🛑 ಸೋಶಿಯಲ್ ಮೀಡಿಯಾ ಬಳಕೆದಾರರ ಗಮನಕ್ಕೆ 🛑
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಫೋಟೋ, ವಿಡಿಯೋ ಹಾಗೂ ಬರಹಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ, ಕೋಮು ಭಾವನೆ ಕೆರಳಿಸುವ ಅಥವಾ ತಿರುಚಿದ ಪೋಸ್ಟ್ಗಳನ್ನು ಹಂಚಿಕೊಂಡರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
@DgpKarnataka
ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ, ಬಳ್ಳಾರಿಯ 'ಹಾನಗಲ್ಲ ಶ್ರೀ ಕುಮಾರೇಶ್ವರ ತಾಂತ್ರಿಕ ಮಹಾವಿದ್ಯಾಲಯ'ದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸುರಕ್ಷಿತ ಚಾಲನೆ ಮತ್ತು ಮಾದಕ ಮುಕ್ತ ಜೀವನ ನಮ್ಮದಾಗಲಿ.
ದಿನಾಂಕ:03.07.2026 ರಂದು ನಡೆದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಿಂದ ವಾರದ ಕವಾಯತು ಶಿಸ್ತಿನಿಂದ ನಡೆಸಿ ಗೌರವ ವಂದನೆಯನ್ನು ಸ್ವೀಕರಿಸಲಾಯಿತು.ಇದೇ ವೇಳೆ ಅಧಿಕಾರಿ/ಸಿಬ್ಬಂದಿಯವರ ಕುಂದುಕೊರತೆಗಳನ್ನು ಆಲಿಸಿ,ದಿನನಿತ್ಯದ ಕರ್ತವ್ಯಗಳನ್ನು ಜವಾಬ್ದಾರಿಯಿಂದ, ಶಿಸ್ತಿನಿಂದ ನಿರ್ವಹಿಸಲು ಸೂಚನೆ ನೀಡಲಾಯಿತು.
ಹಸಿರೇ ಉಸಿರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಬಳ್ಳಾರಿಯ ಪ್ರಾದೇಶಿಕ ಅರಣ್ಯ ವಿಭಾಗ ಕಛೇರಿ ಆವರಣದಲ್ಲಿ ಹಸಿರು ಮರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ "ವನ ಮಹೋತ್ಸವ" ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಬನ್ನಿ, ನಾವೆಲ್ಲರೂ ಗಿಡಗಳನ್ನು ನೆಟ್ಟು, ಮರಗಳನ್ನು ಬೆಳೆಸಿ, ನಮ್ಮ ಬಳ್ಳಾರಿಯನ್ನು ಹಸಿರುಮಯವಾಗಿಸೋಣ.
ಬಳ್ಳಾರಿಯ DAR ಮೈದಾನದಲ್ಲಿ ಸುರಕ್ಷತೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಡ್ರೋನ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ (Drone Demonstration) ಹಾಗೂ ಸಂಬಂಧಿಸಿದ ಪ್ರಮುಖ ದಾಖಲೆಗಳ ಪರಿಶೀಲನಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ವಲಯದ ಅಧಿಕಾರಿಗಳು/ಸಿಬ್ಬಂದಿಯವರು ಉಪಸ್ಥಿತರಿದ್ದರು.
🚦 ಹೈ-ಬೀಮ್ ಬೆಳಕು ಅಲ್ಲ, ತಪ್ಪಾಗಿ ಬಳಸಿದರೆ ಅಪಾಯ!
🌃 ರಾತ್ರಿ ವೇಳೆ ಎದುರು ವಾಹನ ಬರುತ್ತಿರುವಾಗ ಹೈ-ಬೀಮ್ ಬಳಸುವುದರಿಂದ ಎದುರಿನ ಚಾಲಕರ ಕಣ್ಣು ಮಂಜಾಗಿ, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.
🤝 ಸಂಚಾರ ನಿಯಮ ಪಾಲಿಸಿ. ಲೋ-ಬೀಮ್ ಬಳಸಿ. ಜೀವ ಉಳಿಸಿ.
ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 03 ಹಾಗೂ ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 03, ಒಟ್ಟು 06 ಮೊಬೈಲ್ಗಳನ್ನು CEIR (Central Equipment Identity Register) ಪೋರ್ಟಲ್ನ ಸಹಾಯದಿಂದ ಯಶಸ್ವಿಯಾಗಿ ಪತ್ತೆ ಹಚ್ಚಿ, ಸಂಬಂಧಿತ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಭಾರತದಲ್ಲಿ "ಡಿಜಿಟಲ್ ಅರೆಸ್ಟ್" ಎಂಬ ಯಾವುದೇ ಕಾನೂನು ಇಲ್ಲ!
