ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಜಿ. ಎಸ್. ಶಿವರುದ್ರಪ್ಪ
ಅಪ್ಪ ಕಾಲ್ ಮಾಡಿ:
ಲೇ ��ಗ ದುಡ್ಡು ಕೇಳ್ತಿದ್ದಲ್ಲ ಬೇಕಿತ್ತಾ ?
ಮಗ: ಬೇಡ ಅಪ್ಪ ಇದೆ
ಅಪ್ಪ: ಸರಿ ಈ ಶನಿವಾರ ಊರಿಗ್ ಬಂದ್ಬಿಡು.
( ಎಷ್ಟೋ ಬಾರಿ ದುಡ್ಡಿಲ್ಲದೆ ಹಸಿದು ಮಲಗಿದ್ರು.😞 ತನ್ನ ಕಷ್ಟನ ಹೇಳಿಕೊಳ್ಳಲ್ಲ )
😣 ಈ ಕಷ್ಟ ಮಧ್ಯಮವರ್ಗದವರಿಗೆ ಗೊತ್ತಿರುತ್ತೆ. 😣
ಸ್ವಂತ ಲಿಪಿ, ಸ್ವಂತ ಸಂಖ್ಯೆ, ಸ್ವಂತ ವ್ಯಾಕರಣ, ದೊಡ್ಡ ವರ್ಣಮಾಲೆ, ಉಚ್ಚರಿಸುವುದನ್ನೇ ಬರೆಯುವ, ಬರೆದದ್ದನ್ನೇ ಉಚ್ಚರಿಸುವ, ಸಾವಿರಾರು ವರ್ಷಗಳ ಇತಿಹಾಸವಿರುವ, ವಿಶ್ವದ ಏಕೈಕ ಭಾಷೆ ನಮ್ಮ #ಕನ್ನಡ.
❤️💛 ಎಲ್ಲರಿಗೂ #ಕನ್ನಡ_ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️💛
ಕೆ.ಆರ್.ಪುರಂ, ಸರಸ್ವತಿ ಪುರಂ, ಮಲ್ಲೇಶ್ವರಂ, ಶೇಷಾದ್ರಿ ಪುರಂ, ಈ ಥರ ಅನೇಕ ಪ್ರದೇಶಗಳು ನಮ್ಮ ನಗರದಲ್ಲಿ ಇರುವುದನ್ನು ನೋಡಿದ್ದೇವೆ ಇದರ ಬಗ್ಗೆ ಕನ್ನಡಿಗರು ಧ್ವನಿ ಎತ್ತಿ ಮೊದಲಿನಂತೆ ಕೆ.ಆರ್.ಪುರ , ಸರಸ್ವತಿ ಪುರ, ಮಲ್ಲೇಶ್ವರ, ಶೇಷಾದ್ರಿ ಪುರ ಎಂಬ ಹೆಸರುಗಳನ್ನು ಮತ್ತೆ ಬರುವಂತೆ ಇದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕಾಗಿದೆ.