ವೈಕುಂಟ ಏಕಾದಶಿಯ ಪುಣ್ಯದಿನವಾದ ಇಂದು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಹೊಳವನಹಳ್ಳಿ ಹೋಬಳಿಯ, ಅಕ್ಕಿರಾಂಪುರ ಗ್ರಾಮದ ಶ್ರೀವೆಂಕಟರಮಣ ಸ್ವಾಮಿಯ ದೇವಾಲಯಕ್ಕೆ ಮತ್ತು ಪುರವರ ಹೋಬಳಿಯ, ಬ್ಯಾಲ್ಯ ಗ್ರಾಮದ ಶ್ರೀವೆಂಕಟರಮಣ ಸ್ವಾಮಿಯ ದೇವಾಲಯಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು
#ekadashi
ಕನ್ನಡನಾಡು ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಅನನ್ಯ ಸಂದೇಶ ನೀಡಿದ ಜಗದ ಕವಿ, ಯುಗದ ಕವಿ, ರಾಷ್ಟ್ರಕವಿ ಶ್ರೀ ಕುವೆಂಪು ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು.
#ಕುವೆಂಪು#ರಾಷ್ಟ್ರಕವಿ
ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಶಬರಿಮಲೆಗೆ ತೆರಳಿದ ಕೊರಟಗೆರೆ ಕ್ಷೇತ್ರದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕೊರಟಗೆರೆ ಕ್ಷೇತ್ರದ ಮನೆಮಗ ಪಿ.ಆರ್.ಸುಧಾಕರ್ ಲಾಲ್ ರವರು ಆಯ್ಕೆಯಾಗಲೆಂದು ಹರಕೆ ಮಾಡಿದರು..
#SUDHAKARLAL#HDKumaraswamy#koratagere#shabarimala
ಹಾಲು ಕರೆಯಲು ಹೋದ ಬಾಲಕರ ಮೇಲೆ ಚಿರತೆ ದಾಳಿ
ಕೊರಟಗೆರೆ ಕ್ಷೇತ್ರದ, ಇರಕಸಂದ್ರ ಕಾಲೋನಿಯ ಧನುಷ್, ಚೇತನ್ ಚಿರತೆ ದಾಳಿಗೊಳಗಾದ ಬಾಲಕರು, ಗಾಯಗೊಂಡ ಬಾಲಕರನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ವಿಷಯ ತಿಳಿದ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ ಲಾಲ್ ರವರು ಆಸ್ಪತ್ರೆಗೆ ಭೇಟಿನೀಡಿ ಬಾಲಕರ ಆರೋಗ್ಯ ವಿಚಾರಿಸಿದರು..
ಕನ್ನಡ ಯುವಕರ ಬಳಗ, ರೆಡ್ಡಿಹಳ್ಳಿ ರವರು ಆಯೋಜಿಸಿದ್ದ ಎರಡನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಪಿ.ಆರ್.ಸುಧಾಕರ್ ಲಾಲ್ ರವರು ಪಾಲ್ಗೊಂಡರು..
#ಕನ್ನಡರಾಜ್ಯೋತ್ಸವ
ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿ ದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು.
ಹಾಗೆಯೇ; ನಾಡಿನ ಸಮಸ್ತ ಮಕ್ಕಳಿಗೂ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರೀತಿಯ ಮಕ್ಕಳಿಗೂ ಮಕ್ಕಳ ದಿನಾಚರಣೆʼಯ ಅಕ್ಕರೆಯ ಶುಭಾಶಯಗಳು.
#ಮಕ್ಕಳ_ದಿನಾಚರಣೆ#ಪಂಡಿತ್_ಜವಾಹರಲಾಲ್_ನೆಹರು
ದಾಸ ಸಾಹಿತ್ಯದ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿರುವ ಕನಕದಾಸರು ವಿಶ್ವಮಾನವರಾಗಿದ್ದಾರೆ. ಅವರ ಕೀರ್ತನೆಗಳು ಮನುಜ ಕುಲ ಸನ್ಮಾರ್ಗದತ್ತ ಕೊಂಡೊಯ್ಯುವಂತದ್ದಾಗಿವೆ.
ಇಂದು ಅವರನ್ನು ಸ್ಮರಿಸುತ್ತಾ ನಾಡಿನ ಸಮಸ್ತ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳು..
#kanakadasajayanthi#Karnataka
ಕೋಡಗದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸುಣ್ಣವಾಡಿ ಗ್ರಾಮದಲ್ಲಿ ಶ್ರೀಬಸವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಪೂಜಾ ಕಾರ್ಯಕ್ರಮದಲ್ಲಿ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಭಾಗವಹಿಸಿದರು, ಈ ಪೂಜಾ ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಗಿರೇಗೌಡನಹಳ್ಳಿ ಕಾಂತರಾಜು ರವರು ಉಪಸ್ಥಿತರಿದ್ದರು. #koratagere#jds
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ ಯುವಕರು ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಬೆಟ್ಟದ ಮೇಲೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಕನ್ನಡ ಬಾವುಟ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
#ಕನ್ನಡರಾಜ್ಯೋತ್ಸವ#ಜನತಾದಳ
ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಯ ಎಲೆ ರಾಂಪುರ ಗ್ರಾಮದಲ್ಲಿ ವೀರ ಮದಕರಿ ಸೇನೆ ವತಿಯಿಂದ 4ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಭಾಗವಹಿಸಿದರು.
#koratagere#SUDHAKARLAL#MadakariNayaka#kolala
ಕೊರಟಗೆರೆ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಗೆ ಒಳಪಡುವ ಕೆಸ್ತೂರು ಗ್ರಾಮ ಪಂಚಾಯಿತಿಯ ಕೆಸ್ತೂರು, ಹಾಗು ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಕೆಸ್ತೂರು ಕೆರೆಗೆ ಅದ್ದೂರಿಯಾಗಿ ಬಾಗಿನ ಅರ್ಪಿಸಿದರು.
@SudhakarlalPR#koratagere#JDS#tumkuru
ಬ್ರಹ್ಮಸಂದ್ರ ಹಾಗೂ ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಅಂದಿನ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಒತ್ತಾಯ ಮಾಡಿರುವುದು ಮತ್ತು ಅದರ ಬಗ್ಗೆ ಸಚಿವರು ನೀಡಿದ ಉತ್ತರ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
@SudhakarlalPR@SudhakarlalMla#JDS#koratagere
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಪಿ ಆರ್ ಸುಧಾಕರ್ ಲಾಲ್ ರವರು ಕೋರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮಸಂದ್ರ ಕೆರೆಯು 21 ವರ್ಷಗಳ ನಂತರ ಕೋಡಿಯಾದ ಹಿನ್ನೆಲೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು..
#SUDHAKARLAL#koratagere#HDKumaraswamy#kora#JDS