ಮರಳೂರು ಗ್ರಾಮ ಪಂಚಾಯಿತಿಯ ಏಚಗಳ್ಳಿ ಗ್ರಾಮದಲ್ಲಿ VB G RAM G ಯೋಜನೆಯಡಿ ಹಮ್ಮಿಕೊಂಡಿದ್ದ ಜಾಬ್ ಕಾರ್ಡ್ ಮೇಳ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ರಘುನಾಥ್ ಎಂ ರವರು ಸಾರ್ವಜನಿಕರಿಗೆ ಯೋಜನೆ ಕುರಿತ ಮಾಹಿತಿ ತಿಳಿಸಿ ಅರಿವು ಮೂಡಿಸಿದರು.
ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ VB G RAM G ಯೋಜನೆ ಕುರಿತು ಜಾಗೃತಿ ಅರಿವು ಕಾರ್ಯಕ್ರಮ. ಯೋಜನೆಯಲ್ಲಿ ಪಾಲ್ಗೊಂಡು ಗ್ರಾಮದ ಅಭಿವೃದ್ಧಿಯೊಂದಿಗೆ ವ್ಯಕ್ತಿಕವಾಗಿ ಆರ್ಥಿಕವಾಗಿ ಸದೃಢವಾಗುವಂತೆ ಪ್ರೋತ್ಸಹಿಸಲಾಯಿತು.
ತಾಲ್ಲೂಕಿನ ಹದಿನಾರು ಗ್ರಾಮ ಪಂಚಾಯಿತಿಯ ಸ. ಪ. ಪೂ. ಕಾಲೇಜಿನಲ್ಲಿ ಮ-ನರೇಗಾ ಯೋಜನೆಯಡಿ ಶಾಲಾ ಶೌಚಾಲಯ ನಿರ್ಮಾಣವಾಗಿರುವ ಕುರಿತ ಯಶೋಗಥೆಯು ವಿವಿಧ ದಿನಪತ್ರಿಕೆಗಳಲ್ಲಿ ಬಿತ್ತರಿಸಿರುವುದು.
ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನೂರು ಗ್ರಾಮದ ಸೋಮೇಶ್ವರ ದೇವಸ್ಥಾನದ ಚಾವಡಿಯಲ್ಲಿ ಇಂದು VB G RAM G ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಂಗೋಲಿಯಲ್ಲಿ VB G RAM G, ಕೂಲಿ ಮೊತ್ತ ವನ್ನು ಬಿಡಿಸಿ, ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಲಾಯಿ
ವಿಕಾಸಿತ ಭಾರತ ಗ್ಯಾರೆಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ ) ಯೋಜನೆಯಲ್ಲಿ 125, ದಿನಗಳ ಉದ್ಯೋಗವಕಾಶ, ಕೂಲಿ ಮೊತ್ತ 382 ರೂ ಗೆ ಏರಿಕೆ. ಬನ್ನಿ ಯೋಜನೆಯಲ್ಲಿ ಪಾಲ್ಗೊಳ್ಳಿ.
ಜುಲೈ 1 ರಿಂದ VB-G RAM -G (ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ ಗ್ರಾಮೀಣ) ಜಾರಿ. # ಆರ್ಥಿಕ ವರ್ಷದಲ್ಲಿ ಇನ್ಮುಂದೆ 125 ದಿನಗಳ ಉದ್ಯೋಗ ಖಾತರಿ. ಈ ಹಿಂದಿನಂತೆ ಗಂಡು -ಹೆಣ್ಣಿಗೆ ಸಮಾನ ಕೂಲಿ. # ಕೂಲಿ ಮೊತ್ತ 370 ರೂ. ನಿಂದ 382 ರೂ. ಗೆ ಏರಿಕೆ.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ VB-G RAM G ಕಾಯ್ದೆ-2025 ಕುರಿತು ಎಲ್ಲಾ pdo, ಕಾರ್ಯದರ್ಶಿ, DEO's, VB G RAM G ಸಿಬ್ಬಂದಿಗಳಿಗೆ
ಜಿಲ್ಲಾ ಮಾಸ್ಟರ್ ಟ್ರೈನರ್ ಆದ ಕೆ. ಆರ್ ನಗರ ತಾಲ್ಲೂಕು ಸಹಾಯಕ ನಿರ್ದೇಶಕರು (ಗ್ರಾ. ಉ.)ಶಿವಕುಮಾರ್ ಅವರು ತರಬೇತಿ ನೀಡಿದರು.
ಜನವರಿ 25ರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಇಂದು ತಾಲ್ಲೂಕು ಪಂಚಾಯಿತಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ “ನನ್ನ ಭಾರತ, ನನ್ನ ಮತ” (My India, My Vote) 2026ರ ಘೋಷವಾಕ್ಯದೊಂದಿಗೆ ಮತದಾರರ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗಿದೆ.
ನಂಜನಗೂಡು ತಾ. ಪಂ. ನಲ್ಲಿ ಇಂದು ಉಪಕಾರ್ಯದರ್ಶಿ(ಅಭಿವೃದ್ಧಿ)ಗಳು ಹಾಗೂ ಆಡಳಿತಾಧಿಕಾರಿಗಳೂ ಆದ ಭೀಮಪ್ಪ ಕೆ. ಲಾಳಿ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮ-ನರೇಗಾ ಯೋಜನೆ, ಸ್ವಚ್ಛ ಭಾರತ್ ಯೋಜನೆ, ಪಂಚಾಯತ್ ರಾಜ್, ಗ್ರಾಮೀಣ ವಸತಿ ಯೋಜನೆ ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿ ಪರಿಶೀಲನ ಸಭೆ ನಡೆಯಿತು.
ನಂಜನಗೂಡು ತಾಲ್ಲೂಕಿನ ಕೋಣನೂರು, ಬಿಳಿಗೆರೆ, ಮಲ್ಲೂಪುರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅಡಿ ಅಭಿವೃದ್ಧಿಪಡಿಸಿರುವ ಅಮೃತ ಸರೋವರ ಕೆರೆಗಳ ಅಂಗಳದಲ್ಲಿ ಧ್ವಜಾರೋಹಣ ನೆರೆವೇರಿಸುವ ಮೂಲಕ 79ನೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ.
ಮ-ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, e-kyc ಮಾಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಯೋಜನೆಯಡಿ ಕೆಲಸ ಮಾಡಲು ಹಾಗೂ ಕೂಲಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ. # ಇಂದೇ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನೊಂದಿಗೆ ಗ್ರಾ.ಪಂ.ಗೆ ಭೇಟಿ ನೀಡಿ e-kyc ಮಾಡಿಸಿಕೊಳ್ಳಿ.
ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಂಥಪಾಲಕರ ದಿನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಸಿದ್ದರಾಜು, ವ್ಯವಸ್ಥಾಪಕರಾದ ಮಹದೇವನಾಯಕ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಗ್ತಂಥಪಾಲಕರು ಹಾಜರಿದ್ದರು.