"ನಾವು ಕೇಳಿದ್ದು ಅಧಿಕಾರವಲ್ಲ ಸಾರ್...
ನಾವು ಕೇಳಿದ್ದು ಗೌರವಯುತ ಬದುಕು ಮಾತ್ರ.
ಇಷ್ಟು ವರ್ಷ ಸೇವೆ ಮಾಡಿದ ನಂತರವೂ
'ನಾಳೆ ಏನಾಗುತ್ತದೋ?' ಎಂಬ ಭಯದಲ್ಲೇ ಬದುಕುತ್ತಿದ್ದೇವೆ.
ನಮ್ಮ ಹೋರಾಟದ ಹಿಂದೆ ರಾಜಕೀಯ ಇಲ್ಲ,
ನಮ್ಮ ಕಣ್ಣೀರಿನ ಹಿಂದೆ ಸಾವಿರಾರು ಕುಟುಂಬಗಳ ನೋವಿದೆ.
#JusticeForLicensedSurveyors
ಭಗವದ್ಗೀತೆ ನಮಗೆ ಕರ್ತವ್ಯವನ್ನು ಕಲಿಸಿತು.
ಅದರಂತೆ ಪರವಾನಗಿ ಭೂ ಮಾಪಕರು ವರ್ಷಗಳ ಕಾಲ ರೈತರ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ.
ಫಲದ ಅಪೇಕ್ಷೆಯಿಲ್ಲದೆ ದುಡಿದವರು,
ಇಂದು ಬದುಕಿನ ಭದ್ರತೆಗಾಗಿ ಹೋರಾಡುವ ಪರಿಸ್ಥಿತಿ ಬಂದಿದೆ.
ಕರ್ತವ್ಯವನ್ನು ನಾವು ಮರೆತಿಲ್ಲ,
ಸರ್ಕಾರ ತನ್ನ ಭರವಸೆಯನ್ನು ಮರೆತಿದೆ?
ಪರವಾನಗಿ ಭೂ ಮಾಪಕರ ಅಳಲು ಕೇಳಿ!
"ಸಾರ್...
ನಮ್ಮ ನೋವು ಇಷ್ಟು ಚಿಕ್ಕದಾಗಿತ್ತೇ ನಿಮಗೆ?
ವರ್ಷಗಳ ಕಾಲ ಸರ್ಕಾರದ ಕೆಲಸ ಮಾಡಿದೆವು,
ರೈತರ ಕಷ್ಟಗಳಿಗೆ ಸ್ಪಂದಿಸಿದೆವು,
ಬಿಸಿಲು-ಮಳೆ ಎನ್ನದೆ ಕರ್ತವ್ಯ ನಿರ್ವಹಿಸಿದೆವು.
ಆದರೆ ಇಂದು ನಮ್ಮದೇ ಬದುಕು ಬೀದಿಗೆ ಬಂದಾಗ,
ನಮ್ಮ ಪರವಾಗಿ ಮಾತನಾಡುವಷ್ಟು ಸೌಜನ್ಯ ತೋರಿಸಲಿಲ್ಲ
#JusticeForLicensedSurveyors
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ತಮ್ಮ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿ. ಸುಭದ್ರ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶುಭ ಹಾರೈಸುತ್ತೇನೆ.
ಸೂರಜ್ ತಲಗೇರಿ
ಅಧ್ಯಕ್ಷರು
ಉತ್ತರ ಕನ್ನಡ ಜಿಲ್ಲೆಯ ಪರವಾನಗಿ ಭೂಮಾಪಕರ ಸಂಘ (ರಿ)
ಗೌರವಾನ್ವಿತ @BasanagoudaBJP ಸರ್ — ಹೃತ್ಪೂರ್ವಕ ಧನ್ಯವಾದಗಳು 🙏
"ಗೌರವಯುತ ಬದುಕು" ಮತ್ತು "ಸೇವಾ ಭದ್ರತೆ" — ತಾವು ಬಳಸಿದ ಈ ಪದಗಳೇ 7,500+ ಪರವಾನಗಿ ಭೂಮಾಪಕರ ಬೇಡಿಕೆ.
27 ವರ್ಷಗಳ ನಂತರ ಒಬ್ಬ ಶಾಸಕ ಧ್ವನಿ ಎತ್ತಿದ್ದಾರೆ.
@siddaramaiah ಸರ್ — ಆದ್ಯತೆಯ ಮೇಲೆ ಪರಿಗಣಿಸಿ.
ಅನ್ಯಾಯ ಎಲ್ಲಿ ಆಗುತ್ತೋ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಪ್ರಶ್ನೆ ಮಾಡುವ ಅಧಿಕಾರ @BasanagoudaBJP ನಮ್ಮ ಗೌಡ್ರುದು.. 🙏
ಕೇಳುವ ಪ್ರಶ್ನೆಯಲ್ಲಿ ಸ್ವಾರ್ಥಕ್ಕಿಂತಲೂ ಹೆಚ್ಚಾಗಿ ಕಾಳಜಿ ಇರುತ್ತದೆ 🙏
#justiceforlicensedsurveyors
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ?
@siddaramaiah@krishnabgowda#JusticeForLicensedSurveyors
ನಮ್ಮಲ್ಲಿ ಮಹಿಳಾ ಪರವಾನಗಿ ಭೂಮಾಪಕರೂ ಇದ್ದಾರೆ.
ಗ್ರಾಮ ಗ್ರಾಮ ಸುತ್ತಿ ಸರ್ಕಾರಿ ಸರ್ವೇ ಕೆಲಸ ಮಾಡುತ್ತಾರೆ.
