ನಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ನನ್ನ ಮಾರ್ಗದರ್ಶಕರು ಸನ್ಮಾನ್ಯ ಶ್ರೀ @siddaramaiah ನವರು.
ಬಸವಣ್ಣ, ಬುದ್ಧ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳಿಂದ ಪ್ರೇರಿತರಾಗಿ, ಸಾಮಾಜಿಕ ನ್ಯಾಯವನ್ನು ತಮ್ಮ ರಾಜಕೀಯ ಜೀವನದ ಮುಖ್ಯ ಧ್ಯೇಯವನ್ನಾಗಿಸಿಕೊಂಡ ನಾಯಕರು. ಬಸವ ಜಯಂತಿಯಂದೇ ಮೊದಲ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಸಮಾನತೆ ಮತ್ತು ಸರ್ವಜನ ಹಿತಾಯದ ಮೌಲ್ಯಗಳ ಆಧಾರದ ಮೇಲೆ ಜನಪರ ಆಡಳಿತ ನೀಡಿದ್ದಾರೆ.
ಅನ್ನಭಾಗ್ಯ ಸೇರಿದಂತೆ ಹಲವು 'ಭಾಗ್ಯ' ಯೋಜನೆಗಳು, ಅವರು ಮಂಡಿಸಿದ ದಾಖಲೆಯ 17 ಆಯವ್ಯಯಗಳು (ಬಜೆಟ್ಗಳು) ಹಾಗೂ ಬಡವರು, ರೈತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಅನೇಕ ಜನಕಲ್ಯಾಣ ಕಾರ್ಯಕ್ರಮಗಳು ಅವರ ಆಡಳಿತದ ಹೆಗ್ಗುರುತುಗಳಾಗಿವೆ.
ಈ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ರಾಜ್ಯಕ್ಕೆ ಸಲ್ಲಿಸಿದ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ ಮತ್ತು ಅವರ ಜನಪರ ಬದ್ಧತೆ ಕರ್ನಾಟಕದ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ.
ನಿಮ್ಮ ಅಮೂಲ್ಯ ಸೇವೆಯನ್ನು ಕರುನಾಡು ಸದಾ ಸ್ಮರಿಸುತ್ತದೆ.
Our most beloved leader and my mentor, the Honorable Shri Siddaramaiah ravaru.
He is Inspired by the philosophies of Basavanna, Buddha, and Dr. B.R. Ambedkar, he is a leader who made social justice the central mission of his political life. Having taken the oath as the Chief Minister of this state for the very first time on the auspicious occasion of Basava Jayanti, he has delivered a people-centric administration rooted in the values of equality and the welfare of all.
His welfare initiatives, including the 'Anna Bhagya' scheme, a record-breaking 17 state budgets presented by him, and numerous development programs implemented for the upliftment of the poor, farmers, and backward classes, stand as the hallmarks of his governance.
His service to the state as Chief Minister, his relentless struggle for social justice, and his commitment to the welfare of the people will always remain unforgettable in the history of Karnataka.
Karunadu (the land of Karnataka) will forever remember your invaluable service.
#Siddaramaiah
ನಮ್ಮ ಪ್ರೀತಿಯ ಬೀದರ ಲೋಕಸಭಾ ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ಇಂದು ದೆಹಲಿಯ ಸಂಸತ ಭವನದಲ್ಲಿ 18ನೇ ಲೋಕಸಭೆಯ ಸದಸ್ಯನಾಗಿ, ಬೀದರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆನು.
ಈ ಅಧ್ಭೂತ, ಅವಿಸ್ಮರಣೀಯ ಕ್ಷಣಕ್ಕೆ ಕಾರಣೀಭೂತರಾದ ಬೀದರ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಅನಂತ ಧನ್ಯವಾದಗಳು ಅರ್ಪಿಸುತ್ತೇನೆ. ತಮ್ಮೆಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಬೀದರ ಕ್ಷೇತ್ರದ ಜನತೆಗೆ ಚುತ್ಯಿ ಬರದಂತೆ ಕ್ಷೇತ್ರ, ರಾಜ್ಯ ಹಾಗೂ ದೇಶದ ಏಳಿಗೆಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೆನೆ.
#LokSabha #BidarMP #Swearing #NewDelhi
ಮಹಿಳಾ ಸಬಲೀಕರಣ, ರಾಜಕೀಯ ಸೇರಿ ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 'ಸ್ತ್ರೀ ಶಕ್ತಿ'ಯನ್ನು ಸಂಘಟಿಸಲು ಕಾಂಗ್ರೆಸ್ ರೂಪಿಸಿದ ವಿನೂತನ ಕಾರ್ಯಕ್ರಮ 'ನಾ.. ನಾಯಕಿ'
ನಾ.. ನಾಯಕಿ ಸಂಘಟನೆಯ ಧ್ಯೇಯೋದ್ದೇಶಗಳು, ಮಹಿಳೆಯರಿಗಾಗಿ ಕಾಂಗ್ರೆಸ್ ರೂಪಿಸಿರುವ ಯೋಜನೆಗಳ ಬಗ್ಗೆ ಕ್ಲಬ್ ಹೌಸ್ ಸಂವಾದ..
