ಅದ್ಭುತ, ಅಮೋಘ, ಅದ್ವಿತೀಯ, ದಾಖಲೆಗಳ ಜೊತೆ ವಿಶ್ವ ದಿಗ್ಗಜ ಸ್ಥಾನವನ್ನ ತನ್ನಲ್ಲೆ ಉಳಿಸಿಕೊಂಡು 2026ರ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಲಿಗ್ ಪಂದ್ಯಗಳಿಂದಲೂ ಸಂಘಟಿತ ಹೋರಾಟ ಮಾಡಿದ್ದ ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಬೌಲರ್ ಅಬ್ಬರ ಮತ್ತೆ ಕಪ್ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಭಾರತ ತನ್ನ ಅಮೋಘ ಪ್ರದರ್ಶನದ ಮೂಲಕ ಕೋಟಿ ಕೋಟಿ ಜನರ ಮನಸ್ಸು ಗೆದ್ದಿದ್ದು ಎಲ್ಲ ಆಟಗಾರರಿಗು ಹಾಗೂ ಸಿಬ್ಬಂದಿ ವರ್ಗಕ್ಕು ಹೃತ್ಪೂರ್ವಕ ಅಭಿನಂದನೆಗಳು.
ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಅವರು ಅಕಾಲಿಕ ಮರಣ ಹೊಂದಿದರು ಎಂಬ ಮಾಹಿತಿ ತಿಳಿದು ತೀವ್ರ ಆಘಾತ ಉಂಟಾಯಿತು. ಮಹಾರಾಷ್ಟ್ರದ ಪ್ರಭಾವೀ ನಾಯಕರಾಗಿದ್ದ ಅವರು, ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏🏻
26ನೇ ಜನವರಿ 1950 ಸಂವಿಧಾನವನ್ನು ಅಂಗೀಕರಿಸಿ, ಶಾಸನವನ್ನಾಗಿ ಒಪ್ಪಿಕೊಂಡ ದಿನ. ನಮ್ಮ ಸಂವಿಧಾನವನ್ನು ಗೌರವಿಸುವುದು, ಆಶಯಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಶ್ರೇಷ್ಠ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಮಸ್ತ ಭಾರತೀಯರಿಗೂ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#RepublicDay #77thRepublicDay
2026ನೇ ವರ್ಷದ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದ್ದು. ಮಂಡ್ಯ ಜಿಲ್ಲೆಯ ಹೆಮ್ಮೆಯ ಪುತ್ರ, ಪಾಂಡವಪುರದ ಅಪ್ಪಟ ಪುಸ್ತಕ ಪ್ರೇಮಿ ಆಗಿರುವ ಶ್ರೀ ಅಂಕೇಗೌಡ ಅವರಿಗೆ ಲಭಿಸಿದೆ. ಪ್ರಶಸ್ತಿ ಪಡೆದ ಅಂಕೇಗೌಡರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಅಂಕೇಗೌಡರು ತಮ್ಮ ಇಡೀ ಜೀವನವನ್ನೆ ಪುಸ್ತಕಗಳಿಗಾಗಿ ಮಿಸಲಿಟ್ಟು, ಜ್ಞಾನ ದಾಸೋಹದಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ. ಅವರ ಸಾರ್ಥಕ ಬದುಕಿನ ಕನ್ನಡಿಯಂತೆ ಶ್ರೀಯುತರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಸಂಭ್ರಮದ ವಿಚಾರ.
ತನ್ನ ಹವ್ಯಾಸವನ್ನೆ ಸೇವೆಯನ್ನಾಗಿ ಪರಿವರ್ತಿಸಿದ ಅಂಕೇಗೌಡರು ತಮ್ಮ ಗ್ರಂಥಾಲಯದಲ್ಲಿ 20 ಲಕ್ಷ ಪುಸ್ತಕಗಳನ್ನ ಸಂಗ್ರಹಿಸಿ ಸಾರ್ವಜನಿಕರಿಗೆ ಉಚಿತವಾಗಿ ಓದಲು ನೀಡುತ್ತಿದ್ದಾರೆ. ಅವರ ಈ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಹಾಗೂ ಅವರಿಗೆ ಇನ್ನಷ್ಟು ಗೌರವಸನ್ಮಾನಗಳು ಸಿಗಲಿ ಎಂದು ಮನತುಂಬಿ ಹಾರೈಸುವೆ.
