ಇಂಧನ ಸಚಿವರಾದ @thekjgeorge ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದೆ.
ಈ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧಕ್ಷರಾದ ಸುಧೀರ್ ಕುಮಾರ್ ಮುರೊಳ್ಳಿ,ಅಧ್ಯಕ್ಷರಾದ @ashok_kodavoor , ಕಾರ್ಯದಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್,ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ ಮಂಜುನಾಥ್ ಕುಮಾರ್ , ಮುಖಂಡರಾದ ಪ್ರಸಾದ ರಾಜ್ ಕಾಂಚನ್, ಭಾಸ್ಕರ್ ರಾವ್ ಕಿದಿಯೂರ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.
#LokSabhaElection2024
ಮಲನಾಡಿನ ಹೆಬ್ಬಾಗಿಲು ತರೀಕೆರೆಯಲ್ಲಿ ಕಾಂಗ್ರೆಸ್ ಕಹಳೆ
ಅಭ್ಯರ್ಥಿ ಶ್ರೀ ಜಯಪ್ರಕಾಶ್ ಹೆಗ್ಗಡೆ ಪರ ಭರ್ಜರಿ ಪ್ರಚಾರ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಲೆನಾಡಿನ ಹೆಬ್ಬಾಗಿಲೆಂದೇ ಖ್ಯಾತವಾಗಿರುವ #ತರೀಕೆರೆ ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿ ಮತ ಯಾಚಿಸಿದೆ.
ರಾಜ್ಯದಲ್ಲಿ ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರ, 5 #ಗ್ಯಾರಂಟಿ ಗಳನ್ನು ಈಡೇರಿಸಿ, ಜನಸಾಮಾನ್ಯರ ಬದುಕು ಉತ್ತಮಪಡಿಸುತ್ತಿದೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಬದಲಾವಣೆಯ ಹೊಸ ಪರ್ವ ಆರಂಭವಾಗಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನಮ್ಮ ಅಭ್ಯರ್ಥಿಗೆ ಮತ ನೀಡಿ ಎಂದು ಕೋರಿದೆ. ಇದೇ ವೇಳೆ ಚುನಾವಣಾ ಬಾಂಡ್ ಗಳ ಮೂಲಕ ಮೋದಿ ಸರ್ಕಾರ ನಡೆಸಿರುವ ಸಾವಿರಾರು ಕೋಟಿ ಅಕ್ರಮಗಳ ಕುರಿತು ವಿವರವಾಗಿ ಪ್ರಸ್ತಾಪಿಸಿದೆ.
ವೇದಿಕೆಯ ಮೇಲೆ ಶಾಸಕರಾದ ಶ್ರೀ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಅಂಶುಮಂಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಇತರೆ ಮುಖಂಡರು ಹಾಜರಿದ್ದರು.
ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದ್ದು, ಈ ಬಾರಿ ಉಡುಪಿ-ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಲಿದೆ!
ಬೆಲೆ ಏರಿಕೆಯ ಅಚ್ಚೆ ದಿನಗಳು ಇನ್ನು ನಮಗೆ ಬೇಡ..
ಹಾಲು, ಮೊಸರು, ಪೆನ್ನು, ಪೆನ್ಸಿಲ್ಲು ಎಲ್ಲದಕ್ಕೂ GST ತೆರಿಗೆಯ ಮೂಲಕ ಬಡವರ ಜೇಬನ್ನು ಪಿಕ್ ಪಾಕೆಟ್ ಮಾಡುವ ಬಿಜೆಪಿ ಸರ್ಕಾರವನ್ನು ತೊಲಗಿಸಿ,
ಜನಸಾಮಾನ್ಯರ ಬದುಕನ್ನು ಬೆಳಗುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ..
