ಕಾನೂನು ಎಲ್ಲರಿಗೂ ಒಂದೇ ಅಲ್ಲವೇ @mangalurucorp ಆಯುಕ್ತರೇ?
SDPI ಕಾರ್ಯಕ್ರಮದ ಬ್ಯಾನರ್ ತೆರವುಗೊಳಿಸಲು ತೋರಿಸಿದ ಅದೇ 'ಕಾನೂನಿನ ಆಘಾತ' ಇಂದು ಕಾಂಗ್ರೆಸ್ ಪಕ್ಷದ ಬ್ಯಾನರ್ ಗಳ ವಿಚಾರದಲ್ಲಿ ಎಲ್ಲಿ ಮಾಯವಾಯಿತು? ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುವುದನ್ನು ಬಿಟ್ಟು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಿ.
Proud to be in Rajasthan, supporting our candidates in the upcoming Local Body Elections. Our candidates stand with the people for justice, development, transparency and accountable governance. Let us strengthen the voice of the people at the grassroots. #SDPI#Rajasthan
ದಾವಣಗೆರೆ ನಗರದ ಅಕ್ತರ್ ರಜಾ ಸರ್ಕಲ್ನಿಂದ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳಿಗಾಗಿ ನೇರ ನಗರ ಸಾರಿಗೆ ಬಸ್ ಸೇವೆ ಕಲ್ಪಿಸುವಂತೆ ಮನವಿ.
ದಾವಣಗೆರೆಯ ಅಕ್ತರ್ ರಜಾ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ತೆರಳುತ್ತಿದ್ದಾರೆ. ನೇರ ಬಸ್ ಸೇವೆ ಇಲ್ಲದ ಕಾರಣ ವಿದ್ಯಾರ್ಥಿಗಳು ಎರಡು ಬಸ್ಗಳನ್ನು ಬದಲಾಯಿಸಿಕೊಂಡು ಪ್ರಯಾಣಿಸಬೇಕಾಗಿದ್ದು, ಬೆಳಗಿನ ತರಗತಿಗಳಿಗೆ ತಡವಾಗುವ ಪರಿಸ್ಥಿತಿ ಎದುರಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಕ್ತರ್ ರಜಾ ಸರ್ಕಲ್–ವಿಶ್ವವಿದ್ಯಾಲಯ ನೇರ ಬಸ್ ಸೇವೆಯನ್ನು ಬೆಳಿಗ್ಗೆ ಹಾಗೂ ಅಗತ್ಯವಿರುವ ಪ್ರಮುಖ ಸಮಯಗಳಲ್ಲಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
@tdkarnataka, @KSRTC_Journeys, @SWDGoK, @SWComd_IA
ದಾವಣಗೆರೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಈ ಮನವಿಯನ್ನು ತುರ್ತಾಗಿ ಪರಿಗಣಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಬಸ್ ಸೇವೆ ಆರಂಭಿಸಬೇಕೆಂದು ಆಗ್ರಹಿಸುತ್ತೇನೆ.
— ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
#Davanagere #AkhtarRazaCircle #University #StudentTransport #PublicTransport #KSRTC #Karnataka
गोलवलकर के उत्तराधिकारियों को हिंदुस्तान के आज़ादी के रहनुमाओं को राष्ट्रविरोधी कहने का अधिकार नहीं
सोशल डेमोक्रेटिक पार्टी ऑफ इंडिया के राष्ट्रीय अध्यक्ष एम. के. फ़ैज़ी ने 1937 के वंदे मातरम् प्रस्ताव को "राष्ट्रविरोधी" और "मुस्लिम तुष्टीकरण" करार देने वाले केंद्रीय गृह मंत्री अमित शाह की कड़ी निंदा की। यह ऐतिहासिक प्रस्ताव सुभाष चंद्र बोस, जवाहरलाल नेहरू, मौलाना अबुल कलाम आज़ाद और आचार्य नरेंद्र देव के नेतृत्व में तैयार हुआ था। इसे रवींद्रनाथ टैगोर की सलाह के आधार पर महात्मा गांधी ने राष्ट्रीय एकता बनाए रखने के लिए समर्थन दिया था। उस सामूहिक फैसले को राष्ट्रविरोधी बताकर अमित शाह ने, दरअसल, हिंदुस्तान के आज़ादी के इन महान रहनुमाओं को ही राष्ट्रविरोधी ठहराया है.
फ़ैज़ी ने कहा कि हिंदुस्तान के आज़ादी के रहनुमाओं का अपमान करने या इतिहास को अपनी राजनीतिक सुविधा के मुताबिक बदलने का अधिकार किसी गृह मंत्री को नहीं है। यह विडंबना है कि आरएसएस के ऐसे उत्तराधिकारी आज आज़ादी के सिपाहियों की देशभक्ति पर सवाल उठा रहे हैं, जबकि आरएसएस के दूसरे सरसंघचालक एम. एस. गोलवलकर ने कहा था, "हिंदुओं, अंग्रेज़ों से लड़ने में अपनी ऊर्जा बर्बाद मत करो। अपनी ऊर्जा हमारे आंतरिक शत्रुओं, यानी मुसलमानों, ईसाइयों और कम्युनिस्टों से लड़ने में लगाओ।" ऐसी विरासत के उत्तराधिकारियों को हिंदुस्तान के आज़ादी के सिपाहियों की देशभक्ति पर सवाल उठाने का कोई नैतिक अधिकार नहीं है।
ಚಲೋ ಬೆಂಗಳೂರು – ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ
ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಮೀಸಲಾತಿ ಹಾಗೂ ಶಿಕ್ಷಣದ ಹಕ್ಕುಗಳಿಗಾಗಿ SDPI ಕರ್ನಾಟಕ ವತಿಯಿಂದ ಚಲೋ ಬೆಂಗಳೂರು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
📅 ದಿನಾಂಕ: 19 ಆಗಸ್ಟ್ 2026
⏰ ಸಮಯ: ಬೆಳಿಗ್ಗೆ 10:30
📍 ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು
✊ ನಮ್ಮ ಪ್ರಮುಖ ಬೇಡಿಕೆಗಳು:
🔹 ಮಧುಸೂದನ್ ನಾಯಕ್ ನೇತೃತ್ವದ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು.
🔹 2B ಮೀಸಲಾತಿಯನ್ನು ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಿಸಬೇಕು.
🔹 ಕರ್ನಾಟಕದಲ್ಲಿ ಸಮಾನ ಅವಕಾಶಗಳ ಆಯೋಗವನ್ನು (Equal Opportunity Commission) ಸ್ಥಾಪಿಸಬೇಕು.
🔹 ಖಾಸಗಿ ವಲಯದ ಉದ್ಯೋಗಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಕಲ್ಪಿಸಲು ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.
🔹 15,000 ಶಿಕ್ಷಕರ ನೇಮಕಾತಿಯಲ್ಲಿ ಉರ್ದು, ಹಿಂದಿ, ಮರಾಠಿ ಹಾಗೂ ಗಣಿತ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅಗತ್ಯ ಹುದ್ದೆಗಳನ್ನು ತಕ್ಷಣ ಸೇರ್ಪಡೆಗೊಳಿಸಬೇಕು.
ಇವು ಕೇವಲ ಕೆಲವು ಸಮುದಾಯಗಳ ಬೇಡಿಕೆಗಳಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ.
ಜಾತಿ, ಧರ್ಮ, ಭಾಷೆ ಹಾಗೂ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಯಾವುದೇ ವ್ಯಕ್ತಿಗೂ ಅವಕಾಶಗಳ ನಿರಾಕರಣೆ ಅಥವಾ ತಾರತಮ್ಯವಾಗದಂತಹ ನ್ಯಾಯಯುತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ.
ಜನರ ಹಕ್ಕುಗಳಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಮಾನ ಅವಕಾಶಗಳಿಗಾಗಿ—ನಾವೆಲ್ಲರೂ ಒಂದಾಗಿ ಧ್ವನಿ ಎತ್ತೋಣ.
ಆಗಸ್ಟ್ 19ರಂದು ಫ್ರೀಡಂ ಪಾರ್ಕ್ಗೆ ಬನ್ನಿ…
ಚಲೋ ಬೆಂಗಳೂರು ಹೋರಾಟವನ್ನು ಯಶಸ್ವಿಗೊಳಿಸೋಣ
– ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
#ChaloBengaluru #SDPIKarnataka #SocialJustice #EqualOpportunity #CasteCensus #Restore2B #PrivateSectorReservation #UrduTeachers #EducationRights #SDPIForHumanity #PoliticalPowerIsTheMasterKey
Happy 80th Independence Day
The real strength of India lies in the dignity and freedom of its people. Wishing everyone a proud and joyful 80th Independence Day!
MOHAMMAD SHAFI
National Vice President
#IndependenceDayIndia#HappyIndependenceDay#IndiaAt80
80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ
ಆಹ್ವಾನ ಪತ್ರಿಕೆ
ಆತ್ಮೀಯರೇ,
ನಮ್ಮ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರ ಹಾಗೂ ಶುಭ ಸಂದರ್ಭದಲ್ಲಿ, SIR ಜಾಗೃತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಶ್ರಮಿಸಿದ ಸ್ವಯಂಸೇವಕರಿಗೆ ಹಾಗೂ ವಿಶೇಷ ವ್ಯಕ್ತಿಗಳನ್ನು ಗೌರವಿಸಿ "ಸನ್ಮಾನ ಸಮಾರಂಭ" ವನ್ನು ಹಮ್ಮಿಕೊಳ್ಳಲಾಗಿದೆ.
ಈ ಸುಂದರ ಕಾರ್ಯಕ್ರಮಕ್ಕೆ ನಿಮ್ಮನ್ನು ಆದರದಿಂದ ಆಹ್ವಾನಿಸುತ್ತಿದ್ದೇವೆ.
ದಿನಾಂಕ: ಆಗಸ್ಟ್ 15 (ಶನಿವಾರ )
ಸಮಯ: ಬೆಳಿಗ್ಗೆ ೦8:೦೦ ಗಂಟೆಗೆ (ಧ್ವಜಾರೋಹಣದ ನಂತರ)
ಸ್ಥಳ: ಎಸ್ ಡಿ ಪಿ ಐ ಜಿಲ್ಲಾ ಕಚೇರಿ ದಾವಣಗೆರೆ
#happyindependenceday2026
ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
Young Democrats – Mangaluru City District Organising Committeeಗೆ ನೂತನವಾಗಿ ನೇಮಕಗೊಂಡಿರುವ ಎಲ್ಲಾ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
Convenor: #Muhammed_Irfan
Joint Convenors: #Sunitha_Saldhana & #Abdul_Tanveer
ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೆ ನನ್ನ ಆತ್ಮೀಯ ಶುಭಾಶಯಗಳು.
