ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಕೀಳು ಮಟ್ಟಕ್ಕೆ ಯಾರೂ ಹೋಗಬಾರದು. ಅನಗತ್ಯವಾಗಿ ನನ್ನ ಬಗ್ಗೆ, ನನ್ನ ಕುಟುಂಬದ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಕಾನೂನು ಮೂಲಕ ಅಂಥವರಿಗೆ ಉತ್ತರ ಕೊಡುತ್ತೇನೆ.
2/2
ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು, ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಅವರು ಹೇಳಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದೇಶಕ್ಕಾಗಿ ಮನೆಯವರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.
1/2
ನಾಡಿನ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾರ್ದಿಕ ಶುಭಾಶಯಗಳು.
ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ, ಪ್ರೋತ್ಸಾಹ ನೀಡಿ ಬೆಂಬಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೆಣ್ಣು ಮ��ು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ ಪರಿಹರಿಸಲು ಸರ್ಕಾರಗಳು ಶ್ರಮಿಸಬೇಕಿದೆ.
#InternationalWomensDay
ಕಾಂತಾರ 🙏🙏🙏
ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣ.
ಈ ಚಿತ್ರವು ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ.
ನವದೆಹಲಿಯಲ್ಲಿ ನಾನು, ನನ್ನ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಕಾಂತಾರ ಚಾಪ್ಟರ್ 1 ಚಿತ್ರ ವೀಕ���ಷಿಸಿದೆವು.
ನಿರ್ದೇಶಕ ಶ್ರೀ ರಿಷಭ್ ಶೆಟ್ಟಿ, ನಿರ್ಮಾಪಕ ಶ್ರೀ ವಿಜಯ್ ಕಿರಗಂದೂರು, ಹೊಂಬಾಳೆ ಫಿಲಂಸ್ ಮತ್ತವರ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಇಂತಹ ಜಾಗತಿಕ ಮಟ್ಟದ ಚಿತ್ರಗಳು ಹೆಚ್ಚೆಚ್ಚು ಬರಲಿ ಎಂದು ಆಶಿಸುವೆ.
@shetty_rishab
@VKiragandur
@hombalefilms
#ಕಾಂತಾರ1
#Kantara
#KantaraLegendChapter1
ಬೆಂಗಳೂರಿನ ನಿವಾಸದಲ್ಲಿ ಕುಟುಂಬ ಸಮೇತ ಶ್ರೀ ಗಣೇಶ ಚತುರ್ಥಿಯನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.
ಸರ್ವಶಕ್ತನಾದ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿ ಸರ್ವರಿಗೂ ಶುಭವುಂಟಾಗಲಿ ಹಾಗೂ ಎಲ್ಲರ ಮನೆ ಮನದಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸಲಾಯಿತು.
#ಗಣೇಶಚತುರ್ಥಿ#GaneshChaturthi2025
ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.
ದಯಪರನಾದ ಶ್ರೀ ವಿನಾಯಕನು ಎಲ್ಲರಿಗೂ ಉತ್ತಮ ಆಯುರಾರೋಗ್ಯ ಕರುಣಿಸಿ ಸಿರಿ ಸಂಪತ್ತು ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
#ಗಣೇಶಚತುರ್ಥಿ#GaneshaChaturthi
🇮🇳 79th Independence Day
📍 Official Residence, New Delhi
🎖 Honoured to hoist the sacred Tricolour
🙏 Saluting our brave freedom fighters
💪 Renewing commitment to a strong, self-reliant Bharat
🌟 Marching towards #ViksitBharat2047 under PM @narendramodi avaru’s leadership
#IndependenceDay2025 #JaiHind #AatmanirbharBharat #NationFirst
ಶ್ರೀ ರಾಘವೇಂದ್ರಾಯ ನಮಃ 🙏
ಶ್ರೀ ಗುರು ರಾಘವೇಂದ್ರ ���್ವಾಮಿಗಳ ಪೂರ್ವಾರಾಧನೆ ನಿಮಿತ್ತವಾಗಿ ನವದೆಹಲಿಯ ಮೋತಿಬಾಗ್'ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.
