ಮೈಸೂರು
ಕಾವೇರಿ ಕಾಲೇಜು
ಇಲ್ಲೂ ವಲಸಿಗರ ದರ್ಬಾರ್ ಶುರು ಆಯಿತಾ.
ಇದೇನು ಶೋ ಅಪ್ ಮಾಡೋಕಾ ಬಂದಿರೋದು ಅಥವಾ ಇಲ್ಲಿ ನಾವು ಆಡಿದ್ದೇ ಆಟ ಅಂತಾನಾ.
ಮೈಸೂರು ಕಾಲೇಜಿನಲ್ಲಿ ಮಲಯಾಳಿಗಳ ದರ್ಬಾರ್.
ಇಲ್ಲಿ ಇವರು ಆಡಿದ್ದೇ ಆಟ ಅಂತೇ
ಯಾರಿಗೂ ಮರ್ಯಾದೆ ಕೊಡದೆ ದರ್ಪ ಮಾಡ್ತಾರೆ ಅನ್ನೋ ದೂರು ಬಂದಿದೆ.
ಇವೆಲ್ಲ ಕಾಣ್ತಿಲ್ವೆ
@DgpKarnataka@DCMysuru
No Two Languages Policy Remove Congress Government in 2028
ಎರಡು ನುಡಿ ಪಾಲಿಸಿ ಮಾಡಲಿಲ್ಲ ಅಂದ���ರೆ 2028 ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಮನೆಕಡೆ ಹೋಗಬೇಕು
#ಎಚ್ಚರಿಕೆ_ಕನ್ನಡಿಗ
ಮೊದಲು ಬ್ಯಾಂಕ್ಗಳಿಗೆ ಹೋದರೆ
ಕನ್ನಡವೇ ಕೇಳಿಸುತ್ತಿತ್ತು.
ಬನ್ನಿ,ಹೋಗಿ,ಕೂತ್ಕೊಳ್ಳಿ ಹೀಗೆ
ಈಗ ಲೈನ್ ಮೇ ಕಡೋ,ಬಾಹರ್ ಜಾವ್
ಅನ್ನೋ ದಬ್ಬಾಳಿಕೆ
ಇಲ್ನೋಡಿ ಇದು ಇಂಡಿಯಾ ಅಂತೇ
ಕನ್ನಡ ಬೇಡವಂತೆ.
ಇಂಡಿಯಾ ಅಂದ್ರೆ ಹಿಂದಿ ಅಂದೋನು
ಯಾವ ಮೂರ್ಖ
@TheOfficialSBI
Terminate this fellow immediately
Place-chandapura,bengaluru
ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ʻಇದಕ್ಕೇನೇ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾನೆ.
ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗಲು ಸಾಧ್ಯ? ಕನ್ನಡದ ಅನ್ನ ತಿಂದು ಕೊಬ್ಬಿರುವ ಈತ ಅದು ಹೇಗೆ ಕರ್ನಾಟಕದಲ್ಲಿ ಇನ್ನು ಮೇಲೆ ಶೋಗಳನ್ನು ನಡೆಸುತ್ತಾನೆ ನೋಡೋಣ.
ಕರ್ನಾಟಕದ ಯಾವ ನಿರ್ಮಾಪಕರೂ ಈತನಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವನ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅ��ರೇ ಬೆಲೆ ತೆರಬೇಕಾಗುತ್ತದೆ.
ಸೋನು ನಿಗಮ್ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರ ಹೊಂದಿದೆ. ಹೀಗಾಗಿ ಅವನ ಮೇಲೆ ಈ ಕೂಡಲೇ ದೂರು ದಾಖಲಾಗಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ ಎಂದು ಎಚ್ಚರಿಸುತ್ತೇನೆ. ಇಂಥ ಕೃತಘ್ನರನ್ನು ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್���ು ಮುಂದಾದರೂ ನಾವು ಕೈಬಿಡಬೇಕು.
ಕನ್ನಡದ ನೆಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ನಿನ್ನೆ ನಡೆದಿರುವ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. ರಸ್ತೆಯಲ್ಲಿ ಆದ ಗಲಾಟೆಯನ್ನು ಭಾಷಾ ಗಲಾಟೆಯೆಂದು ಬಿಂಬಿಸಿ ಸೇನೆಯ ಪ್ರಭಾವ ಬಳಸಿ ಕನ್ನಡಿಗರ ಮೇಲೆಯೇ ದೂರು ದಾಖಲಿಸಲಾಯಿತು. ಮಾತ್ರವಲ್ಲ, ಈ ಬಗ್ಗೆ ವಿಂಗ್ ಕಮ್ಯಾಂಡರ್ ಎಂದು ಹೇಳಿಕೊಂಡ ವ್ಯಕ್ತಿ ಸುಳ್ಳುಗಳನ್ನು ಹೇಳಿ ವಿಡಿಯೋ ಮಾಡಿ ಕನ್ನಡಿಗರನ್ನು ದುಷ್ಕರ್ಮಿಗಳು, ರೌಡಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡಲಾಯ���ತು.
ನಿನ್ನೆ ಬೆಳಿಗ್ಗೆಯಿಂದಲೂ ಇಂಗ್ಲಿಷ್, ಹಿಂದಿ ಚಾನಲ್ ಗಳು ಕನ್ನಡಿಗರ ಮೇಲೆ ಯುದ್ಧವನ್ನೇ ಸಾರಿದ್ದವು. ಕನ್ನಡಿಗರನ್ನು ಥಗ್ಸ್ ಎಂದು ಕರೆಯಲಾಯಿತು. ಕನ್ನಡಿಗರು ಗೂಂಡಾಗಳು, ಅಸಹಿಷ್ಣುಗಳು ಎಂದು ಬಿಂಬಿಸಲಾಯಿತು. ಕೊನೆಗೆ ವಿಂಗ್ ಕಮಾಂಡರ್ ಮಾಡಿದ ದೌರ್ಜನ್ಯದ ವಿಡಿಯೋಗಳು ಸಾಲುಸಾಲಾಗಿ ಹೊರಬಂದ ಮೇಲೆ ಎಲ್ಲವೂ ಬಾಯಿಮುಚ್ಚಿಕೊಂಡು ಕುಳಿತವು. ಈ ನಾಚಿಗೆಗೆಟ್ಟ ದೇಶದ್ರೋಹಿ ಮಾಧ್ಯಮಗಳಿಗೆ ಕನ್ನಡಿಗನ ಮೇಲೆ ನಡೆದ ಹಲ್ಲೆ ಕಣ್ಣಿಗೆ ಕಾಣಲೇ ಇಲ್ಲ. ಅದರ ಕುರಿತು ಕಾರ್ಯಕ್ರಮಗಳನ್ನು ಮಾಡಲೇ ಇಲ್ಲ.
ನಿನ್ನೆ ವಿಕಾಸ ಎಂಬ ಹುಡುಗನನ್ನು ಪೊಲೀಸರು ಬಂಧಿಸಿದಾಗಿನಿಂದಲೂ ಬ್ಯಾಟರಾಯನಪುರ ವ್ಯಾಪ್ತಿಯ ಕವರೇ ಪದಾದಿಕಾರಿಗಳು ಪೋಲೀಸ್ ಠಾಣೆಯಲ್ಲೇ ಇದ್ದು ಆ ಹುಡುಗನಿಗೆ ಸಹಕಾರ ನೀಡಿದ್ದಾರೆ. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ಕರವೇ ಕಾರ್ಯಕರ್ತ ದೇವರಾಜ್ ರಾತ್ರಿ 2 ಗಂಟೆಯವರೆಗೆ ಅಲ್ಲೇ ಇದ್ದು, ವಿಂಗ್ ಕಮ್ಯಾಂಡರ್ ಮೇಲೆ FIR ಮಾಡುವಂತೆ ಹೋರಾಟ ಮಾಡಿದ್ದಾರೆ. ಬೆಳಿಗ್ಗೆ ನಮ್ಮ ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಅಶ್ವಿನಿ ಗೌಡ, ಪದ್ಮನಾಭನಗರ ಕ್ಷೇತ್ರ ಘಟಕದ ಅಧ್ಯಕ್ಷ ಮನುಗೌಡ ಮತ್ತು ಹಲವಾರು ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ, ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ ಹುಡುಗನಿಗೆ ಬೇಕಾದ ಎಲ್ಲಾ ಕಾನೂನು ಸಹಕಾರವನ್ನೂ ಸಹ ಕರವೇ ನೀಡಲಿದೆ, ಬೀದಿ ಜಗಳವನ್ನು ಭಾಷಾ ಸಮಸ್ಯೆ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ತ್ಯ ಕದಡಲು ಯತ್ನಿಸಿರುವ ಕುರಿತು ಪೊಲೀಸರಿಗೆ ಮನವರಿಕೆ ಮಾಡಿಕೊಡಲಾಗಿದೆ .
