Today, on Police Commemoration Day, we honour the brave hearts who laid down their lives in the line of duty.
Proud to stand in tribute to their sacrifice, courage, and unwavering service to the nation.
🚨 ಇಂದು ಸಿರಗುಪ್ಪದಲ್ಲಿ ಗಣೇಶ ಮೆರವಣಿಗೆ ಭಕ್ತಿ ಹಾಗೂ ಉತ್ಸಾಹದ ನಡುವೆ ಶಾಂತಿಯುತವಾಗಿ ನೆರವೇರಿತು.
👉 ಸಾರ್ವಜನಿಕರ ಸಹಕಾರ ಹಾಗೂ ಪೊಲೀಸ್ ಇಲಾಖೆಯ ಕಾವಲು ವ್ಯವಸ್ಥೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.
🙏 ಸಿರಗುಪ್ಪ ಜನತೆಗೆ ಹಾಗೂ ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸರಿಗೆ ಹೃತ್ಪೂರ್ವಕ ಧನ್ಯವಾದಗಳು.
#Siruguppa
ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಕರುಣಾಮಯಿಯಾದ ವಿನಾಯಕನು ಎಲ್ಲಾ ಭಕ್ತರ ಕಷ್ಟಗಳನ್ನು ಕಳೆದು, ಸುಖ-ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#GaneshChaturthi2024
ಇಂದು ಬಳ್ಳಾರಿಯ ಗೃಹರಕ್ಷಕ ದಳದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
#IndependenceDay2024
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಇಂದು ಬಳ್ಳಾರಿಯ ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಸಶಸ್ತ್ರ ಸೇನಾ ಪಡೆಗಳ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಿಂದ ಗೌರವ ಸ್ವೀಕರಿಸಿದೆ. ಪೊಲೀಸ್ ಸಿಬ್ಬಂದಿ ಜೊತೆಗಿದ್ದರು.
#KargilVijayDiwas2024@BallariSp
ಇಂದು ಬಳ್ಳಾರಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಭಾರತರತ್ನ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸ್ಥಳೀಯ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
#AmbedkarJayanti2024
ದಿನಾಂಕ 2-4-2024 ರಂದು ಬಳ್ಳಾರಿಯ ಪೊಲೀಸ್ ಕವಾಯತು ಮದಾನದಲ್ಲಿ ನಡೆದ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಲಾಯಿತು. ಇದೇ ಸಂದರ್ಭದಲ್ಲಿ ಸಾಧಕ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
#PoliceFlagDay@DgpKarnataka
ಮತದಾನ ಪ್ರತಿಯೊಬ್ಬರ ಪವಿತ್ರವಾದ ಹಕ್ಕು ಮತ್ತು ಕರ್ತವ್ಯ.
"ವಿವೇಚನೆಯಿಂದ ತಪ್ಪದೇ ಮತ ಚಲಾಯಿಸಿ."
Voting is Everyone's Sacred Right and Duty.
"Vote wisely"
#Election2024
ಬಳ್ಳಾರಿಯ ಸಿಂಧುವಾಲ್ ಚೆಕ್ ಪೋಸ್ಟ್ ನ ಪರಿವೀಕ್ಷಣೆ ನಡೆಸಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ.
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಆಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು ಉತ್ತಮ ಕಾರ್ಯನಿವಹಿಸಿದವರಿಗೆ ಪ್ರಸಂಶನಾ ಪತ್ರವನ್ನು ನೀಡಿ ಗೌರವಿಸಲಾಯಿತು ಮುಖ್ಯ ಅಥಿತಿಗಳಾಗಿ ಶ್ರೀಮತಿ ಡಾ: ಶಿಲ್ಪಾ, ವಿಜ್ಞಾನಿ, ಅಹಾರ ವಿಜ್ಞಾನ, ಐಸಿಅರ್. ಸಂಸ್ಥೆ ಬಳ್ಳಾರಿ ದಿನಾಚರಣೆಯ ಕುರಿತು ಮಾತನಾಡಿದರು
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.