#PadmaAwards2026
ಪ್ರವಾಸ ಕೇವಲ ಸಂಚಾರವಲ್ಲ - ಅದು ಸಂಸ್ಕೃತಿ, ಇತಿಹಾಸ, ಪ್ರಕೃತಿ ಮತ್ತು ಜನರ ನಡುವಿನ ಜೀವಂತ ಸೇತುವೆ.
ಹಿಮಾಲಯದ ಶಿಖರಗಳಿಂದ ಕರಾವಳಿಯ ಕಡಲತೀರವರೆಗೆ, ಕಾಡುಗಳಿಂದ ದೇವಾಲಯಗಳವರೆಗೆ ಭಾರತ ತನ್ನ ವೈವಿಧ್ಯದಲ್ಲೇ ಏಕತೆಯನ್ನು ಸಾರುತ್ತದೆ.
ಪ್ರವಾಸೋದ್ಯಮವು ಉದ್ಯೋಗ, ಸ್ಥಳೀಯ ಆರ್ಥಿಕತೆ ಮತ್ತು ಆತಿಥ್ಯ ಸಂಸ್ಕೃತಿಗೆ ಬಲ ನೀಡುವ ಶಕ್ತಿಯಾಗಿದೆ.
ನಮ್ಮ ಪರಂಪರೆಯನ್ನು ಕಾಪಾಡುತ್ತಾ, ಪ್ರಕೃತಿಯನ್ನು ಗೌರವಿಸುತ್ತಾ, ಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಮೂಲಕ ಭಾರತದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸೋಣ.
#NationalTourismDay
ಶಿಸ್ತು ಸಂಯಮಗಳ ಶಿಲ್ಪಿಯಾಗಿ, ಸಂಸ್ಕಾರದ ಸಂಚಾಲಕರಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ರೂಪಿಸಿ, ಭಾರತೀಯ ಸಂಸ್ಕೃತಿ ಮತ್ತು ದಾಸೋಹ ಪರಂಪರೆಯ ಮಹತ್ವವನ್ನು ಜಗತ್ತಿಗೆ ಬೆಳಗಿಸಿದ ಮಹಾನ್ ಚೇತನ, ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.
ಸತ್ಯ, ಧರ್ಮ, ಶ್ರದ್ಧೆ ಮತ್ತು ಸೇವೆಯೇ ಶ್ರೀಗಳ ಜೀವನದ ಶಾಶ್ವತ ಸಂದೇಶ. ನಮ್ಮ ಬದುಕು ಅವರ ಆದರ್ಶಗಳ ಬೆಳಕಿನಲ್ಲಿ ಬೆಳೆಯಲಿ.
#ShivakumaraSwamiji
ಪ್ರತಿಭೆಗೆ ಸಿಕ್ಕ ಫಲ
ಕನ್ನಡದ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ನಮ್ಮ ಮಂಡ್ಯ ಜಿಲ್ಲೆಯ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ನನ್ನ ಹೃದಯಪೂರ್ವಕ ಅಭಿನಂದನೆಗಳು. ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರನ್ನು ರಂಜಿಸಿ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ
ಹಳ್ಳಿಯಲ್ಲಿ ಹುಟ್ಟಿ ಬೆಂಗಳೂರಿಗೆ ಬಂದು ಏನಾದರೂ ಸಾಧನೆ ಮಾಡಬೇಕೆಂಬ ನಿಮ್ಮ ಈ ಸಾಧನೆ ಲಕ್ಷಾಂತರ ಗ್ರಾಮೀಣ ಯುವಕರಿಗೆ ಮಾದರಿಯಾಗಲಿ
#biggbosskannadaseason12 #winner #gilli #gillinata #ColorsKannada #kicchasudeep #karnataka
ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು.
