ದಿನಾಂಕ 10/11/2024 ರಂದು ಕೆ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರು #Namma112 ಗೆ ಕರೆಮಾಡಿ ಬಾಲಕನೋರ್ವ ಅಳುತ್ತ ಓಡಾಡುತ್ತಿರುವುದಾಗಿ ತಿಳಿಸಿದ್ದು, ಮಾಹಿತಿ ಪಡೆದ 🚔 ಹೊಯ್ಸಳ-219 ಗಸ್ತು ವಾಹನದ ಉಸ್ತುವಾರಿ ಅಧಿಕಾರಿಯಾದ ಶ್ರೀನಿವಾಸ,ASI ಹಾಗೂ ಸಿಬ್ಬಂದಿಯವರು ಬಾಲಕನನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿರುತ್ತಾರೆ.
#WeServeWeProtect
On 10/11/2024, a citizen from the KR Puram Police Station limits called #Namma112 to report about a 8yr old boy wandering and crying. Upon receiving the information, the team led by Srinivas, ASI, and the staff of the Hoysala-219 patrol vehicle promptly rescued the boy and reunited him with his parents.
ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಮನೆಗಳ್ಳತನ ಪ್ರಕರಣಗಳಲ್ಲಿ 5 ಜನ ಅಂತರ್ರಾಜ್ಯ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ಒಂದು ಕೋಟಿ ರೂ ಮೌಲ್ಯದ 584 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳು, ₹9,85,000/- ನಗದು ಹಣ, 3 ಲಕ್ಷ ಮೌಲ್ಯದ ಒಂದು ವಾಚ್, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
As part of preventive policing and public safety measures, the team of K.R. Puram Police Station conducted an Area Domination Drive within the station limits.
@BlrCityPolice@ManjuShettar@dcpwhitefield@seemantsingh96 An FIR in this case was registered promptly without any delay, and immediate legal action was initiated. The victim has also given a video statement appreciating the timely assistance, support, and cooperation extended by the police during the course of the investigation.
ಇಂದು ವೈಟ್ಫೀಲ್ಡ್ ವಿಭಾಗದ ವರ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರ್ತೂರ್ ಪೊಲೀಸ್ ಠಾಣೆ ಹಾಗೂ ವೈಟ್ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಸೂಕ್ತ ಸಲಹೆಗಳನ್ನು ನೀಡಿ, ಮುಕ್ತ ಸಂವಾದ ನಡೆಸಲಾಯಿತು. ಸಾರ್ವಜನಿಕರ ಅಹವಾಲುಗಳು ಮತ್ತು ಸಮಸ್ಯೆಗಳನ್ನು ಗಮನಪೂರ್ವಕವಾಗಿ ಆಲಿಸಿ, ಸಂಬಂಧಿತ ವಿಷಯಗ��� ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
#ಜನಸಂಪರ್ಕಸಭೆ #WhitefieldPoliceStation #ವೈಟ್ಫೀಲ್ಡ್ವಿಭಾಗ #ಸಾರ್ವಜನಿಕಸೇವೆ
#ಬೆಂಗಳೂರುನಗರಪೊಲೀಸ್
Today, a Public Interaction Meeting was successfully organized within the jurisdiction of Varthur Police Station under Whitefield Division by Varthur Police Station and Whitefield Traffic Police Station.
During the meeting, suitable guidance was provided to the public regarding traffic management and law & order, followed by an open interaction session. Citizens’ grievances and concerns were carefully heard, and officers were instructed to take immediate and appropriate action on the related issues.
#PublicInteractionMeeting #WhitefieldPoliceStation #WhitefieldDivision #PublicService #BengaluruCityPolice
@BlrCityPolice
@AddlCPEast
@CPBlr
ಒಂದು ಗಮನಾರ್ಹ ಮುನ್ನಡೆಯಲ್ಲಿ, ಆನಂದಪುರ ವ್ಯಾಪ್ತಿಯಲ��ಲಿ ವರದಿಯಾಗಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಒಟ್ಟು ₹40 ಲಕ್ಷ ಮೌಲ್ಯದ 196 ಗ್ರಾಂ ಚಿನ್ನಾಭರಣ, 1 ಕೆಜಿ 756 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ₹22,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರು ಸರಿಯಾದ ಮನೆ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ವಸತಿ ಪ್ರದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ಓಡಾಟ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ವರದಿ ಮಾಡಲು ಸೂಚಿಸಲಾಗಿದೆ.
In a significant breakthrough, K.R. Puram Police arrested three interstate burglars involved in a house theft case reported under Anandapura limits and recovered 196 grams of gold jewellery, 1 kg 756 grams of silver articles, and ₹22,000 cash, collectively valued at ₹40 lakh.
Citizens are advised to ensure proper home security measures and immediately report any suspicious movement in residential areas to the police.
#BengaluruCityPolice #KRPuramPolice #HouseBurglary #CrimePrevention
@CPBlr @seemantsingh96 @DgpKarnataka @KarnatakaCops
ಒಂದು ಸಿಗ್ನಲ್.. ಒಂದು ತಪ್ಪು ನಿರ್ಧಾರ.. ಇಡೀ ಜೀವನವೇ ಬದಲಾಗಬಹುದು!
ಕೆಲವೇ ಸೆಕೆಂಡುಗಳ ಅವಸರಕ್ಕಾಗಿ ನಿಮ್ಮ ಸುರಕ್ಷತೆಯನ್ನು ಪಣಕ್ಕಿಡಬೇಡಿ. ಕೆಂಪು ಸಿಗ್ನಲ್ ಕಂಡಾಗ ನಿಲ್ಲಿ, ನಿಮ್ಮವರಿಗಾಗಿ ಕಾಯುವವರ ಬಗ್ಗೆ ಯೋಚಿಸಿ. ನಿಮ್ಮ ಜೀವದ ಬೆಲೆ ಆ ಸೆಕೆಂಡುಗಳಿಗಿಂತ ದೊಡ್ಡದು.
ಸಿಗ್ನಲ್ ಪಾಲಿಸಿ, ಪ್ರಾಣ ಉಳಿಸಿ.
One signal. One decision. One life.
Don’t trade safety for seconds stop at red and protect what matters most.
#StopAtRed #RoadSafety #BengaluruTrafficPolice
ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 112 ಎಮೆರ್ಜೆನ್ಸಿ ರೆಸ್ಪಾನ್ಸ್ (ERSS) ಬಹುಭಾಷೆಗಳಲ್ಲಿ ಸ್ಪಂದಿಸುವ ತಂತ್ರಜ್ಞಾನವನ್ನು ಬೆಂಗಳೂರು ನಗರ ಪೊಲೀಸರು ಅಳವಡಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಚಾಲನೆ ನೀಡಿದೆ.
ಯಾರಾದರೂ 112 ಗೆ ಕರೆ ಮಾಡಿದಾಗ, ಭಾಷಾ ಸಮಸ್ಯೆ ಇದ್ದಲ್ಲಿ, ಕರೆ ಸ್ವಯಂಚಾಲಿತವಾಗಿ ಕರೆ ಮಾಡುವವರಿಗೆ ಅನುಕೂಲಕರವಾದ ಭಾಷೆಗೆ ಅನುವಾದಗೊಳ್ಳುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬ���ಸಿಕೊಂಡು ಹತ್ತು ಭಾಷೆಗಳನ್ನು ಸಕ್ರಿಯಗೊಳಿಸಲಾಗಿದೆ.
112 ಎಮೆರ್ಜೆನ್ಸಿ ರೆಸ್ಪಾನ್ಸ್ ಆಯಾ ರಾಜ್ಯಗಳ ಭಾಷೆಗಳಿಗೆ ಸೀಮಿತವಾಗಿ ಸೇವೆ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು, ಕನ್ನಡ ಭಾಷೆ ಸೇರಿದಂತೆ ವಿ��ಿಧ ರಾಜ್ಯಗಳ 7 ಭಾಷೆಗಳಿಗೆ ಮತ್ತು ಹೊರದೇಶಗಳ 3 ಭಾಷೆಗಳಿಗೆ ಸ್ಪಂದಿಸಲಿದೆ. 112ಗೆ ಕರೆ ಮಾಡುವ ನಾಗರಿಕರು, ಅವರು ಮಾತನಾಡುವ ಅನುಕೂಲಕರ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಯಾವುದೇ ರೀತಿಯ ತುರ್ತು ಕರೆಗಳಿಗೆ ತರ್ಜುಮೆ ಮಾಡಿ ನೆರವು ನೀಡಲಾಗುತ್ತದೆ.
ದೇಶದ ಯಾವುದೇ ಮಹಾನಗರಗಳಲ್ಲಿಯೂ 112 ಎಮರ್ಜೆನ್ಸಿ ರೆಸ್ಪಾನ್ಸ್ಗೆ ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಪ್ರಥಮ ಬಾರಿಗೆ ಬೆಂಗಳೂರು ನಗರ ಪೊಲೀಸರು ಬಹುಭಾಷೆಗಳಲ್ಲಿ ನೆರವು ನೀಡುವ ವ್ಯವಸ್ಥೆ ಮಾಡಿದ್ದಾ��ೆ.
ಬೆಂಗಾಲಿ, ಗುಜುರಾತಿ, ಓಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಪಂಚದ ಎಲ್ಲ ಕಡೆಯ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಹೊರದೇಶದಿಂದ ಬರುವವರು ಇಂಗ್ಲೀಷ್ ಭಾಷೆ ಹೊರತಾಗಿ ಬೇರೆ ಭಾಷೆಗಳಲ್ಲಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿದೇಶದಿಂದ, ಯಾವ ಭಾಷೆ ಹೆಚ್ಚು ಮಾತಾಡುವ ಜನರು ಬರುತ್ತಾರೆ ಎಂಬ ಬಗ್ಗೆ ಡೇಟ��� ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಸ್ಪ್ಯಾನೀಶ್, ಫ್ರೆಂಚ್, ಅರೇಬಿಕ್ ಭಾಷೆ ಮಾತಾಡುವ ವಿದೇಶಿಗರು ಹೆಚ್ಚಾಗಿ ಬೆಂಗಳೂರಿಗೆ ಬರುತ್ತ��ರೆ ಎಂಬುದು ಕಂಡು ಬಂದಿದೆ.
ವಿದೇಶಿಗರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಬಹುಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 112 ERSS ಬಹುಭಾಷೆಗಳಲ್ಲಿ ಸ್ಪಂದಿಸುವ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ��ಾದ ಅಜಯ್ ಹಿಲೋರಿ ಹಾಗೂ ಎಲ್ಲ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
#karnataka #police #112ERSS @KarnatakaCops @DgpKarnataka @masaleemips @BlrCityPolice @CPBlr @112Karnataka @KarnatakaVarthe
ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿ, ಪೊಲೀಸರು ಯಶಸ್ವಿಯಾಗಿ ಕೆಳಕಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
🔹 47 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ ₹6,00,000/-)
🔹 196 ಗ್ರಾಂ ಚಿನ್ನಾಭರಣ, 1756 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹22,000/- ನಗದು (ಒಟ್ಟು ಅಂದಾಜು ಮೌಲ್ಯ ₹40,00,000/-)
#KRPuramPolice #BengaluruCityPolice #ಕಳ್ಳತನ_ಪ್ರಕರಣ #ಸ್ವತ್ತು_ವಶ #ಪೊಲೀಸ್_ಕಾರ್ಯ #ಸಾರ್ವಜನಿಕ_ಸುರಕ್ಷತೆ
In connection with two theft cases registered at K.R. Puram Police Station, the police have successfully arrested 5 accused persons and recovered the following stolen property:
🔹 47 grams of gold ornaments (approximate value ₹6,00,000/-)
🔹 196 grams of gold ornaments, 1756 grams of silver articles, and cash amounting to ₹22,000/- (total approximate value ₹40,00,000/-)
#KRPuramPolice #BengaluruCityPolice #TheftCase #PropertyRecovery #PoliceWork
@BlrCityPolice@AddlCPEast@CPBlr
ಇಂದು ವೈಟ್ಫೀಲ್ಡ್ ವಿಭಾಗದ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ಆಯೋ��ಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಗಮನಪೂರ್ವಕವಾಗಿ ಆಲಿಸಲಾಯಿತು. ಸಂಬಂಧಿತ ಸಮಸ್ಯೆಗಳ ಕುರಿತು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಾರ್ವಜನಿಕರ ಸಹಕಾರವೇ ಪೊಲೀಸ್ ಇಲಾಖೆಯ ನಿಜವಾದ ಶಕ್ತಿ.
#ಜನಸಂಪರ್ಕಸಭೆ #WhitefieldPoliceStation #ವೈಟ್ಫೀಲ್ಡ್ವಿಭಾಗ #ಸಾರ್ವಜನಿಕಸೇವೆ #ಬೆಂಗಳೂರುನಗರಪೊಲೀಸ್
Today, a public interaction meeting was successfully organized at Whitefield Police Station under the Whitefield Division.
During the meeting, an open dialogue was held with the public, and their grievances were carefully listened to. Officials were instructed to take immediate and appropriate action on the issues raised.
Public cooperation is the true strength of the police department.
#PublicInteraction #WhitefieldPoliceStation #WhitefieldDivision #PublicService #BangaloreCityPolice
@BlrCityPolice
@CPBlr
@AddlCPEast