ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಯಾವುದೇ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ.
ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಆಡಳಿತಕ್ಕೆ ಕಪ್ಪುಚುಕ್ಕೆ ತರುವ ಕೃತ್ಯಗಳಿಗೆ ಮನ್ನಣೆಯಿಲ್ಲ.
#KPSC
@Sandeep98886864@DKShivakumar https://t.co/OyqtmCWaVn
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಒಂದು ಹೋರಾಟ ಪರೀಕ್ಷೆ ಬರೆಯುವುದು ಮತ್ತೊಂದು ಹೋರಾಟ ಅಂತಿಮ ಹಂತ ತಲುಪಿದ ನಂತರವೂ ನೇಮಕಾತಿ ಆದೇಶವನ್ನು ವಿಳಂಬ ಮಾಡುವ ಇಲಾಖೆಗಳಿಗೆ ನಿರ್ದೇಶನಗಳನ್ನು ಯಾರು ನೀಡಬೇಕು? ಸರ್ಕಾರವು ತಕ್ಷಣ ನಿರ್ಧಾರ ತೆಗೆದುಕೊಂಡರೆ ಜೀವಗಳನ್ನು ಉಳಿಸಬಹುದು ಇಲ್ಲದಿದ್ದರೆ, ಜೀವಗಳು ಉರುಳುತ್ತವೆ.
ಸನ್ಮಾನ್ಯ @DKShivakumar ಅವರೇ, ವಿದ್ಯಾರ್ಥಿಗಳ ಈ ಮನವಿಗೆ ಸ್ಪಂದಿಸಿ.
ವರ್ಷಗಳ ಕಾಲ ಹಗಲಿರುಳು ಶ್ರಮಿಸಿ, ಪಾರ್ಟ್ಟೈಮ್ ಕೆಲಸ ಮಾಡಿಕೊಂಡು, ಅನೇಕ ಕಷ್ಟಗಳನ್ನು ಎದುರಿಸಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇಂದು ನೇಮಕಾತಿ ಆದೇಶ ಪತ್ರ ಪಡೆಯುವುದೇ ದೊಡ್ಡ ಸವಾಲಾಗಿದೆ. ಅವರ ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಕನಸುಗಳಿಗೆ ಬೆಲೆ ಬೇಡವೇ
#WRD JE, LI, AD, ADLR, BCWO ಹಾಗೂ Agri Marketing ಸೇರಿದಂತೆ ವಿವಿಧ ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ನೇಮಕಾತಿ ಆದೇಶ ಪತ್ರಗಳಿಗಾಗಿ ಅಭ್ಯರ್ಥಿಗಳು ಕಾಯುತ್ತಿದ್ದಾರೆ.
ಅಕ್ಟೋಬರ್ 23ರ ಸಂಪುಟ ಸಭೆಯಲ್ಲಿ 56% ಮೀಸಲಾತಿ ಕುರಿತ ಗೊಂದಲಕ್ಕೆ ಸ್ಪಷ್ಟ ನಿರ್ದೇಶನ ನೀಡಿ, ಬಾಕಿ ಉಳಿದಿರುವ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಈ ವಾರದೊಳಗೆ ಸ್ಪಷ್ಟ ನಿರ್ಧಾರ ಕೈಗೊಂಡು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸದಿದ್ದರೆ, ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS) ವತಿಯಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು.
ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮಕ್ಕೆ ನ್ಯಾಯ ಸಿಗಲಿ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರ ನೀಡಿ.
@PriyankKharge@DKShivakumar@RahulGandhi@INCKarnataka
#KSVS #KPSC #AppointmentOrder #JusticeForAspirants
@Sandeep98886864@DKShivakumar@CMofKarnataka Give order copy... Kpsc looting money from aspariants.. What about genuine candidates..those who are preparing from last 5 yrs...
ಸನ್ಮಾನ್ಯ.@DKShivakumar ಕೂಡಲೇ ಆದೇಶ ಪತ್ರ ನೀಡಲು ಕ್ರಮ ಕೈಗೊಳ್ಳದಿದ್ದರೆ #KSVS ವಿದ್ಯಾರ್ಥಿ ಸಂಘಟನೆ ಅವರ ಪರವಾಗಿ ಬೃಹತ್ ವಿದ್ಯಾರ್ಥಿ ಹೋರಾಟ ನಡೆಸಲಿದೆ..
ಕೃಷಿ ಮಾರಾಟ ಇಲಾಖೆ ಮಾನ್ಯ @CMofKarnataka ಅಧೀನದಲ್ಲಿದೆ. ಅವರ ಇಲಾಖೆಯಡಿ ನೇಮಕಾತಿ ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆದಿದೆ. ಫಲಿತಾಂಶ ಪ್ರಕಟವಾಗಿ, ಸಿಂಧುತ್ವ, ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಆಯ್ಕೆಯಾದ ಅಭ್ಯರ್ಥಿಗಳು ಸ್ವತಃ ಮುಖ್ಯಮಂತ್ರಿಗಳಾದ @DKShivakumar ಅವರನ್ನು 4 ಬಾರಿ ಭೇಟಿಯಾಗಿ ಮನವಿ ಮಾಡಿದ್ದಾರೆ. “ಪ್ರಜಾಸೇವೆ — ತ್ವರಿತ ಪರಿಹಾರ” ಕಾರ್ಯಕ್ರಮದಲ್ಲಿಯೂ #ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ದೊರೆತದ್ದು ಕೇವಲ ಆಶ್ವಾಸನೆಗಳು ಮಾತ್ರ!
ಪರಿಹಾರವಿಲ್ಲದ ಪ್ರಜಾಸೇವೆ ಇದ್ದರೇನು ಪ್ರಯೋಜನ?
#160 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಸಂಬಳ ನೀಡಲು ಸರ್ಕಾರದ ಬಳಿ ದುಡ್ಡಿಲ್ಲವೇ?
ಒಂದೆಡೆ ನಮ್ಮ ಸರ್ಕಾರ #70,000 ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಘೋಷಣೆ ಮಾಡುತ್ತದೆ. ಮತ್ತೊಂದೆಡೆ ಈಗಾಗಲೇ ಆಯ್ಕೆಯಾದ 160 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ವಿಳಂಬ ಮಾಡುತ್ತದೆ.
ಆದೇಶ ಪ್ರತಿಯನ್ನೇ ನೀಡದೆ,
70,000 ನೇಮಕಾತಿಗಳ ಘೋಷಣೆ ಮಾಡಿ, ಮೂಗಿಗೆ ತುಪ್ಪ ಸವರುವ ನಾಟಕವೇಕೆ?
ಕೂಡಲೇ ನೇಮಕಾತಿ ಆದೇಶ ಪತ್ರ ನೀಡದಿದ್ದರೆ ಮುಂದಿನವಾರ #KSVS ಬೃಹತ್ ಪ್ರತಿಭಟನೆಯನ್ನು ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಪೋಷಕರೊಂದಿಗೆ ನಡೆಸಲಿದೆ..
@DeepakThimaya@INCKarnataka@PriyankKharge@SANDEEPRAI
#AgricultureMarketingDepartment #AppointmentOrders #KarnatakaGovernment
ಯುವಕರಿಗೆ ಚಿಪ್ಪು ನೀಡಿದ @INCKarnataka ದ ಮಂತ್ರಿಗಳೇ ಪುಗ್ಗೋದನ್ನ ಕಡಿಮೆ ಮಾಡಿ ನೇಮಕಾತಿ ಪ್ರಕ್ರಿಯೆ ಕೂಡಲೇ ಆರಂಬಿಸಿ ಕಣ್ಣು ಮುಚ್ಚಿಕೊಂಡ ಸರ್ಕಾರಕ್ಕೆ ಯುವಕರ ಸಂಕಷ್ಟವನ್ನು ಅರಿಯುವಷ್ಟು ಸಂಯಮವಿಲ್ಲ ಮಾನ್ಯ @siddaramaiah ನಿಮ್ಮ ನೇಮಕಾತಿ ವಿಳಂಬ ನೀತಿ ಯುವಕರನ್ನು ರಸ್ತೆಗೆ ತಂದು ನಿಲ್ಲಿಸಿದೆ,
@BJP4Karnataka | @JanataDal_S
@AnilKumarA69847@Sandeep98886864@secretarykpsc We are not destroying the careers of students, we are trying to save them. What is the point of writing an exam which is fundamentally flawed and will be quashed by the Court tomorrow?
Where was this concern when the notification itself was illegal from day one?
@Sandeep98886864@secretarykpsc kas 1.25crore , KPSC ಸದಸ್ಯರು ಸುಮಾರು 13 ಪರೀಕ್ಷೆಗಳ answer key ಗಳನ್ನು ಲಂಚಕ್ಕಾಗಿ ಸೋರಿಕೆ ಮಾಡಿದ್ದರು (ಈಗ ಬಂಧಿತ Controller of Exams ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವಧಿಯಲ್ಲಿ) same members and staff conducting kas319
@secretarykpsc ಪರೀಕ್ಷಾ ನಿಯಂತ್ರಕರ ಪ್ರಭಾರ ವಹಿಸಿಕೊಂಡಿರುವ ಪ್ರಸನ್ನ ಸರ್ ಅವರೇ ಈ ವಿಡಿಯೋದಲ್ಲಿ KPSC ಮೇಲೆ ತಮಗೆ ಸಂಪೂರ್ಣ ನಿಯಂತ್ರಣವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಹೀಗಿರುವಾಗ, #KPSCಯಲ್ಲಿ ಅಗತ್ಯ ಸುಧಾರಣೆಗಳು ಜಾರಿಯಾಗುವವರೆಗೆ ಹಾಗೂ #SIT ತನಿಖೆ ಪೂರ್ಣಗೊಳ್ಳುವವರೆಗೆ #KAS319 ಪೂರ್ವಭಾವಿ ಪರೀಕ್ಷೆಯನ್ನು 2–3 ತಿಂಗಳುಗಳ ಕಾಲ ಮುಂದೂಡುವುದು ಸೂಕ್ತ ಎಂಬುದು ಬಹುತೇಕ ಅಭ್ಯರ್ಥಿಗಳ #ಅಭಿಪ್ರಾಯವಾಗಿದೆ.
ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆ ಅಭ್ಯರ್ಥಿಗಳ ಹಕ್ಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು @INCKarnataka ಸರ್ಕಾರದ ಜವಾಬ್ದಾರಿ.
@DKShivakumar@PriyankKharge@DeepakThimaya@RahulGandhi #SANDEEPRAI #KSVS
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#PostponeKAS319 #KPSCReforms #KSVS
@secretarykpsc ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!
ಯಾವುದೇ ಸುಧಾರಣೆಗಳಿಲ್ಲದೆ, ಅದೇ ಕಾರ್ಯದರ್ಶಿ ಮತ್ತು ಅದೇ ಸದಸ್ಯರನ್ನು ಒಳಗೊಂಡಿರುವ KPSC ನಡೆಸಲಿರುವ ಮುಂದಿನ KAS ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತದೆ ಎಂಬ ಭರವಸೆ ನಮಗಿಲ್ಲ.
ಹೀಗಾಗಿ, KPSCಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸುವವರೆಗೆ KAS ಪರೀಕ್ಷೆಯನ್ನು #ತಾತ್ಕಾಲಿಕವಾಗಿ #ಮುಂದೂಡಬೇಕು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ KPSCಯ ಎಲ್ಲಾ ಸದಸ್ಯರಿಗೆ ನಿಜವಾಗಿಯೂ ನೈತಿಕತೆ ಮತ್ತು ಹೊಣೆಗಾರಿಕೆ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ , ಆಯೋಗದ ಘನತೆಯನ್ನು ಕಾಪಾಡಲು ಮುಂದಾಗಬೇಕು.
ಇನ್ನೊಂದು ವಾರದೊಳಗೆ KAS ಪರೀಕ್ಷೆಯನ್ನು ಮುಂದೂಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ KPSC ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.
