ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸದೇ ಇರಲು ನಿರ್ಧರಿಸಿದರೂ, ನನ್ನ ಮೇಲೆ ಪ್ರೀತಿ, ಅಭಿಮಾನವನ್ನಿಟ್ಟು ರಾಜ್ಯಾದ್ಯಂತ ವಿವಿಧ ಸೇವಾ ಕಾರ್ಯಗಳು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಚೆಸ್ ಕಪ್, ರಕ್ತದಾನ ಶಿಬಿರ, ವಿವಿಧ ದೇವಸ್ಥಾನಗಳಲ್ಲಿ ನನ್ನ ಹೆಸರಿನಲ್ಲಿ ನಡೆದ ಪೂಜೆ- ಅರ್ಚನೆ, ಅಂಧ ಮಕ್ಕಳಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ. ಇದು ನನ್ನ ಈ ದಿನವನ್ನು ಸ್ಮರಣೀಯವಾಗಿಸಿದೆ. ನಿಮ್ಮ ಈ ಪ್ರೀತಿಗೆ ನಾನು ಚಿರಋಣಿ.
ಕಬಿನಿ ನಾ ನಿನ್ನ ಅಭಿಮಾನಿ!
200ರಷ್ಟು ಆನೆಗಳು, ಅಸಂಖ್ಯಾತ ಜಿಂಕೆಗಳನ್ನು ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಣ್ತುಂಬಿಕೊಂಡೆ - ಏನದ್ಭುತವಾದ ದೃಶ್ಯವದು!
ಕರ್ನಾಟಕದ ಅರಣ್ಯ ಸಂಪತ್ತಿನ ಆಗರವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಬಿನಿ ಅಭಯಾರಣ್ಯವನ್ನು ಜೀವನದಲ್ಲಿ ಒಂದು ಬಾರಿಯಾದರೂ ಎಲ್ಲರೂ ನೋಡಲೇ ಬೇಕು.
ಬನ್ನಿ ಕಬಿನಿಗೆ - ಪ್ರಕೃತಿಯೊಂದಿಗೆ ಒಂದಾಗಿರಿ.
The backwaters of Kabini whispered calm - herds of elephants, a sea of deer,
and a silence that said more than words ever could. A rare moment of oneness with the wild.
Do visit the wild, Do visit Kabini.
#ನಮ್ಮಕಬಿನಿ
ಪ್ರಗತಿಯತ್ತ ಕರ್ನಾಟಕ - ಸಮರ್ಪಣೆ ಸಂಕಲ್ಪ!
ರಾಜ್ಯ ಕಾಂಗ್ರೆಸ್ ಸರ್ಕಾರವು ಯಶಸ್ವಿ 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸುತ್ತಿರುವ ಸಾಧನಾ ಸಮಾವೇಶದ ಸ್ಥಳ ಪರಿಶೀಲಿಸಿ, ಸುದ್ಧಿಗೋಷ್ಟಿ ನಡೆಸಿ, ಮಾತನಾಡಿದೆ.
ರಾಜ್ಯದ ಮಹಾಜನತೆ 2023ರ ಮೇ 13ರಂದು ಕಾಂಗ್ರೆಸ್ ಸರ್ಕಾರದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸವನ್ನಿಟ್ಟು 136 ಸ್ಥಾನಗಳನ್ನು ನೀಡಿ ಪಕ್ಷವನ್ನು ಅಧಿಕಾರಕ್ಕೆ ತಂದು, ರಾಜ್ಯಕ್ಕೆ ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ. ನಮ್ಮ ಸರ್ಕಾರಕ್ಕೆ ಇದೀಗ ಎರಡು ವರ್ಷದ ಸಂಭ್ರಮ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಎರಡು ವರ್ಷದ ಸಂಭ್ರಮದ ಜೊತೆಗೆ ಜನರಿಗೆ ಶಕ್ತಿಯನ್ನು ತುಂಬಲು ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವ ಹಾಡಿ, ಹಟ್ಟಿ, ತಾಂಡಾಗಳಲ್ಲಿನ ನಿವಾಸಿಗಳಿಗೆ '94 ಡಿ' ಅಡಿ ಮೇ 20ರಂದು ಒಂದು ಲಕ್ಷ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆಯೇ ನಾವು ಹಕ್ಕುಪತ್ರಗಳನ್ನು (ಪಟ್ಟಾಗಳನ್ನು) ನೀಡುವುದಾಗಿ ಘೋಷಿಸಿದ್ದೆವು. 1 ಲಕ್ಷ ಪಟ್ಟಾಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ.
#2YearsOfGuaranteeGovt #DeliveredAsPromised
ರಾಜ್ಯ ಸರ್ಕಾರವು ಯಶಸ್ವಿ 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಸುತ್ತಿರುವ ಸಾಧನಾ ಸಮಾವೇಶದ ಸ್ಥಳವನ್ನು ಮುಖ್ಯಮಂತ್ರಿಗಳಾದ ಶ್ರೀ @siddaramaiahನವರೊಂದಿಗೆ ಪರಿಶೀಲಿಸಿ, ಸುದ್ದಿಗೋಷ್ಟಿ ನಡೆಸಿ, ಮಾತನಾಡಿದೆ.
ವಿಜಯನಗರ ಜಿಲ್ಲೆಯ 71,000 ರೈತರನ್ನು ಪೋಡಿ ಮುಕ್ತರನ್ನಾಗಿ ಮಾಡಿದ್ದೇವೆ. ಇದು ನಮ್ಮ ಸಾಧನೆ. ಸರ್ಕಾರದ ಸಾಧನೆಗಳನ್ನು ಸಂಭ್ರಮಿಸಲು, ಸರ್ವರನ್ನೂ ಸಾಧನಾ ಸಮಾವೇಶದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಆಹ್ವಾನಿಸುತ್ತಿದ್ದೇವೆ. ಪ್ರತಿ ತಾಲ್ಲೂಕಿನಿಂದಲೂ ಪ್ರತಿನಿಧಿಗಳು ಬರಬೇಕು. 3 ಲಕ್ಷಕ್ಕೂ ಹೆಚ್ಚು ಜನರು ಈ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.
#2YearsOfGuaranteeGovt #DeliveredAsPromised