ಸ್ವಾಭಿಮಾನ ಕಳೆದುಕೊಂಡ ರಾಜಕೀಯ ನಾಯಕರೇ, ದಿಲ್ಲಿ ಹೈಕಮಾಂಡುಗಳ ಮುಂದೆ ಕನ್ನಡಿಗರ ಪರವಾಗಿ ಧ್ವನಿ ಎತ್ತಲು ಸಾಧ್ಯವಿಲ್ಲದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕನ್ನಡಿಗರು ಸಾವಿರಾರು ವರ್ಷಗಳಿಂದ ಸಿಂಹಗಳಂತೆ ಬದುಕಿದವರು. ನಿಮ್ಮಂಥ ರಣಹೇಡಿಗಳ ಅವಶ್ಯಕತೆ ನಮಗಿಲ್ಲ.
#ಹಿಂದಿಗುಲಾಮಗಿರಿಬೇಡ#NoToHindiSlavery
ಶಿವಮೊಗ್ಗದಲ್ಲಿ ನಡೆದ ಸಿಆರ್ ಪಿಎಫ್ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿ ಬ್ಯಾನರುಗಳನ್ನು ಬಳಸಿ, ಹಿಂದಿಯಲ್ಲೇ ನಿರೂಪಣೆ ಮಾಡಿರುವುದನ್ನು ಗಮನಿಸಿದೆ. ಇದು ಬೇರೇನೂ ಅಲ್ಲ, ಕನ್ನಡಿಗರ ಮೇಲೆ ಹಿಂದಿ ಸಾಮ್ರಾಜ್ಯಶಾಹಿಗಳು ಹೂಡಿರುವ ಪರೋಕ್ಷ ಯುದ್ಧ. ಕನ್ನಡತನವನ್ನು ನಾಶಗೊಳಿಸುವ ವ್ಯವಸ್ಥಿತ ದಾಳಿ. (1/5)
ಹಿಂದಿ ಸಾಮ್ರಾಜ್ಯಶಾಹಿಯಿಂದಾಗಿ ಮುಂದೊಂದು ದಿನ ಕನ್ನಡವನ್ನು ಬಳಸುವುದೇ ಅಪರಾಧ ಎನ್ನುವಂತಾದರೆ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ನಾಡಿನ ಎಲ್ಲರನ್ನೂ ಎಚ್ಚರಿಸಲು ಇಂದು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. #ಹಿಂದಿಗುಲಾಮಗಿರಿಬೇಡ#NoToHindiSlavery ಹ್ಯಾಶ್ ಟ್ಯಾಗ್ ಗಳೊಂದಿಗೆ ಈ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿ.