"ಗ್ಯಾರೆಂಟಿ"ಗಳ ಭ್ರಮೆಯಲ್ಲಿ ತೇಲುತ್ತಿರುವ @INCKarnataka ಸರ್ಕಾರಕ್ಕೆ, ಕರುನಾಡ ಹಳ್ಳಿಗಳ ಗಂಟಲು ಒಣಗುತ್ತಿರುವುದು ಕಾಣುತ್ತಿಲ್ಲವೇ?
ದೆಹಲಿ ನಾಯಕರ ಮುಂದೆ ಆಣತಿಯಂತೆ ತಲೆಬಾಗಿ ನಿಲ್ಲಲು ಸಮಯವಿರುವ @DKShivakumar ಅವರಿಗೆ, ನಮ್ಮ ರಾಜ್ಯದ ಬಾಯಾರಿದ ಗ್ರಾಮಗಳತ್ತ ಮುಖ ಮಾಡಲೂ ಪುರಸೊತ್ತಿಲ್ಲ!
❎ ಮಾರ್ಚ್ ತಿಂಗಳಲ್ಲಿ 230 ಗ್ರಾಮಗಳಲ್ಲಿದ್ದ ಕುಡಿಯುವ ನೀರಿನ ಸಮಸ್ಯೆ, ಇಂದು 500 ಗ್ರಾಮಗಳಿಗೆ ವ್ಯಾಪಿಸಿದೆ.
❎ ಇಡೀ ರಾಜ್ಯದ ದಾಹ ತೀರಿಸಲು ಸರ್ಕಾರ ನಂಬಿರುವುದು ಕೇವಲ 145 ಟ್ಯಾಂಕರ್ಗಳು ಮತ್ತು 618 ಖಾಸಗಿ ಕೊಳವೆಬಾವಿಗಳನ್ನು ಮಾತ್ರ.
❎ ಮೂರು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವ ಬದಲು ದುಪ್ಪಟ್ಟು ಮಾಡಿದ್ದೇ ನಿಮ್ಮ ಆಡಳಿತ'ದ ಸಾಧನೆಯೇ?
ನಮ್ಮ ರೈತರು, ತಾಯಂದಿರು ಮತ್ತು ಮಕ್ಕಳು ಒಂದು ಬಿಂದಿಗೆ ನೀರಿಗಾಗಿ ಕಿಲೋಮೀಟರ್ಗಟ್ಟಲೆ ಅಲೆಯುತ್ತಿದ್ದಾರೆ. ಆದರೆ ನಿಮಗೆ ಮಾತ್ರ ಸಚಿವ ಸ್ಥಾನದ ಗುದ್ದಾಟ, ಆಂತರಿಕ ಬಣ ಬಡಿದಾಟ ಹಾಗೂ 'ದೆಹಲಿ ದರ್ಬಾರ್' ಮುಖ್ಯವಾಗಿದೆ. ಪತ್ರಿಕಾ ಜಾಹೀರಾತುಗಳಿಗೆ ಕೋಟಿ ಕೋಟಿ ಸುರಿಯುವ ಬದಲು, ಆ ಹಣವನ್ನು ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿ.
ಜನರ ಮೂಲಭೂತ ದಾಹವನ್ನೇ ತೀರಿಸಲಾಗದ ಈ 'ಕುರ್ಚಿ-ಕಮಿಷನ್' ಸರ್ಕಾರಕ್ಕೆ, ಮುಂಬರುವ ದಿನಗಳಲ್ಲಿ ಇದೇ ನಾಡಿನ ರೈತರು ಮತ್ತು ಗ್ರಾಮೀಣ ಜನತೆ ತಕ್ಕ ಪಾಠ ಕಲಿಸಲಿದ್ದಾರೆ!
#CongressFailsKarnataka
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜನತಾದಳ (ಜಾತ್ಯತೀತ) ಪಕ್ಷದ ಹಿರಿಯ ಮುಖಂಡರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಆ ತಾಯಿ ಚಾಮುಂಡೇಶ್ವರಿ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಯಶಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
📍ಬಿಡದಿ
ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಲ್ಲಿ (SIR) ಪ್ರಕ್ರಿಯೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡು ಬಿಎಲ್ಓಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲಾಯಿತು.
