ನಮ್ಮೆಲ್ಲರ ನೆಚ್ಚಿನ ನಾಯಕರು, ಮಾರ್ಗದರ್ಶಕರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭೆಯ ಪ್ರತಿಪಕ್ಷ ನಾಯಕರು ಹಾಗೂ 371(ಜೆ) ಕಲಂ ಜಾರಿಯ ಪ್ರಮುಖ ರೂವಾರಿಗಳಾಗಿ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಯುವಕರಿಗೆ ಸರ್ಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಹೊಸ ಅವಕಾಶಗಳನ್ನು ಕಲ್ಪಿಸಿದ ಮಾನ್ಯ ಶ್ರೀ @kharge ಸಾಹೇಬರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶಸೇವೆಯನ್ನು ಮುಂದುವರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
Heartiest birthday wishes to our beloved leader and guiding force, Hon'ble Shri Mallikarjun Kharge Ji, President of the AICC, Leader of the Opposition in the Rajya Sabha, and the visionary behind the implementation of Article 371(J), which has created new opportunities in government employment and higher education for thousands of youth in Kalyana Karnataka.
Wishing him good health, a long life, and continued strength in serving the nation.
@INCIndia
ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಕರ್ತವ್ಯ ನಿರತ ವೈದ್ಯರ ಮೇಲೆ ಗುಂಪೊಂದು ನಡೆಸಿರುವ ಅಮಾನುಷ ಹಲ್ಲೆಯ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ, ಡಾ. ತುಕಾರಾಂ ರವರನ್ನು ಇಂದು ಭೇಟಿಯಾಗಿ ಅವರ ಕುಶಲೋಪರಿಯನ್ನು ವಿಚಾರಿಸಿ ಧೈರ್ಯವನ್ನು ತುಂಬಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸುರಕ್ಷತೆ ಒದಗಿಸುವುದು ಅತ್ಯಗತ್ಯ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಭದ್ರತೆಯನ್ನು ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಲಾಗಿದೆ.
ಸಾರ್ವಜನಿಕರು ಆಸ್ಪತ್ರೆಯ ನಿಯಮಗಳನ್ನು ಗೌರವಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು, ಚಿಕಿತ್ಸೆ ನೀಡುವ ವೈದ್ಯರ ಮೇಲೆಯೇ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ.
ಗಾಯಾಳು ವೈದ್ಯರಿಗೆ ಸೂಕ್ತ ಚಿಕಿತ್ಸೆ ಮತ್ತು ನ್ಯಾಯ ಸಿಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಾಗುವುದು.
I strongly condemn the brutal assault carried out by a group of individuals on duty doctors late last night at the Bidar BRIMS Hospital. Today, I met Dr. Tukaram, inquired about his well-being, and reassured him of our full support.
It is absolutely essential to provide adequate safety and security to the doctors and medical staff working in government hospitals. The district administration has been instructed to tighten police bandobast (arrangements) and increase security to ensure such incidents do not recur at the BRIMS Hospital.
The public must respect hospital rules and regulations. If there are any issues, they should be resolved legally; assaulting the very doctors who provide treatment is an unpardonable offense.
I am in constant contact with the district administration and the Superintendent of Police to ensure that the injured doctor receives proper medical care and justice, and strict action will be taken to ensure the perpetrators face severe punishment.
ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡುತ್ತಿದೆ.
ತುಡವೆ ಜೇನು (Apis cerana) ಅನ್ನು ರಾಜ್ಯ ಕೀಟವಾಗಿ ಹಾಗೂ ಮಲೆನಾಡು ಮರಗಂತಿ ಕಪ್ಪೆ (Malabar Tree Toad) ಅನ್ನು ರಾಜ್ಯ ಉಭಯಜೀವಿಯಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಮ್ಮ ನಾಡಿನ ಅಪರೂಪದ ಜೀವಜಾತಿಗಳನ್ನು ಉಳಿಸಿ ಬೆಳೆಸುವ ಈ ಕ್ರಮ ಪರಿಸರ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಿದೆ.
