#spbagalkot#cmcbagalkot#dcbagalkot
ಮಾನ್ಯ ಅಧಿಕಾರಿಗಳು ದಯವಿಟ್ಟು ತಾವು ಸ್ವಲ್ಪ ಬಾಗಲಕೋಟೆಯ ಹಳೆ ಬಸ್ ನಿಲ್ದಾಣ ಎರಡು ರಸ್ತೆ ಬದಿ ತುಂಬಾ ಟ್ರಾಫಿಕ್ ಸಮಸ್ಯೆ ಆಗ್ತಾ ಇದೆ ಬಸಗಳು ಒಳಗಡೆ ಮತ್ತು ಹೊರಗೆ ಹೋಗಲಿಕ್ಕೆ ತುಂಬಾ ತೊಂದರೆ ಇದೆ ಅಲ್ಲಿ ಇರುವ ಬೀದಿ ಬದಿ ತಳ್ಳು ಗಾಡಿ ಮತ್ತು ಡಬ್ಬ ಗಾಡಿ ಗಳಿಂದ ಪಾದಚಾರಿ ಗಳಿಗೆ
ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಗಂಭೀರ ಆರೋಪಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಆರೋಪಗಳು ರಾಜ್ಯದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಕೇವಲ ಇಲಾಖಾ ಅಥವಾ ಸೀಮಿತ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಹೀಗಾಗಿ ಕೆಪಿಎಸ್ಸಿ ನೇಮಕಾತಿಗಳಲ್ಲಿನ ಎಲ್ಲ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (CBI)ದಿಂದ ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲಾಗಿದೆ ಹಾಗೂ ಹೈಕೋರ್ಟ್ನಲ್ಲಿಯೂ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿಗಳು ವಿಚಾರಣೆಯಲ್ಲಿವೆ. ಆದರೆ ಇಷ್ಟು ಸಾಲದು. ಸರಿಯಾದ ತನಿಖೆ ನಡೆದು ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು.
ಕೆಪಿ ಎಸ್ ಸಿ ಮೂಲಕ ನಡೆಡೆದಿರುವ ವಿವಿಧ ನೇಮಕಾತಿ ಪ್ರಕ್ರಿಯೆಗಳು, ಪರೀಕ್ಷೆಗಳು, ಫಲಿತಾಂಶಗಳು ಮತ್ತು ಆಯ್ಕೆ ಪಟ್ಟಿಗಳ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳು ಮೂಡಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಹಣದ ವ್ಯವಹಾರ ನಡೆದಿದೆ, ಮಧ್ಯವರ್ತಿಗಳ ಮೂಲಕ ಉದ್ಯೋಗ ಮಾರಾಟವಾಗಿದೆ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಮಗ್ರ ತನಿಖೆಯ ಮೂಲಕವೇ ಸತ್ಯಾಸತ್ಯತೆ ತಿಳಿಯಬೇಕು.
ವಿಶೇಷವಾಗಿ, ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಹುದ್ದೆಗಳನ್ನು ಮಾರಿಕೊಂಡ ಹಿನ್ನಲೆಯಲ್ಲೇ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ದೊರಕಬೇಕಿದ್ದ ನ್ಯಾಯ ದೊರೆಯಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರ ಹಾಗೂ ಕೆಪಿಎಸ್ಸಿಯ ಗಮನ ಸೆಳೆದಿತ್ತು. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿಲ್ಲ. ಕನ್ನಡದಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ಯುವಜನರ ಭವಿಷ್ಯವನ್ನು ಹಾಳು ಮಾಡಿದ ಎಲ್ಲ ನಿರ್ಧಾರಗಳ ಬಗ್ಗೆಯೂ ತನಿಖೆಯಾಗಬೇಕು.
ಕೆಪಿಎಸ್ಸಿ ಎನ್ನುವುದು ಸಾಮಾನ್ಯ ಸಂಸ್ಥೆಯಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಾಂವಿಧಾನಿಕ ಸಂಸ್ಥೆ. ಅಂತಹ ಸಂಸ್ಥೆಯ ಮೇಲೆಯೇ ಜನರ ವಿಶ್ವಾಸ ಕುಸಿದರೆ ಅದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕೇವಲ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಸಾಲದು. ಕಳೆದ ಹಲವು ವರ್ಷಗಳ ನೇಮಕಾತಿ ಪ್ರಕ್ರಿಯೆಗಳು, ಮೌಲ್ಯಮಾಪನ, ಮೀಸಲಾತಿ ಅನುಷ್ಠಾನ, ಅಂಕಗಳ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲ ಆಯಾಮಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು.
