💐ಮಹಾತ್ಮ ಜ್ಯೋತಿಬಾ ಫುಲೆಯವರ ಪುಣ್ಯತಿಥಿ 💐
ಭಾರತದಲ್ಲಿ ಮಹಿಳಾ ಶಿಕ್ಷಣದ ಪ್ರವರ್ತಕರು ಮತ್ತು ಸಮಾಜ ಸುಧಾರಣೆಯ ಹರಿಕಾರರಾದ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯತಿಥಿಯಂದು ಅವರಿಗೆ ನನ್ನ ಅನಂತ ಅನಂತ ಗೌರವ ನಮನಗಳು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರಕ್ಕಾಗಿ ಅವರ ಬದ್ಧತೆ ಮತ್ತು ಚಿಂತನೆಗಳು ಇಂದಿಗೂ ಪ್ರಸ್ತುತ. #MahatmaJyotibaPhule
ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...
ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...
ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು?
ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ.
@narendramodi ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಅಂತ ಹೇಳಿದ್ದರು, ಆ ಪ್ರಕಾರವಾಗಿ ಯಾವುದೇ ರೀತಿಯ ಆಯ್ಕೆ ಪ್ರಕ್ರಿಯೆ ಇಲ್ಲದೆ ಸ್ಥಳೀಯವಾಗಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ನಮ್ಮ ನಮ್ಮ ವಿದ್ಯಾರ್ಹತೆಗೆ ತಕ್ಕಂತ ನಾವು ಆಕ್ರಮಿಸಿಕೊಳ್ಳಬಹುದಾ?
ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದಾರೆ.
ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲಾ.
ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ.
ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ.
“ಭಾರತದ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು ಸಮಬಾಳು ಕಲ್ಪಿಸಿದ್ದೇನೆ. ಇದರ ಆಶಯದಲ್ಲಿ ಆಳುವ ಸರ್ಕಾರಗಳು ತಮ್ಮ ಸ್ವಪಕ್ಷೀಯ ಮತ್ತು ಸ್ವಪ್ರತಿಷ್ಠೆಯನ್ನು ಬದಿಗೊತ್ತಿ ಸಂವಿಧಾನದ ಆಶಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಕಟಿಬದ್ಧರಾಗಬೇಕು”
- ಡಾ. ಬಿ. ಆರ್. ಅಂಬೇಡ್ಕರ್