ಯಲಬುರ್ಗಾ ತಾಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಯಲಬುರ್ಗಾ/ ಕುಕನೂರ ತಾಲೂಕಿನ ಕೂಸಿನ ಮನೆಗಳ ಆರೈಕೆದಾರರಿಗೆ ಆಯೋಜಿಸಿದ್ದ 7 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಇಒ ಸರ್ ಚಾಲನೆ ನೀಡಿದರು.
ತಾಯಿ ಹೆಸರಲ್ಲಿ ಒಂದು ವೃಕ್ಷ ನೆಡುವ ಅಭಿಯಾನ
ಇಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾ. ಪಂ ವ್ಯಾಪ್ತಿಯಲ್ಲಿರುವ ಕಲ್ಲೂರ ಗ್ರಾಮದ ರಸ್ತೆಬದಿ ಸಸಿ ನೆಡುವ ಕಾಮಗಾರಿ ಸ್ಥಳದಲ್ಲಿ "ತಾಯಿ ಹೆಸರಿನಲ್ಲಿ ಒಂದು ವೃಕ್ಷ" (Ek Ped Maa Ke Nama) ಅಭಿಯಾನಕ್ಕೆ ತಾ ಪಂ EO ಸಂತೋಷ ಪಾಟೀಲ್ ಚಾಲನೆ ನೀಡಿದರು.
ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಪಂಚಾಯತಿಯಲ್ಲಿ ಬರುವ ಅಮೃತ ಸರೋವರ ಕೆರೆ ಕೆರೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಧ್ವಜ ಹಾರಿಸಿದರು. ಈ ವೇಳೆ ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರು, ಪಿಡಿಒರವರು, ಸಿಬ್ಬಂದಿ ಹಾಜರಿದ್ದರು.
ಯಲಬುರ್ಗಾ ತಾಪಂ ಕಚೇರಿಯಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ
ಯಲಬುರ್ಗಾ:ಇಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕು ಪಂಚಾಯತ್ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷಬಿರಾದಾರ್ ಪಾಟೀಲ್ ರವರು ರಾಷ್ಟ್ರ ಧ್ವಜ ಆರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
ಸಂಗನಹಾಳ ಅಮೃತ ಸರೋವರ ದಡದಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ
ಯಲಬುರ್ಗಾ : ಇಂದು ಸಂಗನಹಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಮೃತ ಸರೋವರ ದಡದ ಮೇಲೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಮದ ಮಾಜಿ ಯೋಧರಿಂದ ರಾಷ್ಟ್ರ ಧ್ವಜ ಆರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆದ ಗೆದಗೇರಿಯ ಯುವಕ,ಯುಟ್ಯೂಬ್ ಪ್ರೇರಣೆಯಿಂದ ಗುಲಾಬಿ ಬೆಳೆದ ಯುವರೈತ ಶರಣಯ್ಯ: ತಿಂಗಳಿಗೆ 20 ಸಾವಿರ ಆದಾಯ
ಬದುಕಿಗೆ ಬಟನ್ ರೋಜ್ ಹೊಳಪು
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗೆದಗೇರಿಯ ಯುವರೈತ ಶರಣಯ್ಯ ಹಿರೇಮಠ ಅವರ ಯಶೋಗಾತೆ ಕುರಿತು ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು.
