ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !
ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#12YearsOfSeva#bjp
ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾ ಮಾನವತಾವಾದಿ ಭಗವಾನ್ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ಶಾಂತಿ,ಕರುಣೆ ಹಾಗೂ ಅಹಿಂಸೆಯನ್ನು ಪ್ರತಿಪಾದಿಸಿದ ಗೌತಮ ಬುದ್ಧನ ತತ್ವಗಳು ಎಲ್ಲರ ಬಾಳು ಬೆಳಗುವ ದಾರಿ ದೀಪವಾಗಿವೆ.
#Buddapurnime#ಬುದ್ಧಪೂರ್ಣಿಮೆ
ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಶ್ರಮ ಏವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
#LabourDay
ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ಮೂಡಿಸಿದ ಮೇರು ಪುರುಷ, ಕಾಯಕ ಯೋಗಿ, ಜಗಜ್ಯೋತಿ ಬಸವೇಶ್ವರ ಜಯಂತಿಯಂದು ನನ್ನ ಪ್ರಣಾಮಗಳು.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
#BasavaJayanti
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.
ಭಾರತ ರತ್ನ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.#BabasahebAmbedkar#AmbedkarJayanti
ದೇಶ ಸೇವೆಗಾಗಿ ಸಮರ್ಪಿಸಿಕೊಂಡಿರುವ ಭಾರತೀಯ ಜನತಾ ಪಾರ್ಟಿಯ ಸಮಸ್ತ ಕಾರ್ಯಕರ್ತರಿಗೂ 'ಬಿಜೆಪಿ ಸಂಸ್ಥಾಪನಾ ದಿನ'ದ ಶುಭಾಶಯಗಳು.
ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷದ ಸದಸ್ಯರಾಗಿರುವ ನಾವು ನಮ್ಮ ಪಕ್ಷದ ಸಂಸ್ಥಾಪಕರು ಹಾಕಿಕೊಟ್ಟ ಮಾರ್ಗದಲ್ಲಿ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿ, ದೇಶದ ಹಿತಕ್ಕಾಗಿ ಸದಾ ದುಡಿಯೋಣ.
#47YearsOfNationFirst
ತಮ್ಮ ಶೌರ್ಯ, ರಾಷ್ಟ್ರಭಕ್ತಿ, ಆಡಳಿತಗಳಿಂದ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದ್ದ ವೀರ ಕೇಸರಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುಣ್ಯ ಸ್ಮರಣೆಯ ಶುಭಾಶಯಗಳು.
ದಕ್ಷಿಣ ಭಾರತದಲ್ಲಿ ಇಂದಿಗೂ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿರಲು ಮುಖ್ಯ ಕಾರಣ ಛತ್ರಪತಿ ಶ್ರೀ ಶಿವಾಜಿ ಮಹಾರಾಜ್.
#ChatrapatiShivajiMaharaj
ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ, ಧರ್ಮ ಹಾಗೂ ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ.
ಪವಿತ್ರ ರಾಮ ನಾಮ ಸ್ಮರಣೆಯಿಂದ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಭಾಗ್ಯ ಲಭಿಸಲಿ ಎಂದು ಹಾರೈಸುತ್ತೇನೆ.
#ರಾಮನವಮಿ | #RamNavami
ಅಭಿವೃದ್ಧಿಯ ಹರಿಕಾರ, ಸರ್ವಜನಾಂಗದ ನಾಯಕ ,ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಕಮಲ ಪಕ್ಷವನ್ನು ಹೋರಾಟದ ಮೂಲಕ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದು ಅಭಿವೃದ್ಧಿಯ ಕ್ರಾಂತಿ ಮಾಡಿದ ರೈತನಾಯಕ, ಜನಪ್ರಿಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#BSYBirthDay#HappyBirthDayBSY
ಓಂ ನಮಃ ಶಿವಾಯ 🙏
ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ.
ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
#Mahashivaratri
12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು.
#MadivalaMachideva
ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಅತ್ಯುನ್ನತ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ, ಮೈಸೂರಿನವರಾದ ನನ್ನ ಕಾಲೇಜಿನ ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತರು, ಪ್ರಸ್ತುತ ಡಿಐಜಿಪಿ ಹಾಗೂ ಕಲಬುರಗಿ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎಂ. ಪುಟ್ಟಮಾದಯ್ಯ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು 🙏🇮🇳@IPS
ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟನಾಗಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶತ ಶತ ನಮನಗಳು.
#SangolliRayanna
ನಮ್ಮ ದೇಶದ ಸಂವಿಧಾನವನ್ನು ಗೌರವಿಸೋಣ. ಸದೃಢ ದೇಶ ನಿರ್ಮಾಣಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ.
ರಾಷ್ಟ್ರದ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು.
#RepublicDay2026
ಮೈಸೂರಿನ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, VB-G Ram-G ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #VBGRAMG4ViksitBharat#BJP4ViksitBharat#ModiKiGuarantee
ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಶತ ಶತ ನಮನಗಳು.
ನೇತಾಜಿ ಅವರ ಜೀವನ, ಕಾರ್ಯ, ಅವರ ತ್ಯಾಗವನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಮೋದಿ ಸರ್ಕಾರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ.
#NetajiSubhasChandraBose#ParakramDivas