುವ ಪರ್ಯಾಯ ಅಧಿಕಾರಿಯಾಗಿ ಅರಟಾಳ್ ರುದ್ರಗೌಡರನ್ನು ಬ್ರಿಟಿಷ್ ಸರಕಾರ ಅಂದು ಸಾತಾರಾಕ್ಕೆ ವರ್ಗಾಯಿಸಿತು. ಅರಟಾಳರು ಸರಕಾರದ ನಿರೀಕ್ಷೆಯಂತೆ ಬಹಳ ಸೌಹಾರ್ದಯುತವಾಗಿ ಪ್ಲೇಗ್ ನ್ನು ನಿಯಂತ್ರಣಕ್ಕೆ ತಂದು ಬ್ರಿಟಿಷ್ ಸರ್ಕಾರದ ಮನ್ನಣೆಗೆ ಪಾತ್ರರಾಗಿದ್ದರು. ಇಂತಹ ದಕ್ಷ ಅಧಿಕಾರಿಯಾಗಿದ್ದ ಅರಟಾಳರು ದೈತ್ಯ ಸಂಘಟಕರೂ ಆಗಿದ್ದರು. ಆ ಕಾಲದಲ್ಲಿ ಲಿಂಗಾಯತರನ್ನು ಸಂಘಟಿಸಿ ಬ್ರಾಹ್ಮಣರೊಂದಿಗೆ ಸ್ಪರ್ಧಿಸುವಂತೆ ಮಾಡುವಲ್ಲಿ ಅರಟಾಳರ ಕೊಡುಗೆ ದೊಡ್ಡದು.
ಅರಟಾಳ್ ರುದ್ರಗೌಡರು 1851 ಮಾರ್ಚ್ 22 ರಂದು ಕುಂದಗೋಳ ತಾಲೂಕಿನ ಹಿರೆ ಹರಕುಣಿ ಗ್ರಾಮದ ಲಿಂಗಾಯತ ಪಂಚಮಸಾಲಿ ಗೌಡರ ಮನೆತನದಲ್ಲಿ ಜನಿಸಿದರು. ಉತ್ತರಕರ್ನಾಟಕದಲ್ಲಿ ಬ್ರಾಹ್ಮಣರ ಶೋಷಣೆಯ ವಿರುದ್ಧ ಅವರು ಏಕಾಂಗಿಯಾಗಿ ಹೋರಾಡಿದರು. ಬ್ರಾಹ್ಮಣರ ಶೋಷಣೆಗೆ ಪೇಶ್ವೆಗಳ ಆಡಳಿತದ ಬೆಂಬಲವಿತ್ತು. ಅವರ ಹೋರಾಟ ಸಾಮೂಹಿಕವಲ್ಲದ ಕಾರಣ ಅದು ಚಳವಳಿಯ ರೂಪ ತಾಳಲಿಲ್ಲ. ಅದು ಚಳುವಳಿ ಆಗಿದ್ದರೆ, ಅವರು ದೊಡ್ಡ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದರು. ಸರಕಾರಿ ಅಧಿಕಾರಿಯಾಗಿ, ಭ್ರಷ್ಟಾಚಾರ ತಡೆಯುವಲ್ಲಿ ರುದ್ರಗೌಡರದ್ದು ಪರಮ ಸಾಧನೆ ಎಂದು ಅಂದಿನ ಬ್ರಿಟಿಷ್ ಸರಕಾರದ ರೆವಿನ್ಯೂ ಅಡ್ಮಿನಿಸ್ಟ್ರೇಟಿವ್ ರಿಪೋರ್ಟಿನಲ್ಲಿ ದಾಖಲಾದ್ದು ಗಮನಾರ್ಹ. ಹಳ್ಳಿಯಲ್ಲಿ ಹುಟ್ಟಿ ರುದ್ರಗೌಡರು ನಿರ್ವಹಿಸಿದ ಸರಕಾರಿ ಹುದ್ದೆಗಳು ಹೀಗಿವೆ :
೧೮೭೩-೭೪: ಅರಟಾಳ್ ಗ್ರಾಮದ ಗೌಡಕಿ.
೧೮೭೫: 15 ರೂ. ವೇತನದ ಕಾರಕೂನ, ಧಾರವಾಡ.
೧೮೭೮: ಕಲೆಕ್ಟರ್ ಡೆಪ್ಯುಟಿ ಚಿಟೀಸ್, ಧಾರವಾಡ.