ಯುವಜನರ ಶಕ್ತಿ, ಉತ್ಸಾಹ, ಚಿಂತನೆ ಮತ್ತು ನಾಯಕತ್ವವನ್ನು ಪ್ರಜಾಸತ್ತಾತ್ಮಕ ಹಾಗೂ ಸಾಮಾಜಿಕ ನ್ಯಾಯದ ಹೋರಾಟದೊಂದಿಗೆ ಬೆಸೆಯುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ.
ನಿಮ್ಮ ಸಂಘಟನಾ ಚಟುವಟಿಕೆಗಳು ಮತ್ತಷ್ಟು ಬಲಿಷ್ಠವಾಗಲಿ, ಯುವಜನರನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಿ ಹಾಗೂ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ.
ನಿಮ್ಮೆಲ್ಲರಿಗೂ ಯಶಸ್ಸು, ಶಕ್ತಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಹಾರೈಸುತ್ತೇನೆ.
ಮುಂದಿನ ಪೀಳಿಗೆಯ ನಾಯಕತ್ವಕ್ಕೆ ನಿಮ್ಮ ಹೆಜ್ಜೆಗಳು ಮಾದರಿಯಾಗಲಿ
#YoungDemocrats #MangaluruCity #YouthLeadership #SocialJustice #Democracy #Equality #SDPI #Karnataka
ಪತ್ರಿಕಾಗೋಷ್ಠಿ
ಗಂಗಾವತಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಗ್ಯಾರಂಟಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ದಾಖಲೆಗಳ ಕಡಿವಾಣ : ವಾರೆಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳನ್ನು ಉದ್ದೇಶಿಸಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು..
ಎಸ್ಡಿಪಿಐ ಪಕ್ಷ ಹಾಗೂ ಎಲ್ಲ ಜನಪರ ಸಂಘಟನೆಗಳು Enumeration Forms Filling Process ಅನ್ನು ಕನಿಷ್ಠ ಒಂದು ತಿಂಗಳ ಕಾಲ ಮುಂದೂಡಬೇಕೆಂದು ಒತ್ತಾಯ ಮಾಡಿದ್ದವು. ಚುನಾವಣಾ ಆಯೋಗವು SIRನ ಮೊದಲ ಹಂತದ ಪ್ರಕ್ರಿಯೆಯನ್ನು ಆಗಸ್ಟ್ 17ರವರೆಗೆ ವಿಸ್ತರಿಸಿರುವುದು ಸಂತೋಷಕರವಾದರೂ, ಎಲ್ಲ ನಾಗರಿಕರ ಆಗ್ರಹ ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಣೆ ನೀಡಬೇಕೆಂಬುದಾಗಿದೆ.
ಪರಿಷ್ಕೃತ ದಿನಾಂಕ ಹೀಗಿದೆ — ಗಮನಿಸಿ:
ಒಬ್ಬ ಅರ್ಹ ಮತದಾರನ ಹೆಸರೂ ಮತದಾರರ ಪಟ್ಟಿಯಿಂದ ತಪ್ಪಿಹೋಗಬಾರದು.
ಇದು ಕೇವಲ ದಿನಾಂಕ ವಿಸ್ತರಣೆ ಅಲ್ಲ — ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತೊಂದು ಅವಕಾಶ.
ಮತದಾನದ ಹಕ್ಕು ಕೇವಲ ಹಕ್ಕಲ್ಲ, ಅದು ನಮ್ಮ ಪ್ರಜಾಪ್ರಭುತ್ವದ ಶಕ್ತಿ.
#SpecialIntensiveRevision
ಹೊಸದುರ್ಗದಲ್ಲಿ ಇಂದು ನಡೆದ SIR (Special Intensive Revision) ಪ್ರಕ್ರಿಯೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರಕಿತು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೌಸಿಯಾ ಶಾದಿ ಮಹಲ್ನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, SIR ಪ್ರಕ್ರಿಯೆಯಲ್ಲಿನ ಕಾನೂನಾತ್ಮಕ ತೊಡಕುಗಳು, ಸವಾಲುಗಳು ಮತ್ತು ಪರಿಹಾರಗಳ ಕುರಿತು ಸಾರ್ಥಕ ಚರ್ಚೆ ನಡೆಯಿತು.
ನಾನು ಮಾತನಾಡುವ ವೇಳೆ RTI ಮೂಲಕ ಲಭಿಸಿದ “SIR ಜಾರಿ ಚುನಾವಣಾ ಆಯೋಗದ ನಿರ್ಧಾರವಲ್ಲ” ಎಂಬ ಉತ್ತರವು ಪ್ರಜಾಪ್ರಭುತ್ವದ ಮುಂದೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಹೇಳಿದೆ. ಇಂತಹ ಮಹತ್ವದ ಚುನಾವಣಾ ಪ್ರಕ್ರಿಯೆಯನ್ನು ಯಾರು ನಿರ್ಧರಿಸಿದರು? ಯಾವ ಕಾನೂನು ಮತ್ತು ದಾಖಲೆಗಳ ಆಧಾರದ ಮೇಲೆ ಜಾರಿಗೆ ತರಲಾಗಿದೆ? ಎಂಬ ಪ್ರಶ್ನೆಗಳು ಇನ್ನೂ ಸ್ಪಷ್ಟ ಉತ್ತರಗಳನ್ನು ಕಾಯುತ್ತಿವೆ.
ಮತದಾರರ ಪಟ್ಟಿ ಎಂಬುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಿಗೆ ಸಂಬಂಧಿಸಿದ ಮಹತ್ವದ ದಾಖಲೆ. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ, ನಿರ್ಧಾರಗಳ ಅಸ್ಪಷ್ಟತೆ ಹಾಗೂ ಹಲವು ವೈರುಧ್ಯಗಳು ಗೋಚರಿಸುತ್ತಿವೆ.
ಕರ್ನಾಟಕದಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಡಿಲೀಟ್ ಆಗುವ ಅಪಾಯ ಎದುರಾಗಿದೆ. ಸುಮಾರು 1.1 ಕೋಟಿ ಮತಗಳು ಅಪಾಯದಲ್ಲಿದ್ದು, ಅನೇಕ ಮತಗಳು ಇನ್ನೂ ಮ್ಯಾಪಿಂಗ್ ಆಗದೆ ಉಳಿದಿವೆ ಎಂಬ ಮಾಹಿತಿ ಆತಂಕಕಾರಿ.
SIR ಪ್ರಕ್ರಿಯೆಯ ಪ್ರಮುಖ ಸಮಸ್ಯೆಗಳು:
• ಅಸಂವಿಧಾನಿಕ ಮತ್ತು ಸಂಕೀರ್ಣ ಪ್ರಕ್ರಿಯೆ
• BLO ಗಳಿಗೆ ಸಮರ್ಪಕ ತರಬೇತಿ ಕೊರತೆ
• ಶಿಫ್ಟ್ ಆದ ಮತದಾರರ ಹೆಸರುಗಳನ್ನು ತಪ್ಪಾಗಿ ಡಿಲೀಟ್ ಮಾಡುತ್ತಿರುವುದು
ಈ ಹಿನ್ನೆಲೆದಲ್ಲಿ ಮದುವೆಯಾಗಿ ಸ್ಥಳಾಂತರವಾದ ಮಹಿಳೆಯರು, ಉದ್ಯೋಗಕ್ಕಾಗಿ ಸ್ಥಳ ಬದಲಿಸಿದವರು ಸೇರಿದಂತೆ ಅನೇಕ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ.
ಈ ಸಂದರ್ಭದಲ್ಲಿ ನಾನು ಮುಂದಿಟ್ಟ ಪ್ರಮುಖ ಬೇಡಿಕೆಗಳು:
• SIR ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು
• ಎನ್ಯುಮರೇಷನ್ ಅವಧಿಯನ್ನು ವಿಸ್ತರಿಸಿ ಮನೆಮನೆಗೆ ಪರಿಶೀಲನೆ ನಡೆಸಬೇಕು
• ಶಿಫ್ಟ್ ಆದ ಮತದಾರರಿಗೆ ಫಾರ್ಮ್ 8 ಮೂಲಕ ಮತಾಂತರ ಅವಕಾಶ ನೀಡಬೇಕು, ಡಿಲೀಷನ್ ತಪ್ಪಿಸಬೇಕು
• ಹೊಸ ಮತದಾರರ ನೋಂದಣಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
• ಪ್ರತಿ ಬೂತ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು
• ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಬೇಕು
ಯಾವುದೇ ಕಾರಣಕ್ಕೂ ದೋಷಪೂರಿತ SIR ಪಟ್ಟಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅಗತ್ಯವಿದ್ದರೆ ರಾಜ್ಯವ್ಯಾಪಿ ಹೋರಾಟಗಳನ್ನು ತೀವ್ರಗೊಳಿಸುತ್ತೇವೆ.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಪವಿತ್ರವಾದುದು. ಅದರ ರಕ್ಷಣೆಗೆ ಎಲ್ಲರೂ ಒಂದಾಗಿ ಧ್ವನಿ ಎತ್ತಬೇಕಾದ ಸಮಯ ಇದು.
#RejectSIR #SaveDemocracy #RightToVote
#hosdurgha
ಗ್ಯಾರಂಟಿ ಯೋಜನೆಗಳು – ಜನರಿಗಾಗಿ ಅಥವಾ ಕೇವಲ ಘೋಷಣೆಗಳಿಗಷ್ಟೇ..?
ದಾವಣಗೆರೆಯ ಪತ್ರಿಕಾ ಭವನದಲ್ಲಿ "ಗ್ಯಾರಂಟಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ದಾಖಲೆಗಳ ಕಡಿವಾಣ: ವಾರೆಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳು" ಇದರ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನಾನು ಮಾತನಾಡಿದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ರಾಜ್ಯ ಸರ್ಕಾರವು ಭರವಸೆಗಳೊಂದಿಗೆ ಘೋಷಿಸಿದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಪಿಂಚಣಿಗಳು ಜನರಿಗೆ ಸುಲಭವಾಗಿ ತಲುಪಬೇಕಾಗಿತ್ತು. ಆದರೆ ಇಂದು ಅನಗತ್ಯ ದಾಖಲೆಗಳ ಬೇಡಿಕೆ, ಅವೈಜ್ಞಾನಿಕ ಆದಾಯ ಮಿತಿಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಡವರು, ವಯೋವೃದ್ಧರು, ವಿಧವೆಯರು, ಅಂಗವಿಕಲರು ಮತ್ತು ನಿರ್ಗತಿಕರು—ಇವರು ಈ ಯೋಜನೆಗಳ ನಿಜವಾದ ಫಲಾನುಭವಿಗಳು. ಆದರೆ ಇಂದು ಇವರನ್ನೇ ದಾಖಲೆಗಳ ನೆಪದಲ್ಲಿ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
👉 ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಮತ್ತೆ ಅರ್ಜಿ ಮತ್ತು ದಾಖಲೆಗಳ ಕಿರುಕುಳ ಯಾಕೆ?
👉 ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಜಮೆಯಾಗದೇ ತಿಂಗಳುಗಟ್ಟಲೆ ಬಾಕಿ ಉಳಿಯುವುದೇಕೆ?
👉 ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಘೋಷಿಸಿದ್ದರೂ, ಬಸ್ಗಳ ಸಂಖ್ಯೆಯನ್ನು ಹೆಚ್ಚಿಸದಿರುವುದು ಯಾಕೆ?
👉 ಸಾಮಾಜಿಕ ಭದ್ರತಾ ಪಿಂಚಣಿಗೆ ₹32,000 ಆದಾಯ ಮಿತಿ ಇಂದಿನ ಕಾಲಘಟ್ಟದಲ್ಲಿ ಯುಕ್ತವೇ?
ಇವು ಕೇವಲ ಪ್ರಶ್ನೆಗಳು ಅಲ್ಲ—ಜನರ ನಿಜವಾದ ನೋವು.
ಇತರ ರಾಜ್ಯಗಳಲ್ಲಿ ಜನಪರವಾಗಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಹಳೆಯ ಹಾಗೂ ಅವೈಜ್ಞಾನಿಕ ನಿಯಮಗಳಿಂದ ಸಾವಿರಾರು ಅರ್ಹರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಒಂದು ಕಡೆ ಬಿಪಿಎಲ್ ಆದಾಯ ಮಿತಿಯನ್ನು ಹೆಚ್ಚಿಸುವ ಚರ್ಚೆ ನಡೆಯುತ್ತಿರುವಾಗ, ಇನ್ನೊಂದು ಕಡೆ ಪಿಂಚಣಿಗೆ ಇನ್ನೂ ₹32,000 ಮಿತಿಯನ್ನು ಮುಂದುವರಿಸುವುದು ಅನ್ಯಾಯಕರ.
ನಮ್ಮ ಸ್ಪಷ್ಟ ಆಗ್ರಹಗಳು:
✔️ ₹32,000 ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಿ, ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು
✔️ ಬಿಪಿಎಲ್ ಫಲಾನುಭವಿಗಳಿಗೆ ಅನಗತ್ಯ ದಾಖಲೆ ಕಿರುಕುಳ ನಿಲ್ಲಿಸಬೇಕು
✔️ ಗೃಹ ಜ್ಯೋತಿ ಮರುದಾಖಲೀಕರಣ ಪ್ರಕ್ರಿಯೆಯನ್ನು ರದ್ದುಪಡಿಸಬೇಕು
✔️ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು
✔️ ಶಕ್ತಿ ಯೋಜನೆ ಪರಿಣಾಮಕಾರಿಯಾಗಲು ಹೆಚ್ಚುವರಿ ಬಸ್ಗಳನ್ನು ಒದಗಿಸಬೇಕು
✔️ ಪಿಂಚಣಿಗಳನ್ನು ಯಾವುದೇ ವ್ಯತ್ಯಯವಿಲ್ಲದೆ ನಿರಂತರವಾಗಿ ವಿತರಿಸಬೇಕು
ಬಡವರ ಪರ ಎಂದು ಹೇಳಿಕೊಳ್ಳುವ ಸರ್ಕಾರಗಳು ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ತೋರಿಸಬೇಕು. ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ.
✊ ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ
ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎ. ಆರ್. ತಾಹೀರ್, ಜಿಲ್ಲಾ ಉಪಾಧ್ಯಕ್ಷರಾದ ರಿಯಾಜ್ ರಿಜ್ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಜಿಲ್ಲಾ ಕಾರ್ಯದರ್ಶಿ ಝಬಿ ಉಲ್ಲಾ, ಜಿಲ್ಲಾ ಸಮಿತಿ ಸದಸ್ಯರಾದ ಅಮೀರ್ ರವರು ಉಪಸ್ಥಿತರಿದ್ದರು.
