As per the directions of the Hon'ble Commissioner of Police, Bengaluru City, Safety meeting was conducted with apartment residents and Residential Welfare Association (RWA) members within the limits of Amruthahalli and Kodigehalli Police Station, NorthEast Division.
During the meeting, necessary guidance was provided on strengthening apartment security and preventing criminal activities. Residents were instructed to maintain proper records of visitors, including their names, contact details and purpose of visit. They were also advised to ensure police verification of security guards and domestic help before employing them.
The residents were further advised to install CCTV cameras at important locations, including entry and exit points, and regularly ensure that the cameras are functioning properly. They were urged to remain vigilant about the movement of unknown persons and report any suspicious activities to the police immediately. Awareness was also created regarding the use of the emergency helpline 112 in case of any emergency.
Residents, RWA members and security personnel were encouraged to act responsibly and cooperate with the Police Department to enhance apartment security and maintain a safe living environment.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ, ಈಶಾನ್ಯ ವಿಭಾಗದ ಅಮೃತಹಳ್ಳಿ ಮತ್ತು ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಷನ್ (RWA) ಸದಸ್ಯರೊಂದಿಗೆ ಸುರಕ್ಷತಾ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಅಪಾರ್ಟ್ಮೆಂಟ್ಗಳ ಭದ್ರತೆಯನ್ನು ಬಲಪಡಿಸುವುದು ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಕುರಿತು ಅಗತ್ಯ ಮಾರ್ಗದರ್ಶನ ನೀಡಲಾಯಿತು. ಅಪಾರ್ಟ್ಮೆಂಟ್ಗಳಿಗೆ ಆಗಮಿಸುವ ಸಂದರ್ಶಕರ ಹೆಸರು, ಸಂಪರ್ಕ ವಿವರಗಳು ಹಾಗೂ ಆಗಮನದ ಉದ್ದೇಶವನ್ನು ದಾಖಲಿಸಿಕೊಳ್ಳುವಂತೆ ಸೂಚಿಸಲಾಯಿತು. ಸೆಕ್ಯುರಿಟಿ ಗಾರ್ಡ್ಗಳು ಮತ್ತು ಮನೆಗೆಲಸದ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೊದಲು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆ ಮಾಡಿಸುವಂತೆ ತಿಳಿಸಲಾಯಿತು.
ಅಪಾರ್ಟ್ಮೆಂಟ್ಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸಲಹೆ ನೀಡಲಾಯಿತು. ಅಪರಿಚಿತ ವ್ಯಕ್ತಿಗಳ ಸಂಚಾರ ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ, ಅಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ 112 ಸಹಾಯವಾಣಿಗೆ ಕರೆ ಮಾಡುವಂತೆ ನಿವಾಸಿಗಳಿಗೆ ಅರಿವು ಮೂಡಿಸಲಾಯಿತು.
ಅಪಾರ್ಟ್ಮೆಂಟ್ಗಳ ಸುರಕ್ಷತೆಯನ್ನು ಕಾಪಾಡುವಲ್ಲಿ ನಿವಾಸಿಗಳು, RWA ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು.
@BlrCityPolice@CPBlr@DgpKarnataka@jt_cpeastbcp
As per the directions of the Hon'ble Commissioner of Police, Bengaluru City, Meetings were conducted with Residential Welfare Association (RWA) members and apartment residents within the limits of Kothanur and Vidyaranyapura Police Stations of the NorthEast Division.
During the meetings, guidance was provided on apartment security, installation and maintenance of CCTV cameras, vigilance by security personnel, monitoring the movement of unknown persons, and promptly informing the police about any suspicious activities.
Residents were also encouraged to maintain effective coordination and cooperation with the police department to enhance safety and security in their residential communities.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ, ಈಶಾನ್ಯ ವಿಭಾಗದ ಕೊತ್ತನೂರು ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಷನ್ (RWA) ಸದಸ್ಯರು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಅಪಾರ್ಟ್ಮೆಂಟ್ಗಳ ಸುರಕ್ಷತೆ, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ನಿರ್ವಹಣೆ, ಭದ್ರತಾ ಸಿಬ್ಬಂದಿಯ ಜಾಗರೂಕತೆ, ಅಪರಿಚಿತ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಹಾಗೂ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಕುರಿತು ಅರಿವು ಮೂಡಿಸಲಾಯಿತು.
ಅಲ್ಲದೆ, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ಉತ್ತಮ ಸಮನ್ವಯ ಹಾಗೂ ಸಹಕಾರವನ್ನು ಕಾಪಾಡಿಕೊಳ್ಳುವಂತೆ ತಿಳಿಸಲಾಯಿತು.
#DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
🧠 ವಿಶ್ವ ಮಾನಸಿಕ ಆರೋಗ್ಯ ದಿನ | ಅಕ್ಟೋಬರ್ 10
💚 ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ!
ಒತ್ತಡವನ್ನು ಹಂಚಿಕೊಳ್ಳಿ, ಮನಸ್ಸಿಗೆ ವಿರಾಮ ನೀಡಿ, ನೆರವು ಪಡೆಯಲು ಹಿಂಜರಿಯಬೇಡಿ.
ನಿಮ್ಮ ಮಾನಸಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡಿ.
ಪ್ರತಿದಿನ ವ್ಯಾಯಾಮ ಮತ್ತು ಧ್ಯಾನ ಮಾಡಿ.
ಆತ್ಮೀಯರೊಂದಿಗೆ ಮನಬಿಚ್ಚಿ ಮಾತನಾಡಿ.
ಅಗತ್ಯವಿದ್ದಾಗ ತಜ್ಞರ ಸಲಹೆ ಪಡೆಯಿರಿ.