೧೮೮೦: ಕಲೆಕ್ಟರ್ ಅವರ ಚಿಟೀಸ್, ಧಾರವಾಡ.
೧೮೮೮: ಕಲೆಕ್ಟರ್ ಅವರ ದಫ್ತರ್ದಾರ, ಉತ್ತರ ಕನ್ನಡ ಜಿಲ್ಲೆ.
೧೮೯೦: ದಕ್ಷಿಣ ವಿಭಾಗದ ಕಮೀಶನ್ ಅವರ ನೇಟಿವ್ ಅಸಿಸ್ಟೆಂಟ್.
೧೮೯೨: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ವಿಜಾಪುರ.
೧೮೯೭: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ನಾಸಿಕ.
೧೮೯೮-೧೯೧೩: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ಬೆಳಗಾವಿ
ಕೇವಲ ಮೆಟ್ರಿಕ್ ವರೆಗೆ ಓದಿ, ಹಳ್ಳಿಯ ಗೌಡಕಿಯಿಂದ ಹಿಡಿದು, ಡೆಪ್ಯುಟಿ ಕಲೆಕ್ಟರ್ ಹುದ್ದೆ ವರೆಗೆ ಉನ್ನತ ಹುದ್ದೆಯ ವರೆಗೆ ರುದ್ರಗೌಡರ ಪಯಣ ಸಾಗಿತ್ತು.
೧೮೮೩ ರಲ್ಲಿ ಧಾರವಾಡದಲ್ಲಿ “ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ” ಯನ್ನು ಸ್ಥಾಪಿಸಿ ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿಭಾವಂತ ಲಿಂಗಾಯತರಿಗೆ ಧನ ದಾಸೋಹವನ್ನು ಆರಂಭಿಸಿದರು. “ಆ ಕಾಲದಲ್ಲಿ ಈ ಸಂಸ್ಥೆಯು ಲಿಂಗಾಯತರ ಶಿಕ್ಷಣಾಭಿವೃದ್ಧಿಯ ಅನಧಿಕೃತ ಇಲಾಖೆಯಂತೆ ಕಾರ್ಯ ಮಾಡಿತು. ಸುಶಿಕ್ಷಿತ ಲಿಂಗಾಯತ ವಿದ್ಯಾರ್ಥಿಗಳ ಹೆಸರನ್ನು ನೌಕರಿಗಾಗಿ ಶಿಫಾರಸು ಮಾಡುವ ಅಧಿಕಾರವನ್ನು ಅಂದಿನ ಸರಕಾರ ಈ ಸಂಸ್ಥೆಗೆ ನೀಡುವ ಮೂಲಕ, ಇದು ಅರೆ ಸರಕಾರಿ ಸಂಸ್ಥೆಯೆಂಬಂತೆ ಮಾನ್ಯತೆ ಗಳಿಸಿತು” ಎಂದು ಸಂಶೋಧಕ ಡಾ. ಕಲಬುರ್ಗಿಯವರು ಬಣ್ಣಿಸಿದ್ದಾರೆ. ಆನಂತರ 1889 ರಲ್ಲಿ ಗದುಗಿನಲ್ಲಿ ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆ, 1903 ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಿಂಟಿಂಗ್ ಪ್ರೆಸ್, 1904 ರಲ್ಲಿ ವೀರಶೈವ ಮಹಾಸಭೆ, 1906 ರಲ್ಲಿ ಬೆಳಗಾವಿಯಲ್ಲಿ ಸಿರಸಂಗಿ ಲಿಂಗರಾಜ ಫಂಡ್, 1907 ರಲ್ಲಿ ಕೊಲ್ಲಾಪುರದಲ್ಲಿ ಲಿಂಗಾಯತ ಬೋರ್ಡಿಂಗ್, ಅದೇ ವರ್ಷ ಸೋಲಾಪುರದಲ್ಲಿ ಲಿಂಗಾಯತ ಎಜುಕೇಶನ್ ಅಸೋಸಿಯೇಶನ್, 1908 ರಲ್ಲಿ ಬೆಳಗಾವಿಯಲ್ಲಿ ಸೂಲಗಿತ್ತಿಯರ ತರಬೇತಿ ಕೇಂದ್ರ, 1916 ರಲ್ಲಿ ಬೆಳಗಾವಿಯಲ್ಲಿ ಕೆ ಎಲ್ ಇ ಸೊಸೈಟಿ, ಅದೇ ವರ್ಷ ಧಾರವಾಡದಲ್ಲಿ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್, 1917 ರಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜು, ಹೀಗೆ ಸರಣಿಯಲ್ಲಿ ಅನೇಕ ಸಂಸ್ಥೆಗಳನ್ನು ಪ್ರತ್ಯಕ್ಷವಾಗಿ ಸ್ಥಾಪಿಸಿದರೆ, ಪರೋಕ್ಷವಾಗಿ ಇನ್ನೂ ಅನೇಕ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆ ನೀಡಿದರು. ತಮ್ಮ ಬದುಕಿನ 30 ವರ್ಷಗಳ ಸೇವಾ ಕಾಲದಲ್ಲಿ ಅರಟಾಳ್ ಅವರು ಸಾರ್ವಜನಿಕರಿಂದ ಸುಮಾರು ರೂ. 25 ಲಕ್ಷ ದೇಣಿಗೆ ಸಂಗ್ರಹಿಸಿದರು, ಇಂದು ಅದು ನೂರಾರು ಕೋಟಿಗೆ ಸಮವಾಗುತ್ತಿತ್ತು.
