Marking a major milestone in India’s rural development journey, the Government of India on 11 May 2026 notified the implementation of the Viksit Bharat – Guarantee for Rozgar and Ajeevika Mission (Gramin) [VB–G RAM G] Act, 2025, to be rolled out nationwide from 1 July 2026.
A stronger guarantee of 125 days of employment set to empower rural India
#VBGRAMGNotified #VBGRAMGCommencesFromJuly1 #VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD #VB_GRAMG
ತಾಲ್ಲೂಕು ಪಂಚಾಯಿತಿಯ ಎಲ್ಲಾ ಅಮೃತ ಸರೋವರ ದಂಡೆಗಳಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕು ನೀಡಿರುವ ಸಂವಿಧಾನ ದಿನದ ಅಂಗವಾಗಿ ತಾಲ್ಲೂಕಿನಲ್ಲಿರುವ ಅಮೃತ ಸರೋವರ ದಂಡೆ ಮೇಲೆ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞೇ ಸ್ವೀಕರಿಸಿದ ಕ್ಷಣ.
#ಸಂವಿಧಾನದಿನ#amritasarovar#constituitionday#grampanchayath
Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
2026-27ನೇ ಸಾಲಿನಲ್ಲಿ ಮ-ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಲು ಉಚಿತ ಸಹಾಯವಾಣಿ ಸಂಖ್ಯೆ 8277506000 ಗೆ ಸಂಪರ್ಕಿಸುವ ಮೂಲಕ ಬೇಡಿಕೆ ಸಲ್ಲಿಸಬಹುದು....
ನೆನಪಿನಲ್ಲಿರಲಿ ಉಚಿತ ಸಹಾಯವಾಣಿ ಸಂಖ್ಯೆ 8277506000
ಮ-ನರೇಗಾ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಅವರಾದ ಭೀಮಪ್ಪ.ಕೆ.ಲಾಳಿ ಅವರು ತಾಲ್ಲೂಕಿನ ಮರದೂರು ಗ್ರಾಮ ಪಂಚಾಯಿತಿ ಹಾಗೂ ಕೊತ್ತೇಗಾಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಉಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಸ್ವಾಮಿ ಬಿನ್ ಲೇ ಜೋಸೆಫ್ ಎಂಬ ಫಲಾನುಭವಿ ತಮ್ಮ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಮುಂದಾಗಿರುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಣ್ಣಿನ ಸಂರಕ್ಷಣೆಗಾಗಿ ಮ-ನರೇಗಾ ಯೋಜನೆಯಿಂದ ಕಂದಕ ಬದು ಅನುಷ್ಠಾನವಾಗುತ್ತಿದ್ದು, ಈ ಕುರಿತ ಯಶೋಗಾಥೆ ವಿಜಯ ವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು
ತಾಲ್ಲೂಕಿನ ಉಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಮುದ್ದನಹಳ್ಳಿ ಗ್ರಾಮದಲ್ಲಿ ಹಿಂದೂ ಸ್ಮಶಾನ ಅಭಿವೃದ್ಧಿ ಕಾಮಗಾರಿಯು ಮ-ನರೇಗಾದಿಂದ ಅನುಷ್ಠಾನಗೊಂಡಿದ್ದು, ಅಲ್ಲಿಯ ಗ್ರಾಮಸ್ಥರಿಗೆ ಅನುಕೂಲವಾಗಲಿದೆ
ತಾಲ್ಲೂಕಿನ ಮರದೂರು ಗ್ರಾಮ ಪಂಚಾಯಿತಿಯಲ್ಲಿ ಮ-ನರೇಗಾ ಯೋಜನೆಯಡಿ ಹಗರನಹಳ್ಳಿ ಮಂಟಿಕೊಪ್ಪಲಿನಿಂದ ಮಾದಾಪುರದವರೆಗೂ 3 ಕಿ.ಮೀ ರಸ್ತೆ ಬದಿ ನೆಡುತೋಪಿನ 3ನೇ ವರ್ಷದ ನಿರ್ವಹಣೆ ಕಾಮಗಾರಿಯಡಿ ಅನುಷ್ಠಾನಗೊಂಡಿದ್ದು, ಬದಿಗಳಲ್ಲಿ ನೆಟ್ಟಿರುವ ಗಿಡಗಳು ಮುಂದಿನ ದಿನಗಳಲ್ಲಿ ದಾರಿಹೋಕರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಲು ಸಹಕಾರಿಯಾಗಿದೆ.