ಆರೋಗ್ಯಕರ ಮನಸ್ಸು, ಸಮತೋಲಿತ ಜೀವನ!
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@KarnatakaCops
In accordance with the directions of the Hon’ble Commissioner of Police, Bengaluru City, a special vehicle checking drive was conducted within the jurisdiction of Yelahanka Newtown Police Station, NorthEast Division.
As part of the operation, 30 suspicious vehicles were inspected to verify vehicle documents and check for any irregularities.
Drive was aimed at strengthening preventive policing, deterring criminal activities, and maintaining law and order. Bengaluru City Police continues to undertake such proactive measures to enhance public safety and ensure a secure environment for all citizens.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ, ಈಶಾನ್ಯ ವಿಭಾಗದ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ 30 ವಾಹನಗಳನ್ನು ತಡೆದು ತಪಾಸಣೆ ನಡೆಸಲಾಯಿತು. ವಾಹನಗಳ ನೋಂದಣಿ ದಾಖಲೆಗಳು, ಚಾಲಕರ ವಿವರಗಳು ಹಾಗೂ ಇತರ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಯಿತು.
ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವುದು, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಯಿತು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ತಪಾಸಣೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
#DcpNorthEast #JointCpEast #BengaluruCityPolice
@BlrCityPolice@CPBlr@DgpKarnataka
ಒಂದು ಕೆಟ್ಟ ಅಭ್ಯಾಸ ನಿಮ್ಮ ಜೀವನವನ್ನೇ ನಾಶ ಪಡಿಸಬಹುದು.
ಮಾದಕ ವಸ್ತುಗಳು ನಿಮ್ಮನ್ನು ಕೂಲ್ ಆಗಿಸುವುದಿಲ್ಲ.
ಅವು ನಿಮ್ಮ ಆರೋಗ್ಯ, ಹಣ, ನೆಮ್ಮದಿ ಮತ್ತು ಭವಿಷ್ಯವನ್ನು ಕಸಿದುಕೊಳ್ಳುತ್ತವೆ.
🚫 ಪ್ರಯತ್ನಿಸಬೇಡಿ.
🚫 ಸಾಗಿಸಬೇಡಿ.
🚫 ಹಂಚಿಕೊಳ್ಳಬೇಡಿ.
✅ ಬೇಡ ಎಂದು ಹೇಳಿ. ದೂರ ಸರಿಯಿರಿ.
ನಿಮ್ಮ ಭವಿಷ್ಯವನ್ನು ಆಯ್ಕೆಮಾಡಿ, ಮಾದಕ ವಸ್ತುಗಳನ್ನಲ್ಲ.
ಬೇಡ ಬ್ರೋ — ಡ್ರಗ್ಸ್ ಬೇಡ!
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಮನೆ ಬಿಟ್ಟು ಹೊರಡುವ ಮುನ್ನ ಮನೆ ಸುರಕ್ಷತೆ ಖಚಿತಪಡಿಸಿಕೊಳ್ಳಿ....
🔒 ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಲಾಕ್ ಮಾಡಿ.
🔑 ಹೆಚ್ಚುವರಿ ಕೀಲಿಗಳನ್ನು ಶೂ ರ್ಯಾಕ್, ಹೂವಿನ ಕುಂಡ, ಚಾಪೆ ಮುಂತಾದ ಸ್ಥಳಗಳಲ್ಲಿ ಇಡಬೇಡಿ.
🔥 ಗ್ಯಾಸ್ ಮತ್ತು ವಿದ್ಯುತ್ ಉಪಕರಣಗಳನ್ನು ಆಫ್ ಮಾಡಿ.
📱 ನಿಮ್ಮ ಪ್ರಯಾಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
👨👩👧 ಹೆಚ್ಚು ದಿನಗಳ ಕಾಲ ಹೊರಗಿದ್ದರೆ, ವಿಶ್ವಾಸಾರ್ಹ ವ್ಯಕ್ತಿಗೆ ತಿಳಿಸಿ.
📹 ಸಿಸಿಟಿವಿ ಇದ್ದರೆ, ಅದು ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
⚠️ ಹೊರಡುವ ಮುನ್ನ ಪರಿಶೀಲಿಸಿ. ಸುರಕ್ಷಿತವಾಗಿ ಹೊರಡಿ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಸೆಕ್ಷನ್ 66E
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000
ವ್ಯಕ್ತಿಯ ಖಾಸಗಿ ಚಿತ್ರವನ್ನು ಅವರ ಅನುಮತಿಯಿಲ್ಲದೆ, ಗೌಪ್ಯತೆಗೆ ಧಕ್ಕೆಯಾಗುವ ರೀತಿಯಲ್ಲಿ ಸೆರೆಹಿಡಿಯುವುದು, ಪ್ರಕಟಿಸುವುದು ಅಥವಾ ರವಾನಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
• ಅನುಮತಿಯಿಲ್ಲದೆ ಖಾಸಗಿ ಚಿತ್ರಗಳನ್ನು ಎಂದಿಗೂ ಸೆರೆಹಿಡಿಯಬೇಡಿ ಅಥವಾ ಹಂಚಿಕೊಳ್ಳಬೇಡಿ.
• ಇತರರಿಂದ ಸ್ವೀಕರಿಸಿದ ಖಾಸಗಿ ಚಿತ್ರಗಳನ್ನು ಶೇರ್ ಮಾಡಬೇಡಿ.
• ಪ್ರತಿಯೊಬ್ಬರ ಗೌಪ್ಯತೆಯ ಹಕ್ಕನ್ನು ಗೌರವಿಸಿ.
