ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ.ಕೆ ಹರಿಪ್ರಸಾದ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ತಮ್ಮ ಸೈದ್ಧಾಂತಿಕ ಬದ್ಧತೆ ಮತ್ತು ವಿಚಾರ ಧಾರೆಗಳು ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿ ಎಂದು ಈ ವೇಳೆ ಮನದುಂಬಿ ಹಾರೈಸುತ್ತೇನೆ.
ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಡಿನ ಹೆಮ್ಮೆಯ ಜನನಾಯಕರಿಗೆ ಹೃತ್ಪೂರ್ವಕ ಶುಭಾಶಯಗಳು. ಜನಸಾಮಾನ್ಯರ ಧ್ವನಿಯಾಗಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಸೇವೆ ನಿರಂತರವಾಗಿರಲಿ ಎಂದು ಹಾರೈಸುತ್ತೇವೆ. #newcabinetministers#karnatakagovernment#congratulation
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಆತ್ಮೀಯರು ಆದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Wishing Shri Randeep Singh Surjewala AICC General Secretary and State Congress in-charge A very Happy birthday.
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ @DKShivakumar ಅವರಿಗೆ ಹಾರ್ದಿಕ ಅಭಿನಂದನೆಗಳು.
ಜನಪರ ಕಾಳಜಿಯ ಮೂಲಕ ನಾಡಿನ ಅಭಿವೃದ್ಧಿಗೆ ಸದಾ ಶ್ರಮಿಸುವ ತಮಗೆ ಪ್ರತಿ ಹಂತದಲ್ಲೂ ಯಶಸ್ಸು ಸಿಗಲಿ. ನಿಮ್ಮ ನಾಯಕತ್ವದಲ್ಲಿ ರಾಜ್ಯವು ಪ್ರಗತಿಯ ಹೊಸ ಪಥದಲ್ಲಿ ಮುನ್ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.
'ಪ್ರಗತಿಯತ್ತ ಕರ್ನಾಟಕ'
ನಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆ - ಸೇವೆಯ ಸಮರ್ಪಣೆ
ಬೃಹತ್ ಸಮಾವೇಶ
ದಿನಾಂಕ : 19-05-2026 ಮಂಗಳವಾರ
ಸಮಯ : ಬೆಳಗ್ಗೆ 11:00 ಗಂಟೆ
ಸ್ಥಳ : ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನ- ತುಮಕೂರು
ನೀವು ಬನ್ನಿ; ನಿಮ್ಮೊಂದಿಗೆ ಇತರರನ್ನು ಕರೆತನ್ನಿ
#3YearsOfNavaKarnataka@inckarnataka
ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ದಿಗ್ಗಜ ಶ್ರೀ ಗಿರೀಶ್ ಕಾರ್ನಾಡ್ ಅವರ ಜನ್ಮದಿನದಂದು ಗೌರವದ ನಮನಗಳು.
ನಾಡು-ನುಡಿ ಮತ್ತು ರಂಗಲೋಕಕ್ಕೆ ನೀಡಿದ ಅವರ ಅಮೂಲ್ಯ ಕೊಡುಗೆಗಳು, ವಿಚಾರಗಳನ್ನು ಸ್ಮರಿಸೋಣ.
#GirishKarnad
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ರಾಜ್ಯದ ಉಪಮುಖ್ಯಮಂತ್ರಿಗಳು ಆತ್ಮೀಯರು ಆದ @DKShivakumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಸಂಘಟನೆ ಶಕ್ತಿ, ಜನಸೇವೆ ಮತ್ತು ಅಭಿವೃದ್ಧಿಯತ್ತ ಇರುವ ನಿಮ್ಮ ಬದ್ಧತೆ ಸದಾ ಎಲ್ಲರಿಗೂ ಪ್ರೇರಣೆಯಾಗಲಿ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ @eshwar_khandre ಅವರಿಗೆ ಹಾರ್ದಿಕ ಅಭಿನಂದನೆಗಳು.
ಸಮಾಜದ ಬಾಂಧವರನ್ನು ಒಗ್ಗೂಡಿಸುವ ಮತ್ತು ಬಸವಾದಿ ಶರಣರ ತತ್ವಗಳನ್ನು ಸಾರುವ ಮಹಾಸಭೆಯ ಜವಾಬ್ದಾರಿಯ ಹೊಣೆಯನ್ನು ವಹಿಸಿಕೊಂಡಿರುವುದು ಸಂತಸದ ವಿಚಾರ
ಆರ್ಥಿಕ ನೀತಿಗಳ ಮೂಲಕ ದೇಶದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡಿ, ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಮಾಜಿ ಪ್ರಧಾನಿ #ಡಾ_ಮನಮೋಹನ್_ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು.
ನರೇಗ, ಕಡ್ಡಾಯ ಶಿಕ್ಷಣ, ಆಹಾರ ಭದ್ರತಾ ಕಾಯ್ದೆಗಳ ಮೂಲಕ ಕೋಟ್ಯಾಂತರ ಜನರ ಬದುಕು ಸುಧಾರಿಸಿದರು.
ಸ್ವಾತಂತ್ರ್ಯ ಹೋರಾಟಗಾರ, ಮೊದಲ ಪ್ರಧಾನಿಗಳಾಗಿ ಅಧಿಕಾರಕ್ಕೇರಿ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ನೇತಾರ, ಜನಪರ ಯೋಜನೆಗಳನ್ನು ಜಾರಿ ಮಾಡಿದ ಮುತ್ಸದ್ಧಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ನಮನಗಳು.
" ಮಕ್ಕಳು ದೇವರು..ದೇವರು ಒಂದು ಮಗು "
"ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು"
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಸಂಸ್ಕಾರವನ್ನು ಕಲಿಸುವುದು ಪೋಷಕರ ಕರ್ತವ್ಯ
ನಾಡಿನ ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಸೋರುತಿಹುದು ಮನೆಯ ಮಾಳಿಗಿ | ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗಿ ||
ಎನ್ನುವ ತಮ್ಮ ಅನೇಕ ಶರಣ ಸಾಹಿತ್ಯದ ಮೂಲಕ ಸಮಾಜದ ಅಜ್ಞಾನವನ್ನು ಎತ್ತಿ ಹಿಡಿದು ಸಮನ್ವಯತೆಯ ಸಂದೇಶ ಸಾರಿದ ಸಂತ ಶಿಶುನಾಳ ಷರೀಫರ ಪುಣ್ಯ ಸ್ಮರಣೆಯಂದು ನನ್ನ ಭಕ್ತಿಯ ನಮನಗಳು.. #ಸಂತಶಿಶುನಾಳಷರೀಫ