#ಕೈಜೋಡಿಸಿ_ಜೀವನಬದಲಿಸಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಎಸಗಿರುವ ನಿರಂತರ ಅನ್ಯಾಯ, ಮೋಸವನ್ನು ಖಂಡಿಸಿ ಎಐಸಿಸಿ ರಾಜ್ಯ ಉಸ್ತುವಾರಿಗಳಾದ @rssurjewala ಅವರ ನೇತೃತ್ವದಲ್ಲಿ ಮೇಖ್ರಿ ಸರ್ಕಲ್ ಬಳಿ 'ಚೊಂಬು' ಹಿಡಿದು ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಖಾಲಿ ಚೊಂಬು ಎಂಬ ವಿನೂತನ ಪ್ರತಿಭಟನೆ ನಡೆಸಲಾಯಿತು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಶಾಸಕರಾದ @ArshadRizwan, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ @RameshBabuKPCC ಸೇರಿದಂತೆ ಹಲವರು ಭಾಗವಹಿಸಿದ್ದರು.
#BJPChombuSarkara
ಮೋದಿ ಮತ್ತು ಬಿಜೆಪಿಯವರು ಕರುನಾಡಿನ ಜನತೆಗೆ #BJPSarakaraChombu ಕೊಟ್ಟಿದ್ದಾರೆ.
👉ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು
👉15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು
👉ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು
👉ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿ ಹಾಕಿದ್ದು ಮಾತ್ರ ಚೊಂಬು
👉 ನಾವು ಕಟ್ಟುವ ಪ್ರತಿ 100 ರೂ. ತೆರಿಗೆಲಿ 13 ರೂ. ಮಾತ್ರ ವಾಪಸ್ ನೀಡುವ ಮೂಲಕ ಚೊಂಬು
👉ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 27 ಜನ ಲೋಕಸಭಾ ಸದಸ್ಯರು ರಾಜ್ಯಕ್ಕೆ ನೀಡಿದ್ದು ಚೊಂಬು
ಇಷ್ಟೆಲ್ಲಾ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 6.5ಕೋಟಿ ಕನ್ನಡಿಗರ ಸಹ ಅದೇ ಚೊಂಬನ್ನು ನೀಡಿ ಮನೆಗೆ ಕಳುಹಿಸಿಲಿದ್ದಾರೆ.
ಮೋದಿಯವರ ಅಚ್ಛೇದಿನ್ ಪರಿಣಾಮವಾಗಿ ಬೆಲೆ ಏರಿಕೆಯು ಗಗನಕ್ಕೆ ತಲುಪಿದೆ.
ನಿಮ್ಮ #BJPChombuSarkara ದ ಬಗ್ಗೆ
#AnswerMadiModi
ಬಿಜೆಪಿಯನ್ನು ಸೋಲಿಸಿ ದೇಶವನ್ನು ರಕ್ಷಿಸಿ.
ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತ ನೀಡಿ ದೇಶವನ್ನು ಉಳಿಸಿ!!
ಮಂಡ್ಯ ನಗರದಲ್ಲಿ ಶುಕ್ರವಾರ ಪ್ರಚಾರ ಸಭೆ ನಡೆಸಿ, ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರಿಗೆ ಮತದಾನ ಮಾಡುವಂತೆ ಮನವಿ ಮಾಡಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳು...
#ಲೋಕಸಭಾಚುನಾವಣೆ2024#ಮಂಡ್ಯಲೋಕಸಭಾಕ್ಷೇತ್ರ
@Chaluvarayaswam @starchandru_
ಬರ - ನೆರೆ ಪರಿಹಾರದಲ್ಲಿ, ವಿಶೇಷ ಅನುದಾನದಲ್ಲಿ, ತೆರಿಗೆ ಹಂಚಿಕೆಯಲ್ಲಿ, ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ ಹಾಕಬೇಕಿದ್ದ ₹15 ಲಕ್ಷದಲ್ಲಿ ಸಿಕ್ಕಿದ್ದು ಚೊಂಬು..
ಪ್ರಧಾನಿ @narendramodi ಅವರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ದೊಡ್ಡ ಚೊಂಬು.
27 ಜನ ಬಿಜೆಪಿ / ಜೆಡಿಎಸ್ ಸಂಸದರ ಕೊಡುಗೆಯೂ ಚೊಂಬು.