ಶಿಕ್ಷೆ:
3 ವರ್ಷಗಳವರೆಗೆ ಜೈಲು ಶಿಕ್ಷೆ
ಅಥವಾ ₹2 ಲಕ್ಷದವರೆಗೆ ದಂಡ,
ಅಥವಾ ಎರಡೂ.
ಗೌಪ್ಯತೆಯನ್ನು ಗೌರವಿಸಿ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಸೈಬರ್ ಸ್ಟಾಕಿಂಗ್ ಎಂದರೆ, ಒಬ್ಬ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಇಂಟರ್ನೆಟ್, ಇ-ಮೇಲ್ ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪದೇಪದೇ ಸಂಪರ್ಕಿಸುವುದು, ಹಿಂಬಾಲಿಸುವುದು ಅಥವಾ ಅವರ ಆನ್ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದಾಗಿದೆ.
⚠️ ಸುರಕ್ಷಿತವಾಗಿರಿ:
• ಅನಗತ್ಯ ಸಂದೇಶಗಳು ಮತ್ತು ಖಾತೆಗಳನ್ನು ಬ್ಲಾಕ್ ಮಾಡಿ ಹಾಗೂ ವರದಿ ಮಾಡಿ.
• ಸಾಮಾಜಿಕ ಜಾಲತಾಣಗಳ ಗೌಪ್ಯತಾ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸಿ.
• ವೈಯಕ್ತಿಕ ಮಾಹಿತಿ ಮತ್ತು ಸ್ಥಳದ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ.
• ಕಿರುಕುಳಕ್ಕೆ ಸಂಬಂಧಿಸಿದ ಸಂದೇಶಗಳು ಹಾಗೂ ಸ್ಕ್ರೀನ್ಶಾಟ್ಗಳನ್ನು ಸಾಕ್ಷ್ಯವಾಗಿ ಉಳಿಸಿಕೊಳ್ಳಿ.
• ಬೆದರಿಕೆ ಅಥವಾ ನಿರಂತರ ಕಿರುಕುಳ ಎದುರಾದರೆ ಪೊಲೀಸರಿಗೆ ದೂರು ನೀಡಿ.
📞 ಸೈಬರ್ ಅಪರಾಧಕ್ಕೆ ಸಂಬಂಧಿಸಿದ ತುರ್ತು ಸಹಾಯಕ್ಕಾಗಿ 1930ಕ್ಕೆ ಕರೆ ಮಾಡಿ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಲ್ಲಿ ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಅಧ್ಯಕ್ಷತೆಯಲ್ಲಿ ಗಣೇಶ ಹಬ್ಬದ ಪೂರ್ವ ಸಿದ್ಧತಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಈಶಾನ್ಯ ವಿಭಾಗದ ವತಿಯಿಂದ ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸುರಕ್ಷಿತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಆಚರಿಸಲು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು, ಕಾನೂನು ಸುವ್ಯವಸ್ಥೆ ಹಾಗೂ ಬಂದೋಬಸ್ತ್ ಸಿದ್ಧತೆಗಳ ಕುರಿತು ಮಾನ್ಯ ಪೊಲೀಸ್ ಆಯುಕ್ತರಿಗೆ ವಿವರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ Bad Characters ಹಾಗೂ Trouble Makers ವಿರುದ್ಧ ಈಗಾಗಲೇ Preventive Cases ದಾಖಲಿಸಿರುವುದರ ಜೊತೆಗೆ, ಅಗತ್ಯವಿರುವ ಇನ್ನಿತರ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಮುನ್ನೆಚ್ಚರಿಕೆಯಾಗಿ ಎಚ್ಚರಿಕೆ ನೀಡಿರುವ ಬಗ್ಗೆ ಮಾನ್ಯರಿಗೆ ತಿಳಿಸಲಾಯಿತು. ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳಗಳು ಹಾಗೂ ಮೆರವಣಿಗೆ ಸಾಗುವ ಮಾರ್ಗಗಳನ್ನು ಗುರುತಿಸಿ, ಅಲ್ಲಿ CC Camera ಅಳವಡಿಕೆ, Videography ಹಾಗೂ Drone Surveillance ಮೂಲಕ ನಿರಂತರ ನಿಗಾ ವಹಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಲಾಯಿತು.
ಗಣೇಶೋತ್ಸವದ ಆಯೋಜಕರು ಹಾಗೂ ಮುಖಂಡರೊಂದಿಗೆ ಈಗಾಗಲೇ ಶಾಂತಿ ಮತ್ತು ಸೌಹಾರ್ದ ಸಭೆಗಳನ್ನು ನಡೆಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿರುವುದನ್ನು ಮಾನ್ಯ ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಯಿತು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿರುವುದು ಹಾಗೂ ಯಾವುದೇ ಪ್ರಚೋದನಕಾರಿ ಅಥವಾ ಆಕ್ಷೇಪಾರ್ಹ ಹೇಳಿಕೆಗಳು, ಪೋಸ್ಟರ್ಗಳು ಮತ್ತು ಮುದ್ರಿತ ಸಾಮಗ್ರಿಗಳ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಕುರಿತು ತಿಳಿಸಲಾಯಿತು.
ಗಣೇಶ ಹಬ್ಬದ ಬಂದೋಬಸ್ತ್ ಕರ್ತವ್ಯಕ್ಕೆ ಅಗತ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಯ Deployment ಕುರಿತು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ಅಗತ್ಯ ಆಹಾರ ವ್ಯವಸ್ಥೆ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಲಾಯಿತು. ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿ ಜನಸಂದಣಿ ನಿಯಂತ್ರಣ, ಸಾರ್ವಜನಿಕರ ಸುರಕ್ಷತೆ ಹಾಗೂ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕುರಿತು ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ವಿವರಿಸಲಾಯಿತು.
