"ನಾನು ಕನ್ನಡಿಗ" ಇದೇ ನನ್ನ ಸ್ಟೇಟಸ್ ಮಾನ್ಯ ಉಪಮುಖ್ಯಮಂತ್ರಿಗಳೇ..!
ನಾನು ಕನ್ನಡನಾಡಿನ ಹುಡುಗ, ಇಲ್ಲಿ ನಾನು ತೆರಿಗೆ ಕಟ್ತಾ ಇದ್ದೇನೆ. ನಾಡಿನ ಜನರ ಪರವಾಗಿ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡ್ತಿದ್ದೇನೆ. *ಇದು ನನ್ನ ಸ್ಟೇಟಸ್.*
ಕರ್ನಾಟಕದಲ್ಲಿ ಹುಟ್ಟಿರುವ ಕನ್ನಡ ನಾಡಿನ ಹುಡುಗ, ಕನ್ನಡ ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಹುಡುಗ, ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವ ಹುಡುಗ, ಕನ್ನಡ ನಾಡಿನ ಒಬ್ಬ ಸಾಮಾನ್ಯ ಪ್ರಜೆ *(ಕಾಮನ್ ಮ್ಯಾನ್).
#ಕನ್ನಡನಾಡಿನಹುಡುಗ
#ಕಾಮನ್_ಮ್ಯಾನ್
#MyStatus
#NikhilKumaraswamy
ನಿನ್ನೆ ನನ್ನ ಜನ್ಮದಿನದಂದು ನಿಮ್ಮೆಲ್ಲರ ಶುಭ ಆಶೀರ್ವಾದದಿಂದ ನಾನು ಬಾವುಕನಾಗಿದ್ದೇನೆ. ನಿಮ್ಮೆಲ್ಲರ ಸಹೋದರತ್ವದ ವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ನನ್ನ ಮೇಲಿನ ನಿಮ್ಮ ನಂಬಿಕೆಗೆ ನಾನು ಸದಾ ಚಿರಋಣಿಯಾಗಿದ್ದೇನೆ.
ಸಮರ್ಪಣೆ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ನಿಮ್ಮೆಲ್ಲರ ಮೆಚ್ಚುಗೆಯು ನನ್ನನ್ನು ಮತ್ತಷ್ಟು ಉತ್ತೇಜಿಸಿದೆ.
ನನ್ನನ್ನು ಹರಸಿ ಆಶೀರ್ವದಿಸಿದ ನಿಮ್ಮೆಲ್ಲರಿಗೆ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ನೀವುಗಳು ಇರಿಸಿರುವ ನಂಬಿಕೆಗೆ ನಾನು ಋಣಿಯಾಗಿದ್ದೇನೆ. ಮತ್ತೊಮ್ಮೆ ಶುಭ ಹಾರೈಸಿದ ತಮ್ಮೆಲ್ಲರಿಗೂ ನನ್ನ ಹೃದಯ ಪೂರ್ವಕ ವಿನಮ್ರ ಧನ್ಯವಾದಗಳು.🙏
ನನ್ನ ಪ್ರೀತಿಯ ಮೊಮ್ಮಗ ಹಾಗೂ ಯುವ ಜನತಾದಾಳದ ರಾಜ್ಯಾಧ್ಯಕ್ಶರಾದ, ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನ ಆಶೀರ್ವಾದದಿಂದ ಉತ್ತಮ ಆಯುರಾರೋಗ್ಯದೊಂದಿಗೆ ನಿಮ್ಮ ಕನಸುಗಳೆಲ್ಲ ನನಸಾಗಲಿ, ನಿಮ್ಮ ಜನಪರ ಕಾಳಜಿ ಹಾಗೂ ಕೆಲಸಗಳು ಹೀಗೇ ಮುಂದುವರೆಯಲಿ. ರಾಜ್ಯದ ಜನರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
ನನ್ನ ಅಕ್ಕರೆಯ ಪುತ್ರ ಹಾಗೂ ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರಿಗೆ ಜನ್ಮದಿನದ ಪ್ರೀತಿಪೂರ್ವಕ ಶುಭಾಶೀರ್ವಾದಗಳು.
ಪಕ್ಷದ ಸಂಘಟನೆ, ಬಲವರ್ಧನೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ನಿಖಿಲ್ ಅವರಿಗೆ ಶುಭವಾಗಲಿ.
