ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸುವ ಕುರಿತು ನಾವೆಲ್ಲರೂ ತೀವ್ರವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂತಹ ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರ ಅನುಮತ��� ನೀಡಿಲ್ಲ ಎಂದು ತಿಳಿಸಿದೆ. ಸರ್ಕಾರೇತರ ಕಾರ್ಯಕ್ರಮಗಳಿಗೆ ವಿಧಾನಸೌಧದಲ್ಲಿ ಅವಕಾಶವಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಸರ್ಕಾರ ಕ್ಷಿಪ್ರಗತಿಯಲ್ಲಿ ಸ್ಪಷ್ಟನೆ ನೀಡಿ, ವಾತಾವರಣವನ್ನು ತಿಳಿಗೊಳಿಸಿರುವುದು ಒಳ್ಳೆಯದು. ಮುಂದೆಯೂ ಸಹ ಇಂಥ ವಿವಾದಗಳಿಗೆ ಅವಕಾಶ ನೀಡಬಾರದು. ಸಂಘರ್ಷದ ವಾತಾವರಣವನ್ನು ಸರ್ಕಾರವೇ ಸೃಷ್ಟಿಸಲು ಹೋಗಬಾರದು. ಅತಿಯಾದ ಉತ್ಸಾಹದಲ್ಲಿ ವಿವೇಕವು ಕಣ್ಮರೆಯಾಗುತ್ತದೆ. ಬಹುಶಃ ಈ ಉದ್ದೇಶಿತ ಕಾರ್ಯಕ್ರಮದ ಘೋಷಣೆ ಮಾಡಿದ್ದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರಿಗೂ ಇದು ಅರ್ಥವಾಗಿದೆಯೆಂದು ಭಾವಿಸುತ್ತೇನೆ.
ನಮಗೆ ಉರ್ದು ಭಾಷೆ ಅಥವಾ ಉರ್ದು ಮಾತನಾಡುವ ಜನರ ವಿರುದ್ಧ ಯಾವುದೇ ವಿರೋಧವಿಲ್ಲ. ಉರ್ದು ಮಾತ್ರವಲ್ಲ ಇನ್ಯಾವುದೇ ಕನ್ನಡೇತರ ಭಾಷೆಯ ಕಾರ್ಯಕ್ರಮ ಮಾಡಲು ಹೊರಟಿದ್ದರೂ ನಾವು ಇಷ್ಟೇ ತೀವ್ರವಾಗಿ ವಿರೋಧಿಸುತ್ತಿದ್ದೆವು. ರಾಜ್ಯದ ಆಡಳಿತದ ಶಕ್ತಿಕೇಂದ್ರವಾಗಿರುವ ವಿಧಾನಸೌಧದ ಮೆಟ್ಟಿಲುಗಳನ���ನು ನಿರ್ದಿಷ್ಟ ಭಾಷಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಸುವ ಔಚಿತ್ಯವೇನು ಎಂಬುದು ನಮ್ಮ ಪ್ರಶ್ನೆ. ಇವತ್ತು ಒಂದು ಭಾಷೆಯ ಕಾರ್ಯಕ್ರಮ ನಡೆದರೆ ನಂತರ ಇತರ ಎಲ್ಲ ಭಾಷೆಗಳ ಕಾರ್ಯಕ್ರಮಗಳು ನಡೆಯುತ್ತವೆ. ಕರ್ನಾಟಕದ ಆಡಳಿತ ಭಾಷೆ ಕನ್ನಡ, ನೆಲದ ಭಾಷೆ ಕನ್ನಡ. ಹೀಗಿರುವಾಗ ವಿಧಾನಸೌಧದಲ್ಲಿ ಇತರ ಭಾಷೆಗಳ ವೈಭವೀಕರಣ ಸಲ್ಲದು ಎಂಬುದು ನಮ್ಮ ಸ್ಪಷ್ಟ ನಿಲುವು. ಈಗಾಗಲೇ ಕನ್ನಡ ನುಡಿ ಸಂಸ್ಕೃತಿಗಳು ಅನ್ಯಭಾಷೆಗಳಿಂದ ದಾಳಿಗೊಳಗಾಗಿವೆ. ��ನಿಯಂತ್ರಿತ ವಲಸೆಯಿಂದಾಗಿ ಕನ್ನಡಿಗರೇ ತಬ್ಬಲಿಗಳಾಗುವ ಸನ್ನಿವೇಶ ನಿರ್ಮಾಣವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರದ ಮಂತ್ರಿಗಳು ಇಂಥ ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ.