ಪ್ರಕೃತಿ ಮತ್ತು ಜೀವವೈವಿಧ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಹಸಿರು ಮತ್ತು ಆರೋಗ್ಯಕರ ಕರ್ನಾಟಕವನ್ನು ನೀಡುವ ಸಂಕಲ್ಪದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @Siddaramaiah ಅವರೊಂದಿಗೆ ಭಾಗವಹಿಸಿ, ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಮರ್ಥ ಶಾಮನೂರು ಅವರ ಪರವಾಗಿ ಭರ್ಜರಿ ರೋಡ್ ಶೋ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಅಭಿವೃದ್ಧಿ ಹಾಗೂ ಜನಸೇವೆಯ ದೃಷ್ಟಿಯಿಂದ ಸಮರ್ಥ ಅವರನ್ನು ಬೆಂಬಲಿಸಲು ಮನವಿ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗೆ ಭಾರಿ ಮತಗಳ ಅಂತರದಿಂದ ಗೆಲುವು ನೀಡುವಂತೆ ಕೋರಲಾಯಿತು.
ಜನರಿಂದ ಅಪಾರ ಬೆಂಬಲ ಹಾಗೂ ಆತ್ಮೀಯ ಸ್ಪಂದನೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.
#DavanagereByElection
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ದಾವಣಗೆರೆಯ ಡಿಸಿಎಂ ಬಡಾವಣೆಯ ಪ್ರಮುಖರೊಂದಿಗೆ ಸಭೆ ನಡೆಸಿದೆನು.
ಈ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಮರ್ಥ ಶಾಮನೂರು ಅವರ ಪರವಾಗಿ ಮತ ಚಲಾಯಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆನು. ಬಳಿಕ ಬಡಾವಣೆಯ ಮನೆ ಮನೆಗೆ ತೆರಳಿ ಸಾರ್ವಜನಿಕರನ್ನು ಭೇಟಿ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಮರ್ಥ ಶಾಮನೂರು ಅವರ ಪರವಾಗಿ ಮತಯಾಚನೆ ಮಾಡಲಾಯಿತು.
ಜನರಿಂದ ದೊರೆತ ಆತ್ಮೀಯ ಸ್ಪಂದನೆ ಮತ್ತು ಬೆಂಬಲ ನಮ್ಮ ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.
#DavanagereByElection
" ನೂರು ಕುರಿ ಎಣಿಸಲು ಬರದವನು
ಬಜೆಟ್ ಮಂಡಿಸ್ತಾನಾ" ಎಂದು ಹಂಗಿಸಿದವರ
ಮುಂದೆಯೇ ಇಂದು ದಾಖಲೆಯ 17 ನೇ ಬಜೆಟ್ ಮಂಡಿಸುತ್ತಿರುವ "ಬಡವರ ಪಾಲಿನ ದೇವರು" ಸನ್ಮಾನ್ಯ ಶ್ರೀ @siddaramaiah ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು❤️😍
@Dr_Yathindra_S@CMofKarnataka
ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಬೀದರ್ ಜಿಲ್ಲೆಯ ಶ್ರೀ ನಿಶಿಕಾಂತ್, ಬೆಳ್ಳಿ ಪದಕ ವಿಜೇತ ಶ್ರೀ ಪರ್ವೇಜ್ ಹಾಗೂ ಇವರಿಗೆ ತರಬೇತಿ ನೀಡಿದ ಶ್ರೀ ಸುವಿತ ಮೊರೆ ಅವರನ್ನು ಇಂದು ನಮ್ಮ ಭಾಲ್ಕಿ ನಿವಾಸದಲ್ಲಿ ಸನ್ಮಾನಿಸಿ, ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಯುವಕರಿಗೆ ಕಿಕ್ ಬಾಕ್ಸಿಂಗ್ನಲ್ಲಿ ಹೆಚ್ಚಿನ ತರಬೇತಿ ನೀಡಲು ಮತ್ತು ಈ ಕ್ರೀಡೆಯಲ್ಲಿ ನಮ್ಮ ಯುವಜನತೆ ಸಕ್ರಿಯವಾಗಿ ಪಾಲ್ಗೊಂಡು ಒಲಿಂಪಿಕ್ಸ್ ಮಟ್ಟದವರೆಗೂ ತಲುಪಲು ಪೂರಕವಾಗುವಂತೆ, ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಲಾಯಿತು.
