ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್'ನಿಂದ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರದ ಅಂತಿಮ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭಕೋರುವೆ. ಸದ್ಯದಲ್ಲೇ ಇನ್ನುಳಿದ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.
ಜಗ್ಗದೆ ಕುಗ್ಗದೆ ಮುಂದುವರೆದಿದೆ #BharathAikyataYatre ಐತಿಹಾಸಿಕ ಯಾತ್ರೆಯು ನಿಮ್ಮ ಮನೆಗೆ ಹತ್ತಿರವಾಗುತ್ತಿದೆ ಮತ್ತು ಕನ್ನಡಿಗರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ.
ಭಾರತ ಜೋಡೋ ಯಾತ್ರೆಯು ಕರ್ನಾಟಕಕ್ಕೆ ಪ್ರವೇಶಿಸಿದ್ದು ಗುಂಡ್ಲುಪೇಟೆಯಿಂದ ಪ್ರಾರಂಭಗೊಂಡ ಯಾತ್ರೆಯೆಲ್ಲಿ @RahulGandhi ಅವರ ಜೊತೆಗೂಡಿ ಹೆಜ್ಜೆ ಹಾಕಲಾಯಿತು.
ಸಶಕ್ತ ಭಾರತವನ್ನು ನಿರ್ಮಿಸಲು ಹೊರಟಿರುವವರ ಪಾದಗಳು ವಿಶ್ರಾಂತಿ ಕೇಳದು, ಇಚ್ಚಾಶಕ್ತಿ ಇರುವಾಗ ದಣಿವು ಅರಿಯದು.
ಭಾರತ ಐಕ್ಯತಾ ಯಾತ್ರೆಯ ಕನ್ನಡದ ಈ ಧ್ಯೇಯ ಗೀತೆ ನಿಮ್ಮೆಲ್ಲರ ಮನದಲ್ಲಿ ಹೊಸ ಉತ್ಸಾಹ ಮೂಡಿಸಲಿದೆ,
ಕೇಳಿ..
ಬನ್ನಿ ಭವ್ಯ ಭಾರತಕ್ಕಾಗಿ ನಮ್ಮೊಂದಿಗೆ ಹೆಜ್ಜೆ ಹಾಕಿ.
#BharatJodoYatra
ನಮ್ಮ ನಾಯಕರಾದ @RahulGandhi ಅವರ ಐತಿಹಾಸಿಕ ಭಾರತ ಐಕ್ಯತಾ ಪಾದಯಾತ್ರೆಗೆ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಇಂದು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದೆವು.
ವೈವಿಧ್ಯತೆಯ ಭಾರತವನ್ನು ಸ್ನೇಹ, ಪ್ರೀತಿಯ ನೆಲೆಯಲ್ಲಿ ಒಂದುಗೂಡಿಸುವ ಈ ಯಾತ್ರೆ ಯಶಸ್ವಿಯಾಗಲಿ ಎಂದು ಮನಸ್ಪೂರ್ತಿಯಾಗಿ ಹಾರೈಸುತ್ತೇನೆ.
#BharatJodoYatra
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಹುತಾತ್ಮರ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆ. ನನ್ನ ಧರ್ಮ ಸತ್ಯ ಹಾಗೂ ಅಹಿಂಸೆಯ ಮೇಲೆ ಸ್ಥಿರವಾಗಿದೆ. ಸತ್ಯವೇ ನನ್ನ ದೇವರು ಎಂದು ಹೇಳಿದವರು ಮಹಾತ್ಮ ಗಾಂಧೀಜಿ. ಅಂತಹ ಸತ್ಯದ ಮಹಾಮೂರ್ತಿ ಅಸ್ತಂಗತರಾದ ದಿನವಿದು. ಕೊನೆಯುಸಿರಿನಲ್ಲೂ ರಾಮನ ಜಪ ಮಾಡಿದ ಮಹಾತ್ಮ ಅವರು.
1/2
#MartyrsDay
ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿರುವ @utkhader ಅವರಿಗೆ ಅಭಿನಂದನೆಗಳು.
ಉತ್ತಮ ಸಂಸದೀಯಪಟುವಾಗಿರುವ ಖಾದರ್,
ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ಭರವಸೆ ನನಗಿದೆ.