ಈ ವೇಳೆ ಮಾನ್ಯ ಪೊಲೀಸ್ ಆಯುಕ್ತರು ಮಾತನಾಡಿ, ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸಂದರ್ಭದಲ್ಲಿ ಯಾವುದೇ ಅವಘಡ ಅಥವಾ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ಪ್ರತಿಯೊಂದು ವಿಷಯಕ್ಕೂ ಅಗತ್ಯ ಮಹತ್ವ ನೀಡಿ, ಪ್ರತಿದಿನ ಸೂಕ್ತ ಪ್ರದೇಶಗಳಲ್ಲಿ ಗಸ್ತು ನಡೆಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ಹಾಗೂ ಹಬ್ಬದ ಮುಖಂಡರೊಂದಿಗೆ ನಿರಂತರ ಸಮನ್ವಯ ಸಾಧಿಸಿ, ಯಾವುದೇ ಪ್ರಮುಖ ಮಾಹಿತಿ ದೊರೆತಲ್ಲಿ ತಕ್ಷಣ ತಿಳಿಸುವಂತೆ ಸೂಚಿಸಿದರು.
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ಆಹಾರ ವ್ಯವಸ್ಥೆ ಮಾಡುವಂತೆ ಹಾಗೂ ಕರ್ತವ್ಯದಲ್ಲಿ ಸದಾ Active ಆಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಮೆರವಣಿಗೆ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ NETHRA Camera ಹಾಗೂ Magic Box Camera ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಬೇಕು. KSPR ತುಕಡಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅಗತ್ಯ ಸ್ಥಳಗಳಲ್ಲಿ ನಿಯೋಜಿಸುವುದರ ಜೊತೆಗೆ Route March ನಡೆಸಿ ಪೊಲೀಸ್ Presence ಹೆಚ್ಚಿಸುವಂತೆ ಸೂಚಿಸಿದರು.
ಮೆರವಣಿಗೆ ಆಯೋಜಕರು ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಮುಂಚಿತವಾಗಿಯೇ ತಮ್ಮ ನಿಯೋಜಿತ ಸ್ಥಳ ಹಾಗೂ ಮೆರವಣಿಗೆ ಮಾರ್ಗವನ್ನು ಪರಿಶೀಲಿಸಿಕೊಂಡು, ಸ್ಥಳೀಯ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಸಾರ್ವಜನಿಕರು, ಹಬ್ಬದ ಆಯೋಜಕರು ಹಾಗೂ ಪೊಲೀಸ್ ಇಲಾಖೆಯ ನಡುವಿನ ಉತ್ತಮ ಸಮನ್ವಯದೊಂದಿಗೆ ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸುರಕ್ಷಿತವಾಗಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಮಾನ್ಯ ಪೊಲೀಸ್ ಆಯುಕ್ತರು ಸೂಚಿಸಿದರು.
ಈ ವೇಳೆ ಮಾನ್ಯ Joint CP (East), DCP North Traffic, ACP ರವರು ಹಾಗೂ Police Inspector ರವರು ಉಪಸ್ಥಿತರಿದ್ದರು.
@BlrCityPolice@CPBlr@DgpKarnataka@jt_cpeastbcp
Ganesh Festival in Jakkur Layout, within the jurisdiction of Amruthahalli Police Station, NorthEast Division, Bengaluru City Police, was celebrated as a symbol of Communal Harmony and Unity.
On this occasion, people from the Hindu and Muslim communities came together and celebrated the festival with mutual respect, cooperation and goodwill.
Everyone participated together, conveying a message of Peace, Harmony and Peaceful coexistence.
Such harmonious celebrations strengthen mutual trust, unity and brotherhood among different communities.
ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಕ್ಕೂರು ಲೇಔಟ್ನಲ್ಲಿ ಗಣೇಶ ಹಬ್ಬವು ಭಾವೈಕ್ಯತೆ ಮತ್ತು ಏಕತೆಯ ಪ್ರತೀಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಗ್ಗೂಡಿ, ಪರಸ್ಪರ ಗೌರವ, ಸಹಕಾರ ಮತ್ತು ಸೌಹಾರ್ದತೆಯೊಂದಿಗೆ ಹಬ್ಬವನ್ನು ಆಚರಿಸಿದರು.
ಎಲ್ಲರೂ ಒಟ್ಟಾಗಿ ಭಾಗವಹಿಸುವ ಮೂಲಕ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರಿದರು.
ಇಂತಹ ಸೌಹಾರ್ದಯುತ ಆಚರಣೆಗಳು ವಿವಿಧ ಸಮುದಾಯಗಳ ನಡುವಿನ ಪರಸ್ಪರ ವಿಶ್ವಾಸ, ಏಕತೆ ಮತ್ತು ಸಹೋದರತ್ವವನ್ನು ಮತ್ತಷ್ಟು ಬಲಪಡಿಸುತ್ತವೆ.
#DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
Review meeting on Ganesh Festival preparations was held at the DCP Office, NorthEast Division, Bengaluru City Police, under the chairmanship of the Hon’ble Commissioner of Police, Bengaluru City.
During the meeting, the Hon’ble Commissioner was briefed on the precautionary measures, law and order arrangements and bandobast preparations being undertaken by the NorthEast Division to ensure the peaceful and safe celebration of the festival without any untoward incidents.