ಕನ್ನಡದ ಯುವಕನ ಮೇಲೆ ಕನ್ನಡದ ನೆಲದಲ್ಲೇ ಹಲ್ಲೆ ನಡೆಸುವ ದುಸ್ಸಾಹಸಕ್ಕೆ ಮುಂದಾಗುವ
ವ್ಯಕ್ತಿ ಯಾರೇ ಆದರೂ ಕಾನೂನಿನ ಪ್ರಕಾರ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ. ಈಗಾಗಲೇ ನಾನು ಇನ್ಸ್ ಪೆಕ್ಟರ್ ಜೊತೆ ಮಾತಾಡಿದ್ದು, ಕನ್ನಡದ ಹುಡು���ನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
ಕನ್ನಡಿಗರ ಮೇಲೆ ಇದೆ ರೀತಿ ದೌರ್ಜನ್ಯಗಳು ನಡೆದರೆ, ಕನ್ನಡಿಗರನ್ನು ಗೂಂಡಾಗಳು ಎಂಬಂತೆ ಬಿಂಬಿಸಲು ಯಾರಾದರೂ ಯತ್ನಿಸಿದರೆ ನಾವು ಇನ್ನೂ ಮುಂದೆ ಸುಮ್ಮನೆ ಇರುವುದಿಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
#ArrestShiladityaBose
ತಾನೇ ಬೈಕ್ ಸವಾರನಿಗೆ ಅಮಾನುಷವಾಗಿ ಹೊಡೆದು-ಬಡಿದು, ಕನ್ನಡಿಗರು ನನಗೆ ಹೊಡೆದರು ಅಂತ ಪೊಲೀಸ್'ಗೆ ದೂರು ಕೊಟ್ಟಿರುವ ಅಧಿಕಾರಿಯನ್ನು ಕೂಡಲೇ ಬಂಧಿಸಿ. ಇಂತಹವರು ರಕ್ಷಣಾ ಇಲಾಖೆಗೆ ಕಪ್ಪು ಚುಕ್ಕಿ.
#ನಮ್ಮನಾಡು_ನಮ್ಮಆಳ್ವಿಕೆ
ತಮ್ಮುರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆಗದೆ
ನಮ್ಮೂರಿಗೆ ಬಂದ್ರು ಕನ್ನಡನಾ ಕನ್ನಡ್ ಮಾಡಿದ್ರು.
ಕನ್ನಡ ಕಲಿರಪ್ಪ ಅಂದ್ರೆ ಇಲ್ಲ ನಾವು ಕಲಿಯಲ್ಲ ಅಂದ್ರು.
ಈಗ ನಮ್ಮೂರಲ್ಲಿ ನಮಗೆ ಹಿಂದಿಲಿ ಮಾತಾಡಿ ಅಂತ ಬೆದರಿಕೆ ಹಾಕೋ ಲೆವೆಲ್ ಗೆ ಬಂದಿದ್ದಾರೆ..ಇದು ಇವರ ದುರಹಂಕಾರಕ್ಕೆ ಕಾರಣ ನಮ್ಮಲ್ಲೇ ಇರೋ ಗುಲಾಮಗಿರಿ ಮಾಡೋರು😡
ಬೆಂಗಳೂರಿನ ಲಾಲ್ ಬಾಗ್ ಅಂತೇ
ಭೀಮಾರು ಗ್ಯಾಂಗ್ ಗಳು ಬಂದು ಇಡಿ ಕರ್ನಾಟಕನೇ ಹಾಳು ಮಾಡ್ತಿದ್ದಾರೆ.
ಇದಕ್ಕೆ ಕ್ರಮ ಆಗಲೇಬೇಕು.
ವಲಸೆ ನೀತಿ ತನ್ನಿ
@CMofKarnataka
ಇಲ್ಲ ಒಂದಿನ ಕನ್ನಡಿಗರು ನೆಮ್ಮದಿಯಾಗಿ ಬದುಕು ನಡೆಸೋಕೆ ಆಗದ ಸ್ಥಿತಿ ನಿರ್ಮಾಣ ಆಗಬಹುದು.
ಕಾನೂನು ಭಯ ಇಲ್ಲ,ಇದನ್ನ ತಮ್ಮೂರು ಅಂದುಕೊಂಡಿದ್ದಾರೆ.
#KarnatakaIsForKannadigas
ಕರ್ನಾಟಕದ ಮೂಲಸ್ವರೂಪವನ್ನೇ ಬದಲಾಯಿಸುತ್ತಿರುವ ಮಹಾವಲಸೆಯನ್ನು ತಡೆಗಟ್ಟದೇ ಇದ್ದರೆ ಮುಂದಿನ ಪೀಳಿಗೆಯ ಕನ್ನಡ ಸಮುದಾಯ ತನ್ನ ನಾಡಿನಲ್ಲಿ ತಾನೇ ಪರಕೀಯತೆ ಅನುಭವಿಸಬೇಕಾಗುತ್ತದೆ. ಇದನ್ನು ನಾವು ತಡೆಗಟ್ಟಲೇಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
#KarnatakaIsForKannadigasಕರ್ನಾಟಕದ ಮೂಲಸ್ವರೂಪವನ್ನೇ ಬದಲಾಯಿಸುತ್ತಿರುವ ಮಹಾವಲಸೆಯನ್ನು ತಡೆಗಟ್ಟದೇ ಇದ್ದರೆ ಮುಂದಿನ ಪೀಳಿಗೆಯ ಕನ್ನಡ ಸಮುದಾಯ ತನ್ನ ನಾಡಿನಲ್ಲಿ ತಾನೇ ಪರಕೀಯತೆ ಅನುಭವಿಸಬೇಕಾಗುತ್ತದೆ. ಇದನ್ನು ನಾವು ತಡೆಗಟ್ಟಲೇಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.