ಅರಟಾಳ್ ರುದ್ರಗೌಡರ ಪ್ರಯತ್ನದಿಂದ ಲಿಂಗಾಯತರು ಆಧುನಿಕ ಇಂಗ್ಲಿಷ್ ಶಿಕ್ಷಣ ಮತ್ತು ಸಾಂಪ್ರದಾಯಿಕ ಸಂಸ್ಕೃತ ಶಿಕ್ಷಣ ಪಡೆದು ಬ್ರಾಹ್ಮಣರಿಗೆ ಪ್ರತಿಸ್ಪರ್ಧಿಗಳಾಗಿ ಬೆಳೆದರು. ಗೌಡರು ಮುಂಬೈಯ ರಾಯಲ್ ಏಸಿಯಾಟಿಕ್ ಸೊಸೈಟಿಯ ಸದಸ್ಯರಾಗಿ, ಎಂಥಾಪೊಲಾಜಿಕಲ್ ಸೊಸೈಟಿ ಜರ್ನಲ್ದಲ್ಲಿ ಅನೇಕ ಲೇಖನಗಳನ್ನು ಬರೆದರು. ಅಂದಿನ ಸಾಮಾಜಿಕ ಪ್ರತಿಷ್ಠೆಯಾಗಿದ್ದ ಅಡ್ಡಪಲ್ಲಕ್ಕಿ ಉತ್ಸವ, ವ್ಯಾಸನತೋಳು ಮೆರವಣಿಗೆ, ದೇವರ ಪೂಜೆಯ ಹಕ್ಕು ಮೊದಲಾದ ಬ್ರಾಹ್ಮಣರ ಜೊತೆಗಿನ ಹೋರಾಟಗಳಲ್ಲಿ ಲಿಂಗಾಯತರಿಗೆ ಜಯವನ್ನು ದೊರಕಿಸಿಕೊಟ್ಟರು. ಕರ್ನಾಟಕ ಎನ್ನುವ ಹೆಸರು ಇನ್ನೂ ಸ್ಪಷ್ಟವಾಗಿ ಮುನ್ನೆಲೆಗೆ ಬರುವ ಮುನ್ನ ಇವರು ಸ್ಥಾಪಿಸಿದ ಅನೇಕ ಸಂಸ್ಥೆಗಳ ಹೆಸರಿನಲ್ಲಿ ಕರ್ನಾಟಕ ಶಬ್ದವಿತ್ತು ಎನ್ನುವುದು ಅವರ ಕನ್ನಡ ಭಾಷಾ ಪ್ರೇಮ ಹಾಗು ನಾಡು, ನುಡಿಯ ಪ್ರೇಮವನ್ನು ದೃಢೀಕರಿಸುತ್ತದೆ. ಅರಟಾಳರು ಮಾಡಿದ ಕಾರ್ಯಗಳ ಹಿಂದೆ ಅನೇಕ ಜನ ದಾಸೋಹಿಗಳ ಕೊಡುಗೆ ಇದೆ. ಇವರಲ್ಲಿ ವಂಟಮುರಿ ರಾಜಾ ಲಖಮಣ ದೇಸಾಯಿಯವರು, ಇವರ ಬೀಗರಾದ ಚಚಡಿಯ ದೇಸಾಯಿಯವರು, ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರು ಇತ್ಯಾದಿ. ಇವರು ಬೆಳಗಾವಿಯ ಜಿಲ್ಲಾಧಿಕಾರಿಯಾಗಿದ್ದಾಗ ಸಾಮಾನ್ಯ ಜನರಿಗೆ ಹಾಗೂ ರೈತರಿಗೆ ಸರ್ಕಾರಿ ಕೆಲಸ ಮಾಡಿಕೊಡುವುದಾಗಿ ಕೆಲವು ಬ್ರಾಹ್ಮಣ ದಲ್ಲಾಳಿಗಳು ಹಣ ವಸೂಲಿ ಮಾಡುತ್ತಿದ್ದರು. ಸರ್ಕಾರಿ ಕಚೇರಿಗಳ ಎದುರು ಜನಸಾಮಾನ್ಯರ ಸುಲಿಗೆ ಮಾಡುವ ದಲ್ಲಾಳಿಗಳ ಕಾಟ ವಿಪರೀತವಾಗಿತ್ತು.
ಅದರಲ್ಲೂ ಓದು ಬರಹ ಬಾರದ ಹಳ್ಳಿಯ ಜನರನ್ನು ಅಕ್ಷರಸ್ಥರಾಗಿದ್ದ ಬ್ರಾಹ್ಮಣರು ಸುಲಿಗೆ ಮಾಡುತ್ತಿದ್ದರು. ಅರಟಾಳರು ಜನತಾ ದರ್ಶನ ಮಾದರಿಯ ಸಭೆಗಳ ಮೂಲಕ ನೇರವಾಗಿ ಹಳ್ಳಿಗಾಡಿನ ರೈತರ ಸಮಸ್ಯೆಗಳನ್ನು ಬಗೆಹರಿಸಲು ಆರಂಭಿಸಿದರು, ಆ ಮೂಲಕ ದಲ್ಲಾಳಿಗಳ ಕಾಟಕ್ಕೆ ಯಶಸ್ವಿಯಾಗಿ ತಡೆಯೊಡಿದ್ದರು. ಇದರಿಂದ ಕೋಪಗೊಂಡ ಆ ಬ್ರಾಹ್ಮಣ ದಲ್ಲಾಳಿಗಳು ಪುಣೆಯ ಅವರ ಕುಲಬಾಂಧವ ಬಾಲಗಂಗಾಧರ ತಿಲಕ್ ಗೆ ಈ ಕುರಿತು ದೂರುನ್ನು ನೀಡಿದ್ದರು. ಇವರ ಮಾತು ಕೇಳಿ ಬಾಲಗಂಗಾಧರ ತಿಲಕ್ ತನ್ನ ಕೇಸರಿ ಹಾಗು ಮರಾಠಿ ಪತ್ರಿಕೆಗಳಲ್ಲಿ ಅರಟಾಳರು, ಅಪ್ರಮಾಣಿ, ಅದಕ್ಷ, ಜಾತಿವಾದಿ ಅಧಿಕಾರಿ, ಜನರನ್ನು ಶೋಷಣೆ ಮಾಡುತ್ತಾರೆ, ಮುಂತಾಗಿ ಮಿತ್ಯಾರೋಪದ ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿದರು. ಅನೇಕ ಜನ ಓದುಗರು ತಿಲಕರ ಪತ್ರಿಕೆಗೆ ಕಾಗದ ಬರೆದು, ಒಬ್ಬ ದಕ್ಷ ಅಧಿಕಾರಿಯ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವುದು ತಪ್ಪು ಎಂದು ಮನವರಿಕೆ ಮಾಡಿದರೂ ತಿಲಕ್ ತನ್ನ ಬರವಣಿಗೆ ನಿಲ್ಲಿಸಲಿಲ್ಲ. ಇದು ಅಂದಿನ ಬ್ರಿಟಿಷ್ ಸರ್ಕಾರದ ಗಮನಕ್ಕೆ ಬಂದು ಸರಕಾರ ಅರಟಾಳರ ವಿರುದ್ಧ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿತು. ಕೊನೆಗೆ ತಿಲಕ್ ಮಾಡಿದ ಆರೋಪಗಳು ಸುಳ್ಳು ಎಂದು ತನಿಖಾ ಸಂಸ್ಥೆ ವರದಿ ನೀಡಿತು. ಅರಟಾಳ್ ರುದ್ರಗೌಡರ ಮೇಲಿನ ಆರೋಪಗಳು ಮತ್ತು ಪತ್ರಿಕಾ ವರದಿಗಳು ಸುಳ್ಳು ಎಂದು ಸರ್ಕಾರದ ತನಿಖಾ ವರದಿಯನ್ನು ಅಂದಿನ ಗೆಜೆಟ್ ನಲ್ಲೂ ಪ್ರಕಟಿಸಲಾಗಿತ್ತು.