ಚುಂಚನಗಿರಿಯನ್ನು ಚಿನ್ನದಗಿರಿಯನ್ನಾಗಿ ಪರಿವರ್ತಿಸಿದ ಮಹಾನ್ ಯೋಗಿಗಳು ಪೂಜ್ಯರು. ಆಧ್ಯಾತ್ಮಿಕತೆಯ ಜೊತೆಗೆ ಶಿಕ್ಷಣ, ಅನ್ನದಾನ, ಆರೋಗ್ಯ, ಪರಿಸರ ಸಂರಕ್ಷಣೆ, ಜ್ಞಾನಪ್ರಸಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಸೇವೆಯು ಎಲ್ಲರಿಗೂ ಮಾದರಿಯಾಗಿದೆ.
ಸಮಾನತೆ, ಮಾನವೀಯತೆ ಮತ್ತು ನಿಷ್ಕಾಮ ಸೇವಾಭಾವನೆಯ ಶಾಶ್ವತ ಪ್ರತೀಕವಾಗಿರುವ ಅವರ ಸೇವೆಯು ಲಕ್ಷಾಂತರ ಜನರ ಬದುಕು ಬದಲಿಸಿದೆ. ಅವರ ಆಶಯಗಳು, ಆದರ್ಶಗಳು ಹಾಗೂ ಸೇವಾ ಪರಂಪರೆಯು ನಮ್ಮ ಸಮಾಜವನ್ನು ನಿರಂತರವಾಗಿ ಬೆಳಗುತ್ತಿರಲಿ.
#balagangadaranathamahaswamiji
ಮಾಜಿ ಮಂತ್ರಿಗಳು, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷರಾಗಿದ್ದ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನ ವಾರ್ತೆ ಕೇಳಿ ನನಗೆ ಬಹಳ ದುಃಖ ಉಂಟಾಗಿದೆ. ಸರಳ, ಸಜ್ಜನಿಕೆ ಮತ್ತು ನೇರ ನಡೆನುಡಿಯ ಶ್ರೀ ಖಂಡ್ರೆ ಅವರು ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಧೀಮಂತ ನಾಯಕರು. ಬೀದರ್ ಜಿಲ್ಲೆಯು ಕರ್ನಾಟಕದ ಭಾಗವಾಗಿ ಉಳಿಯುವ ನಿಟ್ಟಿನಲ್ಲಿ ಅವರ ಹೋರಾಟ ಚಿರಸ್ಮರಣೀಯ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಖಂಡ್ರೆ ಕುಟುಂಬಸ್ಥರಿಗೆ ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂಶಾಂತಿ | ಸದ್ಗತಿ
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು!
ಸೂರ್ಯನ ಪಥ ಬದಲಾದಂತೆ ಎಲ್ಲರ ಬಾಳಿನ ಪಥವು ಅಭಿವೃದ್ಧಿಯತ್ತ ಸಾಗಲಿ.
ಈ ಸಂಕ್ರಾಂತಿ ನಿಮಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತಂದುಕೊಡಲಿ. ಎಲ್ಲರ ಜೀವನದಲ್ಲಿ ಹೊಸ ಬೆಳಕು ಮತ್ತು ಹೊಸ ಆಯ್ಕೆಯನ್ನು ತುಂಬಲಿ. ಎಳ್ಳು-ಬೆಲ್ಲದ ಮಧುರತೆಯಂತೆಯೇ ನಿಮ್ಮ ಜೀವನವು ಸಿಹಿಯಾಗಿರಲಿ.
#makarsankranti #sankranthi #pongal #lrshivaramegowda #lrs #festival #festivalwishes #wishes
ಅನ್ನದಾಸೋಹದಿಂದ ಆತ್ಮತೃಪ್ತಿ, ಶಿಕ್ಷಣದಿಂದ ಭವಿಷ್ಯ ನಿರ್ಮಾಣ, ಆರೋಗ್ಯ ಸೇವೆಯಿಂದ ಜೀವಸಂಕಲ್ಪ-ಇವೆಲ್ಲವನ್ನು ಜೀವನದ ಧ್ಯೇಯವನ್ನಾಗಿಸಿಕೊಂಡ ಪರಮಪೂಜ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.
