ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು ಮತ್ತು ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು.
#ಅತಿಥಿ_ಉಪನ್ಯಾಸಕರು
5/5
ಕಾರ್ಯಭಾರವನ್ನು ದುಪ್ಪಟ್ಟು ಗೊಳಿಸುವ ನಿರ್ಧಾರದಿಂದಾಗಿ ಸುಮಾರು 14-15 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ.
ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಈ ಅನುಮಾನವನ್ನು ಬಲಪಡಿಸಿದೆ.
#ಅತಿಥಿ_ಉಪನ್ಯಾಸಕರು
4/5
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಜೊತೆಯಲ್ಲಿ ಅವರ ತರಗತಿಗಳ ಅವಧಿಯನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಲು ಹೊರಟಿರುವುದು ಸ್ಪಷ್ಟವಾಗಿದೆ.
ಇದು ನಿರಂತರ ಶೋಷಿತ ಅತಿಥಿ ಉಪನ್ಯಾಸಕರಿಗೆ ಬಗೆದಿರುವ ದ್ರೋಹವಾಗಿದೆ.
#ಅತಿಥಿ_ಉಪನ್ಯಾಸಕರು
3/5
ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ @BJP4Karnataka ತನ್ನ ತಂತ್ರ-ಕುತಂತ್ರದ ಕ್ರಮಗಳ ಮೂಲಕ ಅವರ ಬದುಕನ್ನು ಇನ್ನಷ್ಟು ಅಭದ್ರಗೊಳಿಸಿ ವಿಶ್ವಾಸದ್ರೋಹ ಎಸಗಿದೆ.
#ಅತಿಥಿ_ಉಪನ್ಯಾಸಕರು
1/5
ಅತಿಥಿ ಉಪನ್ಯಾಸಕರ
8 ಗಂಟೆಯ ತರಗತಿಗಳಿಗೆ ನೀಡುತ್ತಿದ್ದ 11-12 ಸಾವಿರ ಗೌರವಧನವನ್ನ ರೂ.30-32 ಸಾವಿರಕ್ಕೆ ಹೆಚ್ಚಿಸಿರುವ @BJP4Karnataka ಸರ್ಕಾರ,
ಅವರ ತರಗತಿಗಳ ಅವಧಿಯನ್ನು
8 ಗಂಟೆಯಿಂದ 16 ಗಂಟೆಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟಿರುವುದನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ.
#ಅತಿಥಿ_ಉಪನ್ಯಾಸಕರು
2/5