ಭದ್ರಾವತಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಮೃತ ಸರೋವರ ಸ್ಥಳಗಳಲ್ಲಿ, ಶಾಲೆಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ ಯೋಗ ದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಚ್ಛತೆ ಅರಿವು, ಸಸಿ ನೇಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಯಿತು.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸ್ತ್ರಿ ಚೇತನ ಮತ್ತು ದುಡಿಯೋಣ ಬಾ ಅಭಿಯಾನ ನಡೆಸುವ ಮೂಲಕ ನರೇಗಾ ಕುರಿತು ಮಾಹಿತಿ ನೀಡಲಾಯಿತು ಹಾಗೂ ಪ್ರಸಕ್ತ ಸಾಲಿನ ಕೂಲಿದರದ ಮಾಹಿತಿ ತಿಳಿಸಲಾಯಿತು.
ಭದ್ರಾವತಿ ತಾಲ್ಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು ದೊಡ್ಡೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬೆಳ್ಳಿಗೆರೆ ಗ್ರಾಮದ ಬಳಸೋಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಕೂಲಿ ಕಾರ್ಮಿಕರು NMRರನ್ನು ಪರಿಶೀಲಿಸಿ ಕೂಲಿ ಕಾರ್ಮಿಕರಿಗೆ ಪ್ರಸ್ತುತ ಕೂಲಿ ದರದ ಮಾಹಿತಿಯನ್ನು ತಿಳಿಸಿದರು.
ಭದ್ರಾವತಿ ತಾಲ್ಲೂಕ ಪಂಚಾಯತ್ ಕಛೇರಿಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಭದ್ರಾವತಿ ಇವರ ವತಿಯಿಂದ ಅಂತರಾಷ್ಟೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದಿನಾಂಕ 18-12-2024 ರಂದು ಭದ್ರಾವತಿ ತಾಲ್ಲೂಕು ಅಂತರಗಂಗೆ ಅಗರದಹಳ್ಳಿ ,ಯಡೇಹಳ್ಳಿ, ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಕೂಡ್ಲಿಗೆರೆ, ಅತ್ತಿ ಗುಂದ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಎಂ.ಜಿ.ಎನ್.ಆರ್.ಇ.ಜಿ. ಎ ಕಾಮಗಾರಿಗಳು, ಯೋಜನೆಯಡಿ ಅನುಷ್ಟಾನ ಮಾಡಿರುವ ಕಾಮಗಾರಿ ಪರಿಶೀಲನೆ ನಡೆಸಿದರು,
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದಿನಾಂಕ 18-12-2024 ರಂದು ಭದ್ರಾವತಿ ತಾಲ್ಲೂಕು ಅಂತರಗಂಗೆ ಅಗರದಹಳ್ಳಿ ,ಯಡೇಹಳ್ಳಿ, ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಕೂಡ್ಲಿಗೆರೆ, ಅತ್ತಿ ಗುಂದ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಎಂ.ಜಿ.ಎನ್.ಆರ್.ಇ.ಜಿ. ಎ ಕಾಮಗಾರಿಗಳು, ಯೋಜನೆಯಡಿ ಅನುಷ್ಟಾನ ಮಾಡಿರುವ ಕಾಮಗಾರಿ ಪರಿಶೀಲನೆ ನಡೆಸಿದರು,
ಭದ್ರಾವತಿ ತಾಲ್ಲೂಕಿನ ಅರಕೆರೆ,ಅರಹತೊಳಲು,ದೊಡ್ಡೇರಿ,ಕಂಬದಾಳ್ ಹೊಸೂರು,ನಾಗತಿಬೆಳಗಲು,ಕಲ್ಲಹಳ್ಳಿ,ಮೈದೊಳಲು,ಸಿದ್ಲೀಪುರ,ತಡಸ ಈ ಗ್ರಾಮ ಪಂಚಾಯಿತಿಯವರು ನವೆಂಬರ್ 26 ರಂದು ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ಸಂವಿಧಾನ ದಿನಾಚರಣೆ ಮಾಡಲಾಯಿತು.
ದಿನಾಂಕ 05-10-2024 ರಂದು NLM Team ರವರು ಭದ್ರಾವತಿ ತಾಲೂಕು ಸನ್ಯಾಸಿಕೊಡಮಗ್ಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಂಜೀವಿನಿ ಯೋಜನೆಯಡಿಯಲ್ಲಿ ಸ್ವ ಸಹಾಯ ಸಂಘದ ಆಂತರಿಕ ಸಾಲ ಗಳನ್ನು ಪಡೆದು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ,ಮತ್ತು ನರೇಗಾ ಯೋಜನೆಯ ಅನುಷ್ಠಾನ ಮಾಡಲಾದ ಕಾಮಗಾರಿಗಳನ್ನು ಪರಿಶೀಲಿಸಿ ಯೋಜನೆಯ ಕಡತಗಳನ್ನು ಪರಿಶೀಲಿಸಲಾಯಿತು
ದಿನಾಂಕ 06-10-2024 ರಂದು NLM Team ರವರು ಭದ್ರಾವತಿ ತಾಲೂಕು ಸಿದ್ಲಿಪುರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಂಜೀವಿನಿ ಯೋಜನೆಯಡಿಯಲ್ಲಿ ಸ್ವ ಸಹಾಯ ಸಂಘದ ಆಂತರಿಕ ಸಾಲ ಗಳನ್ನು ಪಡೆದು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ,ಮತ್ತು ನರೇಗಾ ಯೋಜನೆಯ ಅನುಷ್ಠಾನ ಮಾಡಲಾದ ಕಾಮಗಾರಿಗಳನ್ನು ಪರಿಶೀಲಿಸಿ ಯೋಜನೆಯ ಕಡತಗಳನ್ನು ಪರಿಶೀಲಿಸಲಾಯಿತು.
ನಿಮ್ಮ ಗ್ರಾಮದಲ್ಲಿ ಬೂದು ನೀರು ನಿರ್ವಹಣೆ ಮಾಡಬೇಕೇ?
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್ 2ರಿಂದ ಪ್ರಾರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ
#ಸ್ವಚ್ಛತೆಯೆಡೆಗೆ_ದಿಟ್ಟ
ಭದ್ರಾವತಿ ತಾಲ್ಲೂಕಿನ ಬಾರಂದೂರು ಗ್ರಾಮ ಪಂಚಾಯಿತಿಯ ಹಳ್ಳಿಕೆರೆ ಗ್ರಾಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕರು, ಶಿವಮೊಗ್ಗ, ಸಹಾಯಕ ಕೃಷಿ ನಿರ್ದೇಶಕರು ಭದ್ರಾವತಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಭದ್ರಾವತಿ , ಸಹಾಯಕ ತೋಟಗಾರಿಕಾ ನಿರ್ದೇಶಕರಭದ್ರಾವತಿ.