It was informed that Preventive Cases have already been registered against Bad Characters and Trouble Makers in connection with the festival, and necessary warnings have been issued to other identified persons as a precautionary measure. The Hon’ble Commissioner was also briefed on the arrangements made for the installation of CC Cameras, Videography and Drone Surveillance at Ganesh idol installation locations and along the procession routes for effective monitoring.
The Hon'ble Commissioner was informed that Peace and Harmony meetings had been conducted with Ganesh Festival organisers and community leaders, during which necessary advice and instructions were given to ensure the peaceful conduct of the celebrations. Sensitive areas have been identified and increased police patrolling has been planned in such areas. Necessary preventive measures have also been taken to ensure that provocative or objectionable statements and posters do not disturb peace and public order.
The preparations for the deployment of officers and personnel for Ganesh Festival bandobast duty were explained, along with arrangements for providing food to the personnel deployed on duty. The precautionary arrangements at idol immersion locations, including crowd management, public safety and adequate police presence, were also briefed to the Hon’ble Commissioner.
The Hon’ble Commissioner of Police instructed all officers and personnel to remain highly alert and vigilant throughout the festival and to ensure that no untoward incident takes place. He directed the officers to give due importance to every piece of information, carry out regular patrolling and take timely preventive measures. He further instructed to maintain close coordination with the public and Ganesh Festival organisers and immediately bring any important information to the notice of senior officers.
The Hon’ble Commissioner instructed that proper food arrangements be made for all officers and personnel deployed for bandobast duty and that they remain active and alert while performing their duties. He directed that NETHRA Cameras and Magic Box Cameras be effectively utilised during processions and other important events. Proper guidance should be given to KSPR platoons and they should be deployed at appropriate locations. Route Marches should be conducted in sensitive areas to enhance police presence and maintain public confidence.
The procession organisers should strictly adhere to the prescribed timings. Officers and personnel deployed for bandobast duty should visit and familiarise themselves with their assigned locations and procession routes in advance.
The Hon’ble Commissioner emphasised the need for effective coordination between the police, festival organisers and the public and directed all concerned to take every necessary precaution to ensure that the Ganesh Festival is celebrated peacefully, safely and harmoniously.
On this occasion, Hon'ble Joint CP (East), DCP North Traffic, ACPs and Police Inspectors were present.
@BlrCityPolice@CPBlr@DgpKarnataka@jt_cpeastbcp
ಟೆಲಿಗ್ರಾಂನಲ್ಲಿ ನಕಲಿ ಹೂಡಿಕೆ ಜಾಹೀರಾತುಗಳಿಗೆ ಮೋಸಹೋಗಬೇಡಿ!
ವಂಚಕರು ಜನಪ್ರಿಯ ಶಿಕ್ಷಕರ ಹೆಸರು ಮತ್ತು ಚಿತ್ರಗಳನ್ನು ದುರುಪಯೋಗಪಡಿಸಿಕೊಂಡು, ಹೆಚ್ಚಿನ ಲಾಭದ ಆಮಿಷವೊಡ್ಡಿ ನಕಲಿ ಹೂಡಿಕೆ ಯೋಜನೆಗಳಿಗೆ ಜನರನ್ನು ಸೆಳೆಯಬಹುದು.
⚠️ ಎಚ್ಚರಿಕೆ ವಹಿಸಿ:
• ಹೆಚ್ಚಿನ ಲಾಭದ ಭರವಸೆ ನೀಡುವ ಜಾಹೀರಾತುಗಳನ್ನು ನಂಬಬೇಡಿ.
• ಹೂಡಿಕೆ ಮಾಡುವ ಮೊದಲು ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಖಚಿತಪಡಿಸಿಕೊಳ್ಳಿ.
• ಅಪರಿಚಿತ ವ್ಯಕ್ತಿಗಳು ಅಥವಾ ಖಾತೆಗಳಿಗೆ ಹಣ ಕಳುಹಿಸಬೇಡಿ.
• ಹಣಕಾಸು ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ.
🛡️ ಹೂಡಿಕೆ ಮಾಡುವ ಮೊದಲು ಪರಿಶೀಲಿಸಿ — ವಂಚನೆಯಿಂದ ದೂರವಿರಿ.
#Awareness #DcpNorthEast #BengaluruCityPolice
@BlrCityPolice@CPBlr@DgpKarnataka@jt_cpeastbcp
ನಿಮ್ಮ ಬ್ಯಾಂಕ್ ಖಾತೆಯನ್ನು ಮ್ಯೂಲ್ ಖಾತೆಯಾಗಲು ಬಿಡಬೇಡಿ!
❌ ಹಣ ಸ್ವೀಕರಿಸಲು ಅಥವಾ ವರ್ಗಾಯಿಸಲು ನಿಮ್ಮ ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ನೀಡಬೇಡಿ, ಮಾರಾಟ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ.
⚠️ ವಂಚಕರು ನಿಮ್ಮ ಖಾತೆಯನ್ನು ಕದ್ದ ಹಣ ವರ್ಗಾಯಿಸಲು ಬಳಸಬಹುದು. ಇದರಿಂದ ನೀವು ಕಾನೂನು ಕ್ರಮಕ್ಕೆ ಒಳಗಾಗಬಹುದು.
✅ ನಿಮ್ಮ OTP, PIN, ATM ಕಾರ್ಡ್ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿರಿ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
As per the directions of the Hon’ble Commissioner of Police, Bengaluru City, Preparatory meeting was conducted with all ACPs, Police Inspectors and Law & Order PSIs of the NorthEast Division in view of the upcoming Gowri Ganesh Festival.
During the meeting, precautionary measures to be taken at Ganesh idol installation and immersion locations, necessary police bandobast arrangements, and crowd management were discussed.