•ಸೈಕಲ್
•ಪಠ್ಯಪುಸ್ತಕ
•ವಿದ್ಯಾರ್ಥಿವೇತನ
•ಶಿಕ್ಷಕರ ನೇಮಕಾತಿ
•ಶೂ, ಸಾಕ್ಸ್
•ಅನುದಾನ
ಈ ಎಲ್ಲಾ ವಿಷಯಗಳಿಗೂ ಶಿಕ್ಷಣ ಸಚಿವರದ್ದು ಒಂದೇ ಡೈಲಾಗ್
"ವಿಳಂಬವಾಗಿದೆ,ಸರಿಪಡಿಸುತ್ತೇವೆ"!
40% ಕಮಿಷನ್ ಚೌಕಾಶಿಗಾಗಿ ಈ ವಿಳಂಬವೇ?
ಮಕ್ಕಳ ಶಿಕ್ಷಣಕ್ಕೆ ಕರೊನಾಕ್ಕಿಂತ ಬಿಜೆಪಿ ಸರ್ಕಾರವೇ ಹೆಚ್ಚು ಮಾರಕವಾಗಿ ಪರಿಣಮಿಸಿದೆ.
#MakkaligeMosa
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ "ಅಮೃತ ಭಾರತಿಗೆ ಕನ್ನಡದ ಆರತಿ" ಶೀರ್ಷಿಕೆಯಡಿ ಭಾಲ್ಕಿಯಲ್ಲಿ ನಡೆಯುತ್ತಿರುವ '75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ' ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರಿನಲ್ಲಿಂದು ಕೇಂದ್ರದ ಮಾಜಿ ಸಚಿವರಾದ ಶ್ರೀ ಜೈರಾಮ್ ರಮೇಶ್ ಅವರೊಂದಿಗೆ ಸೌಜನ್ಯದ ಭೇಟಿಯಾದ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಕಾಂಗ್ರೆಸ್ ಪಕ್ಷದ ಬಲವರ್ಧನೆ ಕುರಿತು ಚರ್ಚಿಸಲಾಯಿತು.
@Jairam_Ramesh
ರೈತ ನಾಯಕ @RakeshTikaitBKU ಅವರಿಗೆ ದುಷ್ಕರ್ಮಿಯೊಬ್ಬ ಮುಖಕ್ಕೆ ಮಸಿ ಬಳಿದು ಹಲ್ಲೆ ಮಾಡಿರುವುದು ಅತ್ಯಂತ ಖಂಡನಿಯ.
ಈ ದೇಶ ಎತ್ತ ಸಾಗುತ್ತಿದೆ..? ಮೋದಿ ಮೋದಿ ಎಂದು ಕೂಗುತ್ತಾ ದೈಹಿಕ ಹಲ್ಲೆ ನಡೆಸುವ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.1/2
@CMofKarnataka@BSBommai
ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾದ ಮತ್ತು 40% ಕಮಿಷನ್ ಪಡೆದು ಭ್ರಷ್ಟಾಚಾರ ಎಸಗಿರುವ ಮಾಜಿ ಸಚಿವ @ikseshwarappa ಅವರನ್ನು ಕೂಡಲೇ ಬಂಧಿಸಬೇಕೆಂದು ಬೀದರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಬ್ರಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಲಾಯಿತು.
#ArrestEshwarappa@rssurjewala@INCKarnataka
ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಉನ್ನತ ಶಿಕ್ಷಣ ನೀಡಬೇಕಾದ ಸಚಿವರು ಅದರಲ್ಲೂ ಕೋಟಿಗಟ್ಟಲೆ ಭ್ರಷ್ಟಾಚಾರ ಮಾಡಿ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ನಲ್ಲೂ ಲೂಟಿ @drashwathcn#BJPLaptopScam
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಅವರು ಆತ್ಮಹತ್ಯೆ ಮಾಡಿಕೊಳ್ಳಲು 40% ಕಮಿಷನ್ ಕೇಳಿರುವುದೇ ಕಾರಣ. ನನ್ನ ಆತ್ಮಹತ್ಯೆಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲಿಖಿಸಿದ್ದಾರೆ. ಕೂಡಲೇ ಸಚಿವ ಈಶ್ವರಪ್ಪನವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.@ikseshwarappa
10 years of Goa BJP Govt filled with betrayal, corruption, insensitivity and incompetence. The people of Goa have suffered like never before.
It’s time to bring back Congress Govt..
#BjpAgainstGoa
ದೇಶದಲ್ಲಿ ಕೋವಿಡ್ ಸಾವುಗಳ ನೈಜ ಅಂಕಿಅಂಶ ಗೌಪ್ಯವಾಗಿಯೇ ಉಳಿದಿದೆ. ಇನ್ನು ಪರಿಹಾರ ದೂರದ ಮಾತು. ಮಾರಕ ಸಾಂಕ್ರಾಮಿಕದಿಂದ ಸಾವಿಗೀಡಾದವರ ಕುಟುಂಬದವರಿಗೆ ನ್ಯಾಯಯುತ ಪರಿಹಾರ ಸಿಗುವವರೆಗೆ ಶ್ರೀ @RahulGandhi ಮತ್ತು ನಮ್ಮ ಹೋರಾಟ ನಿಲ್ಲದು.