Birthday wishes to Shri Shyam Leader Jaya Karnataka janapara vedike, Old Byappanahalli
Dr D Ramesh
National Regional Coordinator
All India Unorganised Workers and Employees Congress AICC
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ.
ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ.
Shri S. N. Subrahmanyan, Chairman & Managing Director of L&T, called on me today. We discussed Karnataka’s infrastructure growth, urban development, and opportunities to further strengthen industry-government collaboration in building world-class infrastructure across the state.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವಿಧಾನ ಪರಿಷತ್ ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ, ಅಧಿಕಾರ ಸ್ವೀಕರಿಸಿದ
ನೂತನ ಸದಸ್ಯರಿಗೆ ಶುಭಹಾರೈಸಿದೆ.
ರಾಜ್ಯದ ಅಭಿವೃದ್ಧಿ, ಜನಪರ ಆಡಳಿತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ನೂತನ ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಹಾಗೂ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ.ಜಿ ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ವಿಧಾನಸಭೆಯ ಉಪಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಹಾಗೂ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು.
Karnataka celebrates another proud moment on the global stage.
Heartiest congratulations to Anooya Swamy and the entire team of Pankaja on winning the Best Live Action Short award at the 34th Raindance Film Festival in London.
This historic achievement makes Anooya Swamy the first Indian filmmaker to receive the festival’s highest honour in this category, while also earning Pankaja eligibility for Academy Award consideration.
Your success reflects the creativity, talent and boundless potential of Karnataka’s storytellers. Wishing you and the entire team many more milestones ahead.
Shri D. Sridhar Babu, Hon’ble Minister for Information Technology, Electronics, Communications, Industries & Commerce, Government of Telangana, called on me today. We exchanged views on technology, innovation, and industrial development.
@OffDSB
राजस्थान में DCLT, DDT और DECGT के पेपर लीक हो गए जिसके कारण परीक्षाएँ रद्द करनी पड़ीं। जब हर पेपर लीक होगा तो पास कौन होगा?
जब इंडिया पढ़ेगा ही नहीं तो सब अनपढ़ होंगे और जब सब अनपढ़ होंगे तो बनेंगे पीएम ।
VIDEO | As KC Venugopal files privilege motion against Rajnath Singh over Operation Sindoor claims in Parliament, Congress leader Udit Raj says, "Army made the ultimate sacrifice, yet Rajnath Singh is not ready to acknowledge it. Whatever KC Venugopal has written in his letter is very thoughtful. He (Rajnath Singh) should resign immediately."
(Full video available on PTI Videos - https://t.co/bIyFWTfmBd)
उत्तर पश्चिम दिल्ली की मुंडका की फैक्ट्री में सेप्टिक टैंक में दम घुटने से 3 मजदूरों की मौत कोई हादसा नहीं, यह संस्थागत हत्या है।
FIR में BNS की धारा 106(3)(5), Manual Scavengers Act 2013 और SC/ST Act के तहत मामला दर्ज होना बताता है कि कानून का खुला उल्लंघन हुआ। फिर भी मजदूरों को बिना सुरक्षा उपकरण मौत के मुंह में धकेल दिया गया।
फैक्ट्री मालिक और ट्रैक्टर चालक नीरज पर केवल FIR नहीं, कड़ी गिरफ्तारी, गैर-जमानती कार्रवाई और हत्या जैसी कठोर धाराओं में मुकदमा चलना चाहिए। जिन अधिकारियों ने सुरक्षा नियमों की अनदेखी की, उनकी जवाबदेही भी तय हो।
भाजपा सरकार बताये—
जब Manual Scavenging कानूनन प्रतिबंधित है, तो आज भी गरीब दलित और मजदूर सीवर व सेप्टिक टैंक में क्यों मर रहे हैं?
असंगठित कामगार एवं कर्मचारी कांग्रेस (KKC) मृतक मजदूरों के परिवारों के साथ खड़ी है और मांग करती है:
* प्रत्येक मृतकों के परिजनों को ₹1 करोड़ मुआवज़ा।
* प्रत्येक परिवार के एक सदस्य को सरकारी नौकरी।
* सभी दोषियों की तत्काल गिरफ्तारी।
* दिल्ली की सभी फैक्ट्रियों में सुरक्षा ऑडिट और दोषियों पर सख्त कार्रवाई।
राम मंदिर का एक-एक ट्रस्टी मोदी और संघ का है। धर्म के नाम पर बैठे हैं, लेकिन मकसद चंदा, ज़मीन और पैसे की लूट करना है। यह लूट शिलान्यास के समय से ही जारी है। चंपत राय के 400 सुरक्षा गार्ड भी चंदे के पैसे पर पाले गए। सड़क निर्माण, सामग्री की खरीद और लगभग हर काम में लूट हुई। चारों ओर सिर्फ़ लूट ही लूट है। अब ये ऐसा कुचक्र चलाने की कोशिश में हैं कि आस्था और लूट एक दूसरे के पूरक हैं ।
ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದೆ.
