"ದೂರದೃಷ್ಟಿ, ಪರಿಶ್ರಮ ಮತ್ತು ಎಲ್ಲರನ್ನು ಒಗ್ಗೂಡಿಸುವ ಮನೋಭಾವದಿಂದ ಬೆಂಗಳೂರು ಎಂಬ ಮಹಾನ್ ನಗರಕ್ಕೆ ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡರ ಜೀವನ ನಮಗೆ ಶಾಶ್ವತ ಪ್ರೇರಣೆ.
ಜಾತಿ, ಭಾಷೆ, ಪ್ರಾಂತ್ಯಗಳ ಭೇದವಿಲ್ಲದೆ ಎಲ್ಲರನ್ನೂ ಗೌರವಿಸಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುವ ಅವರ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿ.
ನಾಡಿನ ಪ್ರಗತಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವ ಸಂಕಲ್ಪ ನಮ್ಮದಾಗಲಿ.
ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು." 🙏🌺
ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಯುವ ಕನ್ನಡಿಗರ ಸೇನೆ ವತಿಯಿಂದ ನಮ್ಮ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ನಾಡಪ್ರಭು ಶ್ರೀ ಕೆಂಪೇಗೌಡರ ಪವಿತ್ರ ಸ್ಮೃತಿಗೆ ಗೌರವಪೂರ್ವಕ ನಮನಗಳು. 🙏
#NadaprabhuKempegowda #KempegowdaJayanti #Bengaluru #Karnataka #SapthagiriGowda #TeamSapthagiri
ಗಾಂಧಿನಗರ ಕ್ಷೇತ್ರದ ನನ್ನ ನೆಚ್ಚಿನ ಕಾರ್ಯಕರ್ತರಿಗೆ ಹಾಗೂ ಸಮಸ್ತ ಜನತೆಗೆ ನಮಸ್ಕಾರ🙏🏼
ಇತ್ತೀಚೆಗೆ ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಜಯವಾದದ್ದನ್ನು ನೋಡಿ, ಅನೇಕ ಹಿತೈಷಿಗಳು ನನ್ನನ್ನು ಒಂದು ಪ್ರಶ್ನೆ ಕೇಳುತ್ತಿದ್ದಾರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಲ್ಲಿ ನಾವು ಕೇವಲ 105 ಮತಗಳ ಅಂತರದಿಂದ ಸೋತಾಗ ನಮ್ಮಲ್ಲಿ ಮರು ಎಣಿಕೆ ಏಕೆ ನಡೆಯಲಿಲ್ಲ?
ಈ ಬಗ್ಗೆ ಒಂದು ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ.
*ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮರು ಎಣಿಕೆಯ ನಿರ್ಧಾರವು ತಿರಸ್ಕೃತ ಅಥವಾ ಅಸಿಂಧು (invalid) ಮತಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
*ನಮ್ಮ 2023ರ ಚುನಾವಣೆಯಲ್ಲಿ ಒಟ್ಟು ಅಸಿಂಧು ಮತಗಳ ಸಂಖ್ಯೆ ಕೇವಲ 71 ಆಗಿತ್ತು. ಒಂದು ವೇಳೆ ಮರು ಎಣಿಕೆ ನಡೆದು, ಆ ಎಲ್ಲಾ 71 ಅಸಿಂಧು ಮತಗಳು ನನ್ನ ಪರವಾಗಿ ಚಲಾವಣೆಯಾಗಿವೆ ಎಂದು ಪರಿಗಣಿಸಿದರೂ, ಗೆಲುವಿನ ದಡ ಸೇರಲು ನಮಗೆ ಇನ್ನೂ 35 ಮತಗಳ ಕೊರತೆ ಇರುತ್ತಿತ್ತು.
*ಸೋಲಿನ ಅಂತರ 105 ಮತಗಳು ಅಸಿಂಧು ಮತಗಳ 71 ಸಂಖ್ಯೆಗಿಂತ ಹೆಚ್ಚಿದ್ದ ಕಾರಣ, ಕಾನೂನಿನ ಪ್ರಕಾರ ನಮಗೆ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಇದು ಚುನಾವಣಾ ನಿಯಮಗಳ ಕಟು ವಾಸ್ತವ.