1994ರಲ್ಲಿ ಬೆಂಗಳೂರಿನ ದೂರದರ್ಶನದಲ್ಲಿ ಉರ್ದು ಸುದ್ದಿ ಬುಲೆಟಿನ್ ಆರಂಭಿಸಿದ ವಿಚಾರ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಅಕ್ಟೋಬರ್ 7ರಂದು ಪರಿಸ್ಥಿತಿ ಕೋಮು ಹಿಂಸಾಚಾರಕ್ಕೆ ತಿರುಗಿ, ಪೊಲೀಸ್ ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ, ಆಸ್ತಿ ಹಾನಿ ಸೇರಿದಂತೆ ಗಂಭೀರ ಘ��ನೆಗಳು ನಡೆದಿದ್ದವು. ಭಾಷಾ ಚಳವಳಿಯಾಗಿಯೇ ಆರಂಭವಾದ ಪ್ರತಿಭಟನೆ ನಂತರ ಧಾರ್ಮಿಕ-ಕೋಮು ಸ್ವರೂಪ ಪಡೆದುಕೊಂಡಿತ್ತು. ಕೆಲವು ಸಂಘಟನೆಗಳು ಮತ್ತು ರಾಜಕೀಯ ಶಕ್ತಿಗಳು ಉದ್ವಿಗ್ನ ವಾತಾವರಣವನ್ನು ಮತ್ತಷ್ಟು ತೀವ್ರಗೊಳಿಸಿದ್ದನ್ನು ಮರೆಯುವಂತಿಲ್ಲ.
ಆ ದಿನಗಳಲ್ಲಿ ನಡೆದ ಹಿಂಸಾಚಾರ, ಸಾವುನೋವುಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಒಬ್ಬ ಪೊಲೀಸ್ ಪೇದೆಯ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ಸುಮಾರು 25 ಮಂದಿ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕರ್ನಾಟಕದ ಇತಿಹಾಸದಲ್ಲಿ ನಡೆದ ಅತ್ಯಂತ ಕರಾಳ ಕೋಮುಗಲಭೆ ಅದು.
ಕರ್ನಾಟಕ ಎಂದೆಂದಿಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಇರಬೇಕು. ಸಹಬಾಳ್ವೆ, ಸೋದರತ್ವದ ಭಾವ ಹೆಚ್ಚಾಗುತ್ತಲೇ ಹೋಗಬೇಕು. ಕನ್ನಡಿಗರು ಸ್ವಭಾವತಃ ಶಾಂತಿಪ್ರಿಯರು. ಈ ಶಾಂತಿ, ಸಹಬಾಳ್ವೆಯನ್ನು ಕದಡುವ ಕೆಲಸವನ್ನು ಯಾರೂ ಮಾಡಬಾರದು.
— ಟಿ.ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
Went down a weekend rabbit hole and built KMAP — a live map of Bengaluru's infrastructure.
Metro lines , every lake, the rajakaluve network, BBMP wards, upcoming projects… all in one place.
It's live, still rough 👇
https://t.co/AywqiFuZmB
#Bengaluru#Karnataka#BBMP
Went down a weekend rabbit hole and built KMAP — a live map of Bengaluru's infrastructure.
Metro lines , every lake, the rajakaluve network, BBMP wards, upcoming projects… all in one place.
It's live, still rough 👇
https://t.co/AywqiFuZmB
#Bengaluru#Karnataka#BBMP
Absolute class, the story, the costume, the actors all are top notch. Unlike current cringe movies.
In this movie the hero is a bike racer and heroine was rich girl.
Imagine a hero as a bike racer at the time where people didn't have a cycle and heroine is a rich educated girl at the time where many didn't get complete education.
Older kannada movies showed us what to aspire, unlike poverty slop of current movies.
We’re sharing a solution to the Navier-Stokes Millennium Prize Problem, one of the deepest problems at the frontier of mathematics.
The proof was produced by a group of agents, using an OpenAI next-generation model significantly more capable than GPT-6 Astra.
The problem concerns whether the description of smooth three-dimensional fluid motion modeled by the Navier-Stokes equations can break down. It has remained unresolved for roughly 90 years.