Instructions were given to maintain surveillance over sensitive areas and the activities of elements that may affect communal harmony, take preventive measures against persons likely to disturb peace during the festival, and monitor provocative content on social media that may affect communal harmony.
The meeting also discussed ensuring the presence of organisers and responsible persons at Ganesh pandals, regular visits by beat staff to every Ganesh idol installation location with proper entries in the beat book, and seeking the assistance of volunteers during immersion processions and other related occasions.
The officers were directed to coordinate with the Fire and Emergency Services Department, Electricity Department and other concerned departments to ensure necessary safety measures.
It was also informed that Ganesh festival organisers who maintain good coordination with the Police Department and other concerned departments and celebrate the Gowri Ganesh Festival peacefully and harmoniously will be identified and felicitated with a Letter of Appreciation.
The officers were instructed to take all necessary precautionary measures to ensure that the Gowri Ganesh Festival is celebrated peacefully, harmoniously and safely.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ನಿರ್ದೇಶನದ ಮೇರೆಗೆ, ಮುಂಬರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಎಲ್ಲಾ ACP, ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಕಾನೂನು ಸುವ್ಯವಸ್ಥೆ PSI ರವರೊಂದಿಗೆ ಬಂದೋಬಸ್ತ್ ಪೂರ್ವಸಿದ್ಧತಾ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಹಾಗೂ ಜನಸಂದಣಿ ನಿಯಂತ್ರಣ ಕುರಿತು ಚರ್ಚಿಸಲಾಯಿತು.
ಸೂಕ್ಷ್ಮ ಪ್ರದೇಶಗಳು ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಂಶಗಳ ಚಟುವಟಿಕೆಗಳ ಮೇಲೆ ನಿಗಾವಹಿಸುವುದು, ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವ ಸಾಧ್ಯತೆ ಇರುವ ವ್ಯಕ್ತಿಗಳ ವಿರುದ್ಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಕಾರಿ ವಿಷಯಗಳ ಮೇಲೆ ನಿಗಾವಹಿಸುವಂತೆ ಸೂಚಿಸಲಾಯಿತು.
ಗಣೇಶ ಪೆಂಡಾಲ್ಗಳ ಬಳಿ ಆಯೋಜಕರು ಹಾಗೂ ಜವಾಬ್ದಾರಿಯುತ ವ್ಯಕ್ತಿಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು, ಪ್ರತಿಯೊಂದು ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳಕ್ಕೆ ಬೀಟ್ ಸಿಬ್ಬಂದಿಯವರು ನಿಯಮಿತವಾಗಿ ಭೇಟಿ ನೀಡಿ ಬೀಟ್ ಪುಸ್ತಕದಲ್ಲಿ ವಿವರಗಳನ್ನು ದಾಖಲಿಸುವುದು ಹಾಗೂ ವಿಸರ್ಜನಾ ಮೆರವಣಿಗೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ವಾಲಂಟೀರ್ಗಳ ಸಹಕಾರ ಪಡೆಯುವ ಕುರಿತು ಚರ್ಚಿಸಲಾಯಿತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಅಲ್ಲದೆ, ಪೊಲೀಸ್ ಇಲಾಖೆ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ, ಶಾಂತಿ ಮತ್ತು ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸುವ ಗಣಪತಿ ಆಯೋಜಕರನ್ನು ಗುರುತಿಸಿ, ಅಂತಹ ಆಯೋಜಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಯಿತು.
ಗೌರಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಸುರಕ್ಷಿತವಾಗಿ ಆಚರಿಸಲು ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
#DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
🚨 ತುರ್ತು ಪರಿಸ್ಥಿತಿ ಏನೇ ಇರಲಿ… ಒಂದೇ ಸಂಖ್ಯೆ ನೆನಪಿರಲಿ! 📞 112
🚗 ಅಪಘಾತ | 🚨 ಅಪರಾಧ | 🔥 ಬೆಂಕಿ ಅವಘಡ | 🆘 ಅಪಾಯ
📍 ನಿಮ್ಮ ಸ್ಥಳ ತಿಳಿಸಿ
🗣️ ಏನಾಯಿತು ಎಂದು ತಿಳಿಸಿ
📞 ಸೂಚನೆಗಳನ್ನು ಪಾಲಿಸಿ
⏱️ ಪ್ರತಿ ಸೆಕೆಂಡ್ ಮುಖ್ಯ!
⚠️ 112 — ತುರ್ತು ಸಂದರ್ಭಗಳಲ್ಲಿ ಕರೆ ಮಾಡಿ.
🚔 ನಮ್ಮ 112 — ಒಂದೇ ಕರೆ, ತಕ್ಷಣದ ನೆರವು!
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
Following the directions of the Hon’ble Commissioner of Police, Bengaluru City, Awareness programme was conducted at the Government Primary School, Sonnappanahalli, within the limits of Chikkajala Police Station, NorthEast Division.
During the programme, students were sensitised on:
• The Prohibition of Child Marriage Act and the harmful social, educational and legal consequences of child marriage.
• The POCSO Act, with emphasis on protecting children from sexual abuse, harassment and inappropriate behaviour, and the importance of reporting such incidents to a trusted adult or the police.
• Child Helpline 1098, which provides assistance and support to children in need or distress.
• The 112 emergency helpline and its importance in seeking immediate police assistance during emergencies.
Students were encouraged to be aware of their rights and personal safety, speak up against any form of abuse or harassment, and seek timely assistance whenever required.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ನಿರ್ದೇಶನದಂತೆ, ಈಶಾನ್ಯ ವಿಭಾಗದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೊಣ್ಣಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಾನೂನು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ:
• ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ್ಯ ವಿವಾಹದಿಂದ ಉಂಟಾಗುವ ಸಾಮಾಜಿಕ, ಶೈಕ್ಷಣಿಕ ಮತ್ತು ಕಾನೂನು ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು.
• ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಅಸಭ್ಯ ವರ್ತನೆಯಿಂದ ರಕ್ಷಿಸುವ POCSO ಕಾಯ್ದೆಯ ಕುರಿತು ಅರಿವು ಮೂಡಿಸಿ, ಇಂತಹ ಘಟನೆಗಳು ಎದುರಾದಲ್ಲಿ ವಿಶ್ವಾಸಾರ್ಹ ಹಿರಿಯರು ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.
• ಸಂಕಷ್ಟದಲ್ಲಿರುವ ಅಥವಾ ಸಹಾಯದ ಅಗತ್ಯವಿರುವ ಮಕ್ಕಳಿಗೆ ನೆರವು ಪಡೆಯಲು Child Helpline 1098 ಕುರಿತು ಮಾಹಿತಿ ನೀಡಲಾಯಿತು.
• ತುರ್ತು ಸಂದರ್ಭಗಳಲ್ಲಿ ತಕ್ಷಣದ ಪೊಲೀಸ್ ನೆರವು ಪಡೆಯಲು 112 ತುರ್ತು ಸಹಾಯವಾಣಿಯ ಮಹತ್ವ ಹಾಗೂ ಬಳಸುವ ವಿಧಾನವನ್ನು ವಿವರಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಹಕ್ಕುಗಳು ಹಾಗೂ ವೈಯಕ್ತಿಕ ಸುರಕ್ಷತೆಯ ಕುರಿತು ಜಾಗೃತರಾಗಿರಬೇಕು, ಯಾವುದೇ ರೀತಿಯ ದೌರ್ಜನ್ಯ ಅಥವಾ ಕಿರುಕುಳದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು ಮತ್ತು ಅಗತ್ಯವಿದ್ದಾಗ ಸೂಕ್ತ ಸಮಯದಲ್ಲಿ ಸಹಾಯವನ್ನು ಪಡೆಯಬೇಕು ಎಂದು ತಿಳಿಸಲಾಯಿತು.
#DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಒಂದು ಪೋಸ್ಟ್ ಶಾಂತಿಯನ್ನು ಹರಡಬಹುದು — ಅಥವಾ ಸಂಘರ್ಷಕ್ಕೆ ಕಾರಣವಾಗಬಹುದು.
🚫 ಹಂಚಿಕೊಳ್ಳಬೇಡಿ
• ಕೋಮು ಪ್ರಚೋದನಕಾರಿ ವಿಷಯಗಳು
• ವದಂತಿಗಳು ಅಥವಾ ಪರಿಶೀಲಿಸದ ಮಾಹಿತಿಗಳು
• ಯಾವುದೇ ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಸುವ ವಿಷಯಗಳು
✅ ಹಂಚಿಕೊಳ್ಳುವ ಮೊದಲು
• ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ
• ಪ್ರಚೋದನಕಾರಿ ವಿಷಯಗಳನ್ನು ಫಾರ್ವರ್ಡ್ ಮಾಡುವುದನ್ನು ತಪ್ಪಿಸಿ
• ಶಾಂತಿ, ಗೌರವ ಮತ್ತು ಸೌಹಾರ್ದತೆಯನ್ನು ಉತ್ತೇಜಿಸಿ
📱 ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಿ
❤️ ದ್ವೇಷವಲ್ಲ, ಶಾಂತಿಯನ್ನು ಹರಡೋಣ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಕಳ್ಳತನವನ್ನು ತಡೆಗಟ್ಟಲು ಹಾಗೂ ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಯನ್ನು ಕಾಪಾಡಲು ಕೆಲವು ಸರಳ ಮುನ್ನೆಚ್ಚರಿಕೆಗಳು ಬಹಳಷ್ಟು ಸಹಾಯ ಮಾಡುತ್ತವೆ.
🔹 ನೀವು ಮನೆಯಿಂದ ಹೊರಡುವಾಗ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾಗಿ ಲಾಕ್ ಮಾಡಿ.
🔹 ದೃಢವಾದ, ಉತ್ತಮ ಗುಣಮಟ್ಟದ ಬೀಗಗಳನ್ನು ಬಳಸಿ ಹಾಗೂ ಬಾಗಿಲು ಮತ್ತು ಕಿಟಕಿಗಳಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಿ.
🔹 ಮನೆಯ ಸುರಕ್ಷತೆಯನ್ನು ಹೆಚ್ಚಿಸಲು CCTV ಕ್ಯಾಮೆರಾಗಳು, ವೀಡಿಯೋ ಡೋರ್ಬೆಲ್ ಅಥವಾ ಅಲಾರಂ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಿ.
🔹 ದೀರ್ಘಕಾಲ ಮನೆಯಿಂದ ಹೊರಗಿರುವಾಗ, ನಿಮ್ಮ ಮನೆ ಖಾಲಿಯಾಗಿದೆ ಅಥವಾ ಯಾರೂ ವಾಸವಿಲ್ಲ ಎಂಬುದು ಗೋಚರಿಸದಂತೆ ಎಚ್ಚರಿಕೆ ವಹಿಸಿ.
🔹 ಮನೆಯ ಪ್ರವೇಶದ್ವಾರ, ಶೂ ರ್ಯಾಕ್ ಅಥವಾ ಸುಲಭವಾಗಿ ಗುರುತಿಸಬಹುದಾದ ಸ್ಥಳಗಳಲ್ಲಿ ಹೆಚ್ಚುವರಿ ಕೀಗಳನ್ನು ಎಂದಿಗೂ ಇಡಬೇಡಿ.