ನಮ್ಮ ಹಕ್ಕೊತ್ತಾಯಗಳು:
1. ಕೆಪಿಎಸ್ಸಿಯ ಎಲ್ಲ ಪ್ರಮುಖ ನೇಮಕಾತಿ ಅಕ್ರಮಗಳ ಕುರಿತು ತಕ್ಷಣ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು.
2. ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯ ಎಲ್ಲ ನೇಮಕಾತಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು.
3. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಪ್ರತ್ಯೇಕ ನ್ಯಾಯಾಂಗ ಅಥವಾ ಉನ್ನತ ಮಟ್ಟದ ತನಿಖೆ ನಡೆಸಬೇಕು.
4. ಅಕ್ರಮ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಇತರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
5. ತಪ್ಪು ಕಂಡುಬಂದ ನೇಮಕಾತಿಗಳನ್ನು ಮರುಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
6. ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಮರುಸ್ಥಾಪಿಸಲು ಶಾಶ್ವತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು.
ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ಮುಚ್ಚಿಹಾಕುವ ಪ್ರಯತ್ನ ಮಾಡಬಾರದು. ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ನಿರಪರಾಧ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ರಾಜ್ಯದ ಯುವಜನರ ಹಿತದೃಷ್ಟಿಯಿಂದ ಮುಂದುವರಿಸಲಿದೆ.
– ಟಿ.ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಸೈಬರ್ ಜಾಗೃತಿಯೇ ಸುರಕ್ಷೆ.
ಬಲವಾದ ಪಾಸ್ವರ್ಡ್ ಬಳಸಿ.
ಅಪರಿಚಿತ ಲಿಂಕ್ಗಳು, ಸಂದೇಶಗಳು ಹಾಗೂ ಫಿಶಿಂಗ್ಗಳಿಂದ ಎಚ್ಚರಿರಿ.
OTP, ಪಾಸ್ವರ್ಡ್ ಹಾಗೂ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ
@IgpBelagavi@DgpKarnataka@KarnatakaCops
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment#neetexam
*ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ ದಿವ್ಯ ಕಂಠದ ಗಾಯಕಿ ಎಸ್ ಜಾನಕಿ ಕನ್ನಡದ ಮಣ್ಣಿನಲ್ಲೇ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅವರ ಕನ್ನಡ ಪ್ರೀತಿ ಹೇಗಿತ್ತು ಗೊತ್ತೆ, ಅವರ ಮಾತಿನಲ್ಲೇ ಕೇಳಿ.*
ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮೂರನೇ ಭಾಷೆಯಾಗಿ ಜಾರಿಗೊಳಿಸಬೇಕು ಎಂದು ಎನ್ಸಿಇಆರ್ಟಿ ಸೂಚನೆ ಹೊರಡಿಸಿದೆ. ದೇಶದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆಯೇ? ದೇಶವನ್ನು ಒಡೆಯುವ ಸಂಚೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಕೇಂದ್ರೀಯ ಸಂಸ್ಥೆಗಳ ಈ ಹುಚ್ಚಾಟಗಳಿಂದಾಗಿ ದೇಶ ದುರ್ಬಲವಾಗುತ್ತಿದೆ.
ಎನ್ಸಿಇಆರ್ಟಿ ಹೊರಡಿಸಿರುವ ಸೂಚನೆ ರಾಜ್ಯದ ಭಾಷಾ ಕಾನೂನು, ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ಕರ್ನಾಟಕದ ಸ್ವಾಭಿಮಾನದ ಮೇಲಿನ ನೇರ ದಾಳಿಯಾಗಿದೆ. ಈ ಆದೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲ, ಈ ಆದೇಶವನ್ನು ಹೊರಡಿಸಿದ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸುತ್ತದೆ.
ಕರ್ನಾಟಕ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ. ಈ ಕಾನೂನು ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ಎನ್ಸಿಇಆರ್ಟಿ ನಿರ್ಧಾರವು ರಾಜ್ಯದ ಕಾನೂನನ್ನು ಉಲ್ಲಂಘಿಸುವ ದುಸ್ಸಾಹಸವಾಗಿದೆ. ಕರ್ನಾಟಕವನ್ನು ನಾವು ಎನ್ಸಿಇಆರ್ಟಿಗೆ ಬರೆದುಕೊಟ್ಟಿಲ್ಲ. ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರವೂ ಆ ಸಂಸ್ಥೆಗೆ ಇಲ್ಲ.
ಕರ್ನಾಟಕದ ಕಾನೂನು ಸ್ಪಷ್ಟವಾಗಿದ್ದರೂ ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಇದು ನೇರವಾಗಿ ದೇಶ ಒಡೆಯುವ ಸಂಚು ಎಂದೇ ನಾವು ಭಾವಿಸಬೇಕಾಗುತ್ತದೆ.
ಕರ್ನಾಟಕದ ಭಾಷಾ ಕಾನೂನನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ. ಕನ್ನಡವನ್ನು ಮೂರನೇ ಭಾಷೆಗೆ ಇಳಿಸುವ ಯಾವುದೇ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕರ್ನಾಟಕದ ಕಾನೂನು ಹಾಗೂ ರಾಜ್ಯದ ಭಾಷಾ ಹಕ್ಕುಗಳಿಗೆ ಗೌರವ ನೀಡಬೇಕು.
ರಾಜ್ಯ ಸರ್ಕಾರ ಕೂಡಲೇ ಈ ವಿಷಯದಲ್ಲಿ ಅಧಿಕೃತ ನಿಲುವು ಪ್ರಕಟಿಸಿ, ಎನ್ಸಿಇಆರ್ಟಿ ಆದೇಶವನ್ನು ತಿರಸ್ಕರಿಸಿ ಕನ್ನಡದ ಹಕ್ಕನ್ನು ರಕ್ಷಿಸಬೇಕು. ಕನ್ನಡದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನವೇ ಅಂತಿಮ. ರಾಜ್ಯದ ಕಾನೂನಿಗಿಂತ ಮೇಲಾಗಿ ಯಾವುದೇ ಸಂಸ್ಥೆ ಅಥವಾ ಅಧಿಕಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು.
ಎನ್ಸಿಇಆರ್ಟಿ ತನ್ನ ಕನ್ನಡ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ. ಒಂದು ವೇಳೆ ಎನ್ಸಿಇಆರ್ಟಿ ಬಲವಂತವಾಗಿ ಈ ಆದೇಶವನ್ನು ಜಾರಿಗೊಳಿಸಲು ಯತ್ನಿಸಿದರೆ ರಾಜ್ಯದಲ್ಲಿ ರಕ್ತಕ್ರಾಂತಿಯೇ ನಡೆಯುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ.
ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅಕ್ರಮವಾಗಿ, ಅನಧಿಕೃತವಾಗಿ, ಅನೈತಿಕವಾಗಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ. ಹಿಂದಿಯನ್ನು ಯಾವುದೋ ಒಂದು ಬಾಗಿಲಲ್ಲಿ ತಂದು ಹಾಕುವುದನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಹಿಂದಿ ಸಾಮ್ರಾಜ್ಯಶಾಹಿಗಳ ಸಂಚನ್ನು ನಾವು ವಿಫಲಗೊಳಿಸುತ್ತಲೇ ಬರುತ್ತೇವೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಗೆ ಯಾವುದೇ ಅವಕಾಶವನ್ನು ನಾವು ನೀಡುವುದಿಲ್ಲ.
1954ರ ಅಕ್ಟೋಬರ್ 21ರಂದು (BEL ಸ್ಥಾಪನೆಯಾದಾಗ) ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕೆಂಗಲ್ ಹನುಮಂತಯ್ಯ. ಅವರು ಮುತುವರ್ಜಿ ವಹಿಸಿ ಬಿಇಎಲ್ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು. ಅವರು ಈ ಸಂಸ್ಥೆಯನ್ನು ಬರಮಾಡಿಕೊಂಡಿದ್ದು ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಲಿ ಎಂದಲ್ಲ. ರಕ್ಷಣಾ ಸಂಸ್ಥೆಗಳ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಈ ಸಂಸ್ಥೆಯನ್ನು ಹುಟ್ಟುಹಾಕುವ ಜೊತೆಗೆ, ಪೋಷಿಸಿ ಬೆಳೆಸಿಕೊಂಡು ಬಂದವರು ಕನ್ನಡಿಗರು. ಆದರೆ ಇದೇ ಸಂಸ್ಥೆಯ ಮೂಲಕ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅನಧಿಕೃತವಾಗಿ ಹಿಂದಿ ಫಲಕವನ್ನು ಹಾಕಿಸುವ ಉದ್ದೇಶವಾದರೂ ಏನು? ಅದೂ ಕೂಡ ಸಂಸ್ಥೆಯ ಒಳಗಿನ ಭಾಗದಲ್ಲಿ ಅಲ್ಲ, ಸಾರ್ವಜನಿಕ ರಸ್ತೆಯಲ್ಲಿ ಹಿಂದಿಯನ್ನು ಮೆರೆಸಲು ಏನು ಕಾರಣ?
ಕರ್ನಾಟಕದಲ್ಲಿ ಬಿಇಎಲ್ ಮಾತ್ರವಲ್ಲದೆ, ಬಿಇಎಂಎಲ್, ಎಚ್ ಎ ಎಲ್, ಐಟಿಐನಂಥ ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಬೆಂಗಳೂರನ್ನು ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಿದ್ದು ಈ ಸಂಸ್ಥೆಗಳು. ಇಷ್ಟೇ ಅಲ್ಲದೆ ಸಿಎಸ್ ಐಆರ್, ಎಚ್ ಎಂಟಿ ನಂಥ ಸಂಸ್ಥೆಗಳೂ ಇಲ್ಲಿವೆ. ಈ ಸಂಸ್ಥೆಗಳನ್ನು ನಾವು ಹಿಂದಿಯನ್ನರಿಗೆ ಬರೆದುಕೊಟ್ಟಿಲ್ಲ. ಈ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಮಾಡುವುದು ದೊಡ್ಡ ಕುತಂತ್ರದ ಭಾಗ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಿಇಎಲ್ ವೃತ್ತದಲ್ಲಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಕಿತ್ತು ಹಾಕಿದೆ. ನಾಮಫಲಕ ಅಳವಡಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವ ಮಾಡಿರುವ ಬಿಇಎಲ್ ಆಡಳಿತ ಮಂಡಳಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು. ಬಿಇಎಲ್ ಆಡಳಿತ ಮಂಡಳಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭವಿಷ್ಯದಲ್ಲಿ ಇಂಥ ಅಧಿಕಪ್ರಸಂಗಿತನವನ್ನು ಯಾರೇ ಮಾಡಿದರೂ ಕರ್ನಾಟಕ ರಕ್ಷಣಾ ವೇದಿಕೆ ಅತ್ಯುಗ್ರವಾಗಿ ಪ್ರತಿಭಟಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ.
(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ!
ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು.
ಹೇಗೆ ಅಂತೀರಾ?
1️⃣ https://t.co/e7r4W9ZlSk ಗೆ ಭೇಟಿ ನೀಡಿ.
2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ).
3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ.
ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು!
#SIRKarnataka #ElectionCommission
ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ.
ಇದು ಕನ್ನಡದ ಪ್ರಶ್ನೆ.
ಇದು ಉದ್ಯೋಗದ ಪ್ರಶ್ನೆ.
ಇದು ಸ್ವಾಭಿಮಾನದ ಪ್ರಶ್ನೆ.
ಇಂದು ಮೌನವಾದರೆ ನಾಳೆ ಕನ್ನಡಕ್ಕೆ ಉಳಿಯುವುದು ಇಂಥದ್ದೇ ನೂರೆಂಟು ಅವಮಾನಗಳು ಮಾತ್ರ.
ಆದ್ದರಿಂದ ಜೂನ್ 25ರಂದು ನಡೆಯುವ ನಿರ್ಣಾಯಕ ಹೋರಾಟದಲ್ಲಿ ಭಾಗವಹಿಸಿ. ಕನ್ನಡಕ್ಕಾಗಿ ಧ್ವನಿ ಎತ್ತಿ.
#ನಿರ್ಣಾಯಕಹೋರಾಟ
ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ.
ಇದು ಕನ್ನಡದ ಪ್ರಶ್ನೆ.
ಇದು ಉದ್ಯೋಗದ ಪ್ರಶ್ನೆ.
ಇದು ಸ್ವಾಭಿಮಾನದ ಪ್ರಶ್ನೆ.
ಇಂದು ಮೌನವಾದರೆ ನಾಳೆ ಕನ್ನಡಕ್ಕೆ ಉಳಿಯುವುದು ಇಂಥದ್ದೇ ನೂರೆಂಟು ಅವಮಾನಗಳು ಮಾತ್ರ.