ಪಕ್ಷದ ಸಂಘಟನೆ,ಪ್ರಚಾರ ಕಾರ್ಯತಂತ್ರ ಹಾಗೂ ಕಾಂಗ್ರೆಸ್ನ ವಿಚಾರಧಾರೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಚರ್ಚಿಸಲಾಯಿತು. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
#KPCC#Congress
ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಇಂದು ನನ್ನನ್ನು ಭೇಟಿಮಾಡಿ, ಕೆಲಹೊತ್ತು ಸಮಾಲೋಚನೆ ನಡೆಸಿದರು.
ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಶಾಸಕರಾದ ಶಿವಲಿಂಗೇಗೌಡ, ಪ್ರದೀಪ್ ಈಶ್ವರ್, ಯಾಸೀರ್ ಖಾನ್ ಪಠಾಣ್, ಶ್ರೀನಿವಾಸ ಮಾನೆ, ಪಾವಗಡ ವೆಂಕಟೇಶ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ನನ್ನನ್ನು ಭೇಟಿಮಾಡಿ, ಕೆಂಪೇಗೌಡ ಜಯಂತಿ ಆಚರಣೆಯ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಮೇಲೆ ಚಪ್ಪಲಿ ಎಸೆದು, ತಮ್ಮ ಕುಟುಂಬದವರನ್ನು ನಿಂದಿಸಿದ್ದು ಸೇರಿದಂತೆ ಅಂದು ನಡೆದ ಎಲ್ಲಾ ಘಟನೆಯನ್ನು ವಿವರಿಸಿ, ತಮ್ಮ ನೋವನ್ನು ಹಂಚಿಕೊಂಡರು.
ರಾಜಕಾರಣದಲ್ಲಿ ಇಂಥಹ ಘಟನೆಗಳು ಸಾಮಾನ್ಯವಾಗಿದ್ದು, ಇಲ್ಲೇ ಇದ್ದು ಇಂಥವನ್ನು ಎದುರಿಸಬೇಕು. ಇದರಿಂದ ಧೃತಿಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದೆ.
ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೂ ದೂರವಾಣಿ ಕರೆಮಾಡಿ, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹೇಳಿ, ಪೋಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕನಿಗೆ ಈ ರೀತಿ ಆಗಿರುವುದು ಅಕ್ಷಮ್ಯ. ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದೇನೆ.
ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಮಧು ಬಂಗಾರಪ್ಪ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. @PNimmondige
ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾಗಿ ನೇಮಕಗೊಂಡಿರುವ ಬಿ.ವಿ.ಶ್ರೀನಿವಾಸ್ ಅವರು ಇಂದು ನನ್ನನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.
ಈ ವೇಳೆ ಅವರನ್ನು ಅಭಿನಂದಿಸಿ, ವಹಿಸಿಕೊಂಡಿರುವ ನೂತನ ಜವಾಬ್ದಾರಿಯಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದೆ.
ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದರು ಮತ್ತು ಪ್ರಗತಿಪರ ಚಳವಳಿಗಳ ಸಂಗಾತಿಗಳಾಗಿದ್ದ ಕೆ.ಟಿ.ಶಿವಪ್ರಸಾದ್ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ.
ದಲಿತ ಮತ್ತು ರೈತ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಿವಪ್ರಸಾದ್ ಅವರು, ಸಾಮಾಜಿಕ ಕಳಕಳಿಯ ಚಿಂತಕರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸಕ್ರಿಯ ಸಾರ್ವಜನಿಕ ಜೀವನದಿಂದ ತುಸು ದೂರ ಇದ್ದರು.
ಶಿವಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ. ಅವರ ದು:ಖತಪ್ತ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು, ಅವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವರಾದ ವೀರಣ್ಣ ಅವರನ್ನು ಭೇಟಿಮಾಡಿ, ಆರೋಗ್ಯ ವಿಚಾರಿಸಿದೆ.
ವೀರಣ್ಣ ಹಾಗೂ ನಾನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದೆವು. ಅತ್ಯಂತ ಸರಳತೆ, ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ವೀರಣ್ಣನವರು ಅಷ್ಟೇ ದಕ್ಷ, ಪ್ರಾಮಾಣಿಕರು ಕೂಡ. ವೀರಣ್ಣನವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
ಶಾಸಕರಾದ ರಿಜ್ವಾನ್ ಅರ್ಷದ್, ಹನೂರು ಮಂಜುನಾಥ್, ವೀರಣ್ಣ ಅವರ ಅಳಿಯ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಈ ವೇಳೆ ನನ್ನೊಂದಿಗಿದ್ದರು.
ಜನರ ಜೀವ ಉಳಿಸುವ ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದ್ದು. ವೃತ್ತಿಧರ್ಮಕ್ಕೆ ಬದ್ಧರಾಗಿ ಹಗಲು - ರಾತ್ರಿಯೆನ್ನದೆ ಜನಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಸಾಕಷ್ಟು ಮಂದಿ ವೈದ್ಯರು "ವೈದ್ಯನೇ ಸಾಕ್ಷಾತ್ ದೇವರು" ಎಂಬ ಮಾತಿಗೆ ಅನ್ವರ್ಥದಂತೆ ಬದುಕುತ್ತಿದ್ದಾರೆ. ಇಂಥವರ ಸಂಖ್ಯೆ ನೂರ್ಮಡಿಯಾಗಲಿ ಎಂದು ಹಾರೈಸುತ್ತೇನೆ.
ವೈದ್ಯ ವೃತ್ತಿಯಲ್ಲಿ ಇರುವವರು ತನ್ನ ಬಳಿ ಬರುವ ರೋಗಿಯ ಜಾತಿ, ಧರ್ಮ, ಭಾಷೆ, ಅಂತಸ್ತು ಈ ಯಾವುದೇ ಭಿನ್ನತೆಯನ್ನು ಆಧರಿಸಿ ತಾರತಮ್ಯ ಮಾಡದೆ ಒಂದೇ ತೆರನಾಗಿ ಸ್ಪಂದಿಸಬೇಕು, ಆರೈಕೆ ಮಾಡಬೇಕು. ಆಗ ಮಾತ್ರ ತಮ್ಮ ವೃತ್ತಿಗೆ ಪೂರ್ಣ ನ್ಯಾಯ ಕೊಟ್ಟ ಆತ್ಮಸಂತೃಪ್ತಿ ಸಿಗಲು ಸಾಧ್ಯ.
ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರವನ್ನು ಈ ದಿನ ಸ್ಮರಿಸುತ್ತಾ, ನಾಡಿನ ಸಮಸ್ತ ವೈದ್ಯ ಮಿತ್ರರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳನ್ನು ಕೋರುತ್ತೇನೆ.
"ಮಂಗಳೂರ ಸಮಾಚಾರ" ಪತ್ರಿಕೆ ಮೂಲಕ ಜನ್ಮತಳೆದ ಕನ್ನಡ ಪತ್ರಿಕೋದ್ಯಮ ಹಲವು ಯುಗಗಳನ್ನು ದಾಟಿ ಇಂದು ಎಐ ಯುಗಕ್ಕೆ ಕಾಲಿಟ್ಟಿದೆ. ಕ್ಷಣಾರ್ಧದಲ್ಲಿ ಸುದ್ದಿಯನ್ನು ಸಿದ್ಧಪಡಿಸಬಹುದಾದ ಟೂಲ್ಗಳು ಪತ್ರಕರ್ತರ ವಿಮರ್ಶಾತ್ಮಕ ಗುಣ ಮತ್ತು ವೈಚಾರಿಕ ಚಿಂತನೆಗಳನ್ನು ಕಸಿಯುತ್ತಿದೆ. ಇವುಗಳಿಂದ ಹೊರಬಂದು ಸುದ್ದಿಯ ಜೊತೆ ಅದರ ಹಿಂದಿನ ಸತ್ಯವನ್ನು ಬರೆಯುವ, ಓದುಗರನ್ನು ಆತ್ಮವಿಮರ್ಷೆಗೆ ಒಡ್ಡುವ ನೈಜ, ವೃತ್ತಿಪರ ಪತ್ರಕರ್ತರ ಅಗತ್ಯ ಸಮಾಜಕ್ಕಿದೆ.
ಮೌಢ್ಯ, ಕಂದಾಚಾರಗಳು, ಮತೀಯವಾದ, ಜಾತಿಯಾಧಾರಿತ ಶೋಷಣೆಯಲ್ಲಿ ನರಳುತ್ತಿರುವ ಭಾರತೀಯ ಸಮಾಜವನ್ನು ಸುಧಾರಿಸಲು ಪತ್ರಿಕೆಗಳು ನಿರ್ಭೀತವಾಗಿ, ವೈಚಾರಿಕವಾಗಿ, ನಿಷ್ಪಕ್ಷಪಾತದಿಂದ ಕೆಲಸ ಮಾಡಬೇಕು. ಪ್ರಜೆಗಳು ಮತ್ತು ಪ್ರತಿನಿಧಿಗಳಿಬ್ಬರನ್ನೂ ಎಚ್ಚರಿಸುತ್ತಾ, ಜಾಗೃತ ಸಮಾಜ ನಿರ್ಮಾಣ ಮಾಡಲು ಪತ್ರಿಕೆಗಳು ಶ್ರಮಿಸಲಿ.
ನಾಡಿನ ಪತ್ರಕರ್ತ ಮಿತ್ರರೆಲ್ಲರಿಗೂ ಪತ್ರಿಕಾ ದಿನದ ಶುಭಾಶಯಗಳು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠ ಆಯೋಜಿಸಿದ್ದ ಶ್ರೀ ಗುರು ಮಲ್ಲೇಶ್ವರರ 127ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರ್ವರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆ.
ಶ್ರೀಮಠದ ಪೀಠಾಧಿಪತಿ ಶ್ರೀ ಮಹಾಂತ ಸ್ವಾಮೀಜಿ, ಮಾಜಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಶಾಸಕರಾದ ದರ್ಶನ್ ಧ್ರುವ ನಾರಾಯಣ, ಗಣೇಶ್ ಪ್ರಸಾದ್ ಮತ್ತಿತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.