ಈ ಪರಿಷ್ಕರಣೆ ಪಾರದರ್ಶಕವಾಗಿರಬೇಕು ಹಾಗೂ ನೈಜ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿ ಉಳಿಯಲೇಬೇಕು ಎಂಬ ಆಶಯದೊಂದಿಗೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ನಾಡಿನ ಪ್ರತಿಯೊಬ್ಬರು SIR ಪ್ರಕ್ರಿಯೆಯಲ್ಲಿ ನಿಯಮಾನುಸಾರವಾಗಿ ತಪ್ಪದೇ ಪಾಲ್ಗೊಳ್ಳಬೇಕು. ಆ ಮೂಲಕ ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಕೋರುತ್ತೇನೆ.
#SIRKarnataka #ElectionCommission
#SIR
'ಗೃಹಲಕ್ಷ್ಮಿ' ಹೆಸರಲ್ಲಿ @INCKarnataka ಸರ್ಕಾರದ ಮತ್ತೊಂದು ಮಹಾ ಲೂಟಿ ಬಯಲು!
ಖಾತೆಯೇ ಇಲ್ಲದವರಿಗೂ ಹಣ ಪಾವತಿ ಮಾಡುವ ಜಗತ್ತಿನ ಎಂಟನೇ ಅದ್ಭುತವನ್ನು ಸೃಷ್ಟಿಸಿದೆ ಈ ಹಗರಣಗಳ ಗ್ಯಾರಂಟಿ ಸರ್ಕಾರ! ಮಹಾಲೇಖಪಾಲರ (CAG) ತನಿಖೆಯಲ್ಲಿ ಹೊರಬಿದ್ದಿರುವ ಸತ್ಯಗಳು ಶಾಕಿಂಗ್ ಆಗಿವೆ.
❎ 23,262 ಮಹಿಳೆಯರಿಗೆ ಬ್ಯಾಂಕ್ ಖಾತೆಯೇ ಇಲ್ಲ! ಆದರೂ ಅವರ ಹೆಸರಲ್ಲಿ ₹46.52 ಕೋಟಿ ಪಾವತಿಯಾಗಿದೆ! ಈ ಹಣ ಯಾರ ಜೇಬಿಗೆ ಹೋಯ್ತು?
❎ 19,020, ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ! ಇದು ಅಸಾಧ್ಯದ ಸಾಹಸ, ಲೂಟಿಗಾಗಿಯೇ ಮಾಡಿದ ವ್ಯವಸ್ಥಿತ ಪ್ಲಾನ್!
❎ 8,995 ಖಾತೆಗಳಿಗೆ ₹1.80 ಕೋಟಿ ಹೆಚ್ಚುವರಿ ಹಣ ಜಮೆ.
❎ ಫೆಬ್ರವರಿ, ಮಾರ್ಚ್ 2025ರ ಎರಡು ತಿಂಗಳ ಫಲಾನುಭವಿಗಳ ಗೃಹಲಕ್ಷ್ಮಿ ₹5,000 ಕೋಟಿ ಎಲ್ಲಿ ?
ಕೇಳಿದ ದಾಖಲೆಗಳನ್ನೇ ನೀಡದೆ ಮುಚ್ಚಿಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿಂದಿರುವ ಆ ಕಬಳಿಸುತ್ತಿರುವ 'ಕೈ' ಯಾರದ್ದು? ಗ್ಯಾರಂಟಿ ಯೋಜನೆಯ ಹೆಸರಲ್ಲಿ ಜನರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಲೂಟಿಕೋರರ ಅಸಲಿ ಮುಖವಾಡಗಳು ಈಗ ಕಳಚಿದೆ!
@DKShivakumar@CMofKarnataka
#GruhalakshmiScam
#CongressLootsKarnataka
Heartiest birthday wishes to Hon’ble President Smt. Droupadi Murmu avaru. Her inspiring journey & unwavering commitment to the Constitution inspires millions nationwide. I wish her good health, happiness, & many more years of dedicated service to our country.