ಅವರಿಗೆ ಶುಭ ಹಾರೈಸುತ್ತೇನೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಯುಕ್ತ, ಸಿಂದಗಿ ನಗರದ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @DKShivakumar,ಕಾರ್ಯಾಧ್ಯಕ್ಷರಾದ @eshwar_khandre,ಮಾಜಿ ಸಚಿವರಾದ @MBPatil ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ಸಿಂದಗಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಸಭೆಯಲ್ಲಿ ಕಾಂಗ್ರೆಸ್ ಸಾಧನೆ, ಅಭ್ಯರ್ಥಿ ಶ್ರೀ ಅಶೋಕ್ ಮನಗೂಳಿ ಕುರಿತ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದೆ. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ ಖಂಡ್ರೆ, ಶ್ರೀ ಧ್ರುವನಾರಾಯಣ್, ಮಾಜಿ ಸಚಿವರಾದ ಶ್ರೀ ಎಂ.ಬಿ. ಪಾಟೀಲ್, ಮತ್ತಿತರ ನಾಯಕರು ಉಪಸ್ಥಿತರಿದ್ದರು.
ನಾನು ಮತ್ತು ನನ್ನಂತಹ ಕೋಟ್ಯಾಂತರ ಜನ ನಿರ್ಬೀತಿ, ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ಸಂಘ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ.
- @siddaramaiah
(ವಿಧಾನಸಭೆ ವೀರೊಧ ಪಕ್ಷದ ನಾಯಕರು)
#BRAmbedkar#Congress
ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾದ ಕ್ಯಾಪ್ಟನ್ ಸತೀಶ್ ಶರ್ಮಾ ಅವರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಸರಳ ವ್ಯಕ್ತಿತ್ವದ ನಾಯಕ
@RahulGandhi
ಭಗವಂತ ಸತೀಶ್ ಶರ್ಮಾ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
#RahulGandhi#Congress
ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತೋತ್ಸವ ಪ್ರಯುಕ್ತ ಇಂದು ಭಾಲ್ಕಿ ಪಟ್ಟಣದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪ ಮಾಲಾರ್ಪಣೆ ಮಾಡುವ ಮೂಲಕ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು ತಹಸೀಲ್ದಾರು,ಸಮಾಜದ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. #ShivajiMaharaj#ShivajiJayanti
ಶತಕ ಬಾರಿಸಿದ ಪೆಟ್ರೋಲ್ ಬೆಲೆ
▶ ಪೆಟ್ರೋಲ್ ಮೂಲ ಬೆಲೆ ₹30
▶ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆ ₹33
▶ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆ ₹20
ಪ್ರಧಾನಿಗಳು, ಮುಖ್ಯಮಂತ್ರಿಗಳು ಈ ಭಾರಿ ತೆರಿಗೆ ಕಡಿಮೆ ಮಾಡುತ್ತಿಲ್ಲ ಏಕೆ?
ಸತತ 9 ದಿನಗಳವರೆಗೆ ಬೆಲೆ ಹೆಚ್ಚಳ, ಜನಸಾಮಾನ್ಯರ ಸಂಕಷ್ಟಗಳಿಗೆ ಕಲ್ಲಾದ ಸರ್ವಾಧಿಕಾರಿ ಬಿಜೆಪಿ ಸರ್ಕಾರ.
ಕಳೆದ ಕೆಲವು ತಿಂಗಳುಗಳ ಬೆಲೆ ಹೆಚ್ಚಳ
➡ ಅಡುಗೆ ಅನಿಲ : ₹597 ರಿಂದ ₹ 769
➡ ಅಡುಗೆ ಎಣ್ಣೆ : ₹85 ರಿಂದ ₹ 142
➡ ಪೆಟ್ರೋಲ್ : ₹83 ರಿಂದ ₹ 93
➡ ಡೀಸೆಲ್ : ₹74 ರಿಂದ 85
➡ ಸಿಮೆಂಟ್ : ₹325 ರಿಂದ ₹ 450
➡ ಸ್ಟೀಲ್ : ₹40 ಸಾವಿರದಿಂದ ₹ 64 ಸಾವಿರ
ಜನಸಾಮಾನ್ಯರು ನರಳುತ್ತಿದ್ದಾರೆ,
ಇದೇನಾ 'ಅಚ್ಚೆ ದಿನ್'?
ಕೋವಿಡ್ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿನ ಭ್ರಷ್ಟಾಚಾರ,ಕೊವಿಡ್ ಸೋಂಕಿತರ ಪರದಾಟ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಇಂದು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರು,ಕಾಂಗ್ರೆಸ್ ಕೊವಿಡ್ ಕಾರ್ಯಪಡೆ ಹಾಗೂ ವೈದ್ಯ ಘಟಕದ ಸಭೆಯಲ್ಲಿ ಸಮಾಲೋಚನೆ ನಡೆಸಿದೆ