ಈ ವಿಷಯದ ಕುರಿತು ಬಸಯ್ಯ ಕಂಬಿಮಠ ಅವರು “ಅರಟಾಳ್ ರುದ್ರಗೌಡರ ಚರಿತ್ರೆ” ಎನ್ನುವ ಗ್ರಂಥದಲ್ಲಿ ವಿವರವಾಗಿ ಬರೆದಿದ್ದಾರೆ. ಬಾಲಗಂಗಾಧರ ತಿಲಕ್ ಸ್ವಾತಂತ್ರ ಹೋರಾಟಗಾರನಲ್ಲ, ಆತನೊಬ್ಬ ಬೆದರಿಸುವ (ಬ್ಲ್ಯಾಕ್ಮೇಲ್) ಪತ್ರಕರ್ತನಾಗಿದ್ದ, ಮಾನಹಾನಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದನೇ ಹೊರತು ಬ್ರಿಟಿಷರ ವಿರುದ್ಧ ಹೋರಾಡಿ ಅಲ್ಲ ಎಂದು ಕಂಬಿಮಠ ಅವರು ಈ ಗ್ರಂಥದಲ್ಲಿ ಬರೆದಿದ್ದಾರೆ. ಲೇಖಕರು ಅರಟಾಳ್ ರುದ್ರಗೌಡರ ಸಮಕಾಲೀನರು, ಮತ್ತು ಆತ್ಮೀಯ ಸ್ನೇಹಿತರಾಗಿದ್ದರು ಹಾಗು ಈ ಗ್ರಂಥವನ್ನು ಬರೆಯಲು ಅವರು 1911 ರಲ್ಲಿ ಆರಂಭಿಸಿ 1919-20ರ ವರೆಗೆ ಬರೆದಿದ್ದಾರೆ. ಈ ಗ್ರಂಥವು ಕಳೆದ ಹತ್ತು ವರ್ಷಗಳ ಹಿಂದೆ ಕೆ.ಎಲ್.ಇ. ವಿಶ್ವವಿದ್ಯಾಲಯದ ಪ್ರಸಾರಾಂಗ ಸಂಸ್ಥೆಯು ಪ್ರಕಟಿಸಿದೆ. ಈ ಗ್ರಂಥದ ಪರಿಚಯವನ್ನು ಲಿಂಗೈಕ್ಯ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ “ಬಾಲಗಂಗಾಧರ ತಿಲಕರ ಇನ್ನೊಂದು ಮುಖ” ಎನ್ನುವ ತಲೆಬರಹದಲ್ಲಿ ಒಂದು ಸುದೀರ್ಘ ವರದಿ ಮಾಡಿದ್ದರು. ಅಲ್ಲಿಯ ವರೆಗೆ ಬಾಲಗಂಗಾಧರ ತಿಲಕ್ ಸ್ವಾತಂತ್ರ ಹೋರಾಟಗಾರ ಎನ್ನುವ ಭ್ರಮೆಯಲ್ಲಿದ್ದ ಜನರಿಗೆ ಸತ್ಯ ದರ್ಶನವಾಗಿತ್ತು. ಅರಟಾಳ್ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕಾಲೇಜು ಸ್ಥಾಪನೆಯ ಹಿಂದೆ ಕೂಡ ಒಂದು ರೋಚಕ ಕತೆಯಿದೆ. ಉತ್ತರ ಕರ್ನಾಟಕದಲ್ಲಿ 1910ರ ವರೆಗೆ ಒಂದೂ ಕಾಲೇಜುಗಳಿರಲಿಲ್ಲ. ಅರಟಾಳ್ ರುದ್ರಗೌಡರು ಅಂದಿನ ಬ್ರಿಟಿಷ್ ಶಿಕ್ಷಣಾಧಿಕಾರಿ ಮಿ. ರ್ಹಿಲ್ ಅವರಿಗೆ ಕಾಲೇಜು ಆರಂಭಿಸುವುದಕ್ಕೆ 1913ರಲ್ಲಿ ಪರವಾನಿಗೆ ಕೇಳಿದರು.
