ಒಂದು ಸ್ಟೆಥಸ್ಕೋಪ್... ನೂರಾರು ಹೃದಯಗಳ ಭರವಸೆ.
ಒಂದು ಬಿಳಿ ಕೋಟ್... ಸಾವಿರಾರು ಜೀವಗಳ ವಿಶ್ವಾಸ.
ಒಬ್ಬ ವೈದ್ಯ... ಲಕ್ಷಾಂತರ ಕುಟುಂಬಗಳ ಆಶಾಕಿರಣ.
ವೈದ್ಯಕೀಯ ಸೇವೆಯ ಹಿಂದೆ ನಿದ್ರೆಯಿಲ್ಲದ ರಾತ್ರಿಗಳು, ನಿರಂತರ ಕಲಿಕೆ, ಅಪಾರ ತಾಳ್ಮೆ ಮತ್ತು ಅಳತೆಯಿಲ್ಲದ ಸೇವಾ ಮನೋಭಾವ ಅಡಗಿದೆ. ದೇಶದಾದ್ಯಂತ ಸಮಾಜದ ಸ್ವಾಸ್ಥ್ಯಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ವೈದ್ಯಕೀಯ ಲೋಕದ ಎಲ್ಲಾ ದೇವದೂತರಿಗೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು.
ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯನಿರ್ವಹಿಸುತ್ತಿರುವ 8 ಆರೋಗ್ಯ ಕಾಲೇಜುಗಳು, 3 ಸಂಶೋಧನಾ ಕೇಂದ್ರಗಳು ಹಾಗೂ 10 ಬೋಧಕ ಆಸ್ಪತ್ರೆಗಳ ಮೂಲಕ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ರೋಗಿಗಳಿಗೆ ನಿಸ್ವಾರ್ಥ ಚಿಕಿತ್ಸೆ ನೀಡಿ ಮರುಜೀವ ನೀಡುತ್ತಿರುವ ನಮ್ಮ ವೈದ್ಯ ವೃಂದದ ಸಾಧನೆ ನಮಗೆ ಹೆಮ್ಮೆಯನ್ನು ತಂದಿದೆ. ನಿಮಗೂ ವಿಶೇಷ ಅಭಿನಂದನೆಗಳು.
@mglathamg ಆಹಾರ, ಗಾಳಿ, ನೀರು, ವಾತಾವರಣ, ಮಣ್ಣು, ಗೊಬ್ಬರ, ಬೆಳೆ ಎಲ್ಲವೂ ವಿಷ ಆಗಿ ಹೋಗಿದೆ, ಮನುಷ್ಯ ತಿಂದು ಸಾಯೋದು ಒಂದೇ ಬಾಕಿ ಇರೋದು, ತಪ್ಪಿಸಿ ಕೊಳ್ಳಲು ಸಾಧ್ಯನೇ ಇಲ್ಲ, ಯಾಕಂದ್ರೆ ನಿಯತ್ತು ಸರಿ. ಇಲ್ಲ
ತಾಯ್ನಾಡಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯತಿಥಿಯಂದು ಶತ ನಮನಗಳು.
#RaniLaxmiBai#JhansiRaniLakshmiBai