ಭದ್ರಾವತಿ ತಾಲ್ಲೂಕು ಅರದೊಟ್ಲು ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಮರಾಠ ಸಂಘ(ರಿ.)ದ ವತಿಯಿಂದ ಏರ್ಪಡಿಸಿದ್ದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಖ್ಯಾತ ಬಾಲವಾಗ್ಮಿ ದಿಕ್ಸೂಚಿ ಭಾಷಣಗಾರ್ತಿ ಕು. ಹಾರಿಕ ಮಂಜುನಾಥ್ ಜೊತೆಗೂಡಿ ಮುಸ್ಸಂಜೆಯ ಸುಂದರ ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು.
ಸನಾತನ ಹಿಂದೂ ಧರ್ಮದ ರಕ್ಷಣೆಗೆ ತನ್ನ ಜೀವವನ್ನು ಮುಡಿಪಾಗಿಟ್ಟ ಶಿವಾಜಿ ಮಹಾರಾಜರ ಧೈರ್ಯ, ಅಪ್ರತಿಮ ಸಾಹಸ, ಕೆಚ್ಚೆದೆಯ ಹೋರಾಟ ಮನೋಭಾವ, ಧರ್ಮ ನಿಷ್ಠೆ, ಯುದ್ಧ ನೈಪುಣ್ಯತೆ, ಆಡಳಿತ ವೈಖರಿ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಆತ್ಮಸ್ಥೈರ್ಯ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ರಾವ್ ಅವರು, ಶಾಸಕರಾದ ಶ್ರೀ ಶಾರದಾ ಪೂರ್ಯನಾಯ್ಕ ಅವರು, ಪ್ರಮುಖರಾದ ಶ್ರೀಮತಿ ಗೀತಾ ಸತೀಶ್ ಅವರು, ಶ್ರೀ ಲೋಕೇಶ್ ರಾವ್ ಅವರು, ಶ್ರೀ ಯಶವಂತ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
#bhadravati #ShivamoggaNews #byrshivamogga #BYRaghavendra #shivamogga #shivamoggaloksabhaconstituency
ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃಶಕ್ತಿ,ದುರ್ಗ ವಾಹಿನಿ ಮಂಚಿ ಘಟಕ, ಬಂಟ್ವಾಳ, ದ.ಕ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗೋಪೂಜೆ ಹಾಗೂ ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದ ಛಾಯಾಚಿತ್ರಗಳು
ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಕೋರಿದ ದಿವ್ಯತ್ರಯರಿಗು,ದೇಶ ಪ್ರೇಮಿಗಳಿಗು ಹಾಗೂ ಧರ್ಮ ರಕ್ಷಕರಾಗಿರುವಂಥಹ ಎಲ್ಲಾ ನನ್ನ ಅಕ್ಕ ಅಣ್ಣಂದಿರಿಗೂ ನನ್ನ ಪ್ರೀತಿಯ ನಮನಗಳು ನಿಮ್ಮೆಲ್ಲರ ಪ್ರೀತಿಯ ಆರೈಕೆ, ಆಶೀರ್ವಾದ, ಮಾರ್ಗದರ್ಶನ, ಸಲಹೆ ಹಾಗೂ ಬೆಂಬಲ ಸದಾ ನನ್ನ ಜೊತೆಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು