ನರೇಂದ್ರ ಮೋದಿ ಸರ್ಕಾರ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮೇಲೆ ಬೇಹುಗಾರಿಕೆ ನಡೆಸಲು ಇಸ್ರೇಲ್ ಪೆಗಾಸಸ್ ನ್ನು ದುರ್ಬಳಕೆ ಮಾಡಿಕೊಂಡಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ಇದನ್ನು ಖಂಡಿಸುತ್ತೇವೆ.
#ModiGovtKillingDemocracy
ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 kg ಅಕ್ಕಿ ವಿತರಿಸಬೇಕಿದ್ದು, ಸದ್ಯ ಪೂರ್ಣ ಪ್ರಮಾಣದಲ್ಲಿ ಅಕ್ಕಿಯ ಲಭ್ಯತೆಯಿಲ್ಲದ ಕಾರಣ ತಲಾ 5 kg ಅಕ್ಕಿ ಹಾಗೂ ಇನ್ನುಳಿದ 5 kg ಅಕ್ಕಿಯ ಬದಲಿಗೆ ₹ 170 ಅನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.
ಇದು "ಹಸಿವು ಮುಕ್ತ ಕರ್ನಾಟಕ"ದ ಬದ್ಧತೆ.
#CongressDeliversGuarantees
ಜುಲೈ 19ರಂದು 'ಗೃಹಲಕ್ಷ್ಮಿ' ನೋಂದಣಿ ಪ್ರಕ್ರಿಯೆಗೆ ನಮ್ಮ ಸರ್ಕಾರ ಚಾಲನೆ ನೀಡಿತ್ತು.
ಈವರೆಗೂ ಸುಮಾರು 1.10 ಕೋಟಿಗೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ.
ಯೋಜನೆ ಜಾರಿ ಬಳಿಕ ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ. 100 ದಿನಗಳಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.
#CongressDeliversGuarantees
ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ನಮ್ಮ ಸರ್ಕಾರ ಇಂದು ಗೃಹಲಕ್ಷಿ ಯೋಜನೆಯ ₹2000 ಹಣವನ್ನು ನಾಡಿನ ಮಹಿಳೆಯರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
#CongressDeliversGuarantee
ರಾಜ್ಯ ಗೃಹ ಖಾತೆಯನ್ನು ಆದಷ್ಟು ಬೇಗ ಪ್ರಿಯಾಂಕ ಖರ್ಗೆ ಅವರಿಗೆ ನೀಡಿದರೆ ಮಾತ್ರ ರಾಜ್ಯದಲ್ಲಿ ವಾಟ್ಸಪ್ ಯುನಿವರ್ಸಿಟಿಯ ಸುಳ್ಳಿನ ಕಾರ್ಖಾನೆ ಮುಚ್ಚಲು ಸಾಧ್ಯ ನನ್ಗೆ ಅನ್ನಿಸಿದೆ #priyankkarge
ಮಾನ್ಯ @utkhader ಅವರೇ,
ಉಪಸಭಾಪತಿ ಅವರ ಮೇಲೆ ಪೇಪರ್ ಎಸೆದು, ಅಸಭ್ಯವಾಗಿ ವರ್ತಿಸಿ, ಅನುಚಿತವಾಗಿ ವರ್ತಿಸಿ, ಸದನಕ್ಕೆ ಅಗೌರವ ತೋರಿದ, ಪುಂಡಾಟ ಮೆರೆದ @BJP4Karnataka ಹತ್ತು ಶಾಸಕರನ್ನು ಅಮಾನತು ಮಾಡಿರುವುದಕ್ಕೆ ಕರ್ನಾಟಕದ ಜನತೆಗೆ ಪರವಾಗಿ ತಮಗೆ ಅಭಿನಂದನೆಗಳು.
ಕಾಂಗ್ರೆಸ್ ಪಕ್ಷದಲ್ಲಿ ವಾಡಿಕೆಯಂತೆ ಪಕ್ಷವನ್ನು ಅಧಿಕಾರಕ್ಕೆ ತಂದ ಪಕ್ಷದ ಅಧ್ಯಕ್ಷರೇ ಮುಖ್ಯಮಂತ್ರಿ ಗಾದೆಗೆ ಏರುವುದು ಸತ್ಯ ತಾನೇ........... #Soniya_Gandhi ...... #RahulGandhi#malikarjunkharge ಯೋಚಿಸಿ ........... ನಿರ್ಧರಿಸಿ ..........