ಹಾಗಾಗಿ ಈ ಚುನಾವಣೆಯಲ್ಲಿ ನಾವೆಲ್ಲರೂ ಬಿಜೆಪಿಗೆ ಇದೇ ಚೊಂಬು ನೀಡೋಣ.
#ಬಿಜೆಪಿಚೊಂಬು
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ವೆಂಕಟರಮಣೇಗೌಡ ( ಸ್ಟಾರ್ ಚಂದ್ರು) ಅವರ ಪರವಾಗಿ ಮಂಡ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಸಚಿವರಾದ ಶ್ರೀ ಚಲುವರಾಯಸ್ವಾಮಿ, ಶಾಸಕರು, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.
“ವಿಕಸಿತ ಭಾರತದ ಹಗಲುಗನಸು ಕಾಣುತ್ತಿರುವ ಪ್ರಧಾನಿಗೆ ಈ ನೆಲದ ಬರ, ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಜೀವನ ಕಾಣುತ್ತಿಲ್ಲ. ಇವರಿಗೆ ತನ್ನ ರಥ ಚಕ್ರಕ್ಕೆ ಸಿಲುಕಿ ಸಾಯುವ ಪ್ರಜೆಗಳ ಆಕ್ರಂದನವೂ ದೇಶ ಸೇವೆಯಲ್ಲಿ ಯಜ್ಞ ಎಂಬಂತೆ ಕಾಣುತ್ತದೆ. ತಾನು ಮಾಡುವ ಚುನಾವಣಾ ಬಾಂಡ್ ನಂತಹ ಭ್ರಷ್ಟತೆಯೂ ದೇಶ ಸೇವೆಯಾಗಿ ಕಾಣಿಸುತ್ತದೆ”
-ದೇವನೂರು ಮಹಾದೇವ.
ಹೊಸ ಪ್ರಣಾಳಿಕೆಯನ್ನು ಎದೆತಟ್ಟಿಕೊಂಡು ಸಮರ್ಥಿಸಿಕೊಳ್ಳುತ್ತಿರುವ ಪ್ರಧಾನಿ @narendramodi ಅವರೇ,
ಮೊದಲು ಹಳೆಯ ಎರಡು ಪ್ರಣಾಳಿಕೆಗಳ ಲೆಕ್ಕಕೊಡಿ.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ,
ವರ್ಷಕ್ಕೆ ಎರಡು ಕೋಟಿ ಉದ್ಯೋಗ,
ರೈತರ ಆದಾಯ ದುಪ್ಪಟ್ಟುಗೊಳಿಸುವ ಭರವಸೆಗಳೆಲ್ಲ ಜುಮ್ಲಾ ಆಗಿವೆ. ಪ್ರಣಾಳಿಕೆಯಲ್ಲಿನ ಉಳಿದ ಭರವಸೆಗಳಲ್ಲಿ ಎಷ್ಟು ಅನುಷ್ಠಾನಕ್ಕೆ ತಂದಿದ್ದೀರಿ ಲೆಕ್ಕಕೊಡಿ.
ಮೋದಿಯವರದ್ದು 'ಕೇವಲ ಗ್ಯಾರಂಟಿ - ನೋ ವಾರಂಟಿ' ಎಂದು ದೇಶದ ಜನ ಈಗಾಗಲೇ ಆಡಿಕೊಳ್ಳುತ್ತಿದ್ದಾರೆ.
ನಿಮ್ಮ ಹಳೆಯ ಪ್ರಣಾಳಿಕೆಯಲ್ಲಿ ಈಡೇರದ ಭರವಸೆಗಳ ಒಂದಷ್ಟು ಲೆಕ್ಕ ಕೊಡುತ್ತಿದ್ದೇನೆ, ಈ ಬಗ್ಗೆ ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೀನಿ.
ನೆನಪಿಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೆವು. ಈಗಿನ ಸರ್ಕಾರದಲ್ಲಿ ಐದು ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೆ ಕೊಡುತ್ತಿದ್ದೇವೆ.
ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಖ್ಯಾತಿ ನಮ್ಮ ಸರ್ಕಾರದ್ದು.
#ModiGuaranteeNoWarranty
ಹೊಸ ಪ್ರಣಾಳಿಕೆಯನ್ನು ಎದೆತಟ್ಟಿಕೊಂಡು ಸಮರ್ಥಿಸಿಕೊಳ್ಳುತ್ತಿರುವ ಪ್ರಧಾನಿ @narendramodi ಅವರೇ,
ಮೊದಲು ಹಳೆಯ ಎರಡು ಪ್ರಣಾಳಿಕೆಗಳ ಲೆಕ್ಕಕೊಡಿ.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ,
ವರ್ಷಕ್ಕೆ ಎರಡು ಕೋಟಿ ಉದ್ಯೋಗ,
ರೈತರ ಆದಾಯ ದುಪ್ಪಟ್ಟುಗೊಳಿಸುವ ಭರವಸೆಗಳೆಲ್ಲ ಜುಮ್ಲಾ ಆಗಿವೆ. ಪ್ರಣಾಳಿಕೆಯಲ್ಲಿನ ಉಳಿದ ಭರವಸೆಗಳಲ್ಲಿ ಎಷ್ಟು ಅನುಷ್ಠಾನಕ್ಕೆ ತಂದಿದ್ದೀರಿ ಲೆಕ್ಕಕೊಡಿ.
ಮೋದಿಯವರದ್ದು 'ಕೇವಲ ಗ್ಯಾರಂಟಿ - ನೋ ವಾರಂಟಿ' ಎಂದು ದೇಶದ ಜನ ಈಗಾಗಲೇ ಆಡಿಕೊಳ್ಳುತ್ತಿದ್ದಾರೆ.
ನಿಮ್ಮ ಹಳೆಯ ಪ್ರಣಾಳಿಕೆಯಲ್ಲಿ ಈಡೇರದ ಭರವಸೆಗಳ ಒಂದಷ್ಟು ಲೆಕ್ಕ ಕೊಡುತ್ತಿದ್ದೇನೆ, ಈ ಬಗ್ಗೆ ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೀನಿ.
ನೆನಪಿಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೆವು. ಈಗಿನ ಸರ್ಕಾರದಲ್ಲಿ ಐದು ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಜಾರಿಗೆ ಕೊಡುತ್ತಿದ್ದೇವೆ.
ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಖ್ಯಾತಿ ನಮ್ಮ ಸರ್ಕಾರದ್ದು.
#ModiGuaranteeNoWarranty
ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ನಿಮಿತ್ತ ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಸುಂದರೇಶ್ , ಪಕ್ಷದ ರಾಜ್ಯ ನಾಯಕರು, ಜಿಲ್ಲಾ ಮುಖಂಡರು, ತಾಲೂಕು ಮುಖಂಡರು ಹಾಗೂ ಸಹಸ್ರರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
#LokSabhaElection2024
ಮಂಗಳೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದೆ.
ಈ ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸದ್ಯಸರಾದ ಹರೀಶ್ ಕುಮಾರ್, ಮುಖಂಡರಾದ ಕೃಷ್ಣಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.
#Loksabha2024
ವಿಜಯಪುರದಲ್ಲಿ ಬದಲಾವಣೆಯ ಬಿರುಗಾಳಿ...!
ಈ ದೃಶ್ಯಾವಳಿಗಳೇ ನಮ್ಮ ಅಭ್ಯರ್ಥಿಯ ಗೆಲುವಿನ ಮುನ್ನುಡಿ ಬರೆದಿದೆ!
ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರು ನಾಮಪತ್ರ ಸಲ್ಲಿಕೆಯ ವೇಳೆ ನಡೆದ ಬೃಹತ್ ರೋಡ್ ಶೋ...
ವಿಜಯಪುರದ ಐತಿಹಾಸಿಕ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಡಿಸಿ ಕಚೇರಿಗೆ ಬೃಹತ್ ಜಾಥಾ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಯಿತು.