ಬಸವತತ್ತ್ವ ಹಾಗೂ ವಚನ ಸಾಹಿತ್ಯದ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಡಾ. ಮಾತೆ ಮಹಾದೇವಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು.
ಬಸವಧರ್ಮದ ಪೀಠಾಧ್ಯಕ್ಷೆಯಾಗಿ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯ.
ಹೊರರಾಜ್ಯಗಳಲ್ಲೂ ಬಸವಧರ್ಮದ ಪೀಠಗಳನ್ನು ಸ್ಥಾಪಿಸಿರುವುದು ಸ್ಮರಣೀಯ.
#ಮಾತೆಮಹಾದೇವಿ #ಬಸವತತ್ತ್ವ
05-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ" ಪೂರ್ವಭಾವಿ ಸಭೆಯನ್ನು ದಿ. 20.09.2025 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ನಿಜಗುಣ ಕಲ್ಯಾಣ ಮಂಟಪದಲ್ಲಿ ಜರುಗಿತು.
05-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ ಕಾರ್ಯಾಲ ಉದ್ಘಾಟನೆಯನ್ನು ರಾಜಾಜಿನಗರದ ಬಸವ ಮಂಟಪದಲ್ಲಿ ದಿ. 17-09-2025 ರಂದು ಜರುಗಿತು.
ದಿ.5-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಕಾರ್ಯಕ್ರಮವು ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನಲ್ಲಿರುವ ಗದ್ದೆಮನೆಯಲ್ಲಿ ಪರಮಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು. #BasavaSamskrutiAbhiyana#SamskrutikaNayakaBasavanna#Basavanna
ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಕಾರ್ಯಕ್ರಮವು ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಹಾದಿಕೆರೆ ಗ್ರಾಮದಲ್ಲಿ ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು.
#BasavaSamskrutiAbhiyana#SamskrutikaNayakaBasavanna#Basavanna
ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಕಾರ್ಯಕ್ರಮವು ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಹಾದಿಕೆರೆ ಗ್ರಾಮದಲ್ಲಿ ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು.
#BasavaSamskrutiAbhiyana#SamskrutikaNayakaBasavanna#Basavanna
ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಹಾಗೂ ಬಸವ ಜ್ಯೋತಿ ಕಾರ್ಯಕ್ರಮ ಬೆಂಗಳೂರಿನ "ಎಚ್.ಎ.ಎಲ್ ಬಡಾವಣೆ"ಯಲ್ಲಿ ಪರಮಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು.
#BasavaSamskrutiAbhiyana#SamskrutikaNayaka#Basavanna#basavannastatue
ಉತ್ತರ ಪ್ರದೇಶದ ಕಾಶಿ/ವಾರಣಾಸಿಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ 29-08-2025 ರಂದು ಪೂಜ್ಯ ಜಗದ್ಗುರು ಮಾತೆಗಂಗಾದೇವಿಯವರ ಸಾನಿಧ್ಯದಲ್ಲಿ ಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿ, ಪೂಜ್ಯ ಸದ್ಗುರು ಮಾತೆ ವಿಜಯಾಂಬಿಕೆ ನೇತೃತ್ವದಲ್ಲಿ 9ನೇ "ಬಸವ ಧರ್ಮ ಸಮ್ಮೇಳ" 9th #BasavaDharmaSammelana#LingayataDharma#LingayatReligion
ಬಸವತತ್ವದ ಬೆಳಕಿನಲಿ ನವಕರ್ನಾಟಕ
ಬಸವ ಸಂಸ್ಕೃತಿ ಅಭಿಯಾನ: ಐತಿಹಾಸಿಕಗೊಳಿಸಲು ಮತ್ತೊಂದು ಸುತ್ತಿನ ಚರ್ಚೆ
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆಗೆ 1ವರ್ಷ ಗತಿಸಿರುವ ಹಿನ್ನಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸೆ.1ರಿಂದ ಅ.1ರವರೆಗೆ `ಬಸವ ಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಸಮಾರಂಭವು ಅ.5ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು ನಾಡಿನ ಎಲ್ಲೆಡೆಯಿಂದ ಬಸವಣ್ಣನ ಸಾವಿರಾರು ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ.
ಈ ನಿಮಿತ್ತ ಇಂದು ಗದಗ ಪೂಜ್ಯ ತೋಂಟದಾರ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ಹಾಗೂ ವಿವಿಧ ಮಠಗಳ ಪೂಜ್ಯ ಗುರು-ಹಿರಿಯರದೊಂಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದೆ. ಈ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಸಾಣೆಹಳ್ಳಿ ಶ್ರೀಮಠದ ಪೂಜ್ಯ ಗುರುಗಳಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪರಮ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿ, ಬಸವ ಧರ್ಮ ಪೀಠದ ಬಸವ ಯೋಗಿ ಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಸ್. ಎಂ. ಜಾಮಾದಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಸೇರಿದಂತೆ ಸಮಾಜದ ಹಿರಿಯರು, ಮುಖಂಡರುಗಳು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದು, ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಈ ಅಭಿಯಾನವು ಬಸವ ತತ್ವವನ್ನು ಜನಮನದಲ್ಲಿ ಮತ್ತಷ್ಟು ಗಾಢವಾಗಿ ಬಿತ್ತಲು ಸಹಕಾರಿಯಾಗಲಿದೆ.
#ಬಸವಸಂಸ್ಕೃತಿಅಭಿಯಾನ #ಬಸವರಥ #ಸಮಾನತೆಯಹರಿಕಾರ
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಹಾಗೂ ಪರಮಪೂಜ್ಯ ಶ್ರೀ ಮ.ನಿ.ಪ್ರ. ಮಹಾಜಗದ್ಗುರು ಮಾತೆ ಗಂಗಾದೇವಿಯವರ ಸಾನಿಧ್ಯದಲ್ಲಿ ದಿ. 03-08-25 ರಂದು ಬೆಂಗಳೂರಿನಲ್ಲಿ ಜರುಗಿದ "ಬಸವ ಮಂಟಪದ ಸುವರ್ಣ ಮಹೋತ್ಸವ" ಕಾರ್ಯಕ್ರಮ.
#Sutturu#vishwakalyanamission#statueofdivinity
ಬಸವ ತತ್ತ್ವಗಳ ಬೆಳಕಿನಲ್ಲಿ 830ನೇ ಬಸವಪಂಚಮಿ ಹಾಗೂ ಬಸವಮಂಟಪದ ಸುವರ್ಣ ಸಂಭ್ರಮ
830ನೇ ‘ಬಸವ ಪಂಚಮಿ’ ಹಾಗೂ ಬೆಂಗಳೂರು ರಾಜಾಜಿನಗರದ ಬಸವಮಂಟಪದ ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ಮಾತೆ ಡಾ. ಗಂಗಾದೇವಿ ಹಾಗೂ ಸಮಾಜದ ಹಿರಿಯರೊಂದಿಗೆ ಉದ್ಘಾಟಿಸಿ ಮಾತನಾಡಿದೆ.
ಲಿಂ|| ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಲಿಂ|| ಪೂಜ್ಯ ಮಾತೆ ಮಹಾದೇವಿಯವರು ವಿಶ್ವ ಕಲ್ಯಾಣ ಮಿಷನ್ ಮೂಲಕ #ಬಸವಮಂಟಪ ಸ್ಥಾಪಿಸಿ ಬಸವಾದಿ ಶರಣರ ತತ್ವಗಳ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದರು. ನಾಡು ಕಂಡ ಅತ್ಯಂತ ಶ್ರೇಷ್ಠ ಮಹಿಳಾ ಜಗದ್ಗುರುಗಳಾಗಿದ್ದರು. ಅವರ ದೃಢ ಸಂಕಲ್ಪ ಮತ್ತು ಬದ್ಧತೆಯಿಂದಾಗಿ ಸಂಸ್ಥೆ ಇಂದು ಸುವರ್ಣ ಮಹೋತ್ಸವ ಆಚರಿಸುವಂತಾಗಿದ್ದು, ಇದೊಂದು ಹೆಮ್ಮೆಯ ಕ್ಷಣವಾಗಿದೆ.
ಖ್ಯಾತ ಸಾಹಿತಿಗಳು, ಜಾನಪದ ವಿದ್ವಾಂಸರು, ನಾಡೋಜ ಶರಣ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ‘ಬಸವಕಾಯಕ ರತ್ನ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇದಿಕೆಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಮತ್ತು ಗಮನಾರ್ಹ ಸೇವೆ ಸಲ್ಲಿಸಿದ ಸಾಧಕ ಶರಣರನ್ನು ಸನ್ಮಾನಿಸಲಾಯಿತು.
ಶರಣ ವೈದ್ಯರತ್ನ ಪುರಸ್ಕೃತ ಡಾ. ಅಮರೇಶ್ ಮಿಣಜಗಿ, ಡಾ. ಸಿ. ವಿ. ದೇವರಾಜ್, ಬೆಂಗಳೂರಿನ ಮಾಜಿ ಉಪಮಹಾಪೌರರಾದ ಶ್ರೀ ಬಿ.ಎಸ್. ಪುಟ್ಟರಾಜು, ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶರಣ-ಶರಣೆಯರು, ಬಸವಭಕ್ತರು ಇಂದಿನ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬಸವಮಂಟಪದ ಈ ಸುವರ್ಣ ಸಾಧನೆ ಶರಣ ತತ್ತ್ವದ ಮಹಿಮೆಯನ್ನು ಮುಂದಿನ ತಲೆಮಾರಿಗೆ ಸಾರುವ ದೀಪವಾಗಲಿ.
#ಬಸವಕಾಯಕರತ್ನ #ಬಸವಪಂಚಮಿ
#ಗುರುವಂದನೆ
830ನೇ ‘ಬಸವ ಪಂಚಮಿ’ ಹಾಗೂ ಬೆಂಗಳೂರು ರಾಜಾಜಿನಗರದ ಬಸವಮಂಟಪದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸುತ್ತೂರು ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಬೈಲೂರು ನಿಷ್ಕಲ ಮಂಟಪದ ಪರಮಪೂಜ್ಯ ಶ್ರೀ ನಿಜಗುಣಾನಂದ ಹಾಗೂ ಕೂಡಲ ಸಂಗಮ, ಬಸವ ಧರ್ಮ ಪೀಠದ ಡಾ. ಮಾತೆ ಗಂಗಾದೇವಿಯವರಿಗೆ ಗುರುವಂದನೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡೆ.
ಸಮಾಜದ ಹಿರಿಯರು, ಪೂಜ್ಯರು ಹಾಗೂ ಮುಖಂಡರೊಂದಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಲಾಯಿತು.
ಪೂಜ್ಯ ಗುರುಗಳ ಮಾರ್ಗದರ್ಶನ ನಾಡಿಗೆ ಸದಾ ಕಾಲ ಲಭಿಸಲಿ.
ಬಸವಾದಿ ಶರಣರು 12ನೇ ಶತಮಾನದಲ್ಲಿಯೇ #ಅನುಭವಮಂಟಪದ ಮೂಲಕ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿ ಸಂಸತ್ತಿನ ಪರಿಕಲ್ಪನೆ ನೀಡಿದರು. ಒಂದೊಮ್ಮೆ ಕಲ್ಯಾಣ ಕ್ರಾಂತಿ ನಡೆಯದೇ ಹೋಗಿದ್ದರೆ ಪ್ರಾಯಶಃ ಜಗತ್ತು ಇಂದು #ಬಸವತತ್ವ ಆಧಾರಿತ ಬಸವ ವಿಶ್ವವಾಗಿರುತ್ತಿತ್ತು.