ಪಕ್ಷದ ಯುವ ನಾಯಕರಿಗೆ ಭಗವಂತ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ. ಮುಂದಿನ ದಿನಗಳಲ್ಲಿ ಅವರ ಕನಸು, ಆಕಾಂಕ್ಷೆಗಳೆಲ್ಲವೂ ಈಡೇರಿ ನೊಂದವರಿಗೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡುವ ಅವಕಾಶ ದೊರೆಯಲಿ. ನಾಡಿನ ಜನತೆ ಹಾಗೂ ಆ ತಾಯಿ ಚಾಮುಂಡೇಶ್ವರಿ ಆಶೀರ್ವಾದ, ಶ್ರೀರಕ್ಷೆ ಸದಾ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
@JanataDal_S
ಜನ್ಮದಿನವಾದ ಇಂದು ಕುಟುಂಬ ಸಮೇತರಾಗಿ ಜೆ.ಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಸ್ವಾಮಿಯ ದರ್ಶನ ಪಡೆದು, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.
#ಶ್ರೀಲಕ್ಷ್ಮೀವೆಂಕಟೇಶ್ವರ
ನನ್ನ ಜನ್ಮದಿನದ ಹಿನ್ನೆಲೆಯಲ್ಲಿ ಪೂಜ್ಯ ತಾತನವರು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡ (@H_D_Devegowda) ಅವರ ಆಶೀರ್ವಾದ ಪಡೆದುಕೊಂಡೆ.
ಜೀವನದ ಪ್ರತಿ ಹಂತದಲ್ಲೂ ನನಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿರುವ ನಮ್ಮ ತಾತನವರು ನನ್ನ ಪಾಲಿನ ದೊಡ್ಡ ಶಕ್ತಿ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ.
ಬಿಡದಿಯ ತೋಟದಲ್ಲಿ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಸೂರ್ಯದೇವನು ಪಥ ಬದಲಿಸಿದ ಈ ಪರ್ವಕಾಲದಲ್ಲಿ ನಾಡಿನ ಜನತೆಗೆ ಶುಭವಾಗಲಿ, ಎಲ್ಲರ ಮನೆ ಮನಗಳಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.
#ಸಂಕ್ರಾಂತಿ#Sankranthi2026
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ಕುಟುಂಬ ಸಮೇತರಾಗಿ ಬಿಡದಿಯಲ್ಲಿ ಗಂಗಾ ಪೂಜೆ ನೆರವೇರಿಸಿ, ಎಳ್ಳು ಬೆಲ್ಲ ಸವಿದು ಗೋ ಮಾತೆಗೆ ಪೂಜೆ ಮಾಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದೆವು.
ಸಂಕ್ರಾಂತಿ ಹಬ್ಬದಂದು ರೈತನ ಬಾಳು ಹಸನಾಗಲಿ, ನಿಮ್ಮ ಮನದಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ, ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ. ಸರ್ವರೂ ಸಮೃದ್ಧಿಯನ್ನು ಹೊಂದಲಿ, ನಾಡು ಪ್ರಗತಿ ಪಥದತ್ತ ಸಾಗಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು.
#sankranthi2026
#ಸಂಕ್ರಾಂತಿ
ಹುಟ್ಟುಹಬ್ಬದ ಶುಭಾಶಯಗಳು ಅಪ್ಪಾ ❤️
ನೀವು ಮನೆಯಲ್ಲಿ ಕಲಿಸಿದ ಪಾಠಗಳಿಂದ ಹಿಡಿದು ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ಈಗ ಕೇಂದ್ರ ಸಚಿವರಾಗಿ ನೀವು ನಿರ್ವಹಿಸಿದ ಜವಾಬ್ದಾರಿಗಳವರೆಗೆ, ನಿಮ್ಮ ಜೀವನವು ತ್ಯಾಗ, ಸ್ಥಿತಿಸ್ಥಾಪಕತ್ವ ಮತ್ತು ಜನರಿಗೆ ಸೇವೆ ಸಲ್ಲಿಸುವ ಅಚಲ ಬದ್ಧತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.