ಯಾವುದೇ ನಿಜವಾದ ಪೊಲೀಸ್ ಅಥವಾ ತನಿಖಾ ಸಂಸ್ಥೆಗಳು ವಿಡಿಯೋ ಕರೆಯಲ್ಲಿ ನಿಮ್ಮನ್ನು ಬಂಧಿಸುವುದಿಲ್ಲ ಅಥವಾ ಹಣ ಬೇಡುವುದಿಲ್ಲ.
ಇಂತಹ ಕರೆಗಳು ಬಂದರೆ ಭಯಪಡಬೇಡಿ. ಯಾವುದೇ ರೀತಿಯ ಸೈಬರ್ ಹಣಕಾಸು ವಂಚನೆಯಾದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.
ಸುರಕ್ಷಿತ ಅಂತರ ಕಾಯ್ದುಕೊಳ್ಳಿ – ಅಪಘಾತಗಳನ್ನು ತಡೆಯಿರಿ! 🛑↕️
ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ನಿಮ್ಮ ಮುಂಭಾಗದ ವಾಹನದಿಂದ ಯಾವಾಗಲೂ ಸೂಕ್ತ ಮತ್ತು ಸುರಕ್ಷಿತವಾದ ಅಂತರವನ್ನು ಕಾಯ್ದುಕೊಳ್ಳಿ. ಮುಂಭಾಗದ ವಾಹನ ಸವಾರರು ಹಠಾತ್ ಬ್ರೇಕ್ ಹಾಕಿದಾಗ ಆಗುವ ಸರಣಿ ಅಪಘಾತಗಳನ್ನು ತಪ್ಪಿಸಲು ಇದು ಅತ್ಯಂತ ಮುಖ್ಯವಾಗಿದೆ.
🚨 ನಕಲಿ APK ಫೈಲ್ಗಳು ಮತ್ತು ಫಿಶಿಂಗ್ ಲಿಂಕ್ಗಳ ಬಗ್ಗೆ ಎಚ್ಚರ!
WhatsApp ಮೂಲಕ ಕಳುಹಿಸಲಾಗುವ ನಕಲಿ APK ಫೈಲ್ಗಳು ಮತ್ತು ಫಿಶಿಂಗ್ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬೇಡಿ ಅಥವಾ ಕ್ಲಿಕ್ ಮಾಡಬೇಡಿ.
🛡️ ಜಾಗೃತಿಯೇ ಸೈಬರ್ ಸುರಕ್ಷತೆಯ ಮೊದಲ ಹೆಜ್ಜೆ.
🚦ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಅಥವಾ ರಸ್ತೆಯನ್ನು ಅಜಾಗರೂಕತೆಯಿಂದ ದಾಟುವುದು ನಿಮ್ಮ ಜೀವವಷ್ಟೇ ಅಲ್ಲ, ಇತರರ ಜೀವಕ್ಕೂ ಅಪಾಯ ಉಂಟುಮಾಡುತ್ತದೆ.ಕೆಲವೇ ಕ್ಷಣಗಳ ತಾಳ್ಮೆ ನಿಮ್ಮ & ನಿಮ್ಮ ಕುಟುಂಬದ ಸುರಕ್ಷಿತ ಭವಿಷ್ಯವನ್ನು ಕಾಪಾಡುತ್ತದೆ.
✅ ಯಾವಾಗಲೂ ರಸ್ತೆಯ ಸರಿಯಾದ ಬದಿಯಲ್ಲೇ ಸಂಚರಿಸಿ.
🛣️ ನಿಯಮ ಪಾಲಿಸಿ -ಸುರಕ್ಷಿತವಾಗಿರಿ.
*🛡️ ಜಾಗೃತ ಮಹಿಳೆ – ಸುರಕ್ಷಿತ ಸಮಾಜದ ಭದ್ರ ಬುನಾದಿ!*
ಅಕ್ಕ ಪಡೆ ವತಿಯಿಂದ ಸಂಡೂರು ತಾಲ್ಲೂಕಿನ ಬೊಮ್ಮಘಟ್ಟ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ, POCSO ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಸಖಿ ಒನ್ ಸ್ಟಾಪ್ ಸೆಂಟರ್, ಮಾತೃ ವಂದನಾ ಯೋಜನೆ, ಕುರಿತು ಮಾಹಿತಿ ನೀಡಿಲಾಯಿತು.🌸
🚨 PART-TIME JOB SCAM!
💸 ಹೆಚ್ಚಿನ ಆದಾಯದ ಆಮಿಷ...
👍 ವೀಡಿಯೊಗಳಿಗೆ ಲೈಕ್, ಸರಳ ಕೆಲಸಗಳ ಹೆಸರಿನಲ್ಲಿ ಮೋಸ...
💰 ಆರಂಭದಲ್ಲಿ ಸಣ್ಣ ಮೊತ್ತ ನೀಡಿ ನಂಬಿಕೆ ಗಳಿಸಿ, ಬಳಿಕ ದೊಡ್ಡ ಮೊತ್ತವನ್ನು ವಂಚಿಸುತ್ತಾರೆ!
⚠️ ನೆನಪಿರಲಿ: ಉದ್ಯೋಗ ನೀಡಲು ಯಾವುದೇ ನೈಜ ಸಂಸ್ಥೆ ಹಣ ಪಾವತಿಸುವಂತೆ ಎಂದಿಗೂ ಕೇಳುವುದಿಲ್ಲ.
ಬಲೆ ಯಾವಾಗಲೂ ಒಂದು ಸುಳ್ಳಿನಿಂದ ಆರಂಭವಾಗುತ್ತದೆ.
‘ಎಲ್ರೂ ಮಾಡ್ತಿದ್ದಾರೆ’, ‘ಇದು ಕಾಮನ್’, ‘ಒಂದ್ಸಾರಿ ಟ್ರೈ ಮಾಡು’, ‘ಯಾರ್ಗೂ ಗೊತ್ತಾಗಲ್ಲ’, ‘ಸುಲಭವಾಗಿ ಹಣ ಮಾಡ್ಬಹುದು’
ಈ ಎಲ್ಲ ಸುಳ್ಳುಗಳಿಗೆ ಒಂದೇ ಉತ್ತರವಿರಲಿ!
#BedaBro@DgpKarnataka@KarnatakaCops@112Ballari
30.06.2026 ರಂದು ನಶಾ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ 50 ಶಾಲೆ ಹಾಗೂ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಿ, 8,677 ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದಲ್ಲಿ 1033 Tele-MANAS ಅಥವಾ KSP App ಮೂಲಕ ಮಾಹಿತಿ ನೀಡಿ
ಜಿಲ್ಲಾ ಪೊಲೀಸ್ ಘಟಕದಲ್ಲಿ ವಯೋ ನಿವೃತ್ತಿ ಹೊಂದಿದ ಶ್ರೀ ಡಬ್ಲ್ಯೂ. ಸುರೇಶ್ (ಪಿಎಸ್ಐ, ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ), ಶ್ರೀ ಲಾರೆನ್ಸ್ ವಿ.ಎಸ್.ಎ. (ಪಿಎಸ್ಐ, ಕೌಲ್ ಬಜಾರ್ ಠಾಣೆ), ಶ್ರೀ ವಿ. ಗೋವಿಂದರಾಜು (ಎ.ಆರ್.ಎಸ್.ಐ, ಡಿಎಆರ್) ಹಾಗೂ ಶ್ರೀ ಕೆ. ನಾರಾಯಣ (ಆರ್ಎಸ್ಐ, ಡಿಎಆರ್) ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
🚭 ಮಾದಕ ದ್ರವ್ಯ ಕ್ಷಣಿಕ ಸುಖ ನೀಡಬಹುದು...
⚠️ ಆದರೆ ಅದರ ಪರಿಣಾಮ ಜೀವನಪೂರ್ತಿ ದುಃಖ, ನೋವು ಮತ್ತು ಪಶ್ಚಾತ್ತಾಪ.
❤️ ನಿಮ್ಮ ಜೀವನ ಅಮೂಲ್ಯ.
ಕ್ಷಣಿಕ ಸುಖಕ್ಕಾಗಿ ಅದನ್ನು ಮಾದಕ ದ್ರವ್ಯಕ್ಕೆ ಬಲಿಯಾಗಿಸಬೇಡಿ.
🚫 ಮಾದಕ ದ್ರವ್ಯಕ್ಕೆ "ಇಲ್ಲ" ಹೇಳಿ...
🌿 ಆರೋಗ್ಯಕರ, ಉಜ್ವಲ ಭವಿಷ್ಯವನ್ನು ಆರಿಸಿಕೊಳ್ಳಿ.