ಕರ್ನಾಟಕ ಕಾಲೇಜ ಸ್ಥಾಪನೆಗೆ ಬ್ರೀಟಿಷ ಸರಕಾರ ಮೂರು ಲಕ್ಷ ರೂಪಾಯಿ ಠೇವಣಿ ಇಡಬೇಕೆಂದು ತಿಳಿಸಿತು. ಅರಟಾಳ್ ರುದ್ರಗೌಡರು ಒಂದು ಲಕ್ಷ ಮತ್ತು ರೂದ್ದ ಶ್ರೀನಿವಾಸರಾಯರು ಒಂದು ಲಕ್ಷ ವಂತಿಗೆ ಸಂಗ್ರಹಿಸುವುದು ಮತ್ತು ಬ್ರಿಟಿಷ್ ಸರಕಾರ ಒಂದು ಲಕ್ಷ ಸೇರಿಸಿ ಕಾಲೇಜು ಆರಂಭಿಸುವ ಮಾತುಕತೆಯಾಯಿತು. ಅರಟಾಳರು ಒಂದು ವಾರದಲ್ಲಿ ನಿರ್ಧಾರಿತ ಹಣ ಸಂಗ್ರಹಿಸಿದರು, ಆದರೆ ರೂದ್ದ ಶ್ರೀನಿವಾಸರಾಯ ಸಂಗ್ರಹಿಸಿದ ಮೂತ್ತ ಕೇವಲ ಮೂವತ್ತುಸಾವಿರ ಮಾತ್ರ ಆಗಿತ್ತು. ಇದರಿಂದ ಅವಮಾನಿತನಾಗಿ ಹೊದ್ದು ಶ್ರೀನಿವಾಸರಾಯ ರುದ್ರಗೌಡರು ಮಾಡಿದ ಕಾರ್ಯದ ಶ್ರೇಯಸ್ಸು ತಾನು ಪಡೆಯಲು ಪ್ರಯತ್ನಿಸಿದ. ಉಳಿದ ಹಣವನ್ನು ಅರಟಾಳ್ ರುದ್ರಗೌಡರೆ ಸಂಗ್ರಹಿಸಿದ ಕಾರಣ 1917 ರಲ್ಲಿ ಕರ್ನಾಟಕ ಕಾಲೇಜು ಆರಂಭವಾಯಿತು. ನಂತರ ಮುಂಬೈ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ಗ್ರೆಡ-2 ಕಾಲೇಜ್ ನ್ನು ಗ್ರೇಡ-೧ ಕಾಲೇಜ ಆಗಿ ಬಡ್ತಿ ನೀಡಿದರು. ಕನ್ನಡಕ್ಕೆ ದಕ್ಕಿದ ಆರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಓದಿದ್ದು ಈ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಎನ್ನುವುದು ಗಮನಾರ್ಹ. ಆದರೆ, ದುರಂತದ ಸಂಗತಿ ಏನೆಂದರೆ, ಆ ಕಾಲೇಜು ಆರಂಭಿಸಲು ದುಡಿದ ಅರಟಾಳ್ ರುದ್ರಗೌಡರ ಅಥವಾ ಸರ್ ಸಿದ್ಧಪ್ಪ ಕಂಬಳಿಯವರ ಪ್ರತಿಮೆ ಆ ಕಾಲೇಜಿನ ಆವರಣ ಸೇರುವ ಮೊದಲೇ ರೊದ್ದ ಶ್ರೀನಿವಾಸರಾಯನ ಪ್ರತಿಮೆ ಸ್ಥಾಪನೆಯಾಗಿದ್ದು, ಆನಂತರ ಇತ್ತೀಚಿಗೆ ಸರ್ ಸಿದ್ಧಪ್ಪ ಕಂಬಳಿಯವರ ಪ್ರತಿಮೆ ಅಲ್ಲಿ ಸ್ಥಾಪಿಸಲಾಗಿದೆ.