ಭಾರತೀಯ ಸಂಸ್ಕೃತಿಯ ಕಂಪನ್ನು ವಿಶ್ವದಾದ್ಯಂತ ಪಸರಿಸಿದ ವೀರ ಸನ್ಯಾಸಿ, ಯುವಶಕ್ತಿಯ ಆರಾಧ್ಯ ದೈವ ಶ್ರೀ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಗೌರವಪೂರ್ವಕ ನಮನಗಳು. ರಾಷ್ಟ್ರೀಯ ಯುವ ದಿನದ ಈ ಸಂದರ್ಭದಲ್ಲಿ ಅವರ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡೋಣ.
#NationalYouthDay2026#SwamiVivekananda
ಬೆಂಗಳೂರು ಅರಮನೆ ಮೈದಾನದಲ್ಲಿ ಫರ್ಸ್ಟ್ ಸರ್ಕಲ್ ವತಿಯಿಂದ ಆಯೋಜನೆಗೊಂಡಿದ್ದ “ಉದ್ಯಮಿ ಒಕ್ಕಲಿಗ" ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆನು
ಈ ಸಂದರ್ಭದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್ ಬಚ್ಚೇಗೌಡ ರವರು ಹಾಗೂ ಫಸ್ಟ್ ಸರ್ಕಲ್ ನ ಡಿ,ಮುನಿರಾಜು ಮತ್ತು ಜಯರಾಮ್ ರಾಯ್ಪುರ್ (IRS) ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಪ್ರತಿನಿಧಿಸುವ ಮುಖಂಡರು ಉಪಸ್ಥಿತರಿದ್ದರು
ಒಕ್ಕಲಿಗ ಉದ್ಯಮಿಗಳನ್ನು ಮತ್ತು ಅವರ ಸಾಧನೆಗಳನ್ನು, ಶ್ರಮವನ್ನು ಪರಿಗಣಿಸಿ ಸಬಲೀಕರಣಗೊಳಿಸುವಲ್ಲಿ ಅವರ ಅವಿರತ ಪ್ರಯತ್ನಗಳಿಗಾಗಿ ಫಸ್ಟ್ ಸರ್ಕಲ್ ತಂಡಕ್ಕೆ ಅಭಿನಂದನೆಗಳು! ನಾವೀನ್ಯತೆ, ಸಹಯೋಗ ಮತ್ತು ಸಮುದಾಯ ಮನೋಭಾವವನ್ನು ಆಚರಿಸೋಣ! #FirstCircleExpo #vokkaliga
ಕುಣಿಗಲ್ ಉತ್ಸವದ ವೈಭವ!
ಕುಣಿಗಲ್ ಉತ್ಸವ 2026ರ ಪ್ರಯುಕ್ತ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಉಪ ಮುಖ್ಯಮತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರ ಜೊತೆ ಪಾಲ್ಗೊಂಡೆನು. ಈ ಸಂದರ್ಭದಲ್ಲಿ ಮದ್ದೂರು ಶಾಸಕರಾದ ಉದಯ್ ರವರು, ಕೆಪಿಸಿಸಿ ಸಂಯೋಜಕರಾದ ಸಂಜಯ್ ಗೌಡರವರು ಉಪಸ್ಥಿತರಿದ್ದರು.
ಬಂಧುಗಳು ಹಾಗೂ ಕುಣಿಗಲ್ ಶಾಸಕರಾದ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ತುಂಬಿತ್ತು.
ಕನ್ನಡ ಗೀತೆಗಳ ರಸದೌತಣ, ಝಗಮಗಿಸುವ ವಿದ್ಯುತ್ ದೀಪಗಳ ವೈಭವ ಕುಣಿಗಲ್ ಉತ್ಸವದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಿತು
ಎಲ್ಲರಿಗೂ ಒಳಿತಿಗಾಗಲಿ, ಲೋಕಕಲ್ಯಾಣವಾಗಲಿ.
