ಮಹಾದಾಯಿ - ಮೇಕೆದಾಟು ಯೋಜನೆಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಅನುಮತಿ ನೀಡದೇ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ, ಅಗತ್ಯ ಹಣಕಾಸಿನ ನೆರವು ನೀಡದೇ ದ್ರೋಹ ಬಗೆದಿದೆ.
ಕರ್ನಾಟಕದ ಜನರ ಹಿತಾಸಕ್ತಿಗಿಂತಲೂ ಕೇಂದ್ರ ಬಿಜೆಪಿ ಸರ್ಕಾರಕ್ಕೆ ದ್ವೇಷ ರಾಜಕಾರಣವೇ ಮುಖ್ಯವಾಯಿತು.
#KarnatakaVirodhiBJP
ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿದರೆ ಕರ್ನಾಟಕದಲ್ಲಿ ಡಬಲ್ ಇಂಜಿನ್ ನ ಹಾಗೆ ಕೆಲಸ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು.
ಇಂಜಿನ್ ಸ್ಟಾರ್ಟ್ ಆಗಲೇ ಇಲ್ಲ, ಬದಲಿಗೆ ರಾಜ್ಯದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿದರು. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೋಮು-ಗಲಭೆಗಳನ್ನು ಸೃಷ್ಟಿಸಿದರು.
#KarnatakaVirodhiBJP
ಅನ್ನಭಾಗ್ಯ ಕಾರ್ಯಕ್ರಮದಡಿ ಉಚಿತವಾಗಿ ಅಕ್ಕಿ ವಿತರಿಸಿ ರಾಜ್ಯವನ್ನು ಹಸಿವು ಮುಕ್ತಗೊಳಿಸುವುದು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ.
"ಈ ಯೋಜನೆಗಾಗಿ ಅಕ್ಕಿ ಕೊಡಿ, ಪ್ರತಿ ಕೆಜಿಗೆ ₹34 ಹಣ ಕೊಡುತ್ತೇವೆ" ಎಂದು ಕೋರಿಕೊಂಡರೂ ಅಕ್ಕಿ ಕೊಡದೆ, 'ಭಾರತ್ ಅಕ್ಕಿ' ಹೆಸರಲ್ಲಿ ₹29ಗೆ ಮಾರಲು ಹೊರಟಿದ್ದಾರೆ.
#KarnatakaVirodhiBJP
* ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ನೀಡದಿರುವುದು ಸೇರಿದಂತೆ ಹಲವು ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದ್ದು ಏಕೆ ಎಂದು ಉತ್ತರ ಕೊಡಿ
*#KarnatakaVirodhiBJP*
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ಜನರು ಸಂಕಷ್ಟದಲ್ಲಿದ್ದಾಗ ಅವರ ನೋವಿಗೆ ಸ್ಪಂದಿಸಿ ಪರಿಹಾರ ಒದಗಿಸಲು ರಾಜ್ಯಕ್ಕೆ ಬರದ ಅಮಿತ್ ಶಾ ಅವರೇ ಇದೀಗ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದಿರಿ, ಯಾವ ಮುಖ ಹೊತ್ತು ಮತ ಕೇಳುತ್ತಿರಿ ಉತ್ತರ ಕೊಟ್ಟು ಹೋಗಿ..
*#KarnatakaVirodhiBJP*
@DgpKarnataka
ಮುಸ್ಲಿಮರೆಲ್ಲಾ ಸೂಲೆಮಕ್ಕಳು ಎಂದು ಬಾಯಿ ಹರಿಯಬಿಟ್ಟ ಬಜರಂಗದಳ ಮುಖಂಡ ಮೂಡಿಗೆರೆ ಬಿಜೆಪ ಉಪಾಧ್ಯಕ್ಷ ಹೆಮ್ಮಕ್ಕಿ ಗಿರೀಶ್ ದೂರು ನೀಡಿದರು ಇದುವರೆಗೆ FIR ದಾಖಲಾಗಿಲ್ಲ.
@alokkumar6994 ಸರ್ ದಯವಿಟ್ಟು ಇವರ ವಿರುದ್ಧ ಕ್ರಮಕ್ಕೆ @Ckm_Dist_Police ಸೂಚಿಸಿ.
ಇಂತವರ ಕೀಳು ಹೇಳಿಕೆಗಳಿಂದಲೆ ಕೋಮು ಗಲಭೆಗಳು ನಡೆಯುತ್ತದೆ.
ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಜನರನ್ನು ರಕ್ಷಿಸಬೇಕಾದ ಸರ್ಕಾರವೇ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣ, ವೈಫಲ್ಯಗಳನ್ನು ವಿರೋಧಿಸಿ ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣ ವಿಧಾನಸೌಧದವರೆಗೆ ಶ್ರೀ @Siddaramaiah ಇತರರೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಧ್ವಜ ಕನ್ನಡಿಗರ ಸ್ವಾಭಿಮಾನದ ಸಂಕೇತ. ಕನ್ನಡ ಧ್ವಜಕ್ಕೆ ಅಪಮಾನವಾದರೆ ಅದು ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾದಂತೆ. ಇಂತಹ ಪವಿತ್ರ ಧ್ವಜವನ್ನು ಸುಟ್ಟಿರುವುದು ಯಾರೂ ಸಹಿಸಲಾಗದ ವಿಷಯ. ಕನ್ನಡ ಧ್ವಜಕ್ಕೆ ಅಪಮಾನ ಮಾಡಿದವರ ವಿರುದ್ಧ @CMOMaharashtra ಸೂಕ್ತ ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಮೃದು ಧೋರಣೆ ಸಲ್ಲದು.
ನಮ್ಮ ಪಕ್ಷದ ಹಿರಿಯ ನಾಯಕರು ವಿಧಾನಸಭೆಯಲ್ಲಿ ಆಡಿದ ಮಾತುಗಳಿಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ನಾನು ನಾಡಿನ ಮಹಿಳೆಯರಲ್ಲಿ ಕ್ಷಮೆ ಯಾಚಿಸುತ್ತೇನೆ. ಈ ರೀತಿಯ ಮಾತುಗಳು ಎಂದಿಗೂ ಪುನರಾವರ್ತನೆಯಾಗುವುದಿಲ್ಲವೆಂದು ಭರವಸೆ ನೀಡುತ್ತೇನೆ. ಈ ಘಟನೆಯು ನಮಗೊಂದು ಪಾಠವಾಗಿದೆ.
ಕಾಂಗ್ರೆಸ್ನ ಹಿರಿಯ ನಾಯಕರಾದ ಶ್ರೀ ಆರ್.ಎಲ್ ಜಾಲಪ್ಪ ಅವರ ನಿಧನದಿಂದಾಗಿ ಪಕ್ಷಕ್ಕೆ ಹಾಗೂ ನಾಡಿಗೆ ತುಂಬಲಾರದ ನಷ್ಟವುಂಟಾಗಿದೆ. ಕೇಂದ್ರ ಸಚಿವರಾಗಿ, ನಾಲ್ಕು ಬಾರಿ ಸಂಸದರಾಗಿ ಜನಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ಕರ್ನಾಟಕ ರಾಜಕೀಯದಲ್ಲಿ ಪ್ರಮುಖರಾಗಿದ್ದವರು. ಶ್ರೀ ಆರ್.ಎಲ್ ಜಾಲಪ್ಪ ಅವರ ಕುಟುಂಬದವರಿಗೆ ಸಾಂತ್ವನ ಕೋರುತ್ತೇನೆ.
2000ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ನಡೆಸುವ ಮೂಲಕ ಕೆಪಿಸಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಾರ್ಯಕರ್ತರು, ನಾಯಕರು ಸೇರಿದಂತೆ 4327 ಮಂದಿ ಈ ಅಭಿಯಾನದ ಮೂಲಕ ತಮ್ಮ ಬೂತ್ ಗಳಲ್ಲೇ ಸದಸ್ಯತ್ವ ಪಡೆದರು. ಎದೆ ತಟ್ಟಿ ನಾನು ಕಾಂಗ್ರೆಸ್ಸಿಗ ಅಂತ ಹೇಳೋ ಸಮಯ ಬಂದಿದೆ. ನಮ್ಮೀ ಅಭಿಯಾನದ ಅಮೂಲ್ಯ ಕ್ಷಣಗಳು ಇಲ್ಲಿವೆ.
ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಇತರೆ ಪಕ್ಷಗಳಿಗಿಂತ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೆಲೆಗಳಲ್ಲೇ ನಮ್ಮ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದೆ.
ಬೆಳಗಾವಿಯಲ್ಲಿ ಬಿಜೆಪಿಯ 2 ಸಂಸದರು 11 ಶಾಸಕರಿದ್ದರೂ ಕಾಂಗ್ರೆಸ್ 1286 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
- @Rdhruvanarayan
ಬಿಜೆಪಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಸೋಲಿನ ಭೀತಿಯಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಮುಂದೂಡುತ್ತಿದೆ.
ಚುನಾವಣೆ ನಡೆಸದೇ ಬಿಜೆಪಿ ಸರ್ಕಾರ ತಾ.ಪಂ/ಜಿ.ಪಂ ಸದಸ್ಯರ ಮತದಾನದ ಹಕ್ಕು ಕಸಿದಿದೆ.
ಕಾಂಗ್ರೆಸ್ ಅಧಿಕಾರ ವಿಕೇಂದ್ರೀಕರಣ ಮಾಡಿದರೆ, ಬಿಜೆಪಿ ಇದಕ್ಕೆ ವಿರುದ್ಧವಾಗಿದೆ.
- @Rdhruvanarayan
ವಿಧಾನ ಪರಿಷತ್, ವಿಧಾನಸಭೆ ಹಾಗೂ ಲೋಕಸಭೆ ಸದಸ್ಯರಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಆರ್. ಎಲ್ ಜಾಲಪ್ಪಅವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಗ್ರಾಮ ಸ್ವರಾಜ್ ಸಮಾವೇಶ, ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಇಂದು ನಾನು ಭಾಗವಹಿಸಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಶಾಂತೇಗೌಡರ ಪರವಾಗಿ ಪ್ರಚಾರ ನಡೆಸಿ ಮತಗಳನ್ನು ಕೋರಿದೆ.