ಧಾರವಾಡದ ಕರ್ನಾಟಕ ಕಾಲೇಜು ಸ್ಥಾಪನೆಯ ಸಮಯದಲ್ಲಿ ದೇಣಿಗೆ ಸಂಗ್ರಹಿಸಿ ಸರಕಾರದಲ್ಲಿ ಠೇವಣಿ ಇಟ್ಟಿದ್ದ ಹಣದ ಮೇಲೆ ಜಮೆಯಾದ ಬಡ್ಡಿ ಹಣಕ್ಕೆ ಒಂದಷ್ಟು ತಮ್ಮ ಹಣ ಸೇರಿಸಿ ಬೆಳಗಾವಿಯಲ್ಲಿ ಸಪ್ತ ಋಷಿಗಳ ಜೊತೆ ಸೇರಿ ಕೆ.ಎಲ್.ಇ ಸಂಸ್ಥೆಯನ್ನು ನೋಂದಣಿ ಮಾಡಿಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಅರಟಾಳರು ಸಂಸ್ಥೆಗೆ ಗಟ್ಟಿ ಬುನಾದಿ ಹಾಕಿದರು. ಕಾಶಿಯಲ್ಲಿ ಒಂದು ವಿಶ್ವ ವಿದ್ಯಾಲಯದ ಸ್ಥಾಪಿಸಿದ ಮದನ್ ಮೋಹನ್ ಮಾಳ್ವಿಯ ಬ್ರಾಹ್ಮಣರಾಗಿರುವ ಕಾರಣದಿಂದ ಭಾರತ ರತ್ನಕ್ಕೆ ಭಾಜನರಾಗಿ ಪ್ರಸಿದ್ಧರಾದರು. ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಇಂತಹ ದೈತ್ಯ ಕಾರ್ಯ ಮಾಡಿದ ಅರಟಾಳ್ ರುದ್ರಗೌಡರನ್ನು ಕನ್ನಡಿಗರು, ಲಿಂಗಾಯತರು, ಅದೂ ಪಂಚಮಸಾಲಿಗಳೆ ಗುರುತಿಸಲಿಲ್ಲ. ಅರಟಾಳ್ ರುದ್ರಗೌಡರ ಧಾರಾಳತನ ಅಂದು ಅನೇಕ ರೀತಿಯಲ್ಲಿ ದುರುಪಯೋಗವಾಯಿತು. ಅವರು ಸ್ಥಾಪಿಸಿದ ವೀರಶೈವ ಮಹಾಸಭಾ ಲಿಂಗಾಯತರನ್ನು ಅಲ್ಪಸಂಖ್ಯಾತರ ಸೌಲಭ್ಯದಿಂದ ವಂಚಿಸುತ್ತಿದೆ, ಶಿವಯೋಗಿ ಮಂದಿರ ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ, ಲಿಂಗಾಯತರ ವಿರುದ್ಧವಾಗಿ ಕಾರ್ಯ ಮಾಡುತ್ತಿದೆ. ಅವರ ನೆರವಿನಿಂದ ಬ್ರಾಹ್ಮಣರ ವಿರುದ್ಧ ವೀರಶೈವ ಜಾತಿ ಜಂಗಮರಿಗೆ ದೇವಸ್ಥಾನಗಳ ಅರ್ಚಕ ಹುದ್ದೆ, ಅಡ್ಡಪಲ್ಲಕ್ಕಿ ಮೆರವಣಿಗೆ ಮುಂತಾದ ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿರುವ ವೈದಿಕ ಮೌಢ್ಯದ ಆಚರಣೆಗಳು ನ್ಯಾಯಾಲಯಗಳಲ್ಲಿ ದಾವೆ ಹೂಡಿ ಗೆಲ್ಲಲಾಯಿತು. ಇದು ಅಂದು ವೀರಶೈವ ಜಾತಿ ಜಂಗಮರು ಅರಟಾಳರನ್ನು ಬಳಸಿಕೊಂಡದ್ದಕ್ಕೆ ಸಾಕ್ಷಿಯಾಗಿದೆ. ಆದರೆ ಯಾವ ವೀರಶೈವ ಜಾತಿ ಜಂಗಮರೂ ಅರಟಾಳರನ್ನು ಸ್ಮರಿಸಿಕೊಳ್ಳುವುದಿಲ್ಲ.
ಮುಂದುವರೆಯುವುದು….