ಆದ್ದರಿಂದ ಜೂನ್ 25ರಂದು ನಡೆಯುವ ನಿರ್ಣಾಯಕ ಹೋರಾಟದಲ್ಲಿ ಭಾಗವಹಿಸಿ. ಕನ್ನಡಕ್ಕಾಗಿ ಧ್ವನಿ ಎತ್ತಿ.
#ನಿರ್ಣಾಯಕಹೋರಾಟ
ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಿಂದ ಇತ್ತೀಚೆಗೆ ಹೊರಡಿಸಲಾದ ಮೂರು ಪ್ರಮುಖ ಎಲ್ ಡಿಸಿಇ ನೋಟಿಫಿಕೇಷನ್ ಗಳನ್ನು (ಆಫೀಸ್ ಸೂಪರಿಂಟೆಂಡೆಂಟ್ ಲೆವೆಲ್-6, ಸೀನಿಯರ್ ಕ್ಲಾರ್ಕ್ ಲೆವೆಲ್-5 ಮತ್ತು ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್) ಗಮನಿಸಿದೆ. ಈ ನೋಟಿಫಿಕೇಷನ್ ಗಳಲ್ಲಿ ಈ ಪದೋನ್ನತಿ ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಕರ್ನಾಟಕದ ಮಣ್ಣಿನಲ್ಲಿ, ಕನ್ನಡಿಗರ ರಕ್ತ-ಬೆವರಿನಿಂದ ನಿರ್ಮಾಣವಾದ ರೈಲ್ವೇ ಇಲಾಖೆಯಲ್ಲಿ ಕನ್ನಡ ಭಾಷೆಗೆ ಸ್ಥಾನವೇ ಇಲ್ಲದಿರುವುದು ನೇರವಾಗಿ ಕನ್ನಡ ಅಸ್ಮಿತೆಯ ಮೇಲಿನ ದಾಳಿ ಮತ್ತು ಕನ್ನಡಿಗರ ಭಾಷಾ ಹಕ್ಕುಗಳ ಉಲ್ಲಂಘನೆಯಾಗಿದೆ.
ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಲ್ಲಿ 39 ಆಫೀಸ್ ಸೂಪರಿಂಟೆಂಡೆಂಟ್, 25 ಸೀನಿಯರ್ ಕ್ಲಾರ್ಕ್ ಮತ್ತು 9 ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್ ಹುದ್ದೆಗಳಿಗೆ ಎಲ್ಡಿಸಿಇ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಪ್ರಶ್ನೆಪತ್ರಿಕೆಯ ಭಾಷೆಗಳ ಆಯ್ಕೆಯಲ್ಲಿ ಕನ್ನಡವನ್ನು ಉಲ್ಲೇಖಿಸದೆ ಇರುವುದು ಸ್ಪಷ್ಟ ಭಾಷಾ ದ್ರೋಹವಾಗಿದೆ. ಇದು ಕರ್ನಾಟಕದ ಅಧಿಕೃತ ನುಡಿಯಾದ ಕನ್ನಡಕ್ಕೆ ಮಾಡಿದ ಅಪಮಾನವಾಗಿದೆ. ಕನ್ನಡಿಗ ರೈಲ್ವೇ ಉದ್ಯೋಗಿಗಳು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಿತ್ತುಕೊಂಡು ಹಿಂದಿ ರಾಜ್ಯದವರಿಗೆ ನೀಡುವ ಸ್ಪಷ್ಟ ಹುನ್ನಾರವಾಗಿದೆ.
ಕರ್ನಾಟಕದಲ್ಲಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕಡ್ಡಾಯವಾಗಿದೆ. ಆದರೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ನೈರುತ್ಯ ರೈಲ್ವೇ ಇಲಾಖೆಯು ಕರ್ನಾಟಕದಲ್ಲಿ ಕನ್ನಡವನ್ನು ಪೂರ್ಣವಾಗಿ ಕಡೆಗಣಿಸುತ್ತಿರುವುದು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕನ್ನಡಿಗರ ಸ್ವಾತಂತ್ರ್ಯಹರಣದ ಉದಾಹರಣೆಯಾಗಿದೆ. ಇದು ಕನ್ನಡಿಗರ ಭಾವನೆಗಳನ್ನು ತಿರಸ್ಕಾರದಿಂದ ನೋಡುವ, ಅವರ ಗೌರವವನ್ನು ಕುಗ್ಗಿಸುವ ಕೆಟ್ಟ ಬೆಳವಣಿಗೆಯಾಗಿದೆ.
ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಸಾವಿರಾರು ಕನ್ನಡಿ ರೈಲ್ವೇ ಉದ್ಯೋಗಿಗಳು ಇಂದು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅಸಮರ್ಥರಾಗುತ್ತಿದ್ದಾರೆ. ಅವರಲ್ಲಿ ಅನೇಕರು ಗ್ರಾಮೀಣ ಹಿನ್ನೆಲೆಯಿಂದ ಬಂದವರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಅವರಿಗೆ ಇಂಗ್ಲಿಷ್-ಹಿಂದಿ ಪರೀಕ್ಷೆಯು ತುಂಬಾ ಕಷ್ಟಕರವಾಗುತ್ತದೆ. ಇದರಿಂದಾಗಿ ಅವರ ಉದ್ಯೋಗಾವಕಾಶಗಳು ಕುಂಠಿತವಾಗುತ್ತವೆ. ಇದು ಕನ್ನಡಿಗರನ್ನು ತಮ್ಮದೇ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುವ ಷಡ್ಯಂತ್ರವಾಗಿದೆ.
ಕನ್ನಡ ಚಳವಳಿಯು ನಾಡು-ನುಡಿ ರಕ್ಷಣೆಗಾಗಿ ದಶಕಗಳ ಕಾಲ ಹೋರಾಡಿದೆ. ಆ ಹೋರಾಟದ ಫಲವಾಗಿ ಇಂದು ಕರ್ನಾಟಕದಲ್ಲಿ ಕನ್ನಡಕ್ಕೆ ಗೌರವ ಸಿಕ್ಕಿದೆ. ಆದರೆ ನೈರುತ್ಯ ರೈಲ್ವೇ ಇಲಾಖೆಯು ಈ ಹೋರಾಟದ ಫಲವನ್ನು ಕಸಿದುಕೊಳ್ಳುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಇಂತಹ ದ್ರೋಹವನ್ನು ಎಂದಿಗೂ ಸಹಿಸುವುದಿಲ್ಲ. ಕನ್ನಡವನ್ನು ರೈಲ್ವೇ ಪರೀಕ್ಷೆಗಳಲ್ಲಿ ತ್ರಿಭಾಷಾ (ಕನ್ನಡ-ಇಂಗ್ಲಿಷ್-ಹಿಂದಿ) ವ್ಯವಸ್ಥೆಯಲ್ಲಿ ಅಳವಡಿಸದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಇಳಿಯಬೇಕಾಗುತ್ತದೆ.
ಈ ತಕ್ಷಣವೇ ರೈಲ್ವೇ ಬೋರ್ಡ್, ನೈರುತ್ಯ ರೈಲ್ವೇ ಮುಖ್ಯ ಕಚೇರಿ ಮತ್ತು ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಈ ಮೂರು ನೋಟಿಫಿಕೇಷನ್ಗಳನ್ನು ಸರಿಪಡಿಸಿ, ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಆದೇಶ ಹೊರಡಿಸಬೇಕು.
ಕನ್ನಡಿಗರ ಭಾಷಾ ಹಕ್ಕುಗಳು ಅಪಹರಣಗೊಳ್ಳುತ್ತಿರುವುದನ್ನು ಕರ್ನಾಟಕ ಸರ್ಕಾರವೂ ಮೌನವಾಗಿ ನೋಡುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ, ನೈರುತ್ಯ ರೈಲ್ವೇ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಮಾಡಬೇಕು. ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು, ವಿಶೇಷವಾಗಿ ಕೇಂದ್ರ ಸಚಿವರುಗಳು ಕೂಡಲೇ ಮೌನ ಮುರಿಯಬೇಕು. ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿರುವ ವಿ.ಸೋಮಣ್ಣ ಅವರು ತಕ್ಷಣ ಕ್ರಿಯಾಶೀಲರಾಗಿ ಈ ಅನ್ಯಾಯವನ್ನು ತಡೆಯಬೇಕು ಎಂದು ಒತ್ತಾಯಿಸುತ್ತೇನೆ.
ರೈಲ್ವೆ ಇಲಾಖೆ ತನ್ನ ತಪ್ಪು ತಿದ್ದಿಕೊಳ್ಳದೇ ಇದ್ದಲ್ಲಿ, ಕನ್ನಡಿಗರ ಮೇಲೆ ಇದೇ ರೀತಿ ಅಪಮಾನ ಎಸಗುತ್ತಿದ್ದಲ್ಲಿ ಇಡೀ ಕರ್ನಾಟಕದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅತಿ ಶೀಘ್ರದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ನಿರ್ಣಾಯಕ ಹೋರಾಟದ ಕುರಿತು ಘೋಷಣೆ ಮಾಡಲಿದ್ದೇವೆ.
ನೈರುತ್ಯ ರೈಲ್ವೆ ಮತ್ತೆ ಕನ್ನಡವಿಲ್ಲದೆ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ ಎಂದೇ ನಾವು ಪರಿಗಣಿಸುತ್ತೇವೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ. ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ಇಂಥ ದ್ರೋಹದ ವಿರುದ್ಧ ನಾವೂ ಸಹ ತೊಡೆತಟ್ಟಿ ನಿಲ್ಲುತ್ತೇವೆ.
ನೈರುತ್ಯ ರೈಲ್ವೆ ಮತ್ತೆ ಕನ್ನಡವಿಲ್ಲದೆ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ ಎಂದೇ ನಾವು ಪರಿಗಣಿಸುತ್ತೇವೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ. ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ಇಂಥ ದ್ರೋಹದ ವಿರುದ್ಧ ನಾವೂ ಸಹ ತೊಡೆತಟ್ಟಿ ನಿಲ್ಲುತ್ತೇವೆ. ಒಂದೇ ರೈಲ್ವೆ ಇಲಾಖೆ ತಪ್ಪು ತಿದ್ದಿಕೊಳ್ಳಬೇಕು, ಇಲ್ಲವಾದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾನೇ ಜವಾಬ್ದಾರಿ ಹೊರಬೇಕು. ಒಂದು ವೇಳೆ ಕನ್ನಡವಿಲ್ಲದ ಪರೀಕ್ಷೆ ನಡೆಸಲು ಮುಂದಾದರೆ ರೈಲ್ವೆ ಇಲಾಖೆ ಹಿಂದೆಂದೂ ಎದುರಿಸದ ಉಗ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ.
ನೈರುತ್ಯ ರೈಲ್ವೆ, ಮೈಸೂರು ವಿಭಾಗವು ದಿನಾಂಕ 04.06.2026ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗುಡ್ಸ್ ಟ್ರೇನ್ ಮ್ಯಾನೇಜರ್ (Goods Train Manager) ಹುದ್ದೆಯನ್ನು ಲೆವೆಲ್-5ರಲ್ಲಿ 15% LDCE ಕೋಟಾ ಅಡಿಯಲ್ಲಿ ಭರ್ತಿ ಮಾಡುವ ಸಂಬಂಧದಲ್ಲಿ ಜೂನ್ 25, 2026 (ಶುಕ್ರವಾರ) ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಪದೋನ್ನತಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇದೇ ರೀತಿ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗಗಳಲ್ಲೂ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ನೀಡದಿರುವುದು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಮತ್ತು ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯು ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ಬೇಡಿಕೆಯನ್ನು ಹಿಂದಿನಿಂದಲೂ ನಿರಂತರವಾಗಿ ಪ್ರತಿಭಟನೆಗಳ ಮೂಲಕ ಒತ್ತಾಯಪಡಿಸುತ್ತಾ ಬಂದಿದೆ. ಅನೇಕ ಬಾರಿ ರೈಲ್ವೆ ಬೋರ್ಡ್, ನೈರುತ್ಯ ರೈಲ್ವೆ ಆಡಳಿತ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಅವರು ಕನ್ನಡಿಗರ ಭಾಷಾ ಹಕ್ಕುಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ. ಈ ಬಾರಿಯೂ ಅದೇ ನಿರ್ಲಜ್ಜ ಮತ್ತು ಹೇಯ ನೀತಿ ಮುಂದುವರೆದಿದೆ. ರೈಲ್ವೆಯಲ್ಲಿ ಗುಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಗೆ ಅರ್ಹರಾಗಿರುವ ನೂರಾರು ಕನ್ನಡಿಗ ಉದ್ಯೋಗಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲು ಸಿದ್ಧರಿದ್ದರೂ, ಅವರಿಗೆ ತಾಯಿನುಡಿಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಕನ್ನಡಿಗರ ಅಸ್ತಿತ್ವ, ಸ್ವಾಭಿಮಾನ ಮತ್ತು ಸಮಾನ ಅವಕಾಶಗಳ ಮೇಲಿನ ನೇರ ದಾಳಿಯಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಸಂವಿಧಾನದ ಪ್ರಕಾರ ಪ್ರಾದೇಶಿಕ ಭಾಷೆಗಳಿಗೆ ಗೌರವ ನೀಡಬೇಕು ಎಂಬುದು ಸ್ಪಷ್ಟವಾಗಿದೆ. ಆದರೆ ರೈಲ್ವೆ ಇಲಾಖೆಯು ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ನಿರಾಕರಿಸುವುದು ಉದ್ದೇಶಪೂರ್ವಕವಾದ ತಾರತಮ್ಯವಾಗಿದೆ. ನೈರುತ್ಯ ರೈಲ್ವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಉದ್ಯೋಗಿಗಳಿದ್ದರೂ, ಅವರ ಭಾಷಾ ಹಕ್ಕುಗಳನ್ನು ಕಸಿದುಕೊಳ್ಳುವುದು ಸಹಿಸಲಾಗದು. ಈ ಪರೀಕ್ಷೆಯು 110 ಪ್ರಶ್ನೆಗಳನ್ನು ಒಳಗೊಂಡಿದ್ದು, ಋಣಾತ್ಮಕ ಮಾರ್ಕಿಂಗ್ ಇರುವಂತಹ ಕಠಿಣ ಪರೀಕ್ಷೆಯಾಗಿದೆ. ಇಂತಹ ಪರೀಕ್ಷೆಯಲ್ಲಿ ತಾಯಿನುಡಿಯಲ್ಲಿ ಬರೆಯುವ ಅವಕಾಶವನ್ನು ನಿರಾಕರಿಸುವುದು ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಕೃತ್ಯವಾಗಿದೆ.
ರೈಲ್ವೆ ಬೋರ್ಡ್ ಮತ್ತು ನೈರುತ್ಯ ರೈಲ್ವೆ ಆಡಳಿತವು ತಕ್ಷಣವೇ ಈ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಥವಾ ಕನ್ನಡ ಭಾಷೆಯನ್ನು ಸೇರಿಸುವ ಮೂಲಕ ಮುಂದೂಡಬೇಕು. ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಜೂನ್ 25, 2026ರಂದು ಈ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ. ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದ ಅನಾಹುತಗಳು ಮತ್ತು ಗಲಭೆಗಳು ನಡೆಯುವ ಸಾಧ್ಯತೆ ಇದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ ಎಂದು ಗಂಭೀರ ಎಚ್ಚರಿಕೆ ನೀಡುತ್ತೇನೆ. ಕರವೇ ಸದಸ್ಯರು, ಕನ್ನಡಿಗ ಉದ್ಯೋಗಿಗಳು ಮತ್ತು ಸಾರ್ವಜನಿಕರು ಈ ಅನ್ಯಾಯದ ವಿರುದ್ಧ ತೀವ್ರ ಪ್ರತಿಭಟನೆ ಮತ್ತು ಹೋರಾಟಕ್ಕೆ ಸಂಪೂರ್ಣ ಸಿದ್ಧರಿದ್ದಾರೆ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಪರಿಣಾಮಗಳು ತೀವ್ರವಾಗಿರುತ್ತವೆ.
ಕನ್ನಡಿಗರ ಭಾಷಾ ಹಕ್ಕುಗಳನ್ನು ಉಳಿಸಲು ನಾವು ಕಟಿಬದ್ಧರಾಗಿದ್ದೇವೆ. ರೈಲ್ವೆಯಲ್ಲಿ ಕನ್ನಡದ ಸ್ಥಾನಕ್ಕೆ ಕುತ್ತು ತರುವ ಶಕ್ತಿಗಳನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ “ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು ಹಾಗೂ ಸವಾಲುಗಳು” ಕುರಿತು ದುಂಡು ಮೇಜಿನ ಸಭೆ. ಜೂನ್ 14, ಬೆಳಿಗ್ಗೆ 10:30, ಲಲಿತ್ ಅಶೋಕಾ, ಬೆಂಗಳೂರು.
#ಕರವೇ#ಕನ್ನಡ#ಬೆಂಗಳೂರು#krv