ಇಷ್ಟು ಸಣ್ಣ ಅಂತರದ ಸೋಲು ಸಹಜವಾಗಿ ನೋವು ತಂದರೂ, ಗಾಂಧಿನಗರದ ಜನತೆ ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಯನ್ನು ಇದು ತೋರಿಸುತ್ತದೆ.ಪ್ರತಿಯೊಬ್ಬ ಕಾರ್ಯಕರ್ತನ ದಣಿವರಿಯದ ಶ್ರಮ ಹಾಗೂ ಸಾವಿರಾರು ಮತದಾರರ ಆಶೀರ್ವಾದವೇ ನಮ್ಮ ಈ ಹೋರಾಟದ ಶಕ್ತಿ.
ಗಾಂಧಿನಗರದ ಅಭಿವೃದ್ಧಿಗಾಗಿ ನಮ್ಮ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನಾವು ಇನ್ನಷ್ಟು ಬಲಿಷ್ಠರಾಗಿ,ಒಗ್ಗಟ್ಟಿನಿಂದ ಜನಪರ ಕೆಲಸಗಳನ್ನು ಮುಂದುವರಿಸಲಿದ್ದೇವೆ. ನಿಮ್ಮ ಬೆಂಬಲ ಮತ್ತು ಆಶೀರ್ವಾದ ಸದಾ ಹೀಗೆಯೇ ಇರಲಿ! 🙏🚩
To all my supporters, karyakartas, and the wonderful people of Gandhinagar,
Recently, with the High Court ordering a recount and our party securing a victory in the Sringeri constituency, many well-wishers have reached out with a very valid question: Why wasn't a recount done when we narrowly lost the Gandhinagar assembly election in 2023 by just 105 votes?
I want to take a moment to transparently explain the technicalities behind this.
According to the Election Commission guidelines, the option for a recount often depends on the number of rejected or invalid votes. In our 2023 election, the total number of invalid votes was exactly 71. Even if a recount had been initiated and miraculously, 100% of those 71 invalid votes were validated and transferred to my account, we would still be short of 35 votes to secure a win.
Because the total number of invalid votes (71) was lesser than the margin of defeat (105), there was no legal provision or option available to us to demand a recount. It is a harsh reality of electoral mathematics, but we must respect the rules.
Losing by such a microscopic margin is heartbreaking, but it also tells a much bigger story. It shows the phenomenal grassroots support we have in Gandhinagar. Coming this close is a testament to the hard work of every single party worker and the trust of thousands of voters.
Our fight for the development of Gandhinagar does not stop here. We are stronger, more united, and we will continue our work on the ground with even more dedication. Thank you for your unwavering support! 🙏🚩
#Gandhinagar #Bengaluru #KarnatakaPolitics #BJP4Karnataka #Elections2023
My heartfelt thanks to respected @sapthagirigowda Anna and @JagdishRChandra Anna for giving me the opportunity to serve as an Executive Committee member of Bangalore Central Yuva Morcha. I am honored by this responsibility and will work loyally under your guidance to strengthen
@sapthagirigowda My heartfelt thanks to the respected Sapthagiri Gowda Anna for giving me the opportunity to serve as an Executive Committee member of Bangalore Central Yuva Morcha. I will work loyally for the party's organization under your guidance."
ಬೆಂಗಳೂರು ಕೇಂದ್ರ ಜಿಲ್ಲೆಯ ಬಿಜೆಪಿ ಪಕ್ಷದ ಮಹಿಳಾ ಮತ್ತು ಯುವ ಮೋರ್ಚಾಗಳ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಮಾಡಲಾಯಿತು.
ನೂತನ ಜವಾಬ್ದಾರಿಗಳನ್ನು ಪಡೆದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳು. #bjp4gandhinagara
ಶೋಷಿತರ ದನಿಯಾಗಿ, ಜ್ಞಾನದ ಭಂಡಾರವಾಗಿ, ನವ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ವಿಶ್ವಜ್ಞಾನಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮದಿನದಂದು ಭಾವಪೂರ್ಣ ನಮನಗಳು.