ಓಂ ಶ್ರೀಗುರು ಬಸವಲಿಂಗಾಯ ನಮಃ
ಗಡಿನಾಡಿನ ತ್ರಿವಿಧ ದಾಸೋಹಿ, ನಿಡಸೋಸಿಯ ಶ್ರೀ ದುರದುಂಡೀಶ್ವರ ಶಕ್ತಿಪೀಠದ 10 ನೇ ಪೀಠಾಧಿಪತಿಗಳು ಜಗದ್ಗುರುಗಳು, ನಮ್ಮ ನಿಮ್ಮೆಲ್ಲರ ಆರಾಧ್ಯ ದೇವರು ಆಗಿರುವಂತಹ ಶ್ರೀ ಮ.ನಿ.ಪ್ರ.ಸ್ವ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಯವರಿಗೆ 83 ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಮ್ಮ ನಿಮ್ಮೆಲ್ಲರನ್ನು ಇನ್ನು 100 ವರ್ಷಗಳ ಕಾಲ ಆಶಿರ್ವದಿಸಲು ಆ ಭಗವಂತನು
ಪರಮ ಪೂಜ್ಯ ಜಗದ್ಗುರು ಮಹಾಸನ್ನಿಧಿಯವರಿಗೆ ಆಯುರಾರೋಗ್ಯಗಳನ್ನು ಕೊಟ್ಟು ಕಾಪಾಡಲೆಂದು ಕತೃದೇವ ಶ್ರೀ ದುರದುಂಡೀಶ್ವರನಲ್ಲಿ, ಬಸವಾದಿ ಶರಣರಲ್ಲಿ ಪ್ರಾರ್ಥಿಸಿಕೋಳ್ಳುತ್ತೇವೆ. 💐
ಭಾರತದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಹಾಗೂ ಬಸವ ಸಮಿತಿಯ ಸಂಸ್ಥಾಪಕರಾದ ಲಿಂ. ಶರಣ ಬಿ.ಡಿ. ಜತ್ತಿ ಅವರ ೨೪ನೇ ಲಿಂಗೈಕ್ಯ ಸಂಸ್ಮರಣೆಯಂದು ಗೌರವಪೂರ್ವಕ ನಮನಗಳು.
"ಬಯಲಲ್ಲಿ ಬಯಲಾದ" ಆ ಮಹಾನ್ ಚೇತನ ಹಾಕಿಕೊಟ್ಟ ಜೀವನದ ಆದರ್ಶಗಳು ಹಾಗೂ ನಿಸ್ವಾರ್ಥ ಬಸವ ಸೇವೆಯೇ ನಮ್ಮ ಬಾಳಿಗೆ ಸದಾ ದಾರಿದೀಪ. 💐
ಶ್ರೀ ಬಿ ಡಿ ಜತ್ತಿ ರವರು, 27 ಆಗಸ್ಟ್ 1974 ರಲ್ಲಿ ಭಾರತದ ಉಪ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ.
🔶ಇವರು ಕರ್ನಾಟಕದ ಏಕೈಕ ಉಪ ರಾಷ್ಟ್ರಪತಿ.
🔶ಕರ್ನಾಟಕ 1958-62 ಸಿಎಂ ಆಗಿದ್ದರು.
25-8-1979 ರಲ್ಲಿ ಬಸವ ಸಮಿತಿಯಿಂದ ನಿರ್ಮಿಸಿದ ಅನುಭವ ಮಂಟಪ ಮತ್ತು ಗ್ರಂಥಾಲಯ ಕಟ್ಟಡ ಶ್ರೀ ಬಿ.ಡಿ. ಜತ್ತಿ ಅವರಿಂದ ಉದ್ಘಾಟನೆ ಆಗಿತ್ತು. ಉದ್ಘಾಟನಾ ಸಮಾರಂಭದ ಕುರಿತು ತುಮಕೂರು ಶ್ರೀ ಸಿದ್ದಗಂಗಾ ಮಠದ 1979 ಆಗಸ್ಟ್ ತಿಂಗಳ ಮಾಸಿಕ ಪತ್ರಿಕೆಯಲ್ಲಿ ಬಂದಿದ್ದ ಅಂಕಣ.
#Basavanna#ಲಿಂಗಾಯತಧರ್ಮ#LingayatReligion
ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರರು, ಮಾಜಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ನನ್ನ ಪೂಜ್ಯ ತಂದೆಯವರಾದ ದಿ. ಶ್ರೀ ಎಸ್. ಆರ್. ಬೊಮ್ಮಾಯಿ ಅವರ ಜನ್ಮದಿನಾಚರಣೆಯ ದಿನದಂದು ಗೌರವ ನಮನಗಳು.
ಜನಸೇವಾ ತತ್ಪರರಾಗಿ ಅವರು ಪ್ರತಿಪಾದಿಸಿದ ಮೌಲ್ಯಗಳು, ಅವರ ಜೀವನ, ಅವರು ತೋರಿದ ದಾರಿ, ಕಲಿಸಿ ಕೊಟ್ಟ ಪಾಠ ನನ್ನ ಜೀವನದ ಆಧಾರ ಮತ್ತು ಆದರ್ಶವಾಗಿವೆ.
#SRBommai