ನಿಮ್ಮ ಮಗನಾಗಿ, ನಿಮ್ಮ ಮೌನದ ಹಿಂದಿನ ಶಕ್ತಿ, ನಗುವಿನ ಹಿಂದಿನ ಹೊರೆ ಮತ್ತು ಪ್ರತಿ ಕಷ್ಟದ ಮೂಲಕ ದೃಢವಾಗಿ ನಿಲ್ಲಲು ಬೇಕಾದ ಧೈರ್ಯವನ್ನು ನಾನು ನೋಡಿದ್ದೇನೆ. ನಿಮ್ಮ ಪ್ರಯಾಣವು ನನಗೆ ನೆಲೆ ನಿಲ್ಲಲು, ದೃಢನಿಶ್ಚಯದಿಂದ ಹೋರಾಡಲು ಮತ್ತು ನಮ್ರತೆಯಿಂದ ಸೇವೆ ಮಾಡಲು ಸ್ಫೂರ್ತಿ ನೀಡುತ್ತಲೇ ಇದೆ.
ನಿಮಗೆ ಉತ್ತಮ ಆರೋಗ್ಯ, ಮನಸ್ಸಿನ ಶಾಂತಿ ಮತ್ತು ನಮ್ಮೆಲ್ಲರನ್ನೂ ಮಾರ್ಗದರ್ಶನ ಮಾಡುವುದನ್ನು ಮುಂದುವರಿಸಲು ಶಕ್ತಿ ಸಿಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಹೆಮ್ಮೆ, ಕೃತಜ್ಞತೆ ಮತ್ತು ಪ್ರೀತಿಯಿಂದ,
ಜನ್ಮದಿನದ ಶುಭಾಶಯಗಳು, ಅಪ್ಪಾ.
ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಜರುಗಿದ ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವದ ಪಕ್ಷಿನೋಟ.
ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಗೌಡ ಅವರಿಗೆ ಇರುವುದು ಒಂದೇ ಕನಸು ಅವರ ಕಣ್ಮುಂದೆ "ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು". ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷವನ್ನು ಬಲಿಷ್ಠವಾಗಿ ಕಟ್ಟೋಣ , ನಿರಂತರವಾಗಿ ಹೋರಾಟ ಮಾಡೋಣ, ಮತ್ತೊಮ್ಮೆ ಕುಮಾರಣ್ಣನವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡೋಣ.
#ಜೆಡಿಎಸ್ #ಬೆಳ್ಳಿಹಬ್ಬ
#JDS #25years
#SilverJubilee #SilverJubileeCelebration
📍
ಜೆಪಿ ಭವನ,
@JanataDal_S ರಾಜ್ಯ ಕಚೇರಿ, ಬೆಂಗಳೂರು
ರಾಷ್ಟ್ರೀಯ ಪಕ್ಷಗಳಲ್ಲಿ ದುರ್ಬಿನ್ ಹಾಕಿ ಹುಡುಕಿದರು ಸಿಗದ ಚಿನ್ನದಂತಹ ಕಾರ್ಯಕರ್ತರು ನಮ್ಮ ಜೆಡಿಎಸ್ ಪಕ್ಷದಲ್ಲಿದ್ದಾರೆ. ಎಲ್ಲಾ ಕಾರ್ಯಕರ್ತರ ಕನಸು ಒಂದೇ ರೈತರು ಉಳಿಯಬೇಕಾದರೆ ರೈತನಾಯಕ ಕುಮಾರಣ್ಣನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗ್ಬೇಕು ಎಂದು.
#ಜೆಡಿಎಸ್#ಬೆಳ್ಳಿಹಬ್ಬ
#JDS #25years
#SilverJubilee #SilverJubileeCelebration
ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಹಮ್ಮಿಕೊಂಡ ರಜತ ಮಹೋತ್ಸವ ಸಂಭ್ರಮದ ಕಾರ್ಯಕ್ರಮವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಹೆಚ್.ಡಿ. ದೇವೇಗೌಡ ರವರು ಹಾಗೂ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆನು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೇ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಪ್ರತಿ ತಾಲ್ಲೂಕಿನ ಬೂತ್ ಮಟ್ಟದಲ್ಲಿ ಜೆಡಿಎಸ್ ಧ್ವಜವನ್ನು ಹಾರಿಸಿದ ನಮ್ಮ ಚಿನ್ನದಂತಹ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ.