ಅವರು ಹಾಕಿಕೊಟ್ಟ ಸಮಾನತೆಯ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
#AmbedkarJayanti
ಕಲ್ಯಾಣ ಕರ್ನಾಟಕದ ಕನಸುಗಾರ, ಅಭಿವೃದ್ಧಿಯ ಹರಿಕಾರ, ರೈತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯವು ಕಂಡ ಸಮೃದ್ಧಿ ಮತ್ತು ಅಭಿವೃದ್ಧಿ ಸದಾ ಸ್ಮರಣೀಯ. ನಿಮ್ಮ ಸೇವಾ ಮನೋಭಾವ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಭಗವಂತನು ನಿಮಗೆ ಆಯುರಾರೋಗ್ಯ ಸೌಖ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
Heartfelt birthday greetings to the visionary of Kalyana Karnataka, the pioneer of development, and the champion of farmers, former Chief Minister Shri B.S. Yediyurappa.
The prosperity and progress our state achieved under your distinguished leadership remain truly unforgettable. Your unwavering commitment to public service continues to be a source of inspiration for us all. We pray that the Almighty blesses you with robust health, happiness, and a long life.
#BSYediyurappa
#SaptagiriGowda #Bengaluru
#KarnatakaLeader #FarmerLeader #DevelopmentVisionary #HBDBSY #KarnatakaPolitics #Inspiration #LeaderOfMasses
#eebaarisapthagiri #time4sapthagiri #BJPYeBharavase #bjpgandhinagara #ಈಬಾರಿಸಪ್ತಗಿರಿ #sapthagiri4gandhinagar #ಸಪ್ತಗಿರಿ
‘ಮೈಸೂರು ಮುಡಾ’ ಹಗರಣದ ಗಟಾರವಾಗಿದೆ. ತಡವಾಗಿ ಬೆಳಕಿಗೆ ಬಂದ ಸಾವಿರಾರು ಕೋಟಿ ಬೆಲೆಯ ನಿವೇಶನಗಳ ಕಬಳಿಕೆಯ ಬ್ರಹ್ಮಾಂಡ ಭ್ರಷ್ಟಾಚಾರ ನಿವೇಶನಕ್ಕಾಗಿ ಅರ್ಜಿಹಾಕಿ ಕಾದು ಕುಳಿತ ಮೈಸೂರಿನ ಲಕ್ಷಕ್ಕೂ ಹೆಚ್ಚಿನ ಸೂರು ರಹಿತರನ್ನು ಕಂಗೆಡಿಸಿದೆ. ತವರು ಜಿಲ್ಲೆಯ ಈ ಮಹಾ ಹಗರಣದಲ್ಲಿ ಮುಖ್ಯಮಂತ್ರಿಗಳೂ ಭಾಗಿದಾರರೆಂಬ ಆರೋಪ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಮಾತು ನೆನಪಿಸುತ್ತಿದೆ.
ಐದು ಸಾವಿರದಷ್ಟು ನಿವೇಶನ ನುಂಗಿದ ಭೂ ಮಾಫಿಯಾದ ಪೋಷಕ ಸ್ವತಃ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಎಂಬುದನ್ನು ಪುಷ್ಠಿ ನೀಡಲು ವರ್ಗಾವಾದ ಜಿಲ್ಲಾಧಿಕಾರಿಗಳು ಬರೆದ ಸರಣೀ ಪತ್ರಗಳು ಹಾಗೂ ಸರ್ಕಾರವೇ ರಚಿಸಿದ ತಜ್ಞರ ತನಿಖಾ ತಂಡದ ವರದಿ ಸಾಕ್ಷಿ ಹೇಳುತ್ತಿವೆ.
ಹಗರಣ ಬೆಳಕಿಗೆ ಬರತ್ತಿದ್ದಂತೆ ಆಕಾಶಮಾರ್ಗದಲ್ಲಿ ದಿಢೀರ್ ಮೈಸೂರಿಗೆ ತೆರಳಿ ಸಭೆ ನಡೆಸಿರುವ ಸಚಿವರು ಆರೋಪಿತ ಅಧಿಕಾರಿಗಳನ್ನು ರಕ್ಷಿಸಲು ವರ್ಗಾವಣೆಯ ನಾಟಕವಾಡಿ ಅಕ್ರಮದ ಸಾಕ್ಷಿ ಹೊತ್ತ ಕಡತಗಳಿಗೆ ಮೋಕ್ಷ ಕಾಣಿಸುವ ಮಾರ್ಗ ಸೂಚಿಸಿ, ತನಿಖೆ ಎಂಬ ನಾಟಕ ಆಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ, ಈ ನಡುವೆ ಹಗರಣ ಬಯಲಿಗೆ ಬರಲು ಕಾರಣರಾದ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ತನಿಖೆ ದಿಕ್ಕು ತಪ್ಪಿಸುವ ಸಂಚು ಎಂದು ಹೇಳಲಾಗುತ್ತಿದೆ.
ಮಾನ್ಯ ಮುಖ್ಯಮಂತ್ರಿಗಳನ್ನು ಗುರಾಣಿ ಮಾಡಿಕೊಳ್ಳಲು ಅವರ ಕುಟುಂಬದ ಸದಸ್ಯರನ್ನು ಈ ಹಗರಣದಲ್ಲಿ ಮಾಫಿಯಗಳು ಸಿಲುಕಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇಂಥಾ ಬಹುಕೋಟಿ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಬೇಕಾದರೆ
ಮುಖ್ಯಮಂತ್ರಿಗಳಿಗಿರುವುದು ಒಂದೇ ದಾರಿ ಅದು “ CBI ತನಿಖೆ” ಮಾತ್ರ.
ಅದು ಬಿಟ್ಟು ನಡೆಯುವ ಇನ್ಯಾವುದೇ ತನಿಖೆಯೂ ಹಗರಣವನ್ನು ಮುಚ್ಚಿಹಾಕುವ ‘ಕಣ್ಣೊರೆಸುವ ನಾಟಕ ‘ಎನಿಸಿಕೊಳ್ಳುತ್ತದೆ.
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪ್ರಖರ ರಾಷ್ಟ್ರೀಯವಾದಿಗಳು, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿಗಳಾದ ಶ್ರೀ @AgrawalRMD, ಕೇಂದ್ರದ ಮಾಜಿ ಸಚಿವರಾದ ಶ್ರೀ @bhagwantkhuba, ಮಾಜಿ ಸಚಿವರಾದ ಶ್ರೀ @PrabhuChavanBJP, ವಿಧಾನ ಪರಿಷತ್ ಸದಸ್ಯರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ ಮತ್ತು ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಧಾನಿ ಶ್ರೀ @narendramodi ಅವರು ಮಣಿಪುರದ ಗಲಭೆ, ಎಂಎಸ್ಪಿ, ನೀಟ್ ಪರೀಕ್ಷೆಗಳ ಕುರಿತು ಮಾತನಾಡುವುದೇ ಇಲ್ಲ ಎಂದು ಸುಳ್ಳು ಸುಳ್ಳೆ ಮಾತನಾಡುತ್ತಿರುವ ಕಾಂಗ್ರೆಸ್ ಪಾಕ್ಷದವರು ಈ ವಿಡಿಯೋವನ್ನು ಗಮನವಿಟ್ಟು ನೋಡಿ. ಕಾಂಗ್ರೆಸ್ ಸುಳ್ಳುಗಳಿಗೆ ಇಲ್ಲಿದೆ ಉತ್ತರ…
#CongressLies
“99 ಅಂಕ ಪಡೆದ ಒಬ್ಬ ಬಾಲಕ ಊರಿಡೀ ತಿರುಗುತ್ತಾ ತನ್ನ ಅಂಕದ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿದ್ದ. ಆಗ ಆತನ ಟೀಚರ್ ಬಂದು ನೀನು 100ಕ್ಕೆ 99 ಪಡೆದಿದ್ದಲ್ಲ, 543 ಕ್ಕೆ 99 ಪಡೆದಿದ್ದೀಯ ಎಂದೆನ್ನುತ್ತಾರೆ.
ಈಗ ಮಂದ ಬುದ್ಧಿಯ ಆ ಬಾಲಕನಿಗೆ ನೀನು ಸೋಲಿನ ವಿಶ್ವ ದಾಖಲೆ ಮಾಡಿದ್ದೀಯ ಎಂದು ಮನವವರಿಕೆ ಮಾಡುವವರು ಯಾರು?”
@narendramodi
ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರನ್ನು ಮಾನ್ಯ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ಅವರೊಂದಿಗೆ ಭೇಟಿ ಮಾಡಿದ ಸಂದರ್ಭ.
During the meeting between Lok Sabha Speaker Shri Om Birla avaru and the Hon‘ble former Prime Minister Shri H.D. Devegowda avaru.
@ombirlakota@LokSabhaSectt@loksabhaspeaker