ಒಂದು ರಾಷ್ಟ್ರೀಯ ಪಕ್ಷಕ್ಕೆ ದುಡಿದು ಆ ಪಕ್ಷವನ್ನು ನಿಮ್ಮ ರಾಜ್ಯದಲ್ಲಿ ಎರಡೆರಡು ಬಾರಿ ಅಧಿಕಾರಕ್ಕೆ ತಂದರೂ ನಿಮ್ಮನ್ನು ಸಭೆ-ಸಮಾರಂಭಗಳಲ್ಲಿ ಎಲ್ಲೋ ಮೂಲೆಯಲ್ಲಿ ಕೂರಿಸುತ್ತಾರೆ.
ಅದೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಒಮ್ಮೆ ಈ ದೆಹಲಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಸಾಕು, ನಿಮಗೆ ದೆಹಲಿಯಲ್ಲೂ ರಾಜಮರ್ಯಾದೆ. ಎಲ್ಲೆಲ್ಲಿಯೂ ಮೊದಲ ಪಂಕ್ತಿ.
ರಾಜಕೀಯ ಎಳಸು ವಿಜಯ್ ಗೂ ಹಾಗೂ ಸುಮಾರು 50 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯನವರಿಗು ನೆನ್ನೆ ದೆಹಲಿಯಲ್ಲಿ ಸಿಕ್ಕ ಮರ್ಯಾದೆಗಳಲ್ಲಿದ್ದ ವ್ಯತ್ಯಾಸ ಕಣ್ಣಿಗೆ ರಾಚುವಂತ್ತಿತ್ತು. ನಮ್ಮ ಕನ್ನಡಿಗರಿಗೆ ಅದು ಯಾವಾಗ ಸ್ವಾಭಿಮಾನ ಬರತ್ತೋ ಆ ಕೂಡಲಸಂಗಮ ದೇವನೇ ಬಲ್ಲ!