ಯುಟ್ಯೂಬ್ ಪ್ರೇರಣೆಯಿಂದ ಗುಲಾಬಿ ಬೆಳೆದ ಯುವರೈತ ಶರಣಯ್ಯ:ತಿಂಗಳಿಗೆ 20 ಸಾವಿರ ಆದಾಯ
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾ.ಗೆದಗೇರಿಯ ಯುವರೈತ ಶರಣಯ್ಯ ತಮ್ಮಅರ್ಧ ಎಕರೆಯಲ್ಲಿ ನಾನಾ ತಳಿಯ 2000 ಬಟನ್ ಗುಲಾಭಿ ಬೆಳೆದಿದ್ದಾರೆ.ಕಳೆದ ನಾಲ್ಕೈದು ತಿಂಗಳಿಂದ ಪ್ರತಿದಿನ 10-15ಕೆ.ಜಿ ಮಾರಾಟ ಮಾಡುತ್ತಿದ್ದು,ಕೆ.ಜಿಗೆ100 ರೂಗಳಿಗೆ ಆದಾಯ ಪಡೆಯುತ್ತಿದ್ದಾರೆ
ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದ ನರೇಗಾ ನಾಲಾ ಕಾಮಗಾರಿಗಳಲ್ಲಿ ಮಳೆನೀರು ಸಂಗ್ರಹಗೊಂಡಿದ್ದು, ಸರ್ಕಾರದ ಯೋಜನೆ ಸದುಪಯೋಗವಾಗಿದೆ. ಇದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಕಲ್ಲೂರ ಗ್ರಾಮದ ಮಹಿಳಾ ಕಾಯಕ ಬಂಧುಗಳ ಸಾಧನೆ: ಮಹಿಳಾ ಸ್ನೇಹಿ ಗ್ರಾ.ಪಂ ನರೇಗಾದಡಿ ಮಹಿಳಾ ಭಾಗವಹಿಸುವಿಕೆಯಲ್ಲಿ ಶೇಕಡಾ 54.39 ರಷ್ಟು ಸಾಧನೆ ಕಲ್ಲೂರ ಗ್ರಾ.ಪಂನಲ್ಲಿ ಒಟ್ಟು 1082 ಜಾಬ್ ಕಾರ್ಡ್ಗಳಿದ್ದು, ಅದರಲ್ಲಿ 2237 ಒಟ್ಟು ಕೂಲಿಕಾರರಿದ್ದಾರೆ. ಅದರಲ್ಲಿ 576 ಸಕ್ರಿಯ ಜಾಬ್ ಕಾರ್ಡ್ಗಳಿದ್ದು, 1032 ಸಕ್ರಿಯ ಅಕುಶಲ ಕೂಲಿಕಾರರಿದ್ದಾರೆ.
ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮ ಪಂಚಾಯತಿಯಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಈ ಬಾರಿ ನರೇಗಾ ಯೋಜನೆಯಡಿ ಕಾಯಕ ಬಂಧುಗಳಾಗಿ ಕೆಲಸ ಮಾಡಿ ನೂರಾರು ಜನರಿಗೆ ಕೆಲಸ ಕೊಡಿಸಿ ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವಿಶೇಷ ಸ್ಟೋರಿ ಪ್ರಕಟಗೊಂಡಿರುವುದು.
ಸಂಗನಹಾಳ ಗ್ರಾಮ ಪಂಚಾಯತಿ ಅಮೃತ ಸರೋವರ ದಡದ ಮೇಲೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮ ಪಂಚಾಯತಿಯ ಅಮೃತ ಸರೋವರ ದಡದ ಮೇಲೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಪಿಡಿಒರಾದ ಸರ್ವಮಂಗಳ ಚಾಲನೆ ನೀಡಿದರು.
ಬೇವೂರ ಹೋಬಳಿ ವಿಸ್ತರಣಾ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯಲಬುರ್ಗಾ ತಾಲೂಕಿನ ಬೇವೂರ ಹೋಬಳಿ ವಿಸ್ತರಣಾ ಕೇಂದ್ರದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಯಲಬುರ್ಗಾ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ್ ಚಾಲನೆ ನೀಡಿದರು.
ನರೇಗಾ ಕೂಲಿಕಾರ್ಮಿಕ ಮಹಿಳೆಯರಿಗೆ ದುಡಿಮೆಯ ಅವಕಾಶ ಹೆಚ್ಚಿಸುವುದು 'ಕೂಸಿನ ಮನೆ' ಸ್ಥಾಪನೆಯ ಮೂಲೋದ್ದೇಶ. ಈ ಮೂಲಕ ಆ ಮಹಿಳೆಯರ 3 ವರ್ಷದೊಳಗಿನ ಮಕ್ಕಳ ಆರೈಕೆಯ ಜವಾಬ್ದಾರಿ ಸರ್ಕಾರದ್ದು. ಹೆಚ್ಚಿನ ದುಡಿಮೆಯ ಅವಕಾಶ ಮಹಿಳೆಯರದ್ದು.
#RDPR#ruraldevelopment#kusinamane@PriyankKharge@readingkafka
ಕೂಸಿನ ಮನೆಗಳು ನರೇಗಾ ಕೂಲಿಕಾರ್ಮಿಕರ ಮಕ್ಕಳ ಪಾಲನೆ ಪೋಷಣೆಯೊಂದಿಗೆ ಅವರ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನು ಹೊಂದಿವೆ. ಇಲ್ಲಿ ಮಕ್ಕಳ ಸುರಕ್ಷತೆಯೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಮತ್ತು ಆಟಿಕೆಗಳ ಸೌಲಭ್ಯಗಳ ಮೂಲಕ ಶಾಲಾ ಪೂರ್ವ ಕಲಿಕೆಗೆ ಅಡಿಪಾಯ ಹಾಕಲಾಗುತ್ತದೆ.
#RDPR#kusinamane@readingkafka
ಮೇ ೧ ಕಾರ್ಮಿಕ ದಿನಾಚರಣೆ ಅಂಗವಾಗಿ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರು ಕೆಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದರು. ಈ ಕುರಿತು ವಿವಿಧ ಕನ್ನಡ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿರುವುದು.
ಹಿರೇಮ್ಯಾಗೇರಿ ಗ್ರಾಮದಲ್ಲಿ ನರೇಗಾ ಕೂಲಿಕಾರರಿಂದ ಕೆಕ್ ಕತ್ತರಿಸಿ ಕಾರ್ಮಿಕ ದಿನ ಆಚರಣೆ
ಮೇ 7 ರಂದು ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ ಮಾಡಿ
ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಯಲಬುರ್ಗಾ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ನರೇಗಾ ಯೋಜನೆ ಕೈಗೊಂಡು ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಅವರ ಆರ್ಥಿಕ ಜೀವನಕ್ಕೆ ದಾರಿಯಾಗಿರುವ ಕುರಿತು ಕನ್ನಡ ದಿನಪತ್ರಿಕೆಗಳಲ್ಲಿ ವಿಶೇಷ ಸ್ಟೋರಿ ಪ್ರಕಟಗೊಂಡಿರುವುದು.
ಕೊಪ್ಪಳ ಜಿ ಯಲಬುರ್ಗಾ ತಾ ವಣಗೇರಿ ಗ್ರಾ.ಪಂ ವ್ಯಾಪ್ತಿಯ ನಾಲಾ ಹೂಳೆತ್ತುವ ಸ್ಥಳಕ್ಕೆ
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮಾನ್ಯ ಆಯುಕ್ತರಾದ ಶ್ರೀ ಪವನ್ ಕುಮಾರ್ ಮಾಲಪಾಟಿ ರವರು ಇಂದು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಮಾಡಿದರು.
@CommrMGNREGSK
@MgnregsK
ನರೇಗಾ ಯೋಜನೆಯ ಮಾರ್ಗಸೂಚಿಯನುಸಾರ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಹಾಗೂ ವಿಳಂಬ ಮಾಡದೆ ಅನುಷ್ಠಾನಗೊಳಿಸಿ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ ಕುಮಾರ ಮಾಲಪಾಟಿ ಅವರು ತಿಳಿಸಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣ
@CommrMGNREGSK
@MgnregsK
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮಾನ್ಯ ಆಯುಕ್ತರಾದ ಶ್ರೀ ಪವನ್ ಕುಮಾರ್ ಮಾಲಪಾಟಿ ರವರು ಯಲಬುರ್ಗಾ ತಾಲೂಕಿನಲ್ಲಿ 2024-25ನೇ ಸಾಲಿನ ನರೇಗಾ ಯೋಜನೆಯ ಕಾಮಗಾರಿಗಳ ಪರಿಶೀಲನೆ
ನರೇಗಾ ಕಾಮಗಾರಿ ಸ್ಥಳದಲ್ಲಿ ಆಯುಕ್ತರ ಸಮ್ಮುಖದಲ್ಲಿ ಅಕುಶಲ ಕಾರ್ಮಿಕರಿಗೆ ಕಡ್ಡಾಯ ಮತದಾನ ಮಾಡುವ ಪ್ರತಿಜ್ಞಾವಿಧಿ ಸ್ವೀಕಾರ