ಪೊಲೀಸ್ ಇಲಾಖೆಯಲ್ಲಿ ಕಠಿಣ ಪರಿಶ್ರಮ, ನಿಷ್ಠೆ, ಸಮರ್ಪಣೆ ಮತ್ತು ಪ್ರೀತಿಯಿಂದ ಸುದೀರ್ಘ ಸೇವೆಯನ್ನು ಸಲ್ಲಿಸಿ ಈ ದಿನ ವಯೋ ನಿವೃತ್ತಿ ಹೊಂದಿರುವ ಶ್ರೀ ಕಾಂತ ರೆಡ್ಡಿ, PI, ಬಡವನಹಳ್ಳಿ ಪೊಲೀಸ್ ಠಾಣೆ ಮತ್ತು ಶ್ರೀ ಶಿವಣ್ಣ, ASI, ಗುಬ್ಬಿ ಪೊಲೀಸ್ ಠಾಣೆ ರವರುಗಳ ನಿವೃತ್ತಿಯ ಜೀವನ ಸುಖಕರ ಮತ್ತು ಆರೋಗ್ಯಕರವಾಗಿರಲೆಂದು ಶುಭ ಹಾರೈಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
#HappyRetirement #TumakuruDistrictPolice #BadavanahalliPS #GubbiPS
@venkatashok@badavanaha77121@KarnatakaCops
ಕಳೆದ ಮೂರು ವರ್ಷಗಳಿಂದ ನನ್ನ ಮುಂಗಾವಲು ಪಡೆಯ ಪೈಲಟ್ ಅಧಿಕಾರಿಯಾಗಿ ಅತ್ಯಂತ ನಿಷ್ಠೆ, ಶಿಸ್ತು ಮತ್ತು ಕರ್ತವ್ಯಪ್ರಜ್ಞೆಯಿಂದ ಸೇವೆ ಸಲ್ಲಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ವೆಂಕಟೇಶಯ್ಯ ವಿ ಅವರು ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಪೊಲೀಸ್ ಇಲಾಖೆಗೆ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಗೌರವಿಸಿದೆ.
ಶ್ರೀಯುತರ ನಿವೃತ್ತಿ ಜೀವನವು ಉತ್ತಮ ಆರೋಗ್ಯ, ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಈ ವೇಳೆ ಶುಭಹಾರೈಸಿದೆ.
ಅಭಿನಂದನೆಗಳು : ಪೊಲೀಸ್ ಇಲಾಖೆಯ ಶ್ಲಾಘನೀಯ ಸೇವೆಗಾಗಿ “ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ (DG & IGP Commendation Disc) ಗೌರವಕ್ಕೆ” ಭಾಜನರಾದ ನಮ್ಮ ಘಟಕದ ಅಧಿಕಾರಿಯವರಿಗೆ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆಗಳು💐.
ನಿಮ್ಮ ಕರ್ತವ್ಯ ನಿಷ್ಠೆ ಹಾಗೂ ದಕ್ಷತೆ ಹೀಗೆ ಮುಂದುವರೆಯಲಿ ಮತ್ತು ಇತರರಿಗೆ ಮಾದರಿಯಾಗಲಿ.
#TumakuruDistrictPolice
#DG&IGPCommendationDisc #Medal
@venkatashok@KarnatakaCops
ಗೃಹ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಮತ್ತು ಮನವಿ ಪತ್ರಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಲಾಯಿತು.
#PublicGrievance#JanSampark
#PeopleFirst
"ನಮ್ಮ ಪೋಲಿಸ್ ನಮ್ಮ ಹೆಮ್ಮೆ"
✍️✍️ನಮ್ಮ ತುಮಕೂರು ಜಿಲ್ಲೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಭಾಗ್ಯಮ್ಮ.M ರವರ ಮಗಳಾದ ಕುಮಾರಿ:ತೇಜಸ್ವಿನಿ C.M ರವರು ರಾಷ್ಟ್ರಮಟ್ಟದ JEE(Main) 89 ನೇ ಮತ್ತು JEE(Advanced) 302 ನೇ All India Rank ಪಡೆದು IIT ಗುವಾಹಟಿ ಯಲ್ಲಿ ಪ್ರವೇಶ ಪಡೆ��ಿದ್ದು ನಮ್ಮ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಗೆ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ💐💐.
🏅ಕುಮಾರಿ:ತೇಜಸ್ವಿನಿ C.M ರವರಿಗೆ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಹಾಗೂ ವೈಯಕ್ತಿಕವಾಗಿ ತುಂಬು ಹೃದಯದ ಧನ್ಯವಾದಗಳು.〰️
#TumakuruDistrictPolice
#WHC #Daughter
#IITGuvahati #JEE @112Tumakuru @DspTumkur
@venkatashok
2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ರಾಜ್ಯಾದ್ಯಂತ ಇಂದು ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ತುಮಕೂರು ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆ, ಎಂ.ಎ.ಆರ್.ಪಿ ಶಾಲೆಗೆ @DCTumakuru ರವರೊಂದಿಗೆ ಭೇಟಿ ನೀಡಿ ಮಕ್ಕಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳನ್ನು ತಿಳಿಸಿ ಶುಭಹಾರೈಸಲಾಯಿತು.
#TumakuruDistrictPolice
#SchoolVisit
#Education
@venkatashok
ಆಸರೆ : ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಾದ ಲಕ್ಷ್ಮಿದೇವಮ್ಮ ರವರನ್ನು ಭೇಟಿ ಮಾಡಿ ಅವರ ಕುಂದು ಕೊರತೆ & ಯೋಗಕ್ಷೇಮದ ಬಗ್ಗೆ ವಿಚಾರ ಮಾಡಿ, ಲಕ್ಷ್ಮಿದೇವಮ್ಮನವರಿಗೆ ಸೊಂಟಕ್ಕೆ ಹಾಕಿಕೊಳ್ಳುವ ಬೆಲ��ಟ್ ನೀಡಲಾಗಿರುತ್ತದೆ.
#TumakuruDistrictPolice
#Asare #SeniorCitizen
#KoraPS
@v
@venkatashok
@KarnatakaCops
ಸಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಾರದ ಹಿಂದೆ ಬಸ್ ಸ್ಟಾಂಡ್ ನಲ್ಲಿ ಅನಾಥರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದ ಮೃತರ ವಿಳಾಸ ಪತ್ತೆಗಾಗಿ ಪ್ರಾಮಾಣಿಕ ಪ್ರಯತ್ನ ಪಟ್ಟು ಪತ್ತೆಯಾಗದ ಹಿನ್ನೆಲೆ ಹಾಸ್ಪಿಟಲ್ ನಲ್ಲಿ ಇಟ್ಟಿದ ಶವವನ್ನು ಠಾಣೆಯ ಅಧಿಕ���ರಿಗಳು ಆಂತ್ಯಕ್ರಿಯೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿರುತ್ತಾರೆ.
#TumakuruDistrictPolice
#GoodWork #police
#SiraPS
@venkatashok
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ (ಶೈಕ್ಷಣಿಕ ವರ್ಷ 2026–27) ಸಂಬಂಧಿಸಿದ ಹಾಲ್ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ಗಳನ್ನು ಅಧಿಕೃತ ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ:
https://t.co/sOFEjnyrkc
ಹೆಚ್��ಿನ ಮಾಹಿತಿಗಾಗಿ ಭೇಟಿ ನೀಡಿ:
https://t.co/eeqKHVViqG
ಸಹಾಯಕ್ಕಾಗಿ ಸಂಪರ್ಕಿಸಿ: +91 82777 99990