ಪ್ರಾದೇಶಿಕ ಅರಣ್ಯ ವಲಯದಿಂದ ಮ-ನರೇಗಾದಡಿ ಮಣ್ಣಿನ ತೇವಾಂಶ ರಕ್ಷಣೆ ಕಾಮಗಾರಿಯಡಿ ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿದ್ದು, ಮಳೆ ನೀರು ತುಂಬಿ ಕಾಮಗಾರಿ ಅನುಷ್ಠಾನದ ಉದ್ದೇಶಕ್ಕೆ ಪುಷ್ಟಿ ನೀಡಿರುತ್ತದೆ
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯ ಅಮೃತ ಸರೋವರವಾದ ಬನ್ನಮ್ಮನ ಕೆರೆ ಏರಿ ಮೇಲೆ ವಿಶ್ವ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಮಾಡಲಾಯಿತು.
ಪಿಡಿಒ, ಕಾರ್ಯದರ್ಶಿ, ಎನ್.ಆರ್.ಎಲ್.ಎಂ ವ್ಯವಸ್ಥಾಪಕರು, ಐಇಸಿ ಸಂಯೋಜಕರು, ಒಕ್ಕೂಟದ ಮಹಿಳೆಯರು ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು
ತಾಲ್ಲೂಕಿನ ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿಯ ಹೆಬ್ಬಾಳ ಹಾಡಿಯ ಜನರಿಗೆ ಮ-ನರೇಗಾ ಯೋಜನೆಯಿಂದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನದೊಂದಿಗೆ ವಸತಿ ಯೋಜನೆಯಡಿ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅರಿವು ಮೂಡಿಸಿರುವ ಚಿತ್ರ
ತಾಲ್ಲೂಕಿನ ಚಿಕ್ಕಬೀಚನಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡ ಬೀಚನಹಳ್ಳಿ ಗ್ರಾಮದ ಮಲ್ಲರಾಜೇ ಅರಸ್ ಅವರು ತಮ್ಮ ಜಾಗದಲ್ಲಿ ಮ-ನರೇಗಾದಿಂದ ಜಾನುವಾರು ಕೊಟ್ಟಿಗೆ ನಿರ್ಮಿಸಿಕೊಳ್ಳುವ ಮೂಲಕ ಹಸುಗಳಿಗೆ ನೆಮ್ಮದಿಯುತ ಸೂರು ಕಲ್ಪಿಸಿಕೊಟ್ಟಿದ್ದಾರೆ.
ತಾಲ್ಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಗಳಿಗೆ ಜನರನ್ನು ಸಂಘಟಿಸಿ ತನ್ನ ಕುಟುಂಬದ ಆರ್ಥಿಕ ಭದ್ರತೆಗೆ ಸಹಕಾರಿಯಾಗಿರುವ ಕಾಯಕಬಂಧುವಿನ ಯಶೋಗಾಥೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ
ತಾಲ್ಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿಯ ಅಂಗಟಹಳ್ಳಿ ಗ್ರಾಮದ ಅಂಗಟಹಳ್ಳಿ ಕೆರೆ ಕಾಮಗಾರಿಯು ಪ್ರಸ್ತುತ ಆರ್ಥಿಕ ವರ್ಷದಲ್ಲಿ ನಡೆಯುತ್ತಿದ್ದು, ಜಲ ಮೂಲ ಸಂರಕ್ಷಣೆ ಮತ್ತು ರೈತರ ಕೃಷಿ ಚಟುವಟಿಕೆಗೆ ಈ ಕಾಮಗಾರಿ ಸಹಾಯವಾಗಲಿದೆ
ಧರ್ಮಾಪುರ ಗ್ರಾಮ ಪಂಚಾಯಿತಿಯ ಹಳ್ಳದ ಕೊಪ್ಪಲು ಗ್ರಾಮದಲ್ಲಿ ಇಂದು ರೋಜ್ಗಾರ್ ದಿನ ಮತ್ತು ದುಡಿಯೋಣ ಬಾ ಅಭಿಯಾನದಡಿ ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಅರಿವು ಮೂಡಿಸಿ, ಜಾಬ್ ಕಾರ್ಡ್ ಬಗ್ಗೆ, ಬಚ್ಚಲು ಗುಂಡಿ ನಿರ್ಮಾಣ, ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ತಿಳಿಸಲಾಯಿತು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಇಂದು ತಾಲ್ಲೂಕಿನ ಗುರುಪುರ ಗ್ರಾಮ ಪಂಚಾಯಿತಿಯ ನಾಗಾಪುರ ಹಾಡಿ 4ನೇ ಬ್ಲಾಕಿಗೆ ಭೇಟಿ ನೀಡಿ ವಿವಿಧ ವಸತಿ ಯೋಜನೆಯಡಿ ಹಾಡಿ ಜನರಿಗೆ ಸಮರ್ಪಕವಾಗಿ ವಸತಿ ಸೌಲಭ್ಯ ದೊರೆತಿರುವುದರ ಕುರಿತು ಪರಿಶೀಲಿಸಿದರು.