@rashtrapatibhvn
ಅಂದು ರೈತರು ಈ ಯೋಜನೆ ನಮಗೆ ಬೇಡ ಎಂದು ವಿರೋಧಿಸಿದಾಗ, @hd_kumaraswamy ಅವರು ರೈತರ ಮಾತಿಗೆ ಮನ್ನಣೆ ನೀಡಿ ಟೌನ್ ಶಿಪ್ ಯೋಜನೆಯನ್ನು ಕೈಬಿಟ್ಟಿದ್ದರು.
ಅದೇ ಮಾದರಿಯಲ್ಲಿ
@DKShivakumar ಅವರು ಕೂಡ ಬಡ ಮತ್ತು ದಲಿತ ರೈತರ ಭೂಮಿಯನ್ನು ಕಿತ್ತುಕೊಳ್ಳದೆ, ರೈತರ ಮನವಿಗೆ ಸ್ಪಂದಿಸಿ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
#ನಮ್ಮಭೂಮಿ_ನಮ್ಮಹಕ್ಕು #ರೈತವಿರೋಧಿಕಾಂಗ್ರೆಸ್
#ಬಿಡದಿಟೌನ್ಶಿಪ್ #ಬಿಡದಿಬದುಕಲಿಬಿಡಿ
#SaveFarmersLand
#BidadiTownshipScam
ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್. ಡಿ . ಕುಮಾರಸ್ವಾಮಿ ಅವರನ್ನು ಬೈದವರಿಗೆ ಮಂತ್ರಿಸ್ಥಾನ!
ಮಾನ್ಯ ಮುಖ್ಯಮಂತ್ರಿಗಳು ನಮ್ಮನ್ನು ಬೈಯಲು ಗುತ್ತಿಗೆ ನೀಡಿದ್ದಾರೆ. ಯಾರು ಹೆಚ್ಚು ಬೈಯುತ್ತಾರೆ ಅಂತವರಿಗೆ ಮಂತ್ರಿಸ್ಥಾನ ಎಂದು ಹೇಳಿರಬೇಕು. ಹೀಗಾಗಿ ಮಾತಾಡುತ್ತಿದ್ದಾರೆ. ನಮ್ಮ ವಿರುದ್ಧ ಮಾತಾಡನಾಡುವ ಪುಂಡಪೋಕರಿಗಳಿಗೆ ಉತ್ತರ ಕೊಡಲು ಬೇರೆಯವರಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಆದ ಮೇಲೆ ಯಾರು ಇರುತ್ತಾರೆ, ಯಾರು ಮನೆಗೆ ಹೋಗುತ್ತಾರೆ ಎಂಬುದು ಸಾರ್ವಜನಿಕ ವಲಯಕ್ಕೆ ತಿಳಿಯಲಿದೆ.
ಸುಮಾರು 300 ಕಸ ವಿಲೇವಾರಿ ವಾಹನಗಳು ಪ್ರತಿದಿನ ಕರ್ತವ್ಯಕ್ಕೆ ಗೈರಾಗುತ್ತಿವೆ ಎಂಬ ಲೋಕಾಯುಕ್ತರ ವರದಿ ಬೆಂಗಳೂರಿನ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ನಗರದ ಜನರು ತೆರಿಗೆ ಕಟ್ಟುತ್ತಾರೆ, ಆದರೆ ಪ್ರತಿದಿನ ಕಸದ ರಾಶಿಗಳ ನಡುವೆ ಬದುಕುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಾಹನಗಳು ಎಲ್ಲಿಗೆ ಹೋದವು? ಯಾರು ಹೊಣೆ? ಏಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ?
ಬೆಂಗಳೂರು ಭಾರತದ ತಂತ್ರಜ್ಞಾನದ ರಾಜಧಾನಿ. ಆದರೆ ಇಂದು ಮೂಲಭೂತ ಸ್ವಚ್ಛತೆಯನ್ನೇ ಕಾಪಾಡಿಕೊಳ್ಳಲು ಹೋರಾಡುವ ಸ್ಥಿತಿಗೆ ತಲುಪಿದೆ.
ಸರ್ಕಾರ ನೆಪ ಹೇಳುವುದನ್ನು ನಿಲ್ಲಿಸಿ ಉತ್ತರ ನೀಡಬೇಕು. ನಗರದ ಈ ದುಸ್ಥಿತಿಗೆ ಹೊಣೆಗಾರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಬೆಂಗಳೂರಿಗೆ ಇಂದು ಉತ್ತಮ ಆಡಳಿತದ ಅವಶ್ಯಕತೆಯಿದೆ.
ಭೂತದ ಬಾಯಲ್ಲಿ ಭಗವದ್ಗೀತೆ!
ಮಿಸ್ಟರ್ ವಸೂಲಿವಾಲಾ @rssurjewala, ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ:
👉🏿 1997ರಲ್ಲಿ ಕುತಂತ್ರದಿಂದ ಶ್ರೀ @H_D_Devegowda ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು! @INCIndia ಪಕ್ಷ ಮಾಡಿದ ಈ ಮಹಾದ್ರೋಹವನ್ನು ಕಳೆದ 30 ವರ್ಷದಿಂದ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಿ?
👉🏿 2019ರಲ್ಲಿ ಮೈತ್ರಿ ನಾಟಕವಾಡಿ, ಶ್ರೀ @hd_kumaraswamy ಅವರ ಬೆನ್ನಿಗೆ ಚೂರಿ ಹಾಕಿ ಸರಕಾರ ಕೆಡವಿದ್ದೂ ನಿಮ್ಮದೇ @INCKarnataka.
ಕಾಂಗ್ರೆಸ್ನದ್ದು ಒಳಗೆ ಜಾತ್ಯತೀತತೆಯ ಮುಖವಾಡ, ಹೊರಗೆ ಜಾತಿ ವಿದ್ವೇಷದ ರಾಜಕಾರಣ!
ಮಾಜಿ ಪ್ರಧಾನಿಗಳಾದ ಶ್ರೀ ಪಿ.ವಿ.ನರಸಿಂಹರಾವ್ ಹಾಗೂ ಡಾ. ಮನಮೋಹನ್ ಸಿಂಗ್ ಅವರಂತಹ ನಾಯಕರನ್ನು ನಿಮ್ಮ ʼನಕಲಿ ಗಾಂಧಿʼ ಕುಟುಂಬ ಹೇಗೆ ಅಪಮಾನಿಸಿ, ಹೇಗೆಲ್ಲಾ ನಡೆಸಿಕೊಂಡಿತ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಿ ಮಿಸ್ಟರ್ ವಸೂಲಿವಾಲ!
ತಮಿಳುನಾಡಿನಲ್ಲಿ #DMK ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು, ಫಲಿತಾಂಶದ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ನೀತಿಗೆಟ್ಟ ಕಾಂಗ್ರೆಸ್ಸಿಗರೇ, @JanataDal_S ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?
ಶ್ರೀ ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಕನ್ನಡ ನೆಲೆ ಕಂಡ ಏಕೈಕ ಪ್ರಧಾನಿ. ಇಮ್ಮಡಿ ಪುಲಕೇಶಿ ನಂತರ ಭರತಭೂಮಿಯನ್ನು ಆಳಿದ ಶ್ರೇಷ್ಠ ನಾಯಕರು. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ನಿಮ್ಮ ನೀಚತನದ ಪರಾಕಾಷ್ಠೆ.
ಕೇವಲ ವಸೂಲಿ ಮಾಡಿಕೊಂಡು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸುರ್ಜಿವಾಲ ಉರುಫ್ ವಸೂಲಿವಾಲ ದೇವೇಗೌಡರ ವಿಷಯ ಬಿಟ್ಟು ನಿಮ್ಮ ಪಾರ್ಟಿ, ಸರಕಾರದಲ್ಲಿ ನಡೆಯುತ್ತಿರುವ ಒಳಜಗಳ, ಒಳಸಂಚು ಹತ್ತಿಕ್ಕುವ ಕಡೆ ಗಮನ ಹರಿಸಿ.
#ವಸೂಲಿವಾಲ
ಪರಿಸರಸ್ನೇಹಿ ಇ-ವಾಹನಗಳ (EV) ಖರೀದಿಗೆ ಪ್ರೋತ್ಸಾಹ ನೀಡುವ ಬದಲು, ದಿವಾಳಿ @INCKarnataka ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ.