ಕೋವಿಡ್ ಲಾಕ್ ಡೌನ್ ವೇಳೆ ಊರಿಗೆ ಹೋಗಲು ವಲಸೆ ಕಾರ್ಮಿಕರಿಗೆ ವಾಹನವಿಲ್ಲದೇ ನೂರಾರು ಕಿಲೋ ಮೀಟರ್ ನಡೆದರು.
ಅನ್ನ-ನೀರು ಇಲ್ಲದೇ ನಡೆದವರು, ತತ್ರಾಣಗೊಂಡು ಉಸಿರು ಚೆಲ್ಲಿದವರು.
ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ವಲಸೆ ಕಾರ್ಮಿಕರು ಅನುಭವಿಸಿದ ನೋವಿನ ಪಟ್ಟಿ ಮಾಡಿದ್ದೀರಾ?
#CryPMPayCM
ಕೊರೊನಾ ಮಹಾಮಾರಿ, ಸರ್ಕಾರದ ಯೋಜಿತವಲ್ಲದ ಲಾಕ್ ಡೌನ್ ನಿಂದಾಗಿ ಇಡೀ ಕರ್ನಾಟಕ ರಾಜ್ಯ ಸ್ಮಾಶಾನವಾಯಿತು. ಬಹುತೇಕ ಮನೆಗಳೆಲ್ಲ ಶೂತಕದ ಮನೆಗಳಾದವು.
ಪ್ರಧಾನಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ.
#CryPMPayCM
ರಾಜ್ಯದಲ್ಲಿ ಪ್ರವಾಹ ಬಂದಾಗ ಮುಖ್ಯಮಂತ್ರಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ
- ಜನರ ಸಂಕಷ್ಟಗಳ ಪಟ್ಟಿ ಮಾಡಿದರೆ?
- ನೆರೆ ನಷ್ಟದ ಪಟ್ಟಿ ಮಾಡಿದರೆ?
- ಸಂತ್ರಸ್ತರ ನೈಜ ಪಟ್ಟಿ ಮಾಡಿದರೇ?
- ಸಂತ್ರಸ್ತರಿಗೆ ಪರಿಹಾರ ತಲುಪಿಸಿದ್ದು ಎಷ್ಟೆಂದು ಪಟ್ಟಿ ಮಾಡಿದರೇ?
#CryPMPayCM
ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸಾವಿರಾರು ಕೋಟಿಗಳ ಆಸ್ತಿ-ಪಾಸ್ತಿ ನಷ್ಟವಾಯಿತು. ಅನ್ನ-ನೀರು ಇಲ್ಲದೇ ಸರ್ಕಾರದ ಬಳಿ ಸಹಾಯಕ್ಕೆ ಜನರು ಅಂಗಲಾಚಿದಾಗ ಸರ್ಕಾರ ಸಹಾಯಕ್ಕೆ ಬರಲಿಲ್ಲ, ಕಾಳಜಿ ಕೇಂದ್ರಗಳನ್ನು ಆರಂಭಿಸಿ, ಅನ್ನ-ನೀರು, ಔಷಧೋಪಚಾರ ಕೊಟ್ಟು ಉಪಚರಿಸಲಿಲ್ಲ.
#CryPMPayCM
ಭಾರತದ ಪ್ರಧಾನಮಂತ್ರಿಗಳು ಜನರ ಮುಂದೆ ಬಂದು ಅಳುತ್ತಾರೆ, ಕಾಂಗ್ರೆಸ್ ಪಕ್ಷದವರು ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಹೇಳುತ್ತಾರೆ, ಬೈಗುಳದ ಪಟ್ಟಿ ಮಾಡುತ್ತಾರೆ.
ಆದರೆ ಇದಾವುದರ ಹಿಂದೆಯೂ ಜನರ ಹಿತವಿಲ್ಲ, ಜನರ ನೋವುಗಳಿಲ್ಲ, ಜನರ ಸಮಸ್ಯೆಗಳಿಲ್ಲ, ಸಂಕಷ್ಟದಲ್ಲಿರುವವರಿಗೆ ಕೊಡಬೇಕಾದ ಪರಿಹಾರಗಳಿಲ್ಲ.
#CryPMPayCM
ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ.
Narendra Modi ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ #40PercentSarkara ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು.
"ಮೋದಿ ಹೈ ತೊ ಮುಮ್ಕಿನ್ ಹೈ" ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ!
#ThankYouModi
◆ 40% ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ
◆ ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ
◆ ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಉತ್ತರವಿಲ್ಲ
ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ #ThankYouModi !!