ಶ್ರೀನಿವಾಸ ಕಲ್ಯಾಣೋತ್ಸವದ ಸಂಭ್ರಮ
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಕುಣಿಗಲ್ ಉತ್ಸವದ ಅಂಗವಾಗಿ ಬಂಧುಗಳು ಹಾಗೂ ಶಾಸಕರಾದ ಡಾ. ಎಚ್ ಡಿ ರಂಗನಾಥ್ ರವರು ಇಂದು ಆಯೋಜಿಸಿದ್ದ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪತ್ನಿ ಸಮೇತರಾಗಿ ಭಾಗವಹಿಸಿ. ಈ ವೈಭವದ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ.
ಪ್ರತಿ ಶುಕ್ರವಾರದಂತೆ ನಿನ್ನೆ ನಾಗಮಂಗಲ ನಿವಾಸದ ಗೃಹ ಕಚೇರಿಯಲ್ಲಿ ಸಾರ್ವಜನಿಕರನ್ನು ಮತ್ತು ಮುಖಂಡರುಗಳನ್ನು ಭೇಟಿ ಮಾಡಿಲಾಯಿತು, ಕಳೆದ ವಾರದ ನಾನು ಗೈರು ಹಾಜರಿ ಆದ ಪರಿಣಾಮ ಸಾಕಷ್ಟು ಜನ ಕಚೇರಿಗೆ ಭೇಟಿ ನೀಡಿ ವಾಪಸ್ಸಾಗಿದ್ದರು. ನಿನ್ನೆ ಎಲ್ಲರ ಸಮಸ್ಯೆಯನ್ನು ಆಲಿಸಿ ಸ್ಪಂದಿಸಲಾಯಿತು.
ನಿನ್ನೆ ಕುಣಿಗಲ್ ನಲ್ಲಿ ಬಂಧುಗಳು ಹಾಗೂ ಶಾಸಕರಾದ ಶ್ರೀ ಎಚ್ ಡಿ ರಂಗನಾಥ್ ರವರ ನೇತೃತ್ವದಲ್ಲಿ ನಡೆದ ಕುಣಿಗಲ್ ಉತ್ಸವ 2026ರ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಕಾರ್ಯಕ್ರಮ ಅತ್ಯಂತ ಮನೋಹರವಾಗಿ ಮೂಡಿ ಬಂದಿತ್ತು ಕೆಲ ಮಕ್ಕಳ ನೃತ್ಯ ಹಾಗೂ ಹಾಡುಗಾರಿಕೆ ಕಣ್ಮನ ಸೆಳೆಯಿತು.
ನಾಡು ಕಂಡ ಶ್ರೇಷ್ಠ ಸಾಹಿತಿ, ಸಮಾಜ ಸುಧಾರಕರಾದ ರಾಷ್ಟ್ರಕವಿ ಶ್ರೀ ಕುವೆಂಪು ಅವರ ಜನ್ಮದಿನದ ಗೌರವ ಪ್ರಣಾಮಗಳು.
ತಮ್ಮ ಅಪರಿಮಿತ ಸಾಹಿತ್ಯ ಕೃಷಿ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದ್ದಲ್ಲದೇ, ಮೂಢ ನಂಬಿಕೆಗಳ ವಿರುದ್ಧ ಸಮರಸಾರಿ, ಸರ್ವರಿಗೂ ವಿಜ್ಞಾನ, ಸುಲಭವಿಜ್ಞಾನದ ಅಗತ್ಯವನ್ನು ಸಾರಿಸಾರಿ ಹೇಳಿದರು.
ವೈಜ್ಞಾನಿಕ ಚಿಂತನೆಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಅಪರೂಪ ಸಾಹಿತಿಗಳು.
ಶ್ರೀ ಕುವೆಂಪು ಅವರ ಕೊಡುಗೆ, ಚಿಂತನೆ, ಆಶಯಗಳನ್ನು ಸ್ಮರಿಸೋಣ. ಅವು ಇಂದಿನ ಸಮಸಮಾಜ ನಿರ್ಮಾಣದ ಅಡಿಪಾಯ.
#kuvempu