#ಗ್ಯಾರಂಟಿಯೋಜನೆಗಳು
#ಸಾಮಾಜಿಕಭದ್ರತೆ
#ಪಿಂಚಣಿ
#ಬಡವರಹಕ್ಕುಗಳು
#ಜನರಹಕ್ಕು
#Davangere
#KarnatakaPolitics
#GuaranteeSchemes
#GruhaJyothi
#GruhaLakshmi
#ShaktiScheme
#SocialSecurity
#PensionRights
#VoiceOfPeople
#WelfareSchemes
#Accountability
بی جے پی کی قیادت والی اتر پردیش حکومت کا 'اتر پردیش بورڈ آف مدرسہ ایجوکیشن ایکٹ' میں ترمیم کر کے بورڈ کے 'کامل' اور 'فاضل' ڈگریاں دینے کے اختیارات ختم کرنے کا اقدام غیر منصفانہ، قبل از وقت اور انتہائی غیر حساسانہ ہے۔ اگرچہ آئینی معاملہ طے پا چکا ہے، لیکن سپریم کورٹ کو ابھی اس بات کا فیصلہ کرنا باقی ہے کہ آیا یو جی سی (UGC) سے تسلیم شدہ لکھنؤ کی 'خواجہ معین الدین چشتی لینگویج یونیورسٹی' ان کورسز کو الحاق (affiliate) دے سکتی ہے، امتحانات منعقد کر سکتی ہے اور پہلے سے داخلہ لینے والے طلبہ کو ڈگریاں جاری کر سکتی ہے یا نہیں۔ اس عبوری انتظام کے حوالے سے عدالت کے فیصلے کا انتظار کرنے کے بجائے، ریاستی حکومت جلد بازی میں قانون سازی کر رہی ہے جس سے مسلم برادری کے سماجی اور تعلیمی اعتبار سے انتہائی پسماندہ طبقات سے تعلق رکھنے والے ہزاروں طلبہ کا تعلیمی مستقبل خطرے میں پڑ گیا ہے۔ متاثرہ طلبہ کے لیے انصاف اور تعلیمی تسلسل کو یقینی بنانے کی خاطر اتر پردیش حکومت کو چاہیے کہ وہ مجوزہ ترامیم واپس لے اور سپریم کورٹ کے حتمی فیصلے کا انتظار کرے۔
#SDPI
ರಾಜ್ಯ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮಾಜದ ಪ್ರಾತಿನಿಧ್ಯ: ವಾಸ್ತವಾಂಶ ಮತ್ತು ಜವಾಬ್ದಾರಿತ್ವದ ಅಗತ್ಯ
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮಾಜಕ್ಕೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎಂಬ ಪ್ರಶ್ನೆ ಕೇಳುವುದು ಮಾತ್ರ ಸಾಕಾಗುವುದಿಲ್ಲ. ಅದರಿಗಿಂತ ಮಹತ್ವದ್ದಾದ ಪ್ರಶ್ನೆ ಎಂದರೆ ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಅಧಿಕಾರ ಪಡೆದವರು ಆ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನಿಜವಾಗಿಯೂ ಯಾವ ಮಟ್ಟಿಗೆ ಶ್ರಮಿಸಿದ್ದಾರೆ ಎಂಬುದಾಗಿದೆ. ಈ ವಿಚಾರದಲ್ಲಿ ಗಂಭೀರವಾದ, ತತ್ವಾಧಾರಿತ ಚರ್ಚೆ ನಡೆಯುವುದು ಕಾಲದ ಅಗತ್ಯವಾಗಿದೆ.
ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ ಭಾರತೀಯ ಜನತಾ ಪಾರ್ಟಿ ಸರ್ಕಾರ ಮುಸ್ಲಿಂ ಸಮಾಜಕ್ಕೆ ದೊರಕುತ್ತಿದ್ದ ಮೀಸಲಾತಿಯನ್ನು ಕಿತ್ತುಹಾಕಿದಂತಹ ಗಂಭೀರ ಅನ್ಯಾಯ ಮಾಡಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಒಂದು ಸಮುದಾಯದ ಭವಿಷ್ಯವನ್ನು ಪ್ರಭಾವಿಸುವ ಕ್ರಮವಾಗಿತ್ತು. ಆ ಸಮಯದಲ್ಲಿ ಹಾಗೂ ಅದಕ್ಕೂ ಮುನ್ನ ಮತ್ತು ನಂತರವೂ ಅಧಿಕಾರದಲ್ಲಿದ್ದ ನಾಯಕರು ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮತ್ತು ಪ್ರಸ್ತುತ ಸರ್ಕಾರದಲ್ಲೂ ಸಚಿವರಾಗಿ ಸೇವೆ ಸಲ್ಲಿಸುತ್ತಿರುವವರು ಈ ಅನ್ಯಾಯವನ್ನು ಪ್ರಶ್ನಿಸಲು, ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಉಳಿಸಲು ಹಾಗೂ ಮರುಸ್ಥಾಪಿಸಲು ಯಾವ ಮಟ್ಟಿಗೆ ಹೋರಾಟ ನಡೆಸಿದರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕಾಗಿದೆ.
ಇದು ಕೇವಲ ಕೆಲ ವ್ಯಕ್ತಿಗಳ ಬಗ್ಗೆ ಚರ್ಚಿಸುವ ವಿಷಯವಲ್ಲ. ಇದು ಒಂದು ಸಮುದಾಯದ ಭವಿಷ್ಯ, ಅದರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಪ್ರಶ್ನೆಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬುದು ಕಟು ಸತ್ಯ. ಜನಸಂಖ್ಯೆಯ ಪ್ರಮಾಣವನ್ನು ಪರಿಗಣಿಸಿದರೆ ಕನಿಷ್ಠ ಐದು ಸಚಿವ ಸ್ಥಾನಗಳಾದರೂ ಸಿಗಬೇಕಾಗಿತ್ತು; ಆದರೆ ಇಂದಿನ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಇದು ಪ್ರಾತಿನಿಧ್ಯದಲ್ಲಿ ಉಂಟಾದ ಅಸಮಾನತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಮುಸ್ಲಿಂ ಸಮಾಜದ ಹೆಸರಿನಲ್ಲಿ ಕೆಲವರು ರಾಜಕೀಯವಾಗಿ ಲಾಭ ಪಡೆಯುವುದು ಸಾಧನೆ ಅಲ್ಲ. ನಿಜವಾದ ಸಾಧನೆ ಎಂದರೆ, ಸಮುದಾಯದ ಶೈಕ್ಷಣಿಕ ಮಟ್ಟವನ್ನು ಏರಿಸುವುದು, ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲಗೊಳಿಸುವುದು, ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು, ರಾಜಕೀಯವಾಗಿ ಸಮರ್ಪಕ ಹಾಗೂ ಗೌರವಯುತ ಪ್ರಾತಿನಿಧ್ಯವನ್ನು ಒದಗಿಸುವುದು
ಈ ನಿಟ್ಟಿನಲ್ಲಿ ಸಮುದಾಯದ ನಾಯಕರು, ಬುದ್ಧಿಜೀವಿಗಳು, ಮಾಧ್ಯಮದವರು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಒಟ್ಟಾಗಿ ಆತ್ಮಪರಿಶೀಲನೆ ನಡೆಸಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಗತ್ಯ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಮಾನ ಹಕ್ಕುಗಳು ದೊರಕಬೇಕು ಎಂಬುದು ನಮ್ಮ ಹೋರಾಟದ ಮೂಲ ಉದ್ದೇಶ.
ಇದು ಯಾರ ಮೇಲಿನ ವೈಯಕ್ತಿಕ ಟೀಕೆ ಅಲ್ಲ ಇದು ಹಕ್ಕಿನ ಪ್ರಶ್ನೆ.
ಇದು ರಾಜಕೀಯ ಲಾಭಕ್ಕಾಗಿ ಅಲ್ಲ ಇದು ಸಾಮಾಜಿಕ ನ್ಯಾಯದ ಹೋರಾಟ.
ಸಮುದಾಯದ ಸಬಲೀಕರಣವೇ ನಿಜವಾದ ಪ್ರಗತಿ…
Any way ನೂತ ಸಚಿವರಿಗೆ ಅಭಿನಂದನೆಗಳು
#SocialJustice #MuslimRepresentation #KarnatakaPolitics #SDPIKarnataka #PoliticalPowerIsTheMasterKey
ರಾಜ್ಯದ ೧೯ ನೂತನ ಸಚಿವರಿಗೆ ಅಭಿನಂದನೆಗಳು. ಅಧಿಕಾರ ಎನ್ನುವುದು ಕೇವಲ ಹುದ್ದೆಯಲ್ಲ, ಅದು ಜನಸಾಮಾನ್ಯರ ಸೇವೆಯ ಹೊಣೆಗಾರಿಕೆ. ಭ್ರಷ್ಟಾಚಾರ ಮುಕ್ತ, ಸಾಮಾಜಿಕ ನ್ಯಾಯ ಆಧರಿತ ಹಾಗೂ ಎಲ್ಲ ಪ್ರಾಂತ್ಯಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನೀಡಿರುವ ಭರವಸೆಗಳನ್ನು ಈಡೇರಿಸುತ್ತೀರಿ ಎಂದು ಆಶಿಸುತ್ತೇನೆ.
#KarnatakaGovt@reachvsk
Participated in the SDPI Delhi State Leaders' Conclave in New Delhi, where state and district-level leaders came together to deliberate on organisational strengthening, leadership development, the membership campaign and preparations for the forthcoming elections.
Together, we remain committed to building a stronger organisation rooted in the aspirations of the people.
#SDPI #Delhi #LeadersConclave #OrganisationBuilding #Leadership #MembershipCampaign #StrongerTogether
ಎರಡು ದಿನಗಳ ಕಾಲ ನಡೆಯುವ SDPI ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆ ಬೆಂಗಳೂರಿನ ಪಕ್ಷದ ಮುಖ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಆರಂಭಗೊಂಡಿತು.
#SDPIKarnataka#SWCMeeting2026
ಮಾಜಿ ಸಂಸದರು ಹಾಗೂ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ಉಪಾಧ್ಯಕ್ಷರು ಆಗಿರುವ ಮೌಲಾನಾ ಉಬೈದುಲ್ಲಾ ಖಾನ್ ಅಝ್ಮಿ ರವರು ಜೈಪುರದಲ್ಲಿ ನಡೆದ ವಕ್ಫ್ ಮತ್ತು ಯೂನಿಫಾರ್ಮ್ ಸಿವಿಲ್ ಕೋಡ್ (UCC) ಕುರಿತ ರಾಷ್ಟ್ರೀಯ ಸಂವಾದ ಸಮ್ಮೇಳನದಲ್ಲಿ ಮುಖ್ಯ ಭಾಷಣವನ್ನು ನೀಡಿದರು.
ತಮ್ಮ ಭಾಷಣದಲ್ಲಿ ಮೌಲಾನಾ ಅಝ್ಮಿ ಅವರು ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸುವ ಅಗತ್ಯತೆಯನ್ನು ಮತ್ತು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವ ಮಹತ್ವವನ್ನು ಒತ್ತಿ ಹೇಳಿದರು. ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ ಎಂದು ಅವರು ಸ್ಪಷ್ಟಪಡಿಸಿ, ಬಹುಸಾಂಸ್ಕೃತಿಕತೆಯನ್ನು ಉಳಿಸುವುದು ರಾಷ್ಟ್ರೀಯ ಏಕತೆ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅತ್ಯಂತ ಅಗತ್ಯ ಎಂದು ಹೇಳಿದರು.
ವಕ್ಫ್ ಮತ್ತು ಯೂನಿಫಾರ್ಮ್ ಸಿವಿಲ್ ಕೋಡ್ ವಿಷಯಗಳ ಕುರಿತು ಮಾತನಾಡಿದ ಅವರು, ಏಕಪಕ್ಷೀಯ ನಿರ್ಧಾರಗಳ ಬದಲು ಸಮಗ್ರ, ಸಮಾವೇಶಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಂವಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಯಾವುದೇ ನೀತಿ ಅಥವಾ ಸುಧಾರಣೆ ಸಂವಿಧಾನದ ಆಧಾರದ ಮೇಲೆ ರೂಪುಗೊಳ್ಳಬೇಕು ಮತ್ತು ಎಲ್ಲಾ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಯಾವುದೇ ಭೇದಭಾವವಿಲ್ಲದೆ ರಕ್ಷಿಸಬೇಕು ಎಂದು ಅವರು ಹೇಳಿದರು.
ಪ್ರತಿ ನಾಗರಿಕನಿಗೂ ತನ್ನ ಧರ್ಮವನ್ನು ಆಚರಿಸುವ ಹಾಗೂ ಸಂರಕ್ಷಿಸುವ ಹಕ್ಕನ್ನು ಸಂವಿಧಾನ ನೀಡಿದೆ ಎಂಬುದನ್ನು ಅವರು ನೆನಪಿಸಿದರು. ಈ ಹಕ್ಕುಗಳನ್ನು ಯಾವುದೇ ಸಂದರ್ಭದಲ್ಲೂ ಕುಗ್ಗಿಸಲು ಬಿಡಬಾರದು ಎಂದು ಎಚ್ಚರಿಸಿದರು.
ಬೌದ್ಧಿಕರು, ನೀತಿ ರೂಪಿಸುವವರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಪರಸ್ಪರ ಗೌರವ ಮತ್ತು ಅರಿವು ಬೆಳೆಸುವ ರಚನಾತ್ಮಕ ಸಂವಾದದಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಭಾಷಣವು ವೈವಿಧ್ಯಮಯ ಭಾರತದ ಭವಿಷ್ಯಕ್ಕಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವುದು ಮತ್ತು ಸಂವಾದವನ್ನು ಉತ್ತೇಜಿಸುವುದು ಮಾತ್ರವೇ ಸರಿಯಾದ ಮಾರ್ಗ ಎಂಬುದನ್ನು ಮತ್ತೊಮ್ಮೆ ನೆನಪಿಸಿತು. ಈ ಸಮ್ಮೇಳನವು ನ್ಯಾಯ, ಸಮಾನತೆ ಮತ್ತು ಸಮಾವೇಶತೆಯ ಮಹತ್ವವನ್ನು ಒತ್ತಿ ಹೇಳುವ ವೇದಿಕೆಯಾಯಿತು.
Maulana Obaidullah Khan Azmi, former Member of Parliament and Vice President of the All India Muslim Personal Law Board, delivered a powerful and thought-provoking keynote address at the National Symposium on Dialogue on Waqf and Uniform Civil Code held in Jaipur.
In his address, Maulana Azmi emphasized the urgent need to safeguard constitutional rights and uphold the democratic values that form the foundation of our nation. He highlighted that India’s strength lies in its diversity, and preserving its pluralistic ethos is not just a responsibility but a necessity for maintaining unity and harmony.
Speaking on the issues surrounding Waqf and the Uniform Civil Code (UCC), he called for meaningful, inclusive, and democratic dialogue rather than unilateral decisions. He stressed that any policy or reform must be rooted in the Constitution, ensuring that the rights and religious freedoms of all communities are protected without discrimination.
Maulana Azmi also reminded that the Constitution guarantees every citizen the right to practice and preserve their faith, and these rights must not be diluted under any circumstances. He urged intellectuals, policymakers, and civil society to engage in constructive discussions that strengthen mutual respect and understanding among communities.
His address served as a strong reminder that protecting constitutional values and promoting dialogue is the only way forward in a diverse country like India. The symposium stood as a platform for raising critical concerns and reinforcing the importance of justice, equality, and inclusiveness in policy-making.
#DefendingConstitutionalRights #DialogueOnWaqfAndUCC #SDPI #Jaipur #Constitution #Waqf #UCC