ಸಾರ್ವಜನಿಕ ಆಸ್ತಿಗಳಿಗೆ ಸದಾ ರಕ್ಷಣೆ ಒದಗಿಸುವ, ಈ ಮೂಲಕ ಸಾಮಾನ್ಯ ಜನರಿಗೆ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡುವ ಸಿಐಎಸ್ಎಫ್ ಸಿಬ್ಬಂದಿ ಇಡೀ ದೇಶದ ಹೆಮ್ಮೆಯಾಗಿದ್ದಾರೆ. ಅವರೆಲ್ಲರ ರಾಷ್ಟ್ರಸೇವೆಗೆ ವಂದನೆಗಳು.
#CISFRaisingDay
.. ಶಾಸಕರಾದ ಶ್ರೀ ಈ. ತುಕಾರಾಂ, ಶ್ರೀ ಬಿ.ಎಂ. ನಾಗರಾಜ್, ಶ್ರೀ ನಾರಾ ಭರತ್ ರೆಡ್ಡಿ, ಡಾ|| ಚಂದ್ರಶೇಖರ್ ಬಿ. ಪಾಟೀಲ್, ಶ್ರೀ ಶಶೀಲ್ ಜಿ. ನಮೋಶಿ, ಶ್ರೀ ವೈ.ಎಂ. ಸತೀಶ್, ಹಾಗೂ ಬಳ್ಳಾರಿ ಮಹಾಪೌರರಾದ ಶ್ರೀಮತಿ ಬಿ. ಶ್ವೇತಾ ಅವರು ಉಪಸ್ಥಿತರಿದ್ದರು. (2/2)
#Jagrut
ಬಳ್ಳಾರಿಯ ಜಿಲ್ಲಾ ಪಂಚಾಯತಿ ನಜೀರ್ ಸಭಾಂಗಣದಲ್ಲಿ ನಡೆದ ವಂಚನೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ 'ಜಾಗೃತ್' ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಕಾರ್ಯಕ್ರಮವನ್ನು ಮಾನ್ಯ ಸಚಿವರಾದ ಶ್ರೀ @BNagendraINC ಅವರು ಉದ್ಘಾಟನೆ ಮಾಡಿದರು. ಮಾನ್ಯ ಸಂಸದರಾದ ಶ್ರೀ @Karadi_Sanganna, ಶ್ರೀ @NasirHussainINC.. (1/2)
2019 ರ ಫೆಬ್ರುವರಿ 14 ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ನಮ್ಮ ವೀರ ಯೋಧರಿಗೆ ಶ್ರದ್ಧಾಪೂರ್ವಕ ನಮನಗಳು. ಇಂತಹ ಭಯೋತ್ಪಾದಕ ಕೃತ್ಯಗಳು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯಗಳು ಇದನ್ನು ಭಾರತೀಯರು ಎಂದಿಗೂ ಸಹಿಸುವುದಿಲ್ಲ.
#PulwamaAttackDay
ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಂಚನೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ 'ಜಾಗೃತ್' ಕಾರ್ಯಕ್ರಮವನ್ನು ದಿನಾಂಕ 17-2-24ರಂದು ಜಿಲ್ಲಾ ಪಂಚಾಯತಿ ನಜೀರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಚಿವರಾದ ಶ್ರೀ @BNagendraINC ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸರ್ವರಿಗೂ ಆದರದ ಸುಸ್ವಾಗತ!
#SayNoToDrugs
ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಇದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಸಾಧ್ಯವಿದೆ. ಇದರ ತಪ್ಪು ಕಲ್ಪನೆ ಹೋಗಲಾಡಿಸಿ ಸರಿಯಾದ ಅರಿವು ಮೂಡಿಸುವ ಮೂಲಕ ಜನ ಜಾಗೃತಿಗೆ ಸಹಕರಿಸೋಣ. ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ.
#WorldCancerDay2024
Raising Day greetings to all personnel and their families of the Indian Coast Guard! Today, we salute the guardians of our maritime frontiers for their steadfast commitment and valor.
#CoastGuardRaisingDay@IndiaCoastGuard