#ಶ್ರೀರಾಘವೇಂದ್ರಸ್ವಾಮಿಗಳು
Connectivity projects being launched in Bengaluru today will make travel smoother, faster and more convenient, while also boosting economic growth. https://t.co/UQgtiBfwqA
ಗೌರವಾನ್ವಿತ ಪ್ರಧಾನಮ��ತ್ರಿಗಳಾದ ಶ್ರೀ @narendramodi ಅವರು ಬೆಂಗಳೂರು ನಗರದ ಮಹಾಜನರ ಬಹುನಿರೀಕ್ಷಿತವಾಗಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಇಂದು ಲೋಕಾರ್ಪಣೆ ಮಾಡಿದರು.
ಈ ಮಾರ್ಗವು ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 19 ಕಿ.ಮೀ. ದೂರದ ಎತ್ತರದ ಕಾರಿಡಾರ್ನಲ್ಲಿ 16 ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.
ಈ ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ನಂತಹ ಅತ್ಯಂತ ಪ್ರಮುಖ ತಂತ್ರಜ್ಞಾನ ತಾಣಗಳಿಗೆ ಪ್ರಯಾಣವನ್ನು ಪರಿವರ್ತನಾತ್ಮಕವಾಗಿ ಸುಗಮಗೊಳ��ಸುತ್ತದೆ. ಈ ಭಾಗದಲ್ಲಿ ರಸ್ತೆಗಳ ಮೇಲೆ ವಾಹನಗಳ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಅಲ್ಲದೆ, ಬೆಂಗಳೂರು ನಗರದ ಆರ್ಥಿಕ, ಕೈಗಾರಿಕಾ ��ತ್ತು ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ.
ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಸಶಕ್ತ ನೇತೃತ್ವದಲ್ಲಿ ಭಾರತವು ಸದೃಢ ಹಾಗೂ ದೂರಗಾಮಿ ಸಂಚಾರ ವ್ಯವಸ್ಥೆಯನ್ನು ಹೊಂದುತ್ತದೆ. ಇದರಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವೂ ಭಾಗವಾಗುತ್ತಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ.
#YellowLine #BengaluruMetro #UrbanMobility #GreenTransport #NammaMetro #ViksitBharat2047
@PMOIndia
ಸರ್ವರಿಗೂ ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯ ಭಕ್ತಿಪೂರ್ವಕ ಶುಭಾಶಯಗಳು.
ತಾಯಿಯ ಅನುಗ್ರಹದಿಂದ ಎಲ್ಲರಿಗೂ ಶುಭವಾಗಲಿ. ಪ್ರತಿಯೊಬ್ಬರ ಬಾಳಲ್ಲಿಯೂ ಸುಖ ಶಾಂತಿ ನೆಲೆಸಿ, ಉತ್ತಮ ಆಯುರಾರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
#ಚಾಮುಂಡೇಶ್ವರಿವರ್ಧಂತಿ
Saddened by the passing of the noted film personality, B. Saroja Devi Ji. She will be remembered as an exemplary icon of Indian cinema and culture. Her diverse performances left an indelible mark across generations. Her works, spanning different languages and covering diverse themes highlighted her versatile nature. My condolences to her family and admirers. Om Shanti.
ಕಿತ್ತೂರು ಚನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಸೇರಿ ಅನೇಕ ಚಿರಸ್ಮರಣೀಯ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ ಸಮಾಜಕ್ಕೆ ಒಳ���ಳೆಯ ಸಂದೇಶ ನೀಡಿರುವ ಅವರನ್ನು ಮರೆಯುವಂತಿಲ್ಲ.
ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#ಸರೋಜಾದೇವಿ
ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟಿ, ಬಹುಭಾಷಾ ಕಲಾವಿದೆ, ಕನ್ನಡ ಚಿತ್ರರಂಗದ ಶ್ರೇಷ್ಠತಾರೆಯಾದ ಶ್ರೀಮತಿ ಬಿ.ಸರೋಜಾದೇವಿ ಅವರ ನಿಧನ ನನಗೆ ಅತೀವ ದುಃಖ ಉಂಟು ಮಾಡಿದೆ.
ವೈಯಕ್ತಿಕವಾಗಿ ನನಗೆ ಬಹಳ ಹತ್ತಿರದವರಾದ ಸರೋಜಾ ದೇವಿ ಅವರು, ನಟನೆಯ ಜತೆಗೆ ಸಮಾಜದ ಬಗ್ಗೆಯೂ ಅಪಾರ ಕಳಕಳಿ ಹೊಂದಿದ್ದರು.
#ಸರೋಜಾದೇವಿ