ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ @narendramodi ಅವರು ಪ್ರಧಾನಿಯಾಗುವ ವರೆಗೆ ಇದ್ದ ಒಟ್ಟು ಸಾಲ 53 ಲಕ್ಷದ 11 ಸಾವಿರ ಕೋಟಿ, ಈ ವರ್ಷದ ಮಾರ್ಚ್ ಅಂತ್ಯಕ್ಕೆ ಆಗಿರುವ ಒಟ್ಟು ಸಾಲ 155 ಲಕ್ಷ ಕೋಟಿ.
ಕೇವಲ ಎಂಟು ವರ್ಷಗಳಲ್ಲಿ ದೇಶದ ಸಾಲ 102 ಲಕ್ಷ ಕೋಟಿ ದಾಟಿದೆ. 11/13
#ModiFailedIndia
ಎಪ್ರಿಲ್ 22 ಭೂದಿನವಾಗಿ ಆಚರಣೆ ಮಾಡಲಾಗುತ್ತದೆ. ಇದರ ಉದ್ದೇಶ ಮಾನವಕುಲಕ್ಕೆ ಜೀವಿಸಲು ಸೂಕ್ತವಾದ ಒಂದೇ ಒಂದು ಗೃಹವೆಂದರೆ ಅದು ನಮ್ಮ ಭೂಮಿ. ಮಾನವಕುಲವು ತನ್ನ ಅಜ್ಞಾನ ಹಾಗೂ ದುರಾಸೆಯಿಂದಾಗಿ ಭೂಮಿಯನ್ನು ನಿರಂತರವಾಗಿ ಹಾಳು ��ಾಡುತ್ತಿದೆ. ನಮ್ಮ ಭೂಮಿಯನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. @INCKarnataka @DKShivakumar
ಬ್ರಿಟಿಷರ ದೌರ್ಜನ್ಯ ಹಾಗೂ ದಬ್ಬಾಳಿಕೆಗೆ ಇಂದಿಗೂ ಸಹ ಜೀವಂತ ಸಾಕ್ಷಿಯಾದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಹಾಗೂ ಇದರಲ್ಲಿ ಹುತಾತ್ಮರಾದ ಪ್ರತಿಯೊಬ್ಬ ವ್ಯಕ್ತಿಯ ಬಲಿದಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಹುತಾ���್ಮರಿಗೆ ನನ್ನ ಕೋಟಿ ಕೋಟಿ ನಮನಗಳು. @INCKarnataka @DKShivakumar @SaleemAhmadINC @siddaramaiah @krishnabgowda
ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಿಂದ ಸಾಮಾನ್ಯ ಜನರ ಜನಜೀವನ ಕಡು ಕಷ್ಟಕ್ಕೆ ದೂರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಹಾಸನ ಜಿಲ್ಲೆ ಹಾಗೂ ಅರಕಲಗೂಡು ತಾಲೂಕುಗಳಿಗೆ ಆಗಮಿಸುತ್ತಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಸ್ವಾಗತವನ್ನು ಕೋರುತ್ತಿದ್ದೇನೆ. @INCKarnataka@siddaramaiah
ಸ್ವತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಖಾದಿ ಆಂದೋಲನದ ಮೂಲಕ ಬ್ರಿಟಿಷರಿಗೆ ಪ್ರಬಲ ಪ್ರತಿರೋಧ ಒಡ್ಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮಹಾತ್ಮ ಗಾಂಧೀಜಿ ಅವರ ಜೀವನಸಂಗಾತಿ ಕಸ್ತೂರಬಾ ಗಾಂಧಿ ಅವರ ಜನ್��ದಿನದಂದು ಅವರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸೋಣ
@INCKarnataka @siddaramaiah @DKShivakumar @kharge
ಎಪ್ರಿಲ್ 11 ಈ ದಿನ ಈ ದೇಶ ಕಂಡ ಮಹಾನ್ ಚೇತನವಾದ ಮಹಾತ್ಮ ಜ್ಯೋತಿ ಬಾಪುಲೆ ಅವರ ಜನ್ಮದಿನ ವಾಗಿದ್ದು ಶೋಷಿತರ ಹಾಗೂ ದಮನಿತರ ಶಿಕ್ಷಣ ಹಾಗೂ ��ಭಿವೃದ್ಧಿಯಲ್ಲಿ ಇವರ ಪಾತ್ರವೂ ಅವಿಸ್ಮರಣೀಯವಾದದ್ದು. ಈ ದಿನದಂದು ರಾಷ್ಟ್ರ ಅವರನ್ನ ಕೃತಜ್ಞತಾಪೂರ್ವಕವಾಗಿ ನೆನೆಯುತ್ತದೆ @INCKarnataka @DKShivakumar @siddaramaiah @krishnabgowda @kharge
ಇಂದು ವಿಶ್ವ ಆರೋಗ್ಯ ದಿನಾಚರಣೆ.
ಪ್ರತಿವರ್ಷ ಏಪ್ರಿಲ್ 7ನೇ ತಾರೀಖಿನಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ "ನಮ್ಮ ಭೂಮಿ ನಮ್ಮ ಆರೋಗ್ಯ". ನಾವೆಲ್ಲರೂ ಒಟ್ಟುಗೂಡಿ ನಮ್ಮ ಭೂಮಿಯನ್ನು ��ರಿಸರವನ್ನು ಶುಚಿಯಾಗಿಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮೂಲಕ ದೇಶವನ್ನು ನಿರ್ಮಿಸಬಹುದು. #WorldHealthDay2022
ಎಸೆಸೆಲ್ಸಿ ಮಕ್ಕಳಲ್ಲಿ ಪರೀಕ್ಷೆಯನ್ನು ಎದುರಿಸುವ ನಿಟ್ಟಿನಲ್ಲಿ ಉಂಟಾಗುವ ಮಾನಸಿಕ ತಳಮಳ ಹಾಗೂ ಉದ್ವೇಗವನ್ನು ನಿವಾರಿಸುವ ನಿಟ್ಟಿನಲ್ಲಿ ಕೊಣನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಮಕ್ಕಳಿಗೆ ಪರೀಕ್ಷಾ ಮಾರ್ಗದರ್ಶನವನ್ನು ನೀಡಲು ನನ್ನನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದ ಕ್ಷಣ.
#sslcexam@INCKarnataka@siddaramaiah