ರಜತ ಮಹೋತ್ಸವದ ಮುಖ್ಯ ಆಕರ್ಷಣೆಯಾಗಿ, ಸನ್ಮಾನ್ಯ ಹೆಚ್. ಡಿ ದೇವೇಗೌಡರು ಮತ್ತು ಶ್ರೀ ಕುಮಾರಸ್ವಾಮಿಯವರ ಭಾವಚಿತ್ರವಿರುವ ಬೆಳ್ಳಿ ನಾಣ್ಯವನ್ನು ಲೋಕಾರ್ಪಣೆ ಮಾಡಲಾಯಿತು. ಜೆಡಿಎಸ್ ಪಕ್ಷವು 25 ವರ್ಷಗಳಲ್ಲಿ ಅನೇಕ ಕಷ್ಟಗಳ ಎದುರಿಸಿ ಬೆಳವಣಿಗೆಯನ್ನು ಸಾಧಿಸಿದ್ದು, ಅನೇಕ ಜನಪ್ರತಿನಿಧಿಗಳು ಮತ್ತು ನಾಯಕರನ್ನು ಈ ಪಕ್ಷ ತಯಾರು ಮಾಡಿದೆ. ಸಭೆಯಲ್ಲಿ ರೈತರಿಗೆ ಅವರ ಬೆಳೆಗಳಿಗೆ ಸೂಕ್ತ ಬೆಂಬಲ ಮತ್ತು ನ್ಯಾಯಸಮ್ಮತ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.
25 ವರ್ಷಗಳ ಕಾಲ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ರವರು ಹಾಗೂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ ಪರವಾಗಿ ಆಡಳಿತ ಮಾಡಿದ ಕುಮಾರಣ್ಣನವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು.
ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಡಿನೆಲ್ಲಡೆ ಆಚರಿಸೋಣ, ಈವರೆಗೆ 52 ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನತಾಳ ಕಾರ್ಯಕ್ರಮ ಮಾಡಿದ್ದೇನೆ ಮುಂಬರುವ ದಿನಗಳಲ್ಲಿ ಎರಡನೇ ಹಂತದ ಪ್ರವಾಸದ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಆಗಮಿಸುತ್ತೇನೆ.
ಮುಂಬರುವ 2028ರ ಚುನಾವಣೆಯಲ್ಲಿ ನಾವು ಈ ಹಿಂದೆ ಗೆದ್ದ 58 ಸ್ಥಾನಗಳನ್ನು ಮೀರಿ ಗೆಲ್ಲಬೇಕಾಗಿದ್ದು, ಅದಕ್ಕಾಗಿ ನಾವೆಲ್ಲರೂ ಬಲಿಷ್ಠವಾಗಿ ಪಕ್ಷ ಕಟ್ಟೋಣ. ಮತ್ತೊಮ್ಮೆ ಕುಮಾರಣ್ಣನವರನ್ನು ರಾಜ್ಯದ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡೋಣ ಎಂದು ತಿಳಿಸಲಾಯಿತು.
ಈ ಸಂಭ್ರಮಾಚರಣೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು ರವರು, ಕೋರ್ ಕಮೀಟಿ ಅಧ್ಯಕ್ಷರಾದ ಶ್ರೀ ಜೆ.ಕೆ. ಕೃಷ್ಣಾರೆಡ್ಡಿ ರವರು, ಸಂಸದರಾದ ಶ್ರೀ ಮಲ್ಲೇಶ್ ಬಾಬು ರವರು, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಹ್ವಾನಿತರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಆಹ್ವಾನಿತ ನಾಯಕರು, ಸಾವಿರಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
#ಜೆಡಿಎಸ್_ಬೆಳ್ಳಿಹಬ್ಬ
#JdsSiverJubleeCelebrations
"ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ"
ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದು, ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರ ನಿದ್ದೆಗೆಡಿಸಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿಯುವುದಿಲ್ಲ. ಇನ್ನೊಂದು ಪಕ್ಷವನ್ನು ಲಘುವಾಗಿ ತೆಗಳುವುದು , ಅವಹೇಳನ ಮಾಡುವುದನ್ನು ಬಿಡಬೇಕು. ಇನ್ನಾದರು ಕಾಂಗ್ರೆಸ್ ಪಕ್ಷದ ನಾಯಕರು ಜನರ ಮುಂದೆ ತಗ್ಗಿ- ಬಗ್ಗಿ ನಡೆಯುವುದನ್ನು ಕಲಿಯಬೇಕು.
ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ?
ಕಸ ಗುಡಿಸುವ ಯಂತ್ರಗಳ ಬಗ್ಗೆ ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಬೆಂಗಳೂರು ಉಸ್ತುವಾರಿ ಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದೇನೆ.
ಹುಬ್ಬಳ್ಳಿ - ಧಾರವಾಡದಲ್ಲಿ ಇದೇ ಸರ್ಕಾರ ಕಸ ಗುಡಿಸುವ ಯಂತ್ರವನ್ನು ಒಂದು ಕೋಟಿ 45 ಲಕ್ಷಕ್ಕೆ ಎರಡು ಮಷಿನ್ ಖರೀದಿ ಮಾಡಿದೆ. ಬೆಂಗಳೂರಿಗೆ ಏಕೆ ಬೇಕಾ ಬಿಟ್ಟಿಯಾಗಿ 613 ಕೋಟಿ ರೂ. ವೆಚ್ಚ ಮಾಡಿ ಬಾಡಿಗೆ ತಗೋತೀರಾ.? ಸ್ವಂತಕ್ಕೆ ಖರೀದಿ ಮಾಡಬಹುದು ಅಲ್ಲವೇ! ಇದಕ್ಕೆ ಉತ್ತರ ನೀವೆ ಕೊಡಬಹುದು ಅಲ್ಲವೇ, ಲೋಕಾಯುಕ್ತಗೆ ಯಾಕೆ ಹೋಗ್ಬೇಕು.? ನಿಮಗೆ ಪರಿಜ್ಞಾನ ಇಲ್ಲವೇ.
ಬೆಂಗಳೂರು ಉಸ್ತುವಾರಿ ಸಚಿವರೇ ನಿಮ್ಮ ಉದ್ದೇಶ ಏನು.?
ಕಸ ಗುಡಿಸುವ ಯಂತ್ರಗಳನ್ನು ಗುತ್ತಿಗೆ ಪಡೆದು ನೀವು ಬೆಂಗಳೂರು ನಗರವನ್ನು ಏನು ಮಾಡಲು ಹೋರಟಿದ್ದೀರಿ.? 7 ವರ್ಷಕ್ಕೆ 613 ಕೋಟಿ ಖರ್ಚು ಮಾಡುವ ಬದಲು ಒಂದು ಯಂತ್ರವನ್ನು 1.33 ಕೋಟಿ ರೂ. ದಲ್ಲಿ ನೇರವಾಗಿ ಖರೀದಿ ಮಾಡಬಹುದಾಗಿದೆ. ನಿಮ್ಮ ಗಣಿತ ನಮಗೆ ಅರ್ಥವಾಗುತ್ತಿಲ್ಲ ದಯವಿಟ್ಟು ರಾಜ್ಯದ ಜನತೆಗೆ ಇದರ ಬಗ್ಗೆ ಉತ್ತರ ನೀಡಿ.
#Garbagemachinesrow
#Bangalore
#ಬ್ರಾಂಡ್_ಬೆಂಗಳೂರು
#GBA
ಕಾರ್ತಿಕ ಸೋಮವಾರದ ಅಂಗವಾಗಿ ಕುಟುಂಬ ಸಮೇತರಾಗಿ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಶ್ರೀ ದೇವೇಶ್ವರ ಸ್ವಾಮಿ ಹಾಗೂ ನಮ್ಮ ಮನೆ ದೇವರಾದ ಶ್ರೀ ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದೆ.
#ಹಾಸನ#ಚನ್ನರಾಯಪಟ್ಟಣ
ಮಾಜಿ ಮುಖ್ಯಮಂತ್ರಿಗಳು ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಅತ್ಯಂತ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಯಿತು.
ಅಭಿಮಾನಿಗಳು, ಹಿತೈಷಿಗಳು, ಜಾತ್ಯತೀತ ಜನತಾದಳ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ರಾಜ್ಯದ ಸಮಸ್ತ ಜನತೆಯ ಹಾರೈಕೆ ಹಾಗೂ ಆ ಭಗವಂತನ ದಯೆಯಿಂದ ತಂದೆಯವರು ಆರೋಗ್ಯವಾಗಿದ್ದಾರೆ.
ತಂದೆಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಹರಸಿದ ಪ್ರತಿಯೊಬ್ಬರಿಗೂ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇವೆ.