ನಾಗರಿಕರ ಸಮಸ್ಯೆಯನ್ನು ನಿವಾರಿಸುವುದು ಹಾಗೂ ಸಾರ್ವಜನಿಕ ಅಹವಾಲುಗಳನ್ನು ಪರಿಶೀಲಿಸಿ ಪರಿಹಾರಗಳನ್ನು ಒದಗಿಸುವ ಕೆಲಸವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ- ಬಿಡಿಎ- ನಿರಂತರವಾಗಿ ಮಾಡುತ್ತಿದೆ.
ಈ ಪ್ರಯತ್ನಗಳ ಭಾಗವಾಗಿ, ಪ್ರತಿ ವಾರ ನಡೆಯುವ ಸಾರ್ವಜನಿಕ ಕುಂದು ಕೊರತೆ ಸಭೆಗಳ ಜೊತೆಗೆ, ನಾಗರಿಕರು ತಮ್ಮ ಭೇಟಿಯನ್ನು ಪಾರದರ್ಶಕ ಮತ್ತು ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಸಹಾಯಕವಾಗುವಂತೆ ಬಿಡಿಎ ಆಯುಕ್ತರ ಪ್ರತಿ ವಾರದ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.
1ನೇ ಮತ್ತು 3ನೇ ಶನಿವಾರದಂದು ಕ್ಷೇತ್ರ ಪರಿಶೀಲನೆ, 2ನೇ ಮತ್ತು 4ನೇ ಶನಿವಾರದ ರಜಾ ದಿನಗಳನ್ನು ಹೊರತುಪಡಿಸಿ, ಆಯುಕ್ತರು ಉಳಿದ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತಾರೆ ಎಂಬುದನ್ನು ದಯವಿಟ್ಟು ಗಮನಿಸಿ. ಸಾರ್ವಜನಿಕರು ಇತರ ಎಲ್ಲಾ ಕೆಲಸದ ದಿನಗಳಲ್ಲಿ ಮಧ್ಯಾಹ್ನ 3:00 ರಿಂದ ಸಂಜೆ 5:30 ರವರೆಗೆ ಸಂದರ್ಶಕರ ಸಮಯದಲ್ಲಿ ಬಿಡಿಎ ಆಯುಕ್ತರನ್ನು ಭೇಟಿ ಮಾಡಬಹುದು.
ಸೋಮವಾರ, ಮಂಗಳವಾರ ಮತ್ತು ಶುಕ್ರವಾರದಂದು, ಗೊತ್ತುಪಡಿಸಿದ ಸಂದರ್ಶಕರ ಸಮಯದಲ್ಲಿ ಸಂದರ್ಶಕರಿಗೆ ನೇರ ವಾಕ್-ಇನ್ ಅನುಮತಿಸಲಾಗಿದೆ. ಈ ದಿನಗಳಲ್ಲಿ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ.
ಬುಧವಾರ ನಿರ್ದಿಷ್ಟ ಯೋಜನಾ ವಿಮರ್ಶೆಗಳಿಗೆ ಮೀಸಲಾಗಿರುತ್ತದೆ ಮತ್ತು ಸಂಬಂಧಪಟ್ಟ ಸಾರ್ವಜನಿಕರು ಮುಂಚಿತವಾಗಿ ತಿಳಿಸುವ ಮೂಲಕ ಆನ್ಲೈನ್ನಲ್ಲಿ ಅಥವಾ ವೈಯಕ್ತಿಕವಾಗಿ ಭಾಗವಹಿಸಬಹುದು. ಆದರೆ ಗುರುವಾರ ಮುಕ್ತ ಸಭೆಗೆ ಆಹ್ವಾನ ಮತ್ತು ಪೂರ್ವಾನುಮತಿ ಮೂಲಕ ಮಾತ್ರವೇ ಸಾರ್ವಜನಿಕರಿಗೆ ಅನುಮತಿ.
ಶನಿವಾರದಂದು, ಆಯುಕ್ತರು ಕ್ಷೇತ್ರ ಪರಿಶೀಲನೆಯಲ್ಲಿ ನಿರತರಾಗಿರುತ್ತಾರೆ ಮತ್ತು ಸಾರ್ವಜನಿಕ ಭೇಟಿಗಳಿಗೆ ಲಭ್ಯವಿರುವುದಿಲ್ಲ.
ಸರ್ಕಾರದ ಅಧಿಕೃತ ಸಭೆಗಳು, ಸಮಿತಿಗಳು ಅಥವಾ ಸಚಿವರೊಂದಿಗಿನ ಸಭೆಗಳಿಂದಾಗಿ ವೇಳಾಪಟ್ಟಿಯು ಕೊನೆಯ ಕ್ಷಣದ ಬದಲಾವಣೆಗಳಿಗೆ ಒಳಪಟ್ಟಿರುವುದರಿಂದ, ಸಾರ್ವಜನಿಕರು ಭೇಟಿಗೂ ಮೊದಲು ಆಯುಕ್ತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಡಿಎ 24/7 ನಿಯಂತ್ರಣ ಕೊಠಡಿಯ ಮೊಬೈಲ್ 94831 66622 ಸಂಪರ್ಕಿಸಲು ಸೂಚಿಸಲಾಗಿದೆ.
ಸಾರ್ವಜನಿಕ ಸಂವಹನ ಸಮಯಗಳು ಸೇರಿದಂತೆ ಆಯುಕ್ತರ ಕೊಠಡಿಯು 24×7 ಸಿಸಿಟಿವಿ ಕಣ್ಗಾವಲಿನಲ್ಲಿದೆ ಎಂಬುದನ್ನು ದಯವಿಟ್ಟು ಗಮನಿಸಿ.
#BDA #BDAOHM