ಇದು ಕೇವಲ ಎಚ್ಚರಿಕೆಯಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಸಂಕಲ್ಪ!
@DKShivakumar@PriyankKharge@SANDEEPRAI
#KPSC #KAS #KSVS #CleanKPSC@KSVS2025
https://t.co/WZx7YKbjsV
ಇಂದು ನಮ್ಮ @KSVS ಸಂಘಟನೆಯ ಪ್ರದಾನ ಕಾರ್ಯದರ್ಶಿಗಳಾದ ಮಾನ್ಯ ಶ್ರೀ #ಸಂದೀಪ್ ರೈ ಅವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ @hd_kumaraswamy ಅವರ ಗಮನಕ್ಕೆ ತಂದರು. ರಾಜ್ಯದ ರೈತರು ಹಾಗೂ ಯುವಕರ ಸಂಕಷ್ಟಗಳಿಗೆ ಸ್ಪಂದಿಸುವ #ಮಾತೃ ಹೃದಯಿ ಕುಮಾರಸ್ವಾಮಿಯವರಿಗೆ ಧನ್ಯವಾದಗಳು....
. #ಭ್ರಷ್ಟಾಚಾರದ ವಿರುದ್ಧ ನಮ್ಮ ಪ್ರಾಮಾಣಿಕ ದ್ವನಿ ನಿರಂತರವಾಗಿರಲಿದೆ ...
ನವೀನ್ ಹಳೆಮನಿ
ರಾಜ್ಯ ಸಂಚಾಲಕರು
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Nikhil_Kumar_k@HMRameshGowda@SANDEEPRAI
#ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ...
ಪ್ರತಿಭಾನ್ವಿತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕಾದ ಹುದ್ದೆಗಳನ್ನು ಕಸಿಯುತ್ತಿದ್ದ... #ಅಯೋಗ್ಯರಿಗೆ ಕಾನೂನಿನ ಪಾಠ ಕಲಿಸುವ ಸಮಯ ಬಂದಿದೆ..
ಸ್ವಯಪ್ರೇರಿತ ರಾಜಿನಾಮೆ ನೀಡಿದ ತಕ್ಷಣ ನೀವು ಮಾಡಿದ ಅಕ್ರಮದಿಂದ ಹುದ್ದೆ ಕಳೆದುಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲು ಸಾಧ್ಯವೇ ? ?
ಭ್ರಷ್ಟಾಚಾರದಂತಹ ಅಕ್ಷಮ್ಯ ಅಪರಾಧಗಳಿಗೆ ಯಾವುದೇ ವಿನಾಯಿತಿ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು! 💯
@secretarykpsc ಎಲ್ಲಾ ಸದಸ್ಯರನ್ನು ತನಿಖೆಗೆ ಒಳಪಡಿಸಿ..
@dir_ed@cbic_india @CID @PriyankKharge@DKShivakumar@PriyankKharge
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Sandeep98886864 @hd_kumaraswamy We humbly request the Government to entrust KEA with the conduct of KAS examinations rather than KPSC. Due to widespread nepotism and corruption in KPSC, public trust in the commission has been severely eroded. It is no longer regarded as a reliable institution..
ಕರ್ನಾಟಕದ ವಿದ್ಯಾರ್ಥಿಗಳ ಗಮನಕ್ಕೆ
ದಿನಾಂಕ 16/10/2026 ರಂದು ಸನ್ಮಾನ್ಯ ಕೇಂದ್ರ ಸಚಿವರಾದ @hd_kumaraswamy ಅವರು #KPSC ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಬೆಂಗಳೂರಿನ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕೇಂದ್ರವಾದ ವಿಜಯನಗರದ ಬಂಟರ ಸಂಘಕ್ಕೆ ಆಗಮಿಸಲಿದ್ದಾರೆ.
ತಮ್ಮ ಭವಿಷ್ಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ನೇರವಾಗಿ ತಿಳಿಸಬೇಕೆಂದು ಮನವಿ.
#ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ
ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ನಮ್ಮೊಂದಿಗೆ ಸಂವಾದಕ್ಕೆ ಬರುತ್ತಿರುವ @hd_kumaraswamy ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
@H_D_Devegowda@Nikhil_Kumar_k@JDs_Yuvapade@sandeeprai@vinaygb
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#KSVS #KPSC #StudentsVoice
ಸನ್ಮಾನ್ಯ ಶ್ರೀ @narayanagowdru ಅವರ ಗಮನಕ್ಕೆ FDA ಹಾಗೂ SDA ಹುದ್ದೆಗಳ ನೇಮಕಾತಿ ನಿಯಮಗಳಲ್ಲಿ ಮಾಡಿರುವ ತಿದ್ದುಪಡಿಯಿಂದ ಕನ್ನಡ ಹಾಗೂ ಗ್ರಾಮೀಣ ಭಾಗದ #ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಆತಂಕವಿದೆ.
ಕನ್ನಡಕ್ಕೆ ಇದ್ದ 100 ಅಂಕಗಳನ್ನು 35 ಅಂಕಗಳಿಗೆ ಇಳಿಸುವುದು ಖಂಡನೀಯ. ಬೇರೆ ರಾಜ್ಯಗಳಲ್ಲಿ ತಮ್ಮ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವಾಗ, ಕರ್ನಾಟಕದಲ್ಲಿ ಕನ್ನಡದ ಅಂಕಗಳನ್ನು ಕಡಿಮೆ ಮಾಡುವುದು ಸರಿಯಲ್ಲ.
ಸನ್ಮಾನ್ಯ @DKShivakumar ಅವರ ಗಮನಕ್ಕೆ ಈ ವಿಚಾರವನ್ನು ತಂದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
FDA ಹಾಗೂ SDA ನೇಮಕಾತಿಯಲ್ಲಿ ಕನ್ನಡಕ್ಕೆ 100 ಅಂಕಗಳನ್ನೇ ಮುಂದುವರಿಸಬೇಕು.
ಈ ನಿಟ್ಟಿನಲ್ಲಿ @karave_KRV ಹೋರಾಟಕ್ಕೆ ಕರೆ ನೀಡಿದರೆ ಕರ್ನಾಟಕದ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಸಹ ನಿಮ್ಮೊಂದಿಗೆ ಸಾವಿರಾರು ವಿದ್ಯಾರ್ಥಿಗಳೊಂದಿಗೆ ದಾರವಾಡದಲ್ಲಿ ಪ್ರತಿಭಟಿಸಲು ಸಿದ್ಧರಿದ್ದೇವೆ.....
@PriyankKharge@DeepakThimaya@karave_KRV @Sandeep98886864 @KSVS
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ...
ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ್ ಬಂಧನದ ಹಿನ್ನೆಲೆಯಲ್ಲಿ ನಿನ್ನೆಯ ನನ್ನ ಟ್ವಿಟರ್ ಪೋಸ್ಟ್ ಬಳಿಕ ರಾಜ್ಯದ ಹಲವು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ದೂರವಾಣಿ ಮೂಲಕ, ಕಮೆಂಟ್ಗಳ ಮೂಲಕ ಹಾಗೂ ವೈಯಕ್ತಿಕ ಮೆಸೇಜ್ಗಳ ಮೂಲಕ ತಮ್ಮ ಸಮಸ್ಯೆ, ಅಳಲು ಮತ್ತು ಬೇಡಿಕೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ.
ವಿಶೇಷವಾಗಿ FDA/SDA ಸೇರಿದಂತೆ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ನೀಡುತ್ತಿರುವ ಅಂಕಗಳ ಪ್ರಮಾಣದ ಬಗ್ಗೆ ವಿದ್ಯಾರ್ಥಿಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಹಿಂದೆ ಲಿಪಿಕ ಹುದ್ದೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಕನ್ನಡಕ್ಕೆ ಹೆಚ್ಚಿನ ಮಹತ್ವವಿತ್ತು. ಆದರೆ ಈಗ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನವನ್ನು ಒಟ್ಟಿಗೆ ಪರಿಗಣಿಸುವ ಮಾದರಿಯಲ್ಲಿ ಕನ್ನಡಕ್ಕೆ ನೀಡಲಾಗುತ್ತಿರುವ ಅಂಕಗಳ ಪ್ರಮಾಣ ಕಡಿಮೆಯಾಗಿದೆ ಎಂಬುದು ಅಭ್ಯರ್ಥಿಗಳ ಪ್ರಮುಖ ಅಳಲು.
• FDA/SDA ಸೇರಿದಂತೆ ಲಿಪಿಕ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಹಿಂದಿನಂತೆ ನೂರು ಅಂಕ ನಿಗದಿ ಮಾಡಬೇಕು. ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಸೇರಿಸಲೇಬೇಕೆಂದಿದ್ದರೆ ಕನ್ನಡಕ್ಕೆ ಕನಿಷ್ಠ 60 ಅಂಕ, ಇಂಗ್ಲಿಷ್ಗೆ 20 ಅಂಕ ಮತ್ತು ಕಂಪ್ಯೂಟರ್ ಜ್ಞಾನಕ್ಕೆ 20 ಅಂಕ ನೀಡಬೇಕು.
• ಹಿಂದಿನ ಮಾದರಿಯಂತೆ ಸಾಮಾನ್ಯ ಕನ್ನಡಕ್ಕೆ ಪ್ರತ್ಯೇಕವಾಗಿ ಹೆಚ್ಚಿನ ಮಹತ್ವ ನೀಡುವ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು.
• 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇರುವ ಪ್ರಸ್ತುತ 5% ಮೀಸಲಾತಿ ಈಗ ಕಾಟಾಚಾರಕ್ಕೆ ಎಂಬಂತೆ ಇದೆ. ಸರ್ಕಾರ ಮರುಪರಿಶೀಲಿಸಿ ಹೆಚ್ಚಿಸಬೇಕು ಮತ್ತು ಪ್ರತ್ಯೇಕವಾಗಿ ನೀಡಬೇಕು.
• ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಸಮಿತಿಯಿಂದ ಶಿಫಾರಸು ಮಾಡಲಾಗಿದೆ ಎನ್ನಲಾಗುತ್ತಿರುವ 25% ಕನ್ನಡ ಮಾಧ್ಯಮ ಮೀಸಲಾತಿ ಕುರಿತು ಸರ್ಕಾರ ತನ್ನ ಸ್ಪಷ್ಟ ನಿಲುವು ಪ್ರಕಟಿಸಬೇಕು.
• ಎಲ್ಲ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಪ್ರಶ್ನೆಪತ್ರಿಕೆ ಗುಣಮಟ್ಟದ ಅನುವಾದದೊಂದಿಗೆ ಇರಬೇಕು. ಅನುವಾದ ದೋಷಗಳಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು.
• 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವುದನ್ನು ಪ್ರಮಾಣೀಕರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.
• ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪರೀಕ್ಷೆ, ಪ್ರಮಾಣಪತ್ರ ಮತ್ತು ಮೀಸಲಾತಿ ಪ್ರಕ್ರಿಯೆಯಲ್ಲಿ ಅನಗತ್ಯ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆ ಇರಬಾರದು.
• FDA/SDA ಮಾತ್ರವಲ್ಲದೆ Group-C, Group-D ಸೇರಿದಂತೆ ಎಲ್ಲ ನೇರ ನೇಮಕಾತಿ ಪರೀಕ್ಷೆಗಳಲ್ಲೂ ಕನ್ನಡ ಭಾಷೆಗೆ ನೀಡುತ್ತಿರುವ ಅಂಕ, ಕನ್ನಡ ಭಾಷಾ ಪರೀಕ್ಷೆ ಮತ್ತು ಕನ್ನಡ ಮಾಧ್ಯಮ ಮೀಸಲಾತಿ ಕುರಿತು ಸಮಗ್ರ ನೀತಿ ರೂಪಿಸಬೇಕು.