#bhalki #bidar #Sports #Kickboxing
" ನಮ್ಮ ಜಿಲ್ಲೆಯ ಯುವಕರು ಕೇವಲ ಅಂತರಾಷ್ಟೀಯ ಮಟ್ಟದ ಸ್ಪರ್ಧೆಗಳಲ್ಲದೆ ಒಲಂಪಿಕ್ಸ್ ಮಟ್ಟದವರೆಗೂ ತಲುಪಲು ಅಗತ್ಯವಿರುವ ಆಧುನಿಕ ತರಬೇತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೋಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. "
#bidar#bhalki#youthsports#sports#kickboxing
ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀ ಮಹಾದೇವರ ಕೃಪೆಯಿಂದ ನಾಡಿನ ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಶಕ್ತಿ ಮತ್ತು ಸಮೃದ್ಧಿ ನೆಲೆಸಲಿ.
#MahaShivaratri2026 ಓಂ ನಮಃ ಶಿವಾಯಃ
ಸಂತ ಸೇವಾಲಾಲ್ ಮಹಾರಾಜರ ಜಯಂತಿಯ ಶುಭಾಶಯಗಳು.
ಸಮಾನತೆ, ಶಿಕ್ಷಣ ಹಾಗೂ ಸ್ವಾಭಿಮಾನಗಳ ಸಂದೇಶವನ್ನು ಸಾರಿದ ಮಹಾನ್ ಸಂತ ಸಂತ ಸೇವಾಲಾಲ್ ಮಹಾರಾಜ ಅವರ ಆದರ್ಶಗಳು ಎಲ್ಲರಿಗೂ ಸದಾ ಪ್ರೇರಣೆ.
ಈ ಪವಿತ್ರ ದಿನದಂದು ಅವರ ಆಶೀರ್ವಾದಗಳು ಎಲ್ಲರ ಬದುಕಿಗೆ ಬೆಳಕಾಗಲಿ.
Warm birthday greetings to @kcvenugopalmp ji, AICC National General Secretary (Organisation).
Your dedicated leadership and commitment to strengthening the Congress organization inspire us all.
Wishing you good health, happiness, and many more years of service.
@INCIndia
ಶತಮಾನದ ಸಾರ್ಥಕ ಬದುಕು ಬದುಕಿದ ನಮ್ಮ ಪೂಜ್ಯ ತಂದೆಯವರಾದ ಲೋಕನಾಯಕ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಅವರ ಸ್ಮರಣಾರ್ಥ ಇಂದು ಬೆಂಗಳೂರಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಆಯೋಜಿಸಲಾಗಿತ್ತು.
ನಾಡಿನ ಪೂಜ್ಯ ಮಠಾಧೀಶರಾದ ಸುತ್ತೂರು ಶ್ರೀಗಳು, ತರಳಬಾಳು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಭಾಲ್ಕಿಯ ಶ್ರೀಗಳು, ಹುಲಸೂರು ಶ್ರೀಗಳು ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ, ಎಐಸಿಸಿ ಅಧ್ಯಕ್ಷರಾದ @kharge, ಮಾನ್ಯ ಮುಖ್ಯಮಂತ್ರಿಗಳಾದ @siddaramaiah , ಉಪಮುಖ್ಯಮಂತ್ರಿಗಳಾದ @DKShivakumar , ಕೇಂದ್ರ ರೈಲ್ವೆ ರಾಜ್ಯ ಸಚಿವರಾದ @VSOMANNA_BJP , ಮಾಜಿ ಮುಖ್ಯಮಂತ್ರಿಗಳಾದ @BSYBJP, @moilyv , @BSBommai ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ಶಾಸಕರು, ಮಾಜಿ ಶಾಸಕರು, ಅನೇಕ ಗಣ್ಯಮಾನ್ಯರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಅವರ ಆದರ್ಶಮಯ ಜೀವನಕ್ಕೆ ಗೌರವ ನಮನ ಸಲ್ಲಿಸಿದರು.
ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಸೇವೆ, ಮೌಲ್ಯಗಳು ಮತ್ತು ಆದರ್ಶಗಳು ಸದಾ ನಮ್ಮೆಲ್ಲರಿಗೂ ದಾರಿದೀಪವಾಗಿರಲಿ. 🙏
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅನಂತ ಅನಂತ ಕೃತಜ್ಞತೆಗಳು.
ಮಹಾಶಿವರಾತ್ರಿ ಪಾವನ ಸಂದರ್ಭದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಹಾಗೂ ಪೂಜ್ಯ ಶ್ರೀ ಗುರು ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯದಲ್ಲಿ ಭಾಲ್ಕಿಯ ನಮ್ಮ ನಿವಾಸದಲ್ಲಿ ಇಷ್ಟಲಿಂಗ ಮಹಾಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಶಿವಾನುಗ್ರಹದಿಂದ ನಾಡಿನ ಜನತೆಗೆ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ಲಭಿಸಲಿ ಎಂಬ ಪ್ರಾರ್ಥನೆಯೊಂದಿಗೆ ಈ ಪವಿತ್ರ ದಿನವನ್ನು ಆಚರಿಸಲಾಯಿತು.
🕉️ ಓಂ ನಮಃ ಶಿವಾಯ 🕉️
#Mahashivratri
ಇಂದು ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಸಭೆಯನ್ನು ನಡೆಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಹಾಗೂ ವಿಳಂಬ ಧೋರಣೆ ಅನುಸರಿಸುವ ಅಧಿಕಾರಿ–ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
🔹 ಕೃಷಿ ಇಲಾಖೆ (PMFBY): ಬೆಳೆ ವಿಮೆ ಹಣ ರೈತರಿಗೆ ತಲುಪುವಲ್ಲಿ ಆಗುತ್ತಿರುವ ವಿಳಂಬ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಸಮಗ್ರ ವರದಿ ಸಲ್ಲಿಸಲು ಸೂಚನೆ.
🔹 ಕುಡಿಯುವ ನೀರು & JJM: ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ತಕ್ಷಣವೇ ಬ್ಲ್ಯಾಕ್ ಲಿಸ್ಟ್ ಮಾಡಲು ಕಟ್ಟುನಿಟ್ಟಿನ ಆದೇಶ.
🔹 ಆರೋಗ್ಯ ಇಲಾಖೆ: ಔರಾದ್ ಶಾಲೆಯ ಬಿಸಿ ಊಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ. ಗರ್ಭಿಣಿಯರಿಗೆ ಸಕಾಲಿಕ ಚಿಕಿತ್ಸೆ ಹಾಗೂ ಮಾದಕವಸ್ತು ಪುನರ್ವಸತಿ ಕೇಂದ್ರ ಸ್ಥಾಪನೆಗೆ ತಕ್ಷಣ ಪ್ರಸ್ತಾವನೆ ಸಲ್ಲಿಸಲು ಸೂಚನೆ.
🔹 ಶಿಕ್ಷಣ ಇಲಾಖೆ: ಶಿಕ್ಷಕರ ಕೊರತೆ ನೀಗಿಸಿ, SSLC–PUC ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಬೇಕು. ಮಧ್ಯಾಹ್ನದ ಬಿಸಿ ಊಟದ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸುವಂತೆ ನಿರ್ದೇಶನ.
🔹 ಹೆದ್ದಾರಿ & ರೈಲ್ವೆ: ಅಪಘಾತ ವಲಯಗಳನ್ನು (Black Spots) ಗುರುತಿಸಿ ತಕ್ಷಣ ದುರಸ್ತಿ. ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆ ಹಾಗೂ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಾಕೀತು.
“ಸರ್ಕಾರದ ಯೋಜನೆಗಳು ಕಾಗದದಲ್ಲೇ ಸೀಮಿತವಾಗಬಾರದು; ಅವುಗಳ ಲಾಭ ಜನಸಾಮಾನ್ಯರಿಗೆ ತಲುಪಬೇಕು. ಕರ್ತವ್ಯ ಲೋಪ ಎಸಗುವ ಯಾರನ್ನೂ ಸಹಿಸುವುದಿಲ್ಲ” ಎಂದು ಸಭೆಯಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿದೆ.
#ಅಖಿಲ_ಭಾರತ_ವೀರಶೈವ_ಲಿಂಗಾಯತ_ಮಹಾಸಭೆ ಯ ಅಧ್ಯಕ್ಷರಾಗಿದ್ದ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಇಂದು ಭಾಗವಹಿಸಿ, ಆ ಪುಣ್ಯಚೇತನಕ್ಕೆ ನಮನ ಸಲ್ಲಿಸಲಾಯಿತು. ಸಮಾಜಕ್ಕಾಗಿ ಅವರು ನೀಡಿದ ಕೊಡುಗೆ ಚಿರಸ್ಮರಣೀಯ. ಮಹಾಸಭೆಯ ಹಿರಿಯರು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#BheemannaKhandre
ಈಗಾಗಲೇ ನಾನು ತಿಳಿಸಿರುವಂತೆ, ಬರುವ 15ರಂದು ನನ್ನ ಜನ್ಮದಿನವನ್ನು ಯಾವುದೇ ರೀತಿಯಲ್ಲೂ ಆಚರಣೆ ಮಾಡಬಾರದು ಎಂದು ಮತ್ತೊಮ್ಮೆ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ.
ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು, ಫ್ಲೆಕ್ಸ್ಗಳು, ಬ್ಯಾನರ್ಗಳು, ಹಾಗೂ ಪತ್ರಿಕಾ ಜಾಹೀರಾತುಗಳ ಮೂಲಕವೂ ಯಾವುದೇ ಕಾರ್ಯಕ್ರಮ ಅಥವಾ ಶುಭಾಶಯಗಳನ್ನು ಪ್ರಕಟಿಸಬಾರದು ಎಂದು ವಿನಂತಿಸುತ್ತೇನೆ.
ಜನವರಿ 15ರಂದು ಸಾರ್ವಜನಿಕವಾಗಿ ಜನ್ಮದಿನ ಆಚರಿಸುವುದಿಲ್ಲ.
ಜನವರಿ 15ರಂದು ನನ್ನ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸದಿರಲು ನಾನು ತೀರ್ಮಾನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಯಾರೂ ಬ್ಯಾನರ್, ಕಟೌಟ್, ಫ್ಲೆಕ್ಸ್ಗಳನ್ನು ಅಳವಡಿಸದಂತೆ ಹಾಗೂ ಯಾವುದೇ ಮಾಧ್ಯಮ ಜಾಹೀರಾತುಗಳನ್ನು ನೀಡದಂತೆ ವಿನಮ್ರವಾಗಿ ಮನವಿ ಮಾಡುತ್ತೇನೆ.
ಇತ್ತೀಚೆಗೆ ನನ್ನ ಪುತ್ರ, ಸಂಸದರಾದ ಸಾಗರ್ ಖಂಡ್ರೆ ಅವರ ಜನ್ಮದಿನವನ್ನು ಬೀದರ್ ಜಿಲ್ಲೆಯ ಜನತೆ ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಜನವರಿ 14ರಿಂದ 16ರವರೆಗೆ ನಾನು ಹೊರರಾಜ್ಯ ಪ್ರವಾಸದಲ್ಲಿರುವುದರಿಂದ, ಈ ಅವಧಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳು, ಪ್ರದರ್ಶನಗಳು ಅಥವಾ ಪ್ರಚಾರ ಕಾರ್ಯಗಳನ್ನು ನಡೆಸದಂತೆ ಸಹಕಾರ ಕೋರುತ್ತೇನೆ.