ಮಾತೃತ್ವ ರಜೆ ಇಲ್ಲ. ಆರೋಗ್ಯ ವಿಮೆ ಇಲ್ಲ. ಪ್ರಯಾಣ ಭದ್ರತೆ ಇಲ್ಲ.
ಸಮಾನ ಪರೀಕ್ಷೆ, ಸಮಾನ ತರಬೇತಿ, ಸಮಾನ ಕೆಲಸ — ಆದರೆ ಸಂರಕ್ಷಣೆ ಶೂನ್ಯ.
@siddaramaiah@krishnabgowda#JusticeForLicensedSurveyors
ಒಬ್ಬ ರೈತ — ಜಮೀನು ಪೋಡಿ ಬೇಕು. ಮಗಳ ಮದುವೆಗೆ ಸಾಲ ಬೇಕು. ಹಕ್ಕುಪತ್ರ ಬೇಕು.
ಯಾರ ಬಳಿ ಬರುತ್ತಾನೆ?
ಪರವಾನಗಿ ಭೂಮಾಪಕನ ಬಳಿ.
ರಾಜ್ಯದ ಲಕ್ಷಾಂತರ ರೈತರ ಭೂ ಸಮಸ್ಯೆಗಳಿಗೆ ನಾವೇ ಮೊದಲ ಸಂಪರ್ಕ.
ರೈತರಿಗೆ ಸೇವೆ ಸಲ್ಲಿಸುವ ನಮ್ಮ ಬದುಕು ಸುರಕ್ಷಿತವಾಗಬೇಡವೇ?
@siddaramaiah@krishnabgowda#JusticeForLicensedSurveyors
ಪ ಭೂಮಾಪಕರ🎁 ಎರಡು ಪ್ರಮುಖ ನ್ಯಾಯಸಮ್ಮತ ಬೇಡಿಕೆಗಳಾದ:
(1) ಒಂದು ಬಾರಿಯ ವಿಶೇಷ ನೇಮಕಾತಿ
(2) ಸಮಾನ ಕೆಲಸಕ್ಕೆ ಸಮಾನ ವೇತನ
ಸಂಬಂಧಿಸಿದಂತೆ,
ಈ ಹೋರಾಟವು ಯಾವುದೇ ವ್ಯಕ್ತಿಗಳ ವಿರುದ್ಧವಲ್ಲ; ಇದು ನಮ್ಮ ವೃತ್ತಿ ಗೌರವ, ಬದುಕಿನ ಭದ್ರತೆ ಮತ್ತು ನ್ಯಾಯಕ್ಕಾಗಿ ಹೋರಾಟ
@tv9kannada I @AsianetNewsSN@krishnabgowda@siddaramaiah
@BasanagoudaBJP@CMofKarnataka@siddaramaiah@tv9kannada@AsianetNewsSN
2010ವಿರೋಧ ಪಕ್ಷದಲ್ಲಿದಾಗ ಮಾನ್ಯ ಬೈರೇಗೌಡರು ಹಾಗೂ ಸಿದ್ದರಾಮಯ್ಯ ರವರು ಪರವಾನಗಿ ಭೂಮಾಪಕರ ಪರವಾಗಿ ಧ್ವನಿ ಎತ್ತಿದ್ದರು! ಆದ್ರೆ ಪ್ರಸ್ತುತ ಸರ್ಕಾರದ ನ್ಯಾಯಕೊಡಿಸುವ ಸ್ಥಾನದಲ್ಲಿರುವಾಗ ಅವರಿಬ್ಬರ ಮೌನ ಪರವಾನಗಿ ಭೂಮಾಪಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದ
PM ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ — SWAMITHVA. ಗ್ರಾಮೀಣ ಆಸ್ತಿ ಹಕ್ಕುಪತ್ರ ವಿತರಣೆ.ಕರ್ನಾಟಕದಲ್ಲಿ ಈ ಕೆಲಸ ಯಾರು ಮಾಡುತ್ತಿದ್ದಾರೆ?ಪರವಾನಗಿ ಭೂಮಾಪಕರು.ಜೊತೆಗೆ Bhoomi, Dishaank, ಇ-ಸ್ವತ್ತು — ಎಲ್ಲ ಡಿಜಿಟಲ್ ಕೆಲಸ.ರಾಷ್ಟ್ರೀಯ ಯೋಜನೆಗಳ ಬೆನ್ನೆಲುಬು ನಾವು. ನಮ್ಮ ಭದ್ರತೆ ಎಲ್ಲಿ?@narendramodi@siddaramaiah
ಪ ಭೂಮಾಪಕರ🎁 ಎರಡು ಪ್ರಮುಖ ನ್ಯಾಯಸಮ್ಮತ ಬೇಡಿಕೆಗಳಾದ:
(1) ಒಂದು ಬಾರಿಯ ವಿಶೇಷ ನೇಮಕಾತಿ
(2) ಸಮಾನ ಕೆಲಸಕ್ಕೆ ಸಮಾನ ವೇತನ
ಸಂಬಂಧಿಸಿದಂತೆ,
ಈ ಹೋರಾಟವು ಯಾವುದೇ ವ್ಯಕ್ತಿಗಳ ವಿರುದ್ಧವಲ್ಲ; ಇದು ನಮ್ಮ ವೃತ್ತಿ ಗೌರವ, ಬದುಕಿನ ಭದ್ರತೆ ಮತ್ತು ನ್ಯಾಯಕ್ಕಾಗಿ ಹೋರಾಟ
@tv9kannada I @AsianetNewsSN@krishnabgowda@siddaramaiah