ಕರ್ನಾಟಕದ ಸರ್ಕಾರಿ ಸೇವೆಗೆ ಸೇರುವ ಅಭ್ಯರ್ಥಿಯ ಕನ್ನಡ ಓದು, ಬರಹ, ಅರ್ಥೈಸುವಿಕೆ ಮತ್ತು ಸಾರ್ವಜನಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವ ಸಾಮರ್ಥ್ಯಕ್ಕೂ ಸೂಕ್ತ ಮಹತ್ವ ನೀಡಬೇಕು. ಕನ್ನಡದಲ್ಲಿ 10 ವರ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗೆ ಸರ್ಕಾರಿ ಉದ್ಯೋಗದ ಸ್ಪರ್ಧೆಯಲ್ಲಿ ಕನ್ನಡವೇ ಶಕ್ತಿ ತುಂಬುವಂತಾಗಬೇಕು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ನನ್ನ ಗಮನಕ್ಕೆ ತಂದಿರುವ ಈ ಎಲ್ಲ ವಿಚಾರಗಳನ್ನು ಒಗ್ಗೂಡಿಸಿ, ಮಾನ್ಯ ಮುಖ್ಯಮಂತ್ರಿಗಳಿಗೆ ಸಮಗ್ರ ಮನವಿ ಸಲ್ಲಿಸುತ್ತೇನೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಬಂಧನಕ್ಕೆ ಒಳಗಾಗಿದ್ದಾರೆ. ಕೆಪಿಎಸ್ ಸಿ
ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದಾಗ ನಾವು ನಡೆಸಿದ ನಿರಂತರ ಹೋರಾಟದ ಸಂದರ್ಭದಲ್ಲಿ ಸಾಹುಕಾರ್ ಪಾಪದ ಕೊಡ ತುಂಬುತ್ತಾ ಬಂದಿದೆ ಎಂದು ಹೇಳಿದ್ದೆ. ಬಹುಶಃ ಇವತ್ತು ಪಾಪದ ಕೊಡ ಪೂರ್ಣ ತುಂಬಿದೆ ಅನ್ನಿಸುತ್ತಿದೆ.
ಮೊದಲೇ ಪಾಪಕೂಪಗಳ ಕೇಂದ್ರ ಎನಿಸಿಕೊಂಡಿದ್ದ ಕೆ ಪಿಎಸ್ ಸಿಯನ್ನು ಮತ್ತೆಂದೂ ರಿಪೇರಿ ಮಾಡಲಾಗದಂತೆ ಹಾಳುಗೆಡಹಿದ ಕುಖ್ಯಾತಿ ಈ ಸಾಹುಕಾರ್ ಮತ್ತು ತಂಡಕ್ಕೆ ಸೇರಬೇಕು. ಕನ್ನಡದ ಮಕ್ಕಳಿಗೆ ಕೆಲಸ ಕೊಡಿಸುವ ಸಂಸ್ಥೆಯನ್ನು ಸಂಪೂರ್ಣವಾಗಿ ಕಗ್ಗೊಲೆ ಮಾಡಿದ ಈ ಸಾಹುಕಾರ್ ಕ್ಷಮೆಗೆ ಅರ್ಹರಲ್ಲ.
ಜಾರಿ ನಿರ್ದೇಶನಾಲಯ ಇದೇ ಪ್ರಕರಣದಲ್ಲಿ ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಅವರನ್ನೂ ಬಂಧಿಸಿದೆ. ಇವರಿಗಿಂತ ಮೊದಲು ಬಂಧನಕ್ಕೆ ಒಳಗಾದ ಮಾಜಿ KPSC ಪರೀಕ್ಷಾ ನಿಯಂತ್ರಕ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅದನ್ನು ಸಂಭ್ರಮದಿಂದ ಆಚರಿಸಿದ ವ್ಯಕ್ತಿ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಣ್ಣೀರು ಇಡುತ್ತಾ ತಮ್ಮ ಸಂಕಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಳ್ಳುತ್ತಿದ್ದಾಗ ಅದನ್ನೆಲ್ಲ ಓದಿ ಎಂಜಾಯ್ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ ವಿಘ್ನ ಸಂತೋಷಿ ಈತ. ಈಗ ಮಾಡಿದ್ದುಣ್ಣೋ ಮಹರಾಯ ಎಂಬಂತೆ ಜೈಲು ಸೇರಿದ್ದಾನೆ.
ಕರ್ನಾಟಕ ರಕ್ಷಣಾ ವೇದಿಕೆ ಕೆ ಪಿ ಎಸ್ ಸಿ ಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ದಿನನಿತ್ಯ ನನ್ನೊಂದಿಗೆ ಮಾತಾಡುತ್ತಿದ್ದರು. ಎಷ್ಟೋ ಮಂದಿ ಊಟ, ನಿದ್ದೆ ಬಿಟ್ಟು ಓದಿ ಪರೀಕ್ಷೆಗಳಿಗೆ ತಯಾರಾಗಿದ್ದರು. ಏನೇನೋ ಕನಸು ಕಟ್ಟಿಕೊಂಡಿದ್ದರು. ಆದರೆ ತಪ್ಪು ತಪ್ಪಾದ ಪ್ರಶ್ನೆ ಪತ್ರಿಕೆ ನೀಡಿ ಈ ಮಕ್ಕಳ ಭವಿಷ್ಯ ನಾಶ ಮಾಡಲಾಯಿತು. ಮೊದಲೇ ಹುದ್ದೆಗಳೆಲ್ಲ ಮಾರಾಟ ಮಾಡಿಕೊಂಡಿದ್ದರಿಂದ ಉದ್ದೇಶಪೂರ್ವಕವಾಗಿ ಈ ಸಂಚು ನಡೆಸಲಾಗಿತ್ತು. ಆ ಮಕ್ಕಳ ಕಣ್ಣೀರ ಶಾಪ ಇವರನ್ನು ತಟ್ಟದೇ ಇರುತ್ತದೆಯೇ?
ಕೆ ಪಿ ಎಸ್ ಸಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಪರೀಕ್ಷೆ ನಡೆಸಿದರೂ ಅವು ವಿವಾದಕ್ಕೆ ಒಳಗಾಗಿವೆ. ಅದಕ್ಕೆ ಕಾರಣ ಅಲ್ಲಿ ದಂಧೆ ನಡೆಸುತ್ತಿದ್ದ ಸಾಹುಕಾರ್, ಜ್ಞಾನೇಂದ್ರ ಥರದ ಖೂಳರು. ಒಂದು ಸಾರ್ವಜನಿಕ ಸಂಸ್ಥೆಯನ್ನು ತಮ್ಮ ಹೊಲಸು ದಂಧೆಗೆ ಬಳಸಿಕೊಂಡ ಈ ಪೀಡೆಗಳಿಂದ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ. ಇವರೆಲ್ಲ ನಮ್ಮ ಸಮಾಜಕ್ಕೆ ಅಂಟಿಕೊಂಡ ಕ್ಯಾನ್ಸರ್ ಇದ್ದಂತೆ. ಅಷ್ಟು ಸುಲಭವಾಗಿ ಇವು ನಾಶ ಆಗುವುದಿಲ್ಲ. ಅದರ ಆರಂಭ ಆಗಿದೆ ಎಂದು ನಾವು ನಿಟ್ಟುಸಿರು ಬಿಡಬೇಕಷ್ಟೆ.
ಕೆಪಿಎಸ್ ಸಿ ಹಗರಣವನ್ನು ಕೇವಲ ಒಂದು ಹಗರಣ ಎಂದು ಭಾವಿಸುವಂತಿಲ್ಲ. ಇದು ಒಂದು ಸಂಸ್ಥೆಯ ಸರ್ವನಾಶದ ಕೃತ್ಯ. ಅಷ್ಟೆ ಅಲ್ಲ, ಲಕ್ಷಾಂತರ ಕನ್ನಡ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ ಮಹಾಪಾಪ. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಕಠಿಣ ಶಿಕ್ಷೆಯಾಗಲಿ.
From 1995 viva-mark rigging to 2011 cash-for-posts, paper leaks, fake OBC certificates, and the 2026 vet exam, where candidates paid ₹1.5+ crore for leaked papers while an IAS controller and middlemen were arrested.
Karnataka HC called it a “disturbing continuum.” #KPSCScam