ಗ್ಯಾರಂಟಿಗಾಗಿ ಬೊಕ್ಕಸ ತುಂಬಿಸಲು ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಬಂಡವಾಳ ಮಾಡಿಕೊಂಡಿದೆ. ಪರಿಸರ ಉಳಿಸಿ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ ಸರ್ಕಾರ, ಈಗ 10 ಲಕ್ಷಕ್ಕೂ ಮೇಲ್ಪಟ್ಟ #EV ವಾಹನಗಳಿಗೆ ಆಜೀವ ತೆರಿಗೆ ವಿನಾಯಿತಿ ರದ್ದು ಪಡಿಸಿ, 5%, 8%, 10%, ತೆರಿಗೆ ವಿಧಿಸಿ ಲೂಟಿಗೆ ಇಳಿದಿದೆ.
ಕಾಂಗ್ರೆಸ್ ದುರಾಡಳಿತದಲ್ಲಿ ಈಗಾಗಲೇ ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿರುವ ನಾಡಿನ ಜನರಿಗೆ ಇದೀಗ #EV ಕೂಡ ದುಬಾರಿಯಾಗಿದೆ. ಸಂಪನ್ಮೂಲ ಕ್ರೋಡೀಕರಣದ ನೆಪದಲ್ಲಿ ವಾರ್ಷಿಕ 259 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸುತ್ತಿದೆ.
ಕೇಂದ್ರ ಸರ್ಕಾರ ಸಬ್ಸಿಡಿಗಳ ಮೂಲಕ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಆದರೆ, EV ವಾಹನಗಳ ಮೇಲಿನ ಆಜೀವ ತೆರಿಗೆ ವಿನಾಯಿತಿಯನ್ನು ಹಿಂಪಡೆದಿರುವುದು ಜನವಿರೋಧಿ ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನವನ್ನು ಜಗಜ್ಜಾಹೀರುಗೊಳಿಸಿದೆ.
#CongressLootsKarnataka
📍Issyk-Kul, Kyrgyz Republic
Participated in the 4th Meeting of Ministers of Industry of the SCO Member States in Issyk-Kul, Kyrgyz Republic. The meeting culminated in the signing of a Joint Communique and Protocol aimed at strengthening industrial cooperation and promoting sustainable economic growth across the SCO region.
Guided by the vision of Hon'ble Prime Minister Shri @narendramodi avaru for deeper regional engagement and shared prosperity, I also held productive bilateral meetings with H.E. Seyyed Mohammed Atabek of Iran, H.E. Sherali Kabir of Tajikistan and H.E. Laziz Kudratov of Uzbekistan. Our discussions focused on expanding cooperation in industry, investment, technology and trade.
India remains committed to building stronger partnerships and advancing inclusive industrial development within the SCO framework.
@MEAIndia@IndiaInKyrgyz@MHI_GoI@SteelMinIndia
#SCO #SCOSummit #IndiaAtSCO #SCOIndustryMinisters #ViksitBharat #MakeInIndia #AtmanirbharBharat #IndustrialCooperation
ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ
1.ಶಿಕ್ಷಣವೇ ಆಧುನಿಕ ಶಕ್ತಿ
2.ಆರೋಗ್ಯವೇ ಸಂಪತ್ತು
3.ರೈತ ಚೈತನ್ಯ
4.ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ
5.ವಸತಿಯ ಆಸರೆ
ಪಂಚರತ್ನ ಯೋಜನೆಗಳನ್ನು ಬೆಂಬಲಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡಿ.
8884984666
#ಪಂಚರತ್ನ
ಕೊರಟಗೆರೆ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಚುನಾವಣೆಯಲ್ಲಿ
ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕೊರಟಗೆರೆ ಪತ್ರಕರ್ತರಿಗೆ ಇಂದು ಕೊರಟಗೆರೆ ಮನೆ ಮಗ, ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಸನ್ಮಾನಿಸಿ, ಸಾರ್ವಜನಿಕರೊಡನೆ ಒಳ್ಳೆಯ ಒಡನಾಟವಿಟ್ಟುಕ್ಕೊಂಡು ನಿರ್ಭೀತಿಯಿಂದ ಕೆಲಸ ಮಾಡಿ ಎಂದು ಶುಭಕೋರಿದರು..