#ದೇವರಹಿಪ್ಪರಗಿ ಕ್ಷೇತ್ರದ ಶಾಸಕರಾದ ಶ್ರೀ ರಾಜುಗೌಡ ಪಾಟೀಲ್ ಅವರ ತಾ���ಿಯವರಾದ ನೀಲಮ್ಮ ಗೌಡತಿ ಪಾಟೀಲ ಅವರು ನಿಧನರಾದ ಹಿನ್ನೆಲೆಯಲ್ಲಿ ಸ್ವಗ್ರಾಮ ಕುದರಿ ಸಾಲವಾಡಗಿ ಮನೆಗೆ ಭೇಟಿನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದೆ. ಮಾತೃಶ್ರೀ ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದೆ.
ಇನ್ವೆಸ್ಟ್ ಕರ್ನಾಟಕ ನಿಯೋಗದೊಂದಿಗಿನ 10 ದಿನಗಳ ಅಮೆರಿಕ ಪ್ರವಾಸವು ಅತ್ಯಂತ ಫಲಪ್ರದವಾಗಿತ್ತು.
ಸೆಮಿಕಂಡಕ್ಟರ್, ಶಿಕ್ಷಣ ಮತ್ತು ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ವೈದ್ಯಕೀಯ ಮುಂತಾದ ಕ್ಷೇತ್ರಗಳ ಪ್ರಮುಖರು, ಅಮೆರಿಕಾದ ವಾಣಿಜ್ಯೋದ್ಯಮಿಗಳು, ಭಾರತೀಯ ಡಯಾಸ್ಪೋರಾದ ಸದಸ್ಯರೊಂದಿಗೆ ರಾಜ್ಯದ��್ಲಿ ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ ಮತ್ತು ಸಂಭಾವ್ಯ ಸಹಯೋಗಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಕ್ವಿನ್ ಸಿಟಿಯಲ್ಲಿ ಬಂಡವಾಳ ಹೂಡಿಕೆ, ಶೈಕ್ಷಣಿಕ ಸಂಸ್ಥೆಗಳು, ಉದ್ಯಮಗಳ ಸಂಶೋಧನಾ & ನಾವೀನ್ಯತಾ ಕೇಂದ್ರಗಳ ಸ್ಥಾಪನೆಗೆ ಹಾಗೂ ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನೀಡಲಾಯಿತು.
#GIM2025
#KarnatakaDelegationInUSA #ReimaginingGrowth #InvestKarnataka2025 #kwincity #InvestKarnataka
#ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 24ರಲ್ಲಿ ರಾಜಕಾಲುವೆಗೆ ಮಗುವೊಂದು ಬಿದ್ದು ಅಸುನೀಗಿರುವ ದುರ್ಘಟನೆ ದುಃಖ ತರಿಸಿದೆ. ಈದಿನ ಘಟನಾ ಸ್ಥಳಕ್ಕೆ ಭೇಟಿನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ, ವೈಯುಕ್ತಿಕವಾಗಿ ರೂ. 2ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದೇನೆ. ಜತೆಗೆ ಸರ್ಕಾರದಿಂದ ದೊರೆಯಬಹುದಾದ ಇನ್ನಿತರೆ ಪರಿಹಾರಗಳನ್ನು ದೊರಕಿಸಿಕೊಡಲ��ಗುವುದು. ಈ ವೇಳೆ ಜಿಲ್ಲಾ ಆಡಳಿತ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಇಂತಹ ದುರ್ಘಟನೆ ಮರುಕಳಿಸದಂತೆ ಎಚ್ಚರ ವಹಿಸುವಂತೆ ತಿಳಿಸಿದ್ದೇನೆ. ಯಾರು ಎಷ್ಟೇ ಪ್ರಭಾವಶಾಲಿಗಳಿದ್ದರೂ ಲೆಕ್ಕಿಸದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೀರಿನ ಸರಾಗ ಓಟಕ್ಕೆ ಅನುಕೂಲ ಮಾಡಿಕೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವೆ.
ಬಬಲೇಶ್ವರ ಕ್ಷೇತ್ರದ ಬಾಬಾನಗರ ಗ್ರಾಮದಲ್ಲಿ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ರೈತ ಸಹೋದರರಾದ ರಾಜು ವಿಜಾಪುರ ಹಾಗೂ ಶ್ರೀಕಾಂತ್ ವಿಜಾಪುರ ಅವರುಗಳು ಪಂಪ್-ಸೆಟ್ ವಿದ್ಯುತ್ ತಂತಿ ಅಚಾತುರ್ಯದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಿಳಿದು ದುಃಖವಾಯಿತು. ಈದಿನ ಬಾಬಾನಗರ ಗ್ರಾಮದ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಮೃತ ಯುವಕರನ್ನು ಸ್ಮರಿಸಿ ಗೌರವ ಸಲ್ಲಿಸಿದೆ.
ಸಾರ್ವಜನಿಕರ ಉಪಯೋಗಕ್ಕಾಗಿ ಕಾಯ್ದಿರಿಸಿದ ಸಿಎ ನಿವೇಶನಗಳನ್ನು ಸರ್ಕಾರಿ ಶಾಲೆ, ಆಸ್ಪತ್ರೆಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಸೋಮವಾರ ಜರುಗಿದ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳು...
ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ #BLDEA ವತಿಯಿಂದ MBBS ಶಿಕ್ಷಣಕ್ಕೆ ನೆರವು
ನೀಟ್ ಪಾಸಾಗಿ ಸರಕಾರಿ ಕೋಟಾದಡಿ #MBBS ಸೀಟು ಪಡೆದರೂ ಶುಲ್ಕ ಭರಿಸಲಾಗ���ೆ ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಕನಸಿನ ಶಿಕ್ಷಣ ಪಡೆಯಲಾಗದೆ ಕಷ್ಟಪಡುತ್ತಿದ್ದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಿದ ಸಂತಸ ನನ್ನದು.
ತಿಕೋಟಾ ತಾಲೂಕಿನ ಬಾಬಾನಗರದ ವಿಶಾಲ ರಾಯಗೊಂಡ ಕೋರೆಗಾಂವ, ಅರಕೇರಿಯ ಕರಣ ಪಂಡಿತ ಸಿಂಧೆ ಮತ್ತು ಯಶವಂತ ಮಾರುತಿ ಮೋಹಿತೆ, ಬಬಲೇಶ್ವರ ತಾಲೂಕಿನ ಕಾರಜೋಳ ತಾಂಡಾದ ಅಜೀತ ಪರಶುರಾಮ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಲ್ಲಿಕಾರ್ಜುನ ಮಠ ಅವರಿಗೆ ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಬೋಧನೆ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ಹಣದ ಚೆಕ್ ವಿತರಿಸಿ, ಚೆನ್ನಾಗಿ ಓದಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ, ಆದರ್ಶ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸುವಂತೆ ತಿಳಿಸಿದೆ.
ಈ ಸಂದರ್ಭದಲ್ಲಿ #BLDE ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್. ವಿ ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಕಚೇರಿಯ ಅಧೀಕ���ಷಕ ಎಸ್. ಎ. ಬಿರಾದಾರ(ಕನ್ನಾಳ) ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಎರಡು ದಶಕಗಳಿಗೂ ಮೀರಿದ ಸ್ನೇಹಿತರು, ಆತ್ಮೀಯರು ಮತ್ತು ವಿಜಯಪುರ ನಗರದ ಖ್ಯಾತ ಹೋಟೆಲ್ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಅವರು ಈಚೆಗಷ್ಟೇ ನಮ್ಮನ್ನು ಅಗಲಿದ್ದು, ಈದಿನ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದೆ.
ವಿಜಯಪುರದ ಬಿಡಿಎ ಕಚೇರಿಯಲ್ಲಿ ಇಂದು ನಡೆದ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ.
ವಿಜಯಪುರದಲ್ಲಿ ನಿರ್ಮಾಣ ಮಾಡಲಿರುವ ಹೊಸ ಲೇಔಟ್ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆಯೋ ಇಲ್ಲವೋ ಎಂಬುದನ್��ು ಖಚಿತಪಡಿಸಿಕೊಂಡು ನಂತರ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು.
ಸಿಎ ನಿವೇಶನಗಳನ್ನು ಹಂಚಿಕೆ ಮಾಡುವಾಗ ಫಲಾನುಭವಿಗಳ ಪೂರ್ವಾಪರ ವಿಚಾರ ಮಾಡಿ, ಸೂಕ್ತ ಠೇವಣಿ ಸ್ವೀಕರಿಸಿದ ನಂತರ ಮಾತ್ರ ನಿವೇಶನ ಹಸ್ತಾಂತರ ಮಾಡಬೇಕು.
ಲೇಔಟ್ಗಳಲ್ಲಿ ಅಗತ್ಯವಿರುವ ಕಾಮಗಾರಿ ಕೈಗೊಳ್ಳುವ ಮುನ್ನ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಇತರ ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ ನಂತರವೇ ಕೆಲಸ ಆರಂಭಿಸಬೇಕು.
ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ���ತೆ, ಪಾರದರ್ಶಕ ವಿಧಾನದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ನಿರ್ವಹಿಸಬೇಕು.
#BDA #BijapurDevelopmentAuthority
ನಮ್ಮೆಲ್ಲ ಪ್ರೀತಿಯ ಜನತೆಯೊಂದಿಗೆ ಹೃದಯಪೂರ್ವಕವಾಗಿ ವಿಜಯದಶಮಿ ಹಬ್ಬದ ಆಚರಣೆ:
13/10/2024, ರವಿವಾರ ಬೆಳಿಗ್ಗೆ 11 ಗಂಟೆಯಿಂದ, ವಿಜಯಪುರದ ಗೃಹ ಕಚೇರಿ
#ಬನ್ನಿ... ಈ ಪವಿತ್ರ ಕ್ಷಣದಲ್ಲಿ ಪತ್ರೆಯ ಮೂಲಕ ಪರಸ್ಪರ ಸ್ನೇಹ ಮತ್ತು ವಿಶ್ವಾಸಗಳ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳೋಣ, ಬಂಗಾರದಂ���ೆ ಬಾಳೋಣ.
#ವಿಜಯದಶಮಿ #vijayadashami
ವಿಜಯದ ಸಂಕೇತವಾದ ವಿಜಯದಶಮಿ ಹಬ್ಬದ ಶುಭಾಶಯಗಳು. ದುಷ್ಟ ಶಕ್ತಿಗಳ ವಿರುದ್ಧ ದೈವ ಶಕ್ತಿಯ ಜಯವನ���ನು ಪ್ರತಿಪಾದಿಸುವ ದಿನವಿದು. ಅಧರ್ಮದ ವಿರುದ್ಧ ಧರ್ಮವು ವಿಜಯ ಸಾಧಿಸಿದ ದಿನವೆಂಬ ನಂಬಿಕೆಯೂ ಇದೆ. ತಾಯಿ ದುರ್ಗಾಮಾತೆಯ ಆಶೀರ್ವಾದದಿಂದ ನಾಡಿನೆಲ್ಲಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ.
#ವಿಜಯದಶಮಿ #vijayadashami
Unlocking Opportunities: Karnataka Connects with U.S. Business Leaders
Had a wonderful time at the engaging roundtable discussion hosted by @IndiainNewYork with leading U.S. business executives, organized in partnership with @USISPForum. We discussed the investment opportunities and potential in Karnataka and invited American investors to the upcoming Invest Karnataka 2025 Global Investors Meet.
A special thank you to the H.E. Consul General for their support!
@MEAIndia@binaysrikant76@IndianEmbassyUS@IndianDiplomacy@CMofKarnataka
#gim2025 #KarnatakaDelegationInUSA #ReimaginingGrowth #InvestKarnataka2025
ಅವಕಾಶಗಳ ಅನ್ವೇಷಣೆ: US ವಾಣಿಜ್ಯೋದ್ಯಮಿಗಳೊಂದಿಗೆ ಮಹತ್ವದ ಸಭೆ
@USISPForum ಸಹಭಾಗಿತ್ವದಲ್ಲಿ @IndiainNewYork ನಲ್ಲಿ ಆಯೋಜಿಸಿದ್ದ US ವಾಣಿಜ್ಯ ಕಾರ್ಯನಿರ್ವಾಹಕರೊಂದಿಗೆ ನಡೆದ ದುಂಡುಮೇಜು ಚರ್ಚೆಯಲ್ಲಿ ಭಾಗವಹಿಸಿ, ಹಲವು ಮುಖ್ಯ ವಿಷಯಗಳ ಕುರಿತು ಚರ್ಚೆ ನಡೆಸಿದೆವು. ಕರ್ನಾಟಕದಲ್ಲಿ US ಕಂಪೆನಿಗಳ ಹೂಡಿಕೆ ಸಾಧ್ಯತೆಗಳನ್ನು ಸುದೀರ್ಘವಾಗಿ ವಿವರಿಸಿದೆವು. ಮುಂಬರುವ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ #GIM2025 ಕ್ಕೆ ಅಮೆರಿಕದ ಹೂಡಿಕೆದಾರರನ್ನು ಆಹ್ವಾನಿಸಲಾಯಿತು.
ಬೆಂಬಲ ಹಾಗೂ ಸಹಕಾರ ನೀಡಿದ ಮಾನ್ಯ ಕಾನ್ಸಲ್ ಜನರಲ್ ಅವರಿಗೆ ವಿಶೇಷ ಧನ್ಯವಾದಗಳು.
@MEAIndia@binaysrikant76@IndianEmbassyUS@IndianDiplomacy@CMofKarnataka
#gim2025 #KarnatakaDelegationInUSA #ReimaginingGrowth #InvestKarnataka2025
Had a great meeting with Mr. Suresh Mirchandani from #BeaconIndustries in New York, a leading manufacturer of complex rotating aero-engine hardware specializing in heat-resistant superalloys and precision engineering. We discussed potential collaboration, and I also extended an invitation for the upcoming Invest Karnataka 2025.
#gim2025 #KarnatakaDelegationInUSA #ReimaginingGrowth #InvestKarnataka2025
ನ್ಯೂಯಾರ್ಕ್ ನ ಬೀಕನ್ ಇಂಡಸ್ಟ್ರೀಸ್ ನ ಶ್ರೀ ಸುರೇಶ್ ಮಿರ್ಚಂದಾನಿ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದೆ. ಬೀಕನ್ ಇಂಡಸ���ಟ್ರೀಸ್ ಶಾಖ-ನಿರೋಧಕ ಸೂಪರ್ ಅಲಾಯ್ಗಳು, ಪ್ರಿಸಿಷನ್ ಎಂಜಿನಿಯರಿಂಗ್, ಮತ್ತು ಸಂಕೀರ್ಣ ತಿರುಗುವ ಏರೋ-ಎಂಜಿನ್ ಹಾರ್ಡ್ವೇರ್ ನಲ್ಲಿ ಪರಿಣತಿ ಹೊಂದಿರುವ ಪ್ರಮುಖ ತಯಾರಕ ಸಂಸ್ಥೆಯಾಗಿದ್ದು, ಸಂಭಾವ್ಯ ಸಹಯೋಗಗಳ ಕುರಿತು ಚರ್ಚಿಸಿದೆವು. ಮುಂಬರುವ ಇನ್ವೆಸ್ಟ್ ಕರ್ನಾಟಕ #GIM2025 ಕ್ಕೆ ಆಹ್ವಾನ ನೀಡಲಾಯಿತು.
#Beaconindustries #gim2025 #KarnatakaDelegationInUSA #ReimaginingGrowth #InvestKarnataka2025
Had a wonderful meeting with Mr. Blake Opsahl from Beta Technologies and Mr. Pavan Bakshi from Hunch Mobility. We had a detailed discussion on the potential opportunities in urban air mobility. I invited Beta Technologies to explore setting up their #eVTOL manufacturing and services in Karnataka.
#BetaTechnologies #HunchMobility #Gim2025 #KarnatakaDelegationInUSA #ReimaginingGrowth #InvestKarnataka2025
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮುದ್ದೇಬಿಹಾಳದ ಶಾಸಕರು, #KSDL ಅಧ್ಯಕ್ಷರು, ನನ್ನ ಆತ್ಮೀಯರಾದ ಶ್ರೀ @CSNadagoudaINC ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯಷ್ಯ ಹಾಗೂ ಜನಸೇವೆ ಮಾಡಲು ಹೆಚ್ಚಿನ ಶಕ್ತಿ ಕರುಣ��ಸಲಿ ಎಂದು ಪ್ರಾರ್ಥಿಸುತ್ತೇನೆ.
Had a meeting with Mr. Tejpaul Bhatia, Chief Revenue Officer of #AxiomSpace, where we discussed the vast potential for Axiom within Karnataka's growing space ecosystem. I also extended an invitation to the Axiom team to join us at the upcoming Invest Karnataka 2025 event.
#KarnatakaDelegationInUSA #ReimaginingGrowth #InvestKarnataka2025
#AxiomSpace (ಆಕ್ಸಿಯಮ್ ಸ್ಪೇಸ್)ನ CRO ಶ್ರೀ ತೇಜಪಾಲ್ ಭಾಟಿಯಾ ಅವರನ್ನು ಭೇಟಿಮಾಡಿ ಆಕ್ಸಿಯಮ್ ಗಾಗಿ ಕರ್ನಾಟಕದ ಬಾಹ್ಯಾಕಾಶ ಪರಿಸರ ವ್ಯವಸ್ಥೆಯಲ್ಲಿರುವ ಅಪಾರ ಅವಕಾಶಗಳ ಕುರಿತು ಚರ್ಚಿಸಿದೆವು. ಮುಂಬರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಬೃಹತ್ ಸಮಾವೇಶ #GIM2025 ಕ್ಕೆ ಆಹ್ವಾನ ���ೀಡಲಾಯಿತು.
#KarnatakaDelegationInUSA #ReimaginingGrowth #InvestKarnataka2025
“ಎಲ್ಲರೂ ಶ್ರೀಮಂತರಾಗಿರುವುದಿಲ್ಲ, ಎಲ್ಲರೂ ಬಡವರಾಗಿಯೇ ಇರಲಿದ್ದಾರೆಂದೂ ಅಲ್ಲ. ಬಡತನ ಮತ್ತು ಶ್ರೀಮಂತಿಕೆ ನಾವು ತಿಳಿದಂತೆಯೂ ಅಲ್ಲ. ನಮ್ಮಲ್ಲಿ ಇರುವುದರೊಳಗೆ ಕಾಣುವ ಆನಂದವೇ ನಿಜವಾದ ಶ್ರೀಮಂತಿಕೆ!”
– ಪೂಜ���ಯ ಸಿದ್ದೇಶ್ವರ ಸ್ವಾಮಿಗಳು