🔹 ಮನೆಗೆಲಸದವರು, ಚಾಲಕರು ಅಥವಾ ಇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೊದಲು ಅವರ ಗುರುತು ಮತ್ತು ದಾಖಲೆಗಳನ್ನು ಪರಿಶೀಲಿಸಿ.
🔹 ಮನೆಯಲ್ಲಿ ಇರುವ ಅಮೂಲ್ಯ ವಸ್ತುಗಳು, ನಗದು ಅಥವಾ ಬೆಲೆಬಾಳುವ ವಸ್ತುಗಳ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವುದನ್ನು ತಪ್ಪಿಸಿ.
🔹 ಪ್ರಯಾಣಿಸುವಾಗ, ನಿಮ್ಮ ಪ್ರಯಾಣದ ಯೋಜನೆಗಳು, ಪ್ರಯಾಣದ ಅವಧಿ ಅಥವಾ ನಿಮ್ಮ ಮನೆ ಖಾಲಿಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
🔹 ನಿಮ್ಮ ನಿವಾಸದ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿರಿ ಹಾಗೂ ಅಗತ್ಯವಿದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
🚨 ಇಂದು ವಹಿಸುವ ಸ್ವಲ್ಪ ಎಚ್ಚರಿಕೆ, ನಾಳೆ ಸಂಭವಿಸಬಹುದಾದ ದೊಡ್ಡ ನಷ್ಟವನ್ನು ತಡೆಯಬಹುದು.
ಎಚ್ಚರವಾಗಿರಿ. ಸುರಕ್ಷಿತವಾಗಿರಿ. ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಿ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@KarnatakaCops@jt_cpeastbcp
ಸಾಮಾಜಿಕ ಮಾಧ್ಯಮದ ಜಾಹೀರಾತುಗಳು ಅಥವಾ ಅಪರಿಚಿತ ಲಿಂಕ್ಗಳ ಮೂಲಕ ಪ್ರಚಾರವಾಗುವ APKಗಳನ್ನು ಎಂದಿಗೂ ಇನ್ಸ್ಟಾಲ್ ಮಾಡಬೇಡಿ.
• ಸಾಮಾಜಿಕ ಮಾಧ್ಯಮದ ಜಾಹೀರಾತುಗಳನ್ನು ನಂಬಿ APK ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ.
• WhatsApp, SMS ಅಥವಾ ಅಪರಿಚಿತ ವೆಬ್ಸೈಟ್ಗಳಿಂದ ಬರುವ APK ಲಿಂಕ್ಗಳನ್ನು ತೆರೆಯಬೇಡಿ.
• ಆ್ಯಪ್ಗಳನ್ನು Google Play Store ಅಥವಾ ಇತರ ಅಧಿಕೃತ ಆ್ಯಪ್ ಸ್ಟೋರ್ಗಳಿಂದ ಮಾತ್ರ ಡೌನ್ಲೋಡ್ ಮಾಡಿ.
• ಉಚಿತ ಬಹುಮಾನ, ಭಾರೀ ರಿಯಾಯಿತಿ ಅಥವಾ ವಿಶೇಷ ಆಫರ್ಗಳ ಹೆಸರಿನಲ್ಲಿ ಆ್ಯಪ್ ಇನ್ಸ್ಟಾಲ್ ಮಾಡಲು ಕೇಳಿದರೆ ಎಚ್ಚರಿಕೆಯಿಂದಿರಿ.
• “Install Unknown Apps” ಆಯ್ಕೆಯನ್ನು ಅನಗತ್ಯವಾಗಿ ಸಕ್ರಿಯಗೊಳಿಸಬೇಡಿ.
• OTP, UPI PIN, ಪಾಸ್ವರ್ಡ್ ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
• ಅನುಮಾನಾಸ್ಪದ APK ಇನ್ಸ್ಟಾಲ್ ಮಾಡಿದ್ದರೆ, ತಕ್ಷಣ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಮತ್ತು ಅಗತ್ಯ ಕ್ರಮ ಕೈಗೊಳ್ಳಿ.
ನೆನಪಿಡಿ:
ಆಕರ್ಷಕ ಜಾಹೀರಾತು ಕಂಡರೂ, APK ಸುರಕ್ಷಿತವೆಂದು ಭಾವಿಸಬೇಡಿ.
ಕ್ಲಿಕ್ ಮಾಡುವ ಮೊದಲು ಯೋಚಿಸಿ.
ಇನ್ಸ್ಟಾಲ್ ಮಾಡುವ ಮೊದಲು ಪರಿಶೀಲಿಸಿ.
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
🔐 ನಿಮ್ಮ ಪಾಸ್ವರ್ಡ್ — ನಿಮ್ಮ ಮೊದಲ ರಕ್ಷಣಾ ಕವಚ!
❌ ಹೆಸರು, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಅಥವಾ ಸುಲಭವಾಗಿ ಊಹಿಸಬಹುದಾದ ಪಾಸ್ವರ್ಡ್ ಬಳಸಬೇಡಿ.
✅ ಪ್ರತಿಯೊಂದು ಖಾತೆಗೂ ಬಲಿಷ್ಠ ಮತ್ತು ಪ್ರತ್ಯೇಕ ಪಾಸ್ವರ್ಡ್ ಬಳಸಿ.
ಪಾಸ್ವರ್ಡ್ ಬಲವಾಗಿರಲಿ — ನಿಮ್ಮ ಖಾತೆ ಸುರಕ್ಷಿತವಾಗಿರಲಿ!
#Awareness#DcpNorthEast#JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp