ಕರ್ನಾಟಕದಲ್ಲಿ ಮಿತಿಮೀರಿರುವ ಭ್ರಷ್ಟಾಚಾರ, KPSC ನೇಮಕಾತಿ ಅಕ್ರಮಗಳು ಹಾಗೂ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಜನ್-ಝೀ ದನಿ ಎತ್ತದಿರುವುದು ಏಕೆ?
ರಾಜ್ಯದ ಯುವಕರ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಕ್ರೋಚ್ ಪಾರ್ಟಿಯ ಮೌನ ಪ್ರಶ್ನಾರ್ಹ.
KPSC ಪರೀಕ್ಷಾ ಅಕ್ರಮಗಳ ವಿರುದ್ಧ ಯುವಜನತೆ ಸಂಘಟಿತ ಹೋರಾಟ ನಡೆಸಬೇಕು ಎಂದು ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು ಕರೆ ನೀಡಿದ್ದಾರೆ.
#KPSCScam
ಕಾಂಗ್ರೆಸ್ ಸರ್ಕಾರದ ಕಳ್ಳಾಟ ಬಯಲಾಗುವ ಭಯವೇ? KPSC ಹಗರಣದ ಸತ್ಯವನ್ನು ಮುಚ್ಚಿಹಾಕುವ ಷಡ್ಯಂತ್ರ!
ಉಚ್ಚ ನ್ಯಾಯಾಲಯವೇ ರಚಿಸಿರುವ SIT, ನೇರವಾಗಿ ನ್ಯಾಯಾಲಯದ ನಿಗಾ ಹಾಗೂ ಉಸ್ತುವಾರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಸಚಿವ Priyank Kharge ಯವರ ಹಸ್ತಕ್ಷೇಪಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎನ್ನುವುದು ಭ್ರಷ್ಟ Indian National Congress - Karnataka ನಾಯಕರಿಗೆ ಚೆನ್ನಾಗಿ ಗೊತ್ತಿದೆ.
ಒಂದು ವೇಳೆ ತನಿಖೆ ತೀವ್ರಗೊಂಡು “ಸರ್ಕಾರಿ ಹುದ್ದೆಗಳ ಮಾರಾಟ” ಹಗರಣದಲ್ಲಿ ಸರ್ಕಾರದ ಶಾಸಕರು, ಸಚಿವರ ಹೆಸರುಗಳು ಬಯಲಾದರೆ, ಈ SIT ತಂಡದ ಮೇಲೆ ಯಾವುದೇ ರಾಜಕೀಯ ಒತ್ತಡ ಹೇರಲು ಸಾಧ್ಯವಿಲ್ಲ ಎನ್ನುವ ಭಯ DK Shivakumar ಸರ್ಕಾರವನ್ನು ಕಾಡುತ್ತಿದೆ.
ಇದಕ್ಕೆ ಬದಲಾಗಿ, ಪ್ರಕರಣದ ತನಿಖೆ CID ಬಳಿಯೇ ಇದ್ದರೆ, ಸಂಪೂರ್ಣವಾಗಿ ಸರ್ಕಾರದ ಹಿಡಿತದಲ್ಲಿರುತ್ತದೆ ಹಾಗೂ ಬೇಕಾದಂತೆ ಪ್ರಕರಣವನ್ನು ತಿರುಚಬಹುದು, ತಮಗೆ ಬೇಕಾದವರನ್ನು ರಕ್ಷಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು.
ಈಗ ಹೈಕೋರ್ಟ್ ತಾನೇ ಖುದ್ದಾಗಿ SIT ರಚನೆ ಮಾಡಿರುವುದರಿಂದ, ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಆತಂಕದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹೈಕೋರ್ಟ್ ಆದೇಶದ ವಿರುದ್ಧವೇ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸುತ್ತಿರುವುದು ಅತ್ಯಂತ ಹೇಡಿತನ ಮತ್ತು ನಾಚಿಗೇಡಿನ ಸಂಗತಿ.
ಸರ್ಕಾರಿ ಅಧಿಕಾರಿಗಳಿಗೆ ನೀಡುವ ಲಂಚವನ್ನು "ಗೌರವ ಧನ" ಎಂದು ವಿಜೃಂಭಿಸಿದ ಈ ಭ್ರಷ್ಟರ “ಕೈ” ಸರ್ಕಾರದಿಂದ KPSC ಹಗರಣದ ಬಗ್ಗೆ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವೇ ?
ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಶೀಘ್ರದಲ್ಲೇ ಬಯಲಾಗಲಿದೆ.
(ಜೆಡಿಎಸ್ ಖಾತೆಯಿಂದ)
#KPSCScam
#CongressCoverUp #CorruptionFreeKarnataka
ಕೆಪಿಎಸ್ಸಿ ಹಗರಣದ ತನಿಖೆಯನ್ನು ಎಸ್ಐಟಿಯಿಂದ ಸಿಬಿಐಗೆ ವಹಿಸಬೇಕು. ಈ ಪ್ರಕರಣದ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
#ChalavadiNarayanaswamy#KPSCScam#KPSC
ಬಸವರಾಜ್ ಕಣ್ಣಳೆ ಹಾಗೂ ಗಂಗಾವರ ಮೊದಲು ಟಚ್ ಮಾಡಿದ್ದೂ ED ನಂತರ ತಮ್ಮ ಸ್ವಾರ್ಥ ಕ್ಕೆ ಎಲ್ಲ ಮುಚ್ಚಲು CID ತಗೊಂಡು ಬಂದು ನಾಟಕ ಮಾಡ್ತವರೇ!
ಮಾನ ಮರಿಯದೆ ಇದಿಯಾ ?
ಹೆಸಗೆ ಆಗುತ್ತೆ ನಿಮ್ಮನ್ನ ಎಲ್ಲ ವಿಧಾನ ಸೌಧ ಕೂರಿಸಿದ್ದು ನೋಡಿ
The students protesting in Dharwad are not asking for favours. They are demanding justice, transparency and a fair opportunity.
I raised their concerns in the Assembly and stand firmly with their demands:
• Cancel and review all appointments made by the present KPSC body since 2023, wherever the integrity of the selection process is in question
• Take action against every KPSC member found responsible, on the same lines as action taken against the suspended Chairman
• Grant appropriate age relaxation to genuine aspirants who have lost crucial years because of recruitment delays and irregularities
• Allow the SIT to conduct a completely independent, impartial and time bound investigation, bringing every lapse, manipulation and person responsible to light
The Karnataka High Court has itself recognised the gravity of the allegations and has constituted an independent SIT with a 100 day deadline.
Our students have spent years preparing for government examinations. Their hard work, merit and future cannot be sacrificed because of failures within KPSC.
Justice for every genuine aspirant. Accountability for every person responsible.
Hello @alokkumar6994 sir. Since you are incharge of KPSC scam investigation kindly look into CTI SCAM.
Here are the details about the scam. This kinda pattern was visible in PWD and other exams.
People had complained to KPSC secretary in this regards but there was no action taken. Kindly investigate all exams.
Thank you.
SIT ರಚನೆ ಆಗಿದ್ದು ನ್ಯಾಯಾಲಯದಿಂದ. ಹೈಕೋರ್ಟ್ ರಚಿಸಿದ SIT ನೇರ ನ್ಯಾಯಾಲಯದ ನಿಗಾವಣೆಯಲ್ಲಿರಲಿದೆ.
ಇಲ್ಲಿ ಗ್ರಹ ಸಚಿವ ಪ್ರಿಯಾಂಕ್ ಖರ್ಗೆಯ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶ ಇರಲ್ಲ.
ತನಿಖೆಯಲ್ಲಿ ಸರ್ಕಾರದ ಶಾಸಕರು, ಸಚಿವರ ಹೆಸರು ಮುನ್ನೆಲೆಗೆ ಬಂದರೆ SIT ತಂಡದ ಮೇಲೆ ಯಾವುದೇ ಒತ್ತಡ ಹಾಕೋಕೆ ಬರಲ್ಲ.
ಸಿಐಡಿ ತಂಡ ಇದ್ದರೆ ಸಂಪೂರ್ಣ ಸರಕಾರದ ಹತೋಟಿಯಲ್ಲಿರಲಿದೆ.
ಇದೇ ಕಾರಣಕ್ಕೆ ಹೈ ಕೋರ್ಟ್ ನ SIT ತಂಡ ರಚನೆಯ ಕ್ರಮದ ವಿರುದ್ಧ ರಾಜ್ಯ ಸರ್ಕಾರ ಹೈ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿಗೆ ಚಿಂತನೆ ನಡೆಸುತ್ತಿದೆಯೇ?
ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವುದನ್ನೇ ಗೌರವ ಧನ ಎಂದು ವಿಜೃಂಭಿಸಿದ ಭ್ರಷ್ಟ ಸರ್ಕಾರ KPSC ಹಗರಣದ ಕುರಿತು ನ್ಯಾಯಯುತ ತನಿಖೆ ನಡೆಸಲು ಸಾಧ್ಯವೇ?
One of the members of SIT constituted by High Court to investigate #KPSC scams & irregularities has transferred by @INCKarnataka govt.
What r you afraid of @DKShivakumar & @PriyankKharge ?
What a frauds you people are!
What a corrupt & shameless administration you are running!
KPSC ಅಕ್ರಮಗಳ ವಿರುದ್ಧ ಒಂದು ವಾರದಿಂದ ಸತ್ಯಾಗ್ರಹ ಮಾಡುತ್ತಾ, ಮೂರು ದಿನದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟದ ಹೋರಾಟವನ್ನು ಬೆಂಬಲಿಸಿ.
ಅನಿಲ್ ಕಾಂಬ್ಳೆ ಅವರಿಗೆ ಹಾರ ಹಾಕುವ ಮುಖಾಂತರ ಶ್ರೀ ಕೃಷ್ಣಾರೆಡ್ಡಿ ಅವರು ಹೋರಾಟಗಾರರಿಗೆ ಪ್ರೋತ್ಸಾಹ ತುಂಬಿದರು
ಧಾರವಾಡ.
23-09-2026.
#KRSParty#KPSCScam
ನಿಜವಾದ #ಕಳ್ಳರು ಯಾರು ? ?
ಒಂದು ಕಡೆ #KPSC ಮುಚ್ಚಬೇಕು ಅಂತ ಚರ್ಚೆ ಮಾಡ್ತಾರಂತೆ
ಇನ್ನೊಂದು ಕಡೆ ನ್ಯಾಯಾಲಯ #SIT ನೇಮಕ ಮಾಡಿ ಆದೇಶ ಹೊರಡಿಸಿದರೆ ಅದರ ವಿರುದ್ಧ #ಮೇಲ್ಮನವಿಯಂತೆ
ಯಾಕೆ ಈ ಭಯ ತನಿಖಾ ತಂಡದಲ್ಲಿ ನಿಮಗೆ ಬೇಕಾದವರು ಇಲ್ಲಾ ಅಂತಾನಾ?
ಯಾರನ್ನು ರಕ್ಷಣೆ ಮಾಡಬೇಕು ಅಂತ ಇದೀರಿ.
ಇದನ್ನು ನೋಡ್ಕೊಂಡು ಜೀವಂತ ಇಲ್ಲದಂತೆ ಇರುವ #ವಿರೋಧ ಪಕ್ಷ @BJP4Karnataka
KPSC ಅಕ್ರಮಗಳು ನ್ಯಾಯಾಲಯದ ಆದೇಶದಂತೆ #SIT ತನಿಖೆ ಆಗುವವರೆಗೂ ನಿಜವಾದ ದೊಡ್ಡ ದೊಡ್ಡ ಕಳ್ಳರಿಗೆ ಶಿಕ್ಷೆ ಆಗಲ್ಲ.
ಭ್ರಷ್ಟರಿಗೆ ಶಿಕ್ಷೆಯಾಗಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ...
@DKShivakumar@PriyankKharge@RahulGandhi @KSVS @BoseTheHero @Thecharioteer2
@ChekrishnaCk@BelagaviKA@SANDEEPRAI. @vinaygb@bellhampi
ರಾಜ್ಯ @INCKarnataka ಸರ್ಕಾರದ ಎದೆಯಲ್ಲಿ KPSC ಹಗರಣದ ನಡುಕ ಶುರುವಾಗಿದೆ.
ಗೌರವಾನ್ವಿತ ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಕೆಪಿಎಸ್ಸಿ ಹಗರಣದ ತನಿಖೆಗಾಗಿ #SIT ತಂಡಕ್ಕೆ ನೇಮಕಗೊಂಡ ಕೇವಲ 2 ದಿನಗಳಲ್ಲಿಯೇ, ಐಪಿಎಸ್ ಅಧಿಕಾರಿ ಶ್ರೀ ಕುಶಾಲ್ ಚೌಕ್ಸೆ ಅವರನ್ನು ದಿಢೀರನೆ ಚಿತ್ರದುರ್ಗಕ್ಕೆ ಎತ್ತಂಗಡಿ ಮಾಡಿರುವ @DKShivakumar ಸರ್ಕಾರದ ನಡೆ ಹಿಂದಿನ ಮರ್ಮವೇನು? ಡಿಸಿಪಿ (ಆಡಳಿತ) ಹುದ್ದೆಗೆ ಬಂದು ಇನ್ನೂ ಒಂದು ತಿಂಗಳು ಕಳೆಯುವ ಮುನ್ನವೇ ಈ ತರಾತುರಿಯ ವರ್ಗಾವಣೆ ಏಕೆ ಮುಖ್ಯಮಂತ್ರಿಗಳೇ?
ಹೈಕೋರ್ಟ್ ಖುದ್ದಾಗಿ SIT ತಂಡಕ್ಕೆ ಸದಸ್ಯರನ್ನು ನೇಮಿಸಿರುವುದಕ್ಕೆ ತಾವು ನಿನ್ನೆ ವಿರೋಧ ವ್ಯಕ್ತಪಡಿಸಿದಾಗಲೇ ಈ ಅನುಮಾನ ಶುರುವಾಗಿತ್ತು. ಹಗರಣದ ತನಿಖೆ ಚುರುಕುಗೊಂಡರೆ ತಮ್ಮದೇ ನಾಯಕರ ಭ್ರಷ್ಟಾಚಾರ, ಅಧಿಕಾರಿಗಳ ಕರಾಳ ಮುಖವಾಡ ಕಳಚುತ್ತದೆ ಎಂಬ ಭಯ ನಿಮ್ಮ ಸರ್ಕಾರವನ್ನು ಕಾಡುತ್ತಿರುವುದು ಸ್ಪಷ್ಟ.
ಲಕ್ಷಾಂತರ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿ, ಹಗರಣದ ರೂವಾರಿಗಳನ್ನು ರಕ್ಷಿಸಲು ಹೊರಟಿರುವ ನಿಮ್ಮ ಸರ್ಕಾರದ 'ಪಾರದರ್ಶಕತೆ'ಯ ಅಸಲಿ ಮುಖ ಇದೇ ನೋಡಿ! ತನಿಖಾಧಿಕಾರಿಗಳನ್ನು ದೂರದ ಊರುಗಳಿಗೆ ಓಡಿಸಿದ ಮಾತ್ರಕ್ಕೆ ಸತ್ಯವನ್ನು ಸಮಾಧಿ ಮಾಡಲು ಸಾಧ್ಯವಿಲ್ಲ.
#KPSC ಹಗರಣದ ತನಿಖೆ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ಷಡ್ಯಂತ್ರವನ್ನು @JanataDal_S ತೀವ್ರವಾಗಿ ಖಂಡಿಸುತ್ತದೆ. ನಾಡಿನ ಯುವಜನತೆಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
#KPSCScam #CongressCoverUp
ಕೆಪಿಎಸ್ಸಿ ಹಗರಣದ ಕುರಿತು ಹೈಕೋರ್ಟ್ ನೇಮಿಸಿದ ಎಸ್ಐಟಿ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇಕೆ? ಕೆಪಿಎಸ್ಸಿ ವಿಚಾರದಲ್ಲಿ @INCKarnataka ಸರ್ಕಾರವೇ ಕಳ್ಳಾಟವಾಡುತ್ತಿದೆಯೇ?
ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹೊರಬರಬಾರದು ಎನ್ನುವ ಏಕೈಕ ಉದ್ದೇಶದಿಂದ @DKShivakumar ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಹತ್ತಲು ಸಜ್ಜಾಗಿದೆ.
ಒಂದು ವೇಳೆ ಕಾಂಗ್ರೆಸ್ ನಾಯಕರು, ಸಚಿವರು ತಪ್ಪು ಮಾಡಿರದಿದ್ದರೆ, ಹೈಕೋರ್ಟ್ ಎಸ್ಐಟಿ ಕುರಿತು ನಿಮಗೆ ಭಯವೇಕೆ? ಕಾನೂನಿನ ಕಣ್ಣಿನಿಂದ ಯಾವ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?
ಪ್ರಾಮಾಣಿಕ ವಿದ್ಯಾರ್ಥಿಗಳ, ಅಭ್ಯರ್ಥಿಗಳ ಭವಿಷ್ಯವನ್ನು ಬಲಿಕೊಟ್ಟು, ಲಂಚಾವತಾರಕ್ಕೆ ನೆರವಾದವರನ್ನು ರಕ್ಷಿಸುವ ಏಕೈಕ ದುರುದ್ದೇಶ ರಾಜ್ಯ ಸರ್ಕಾರದ ಮುಂದಿರುವುದು. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯವನ್ನು ಎದುರಿಸುವ ತಾಕತ್ತಿದ್ದರೆ, ಹೈಕೋರ್ಟ್ ಎಸ್ಐಟಿಗೆ ಸಹಕಾರ ನೀಡಲಿ. ಇಲ್ಲವಾದರೆ ಭ್ರಷ್ಟಾಚಾರದಲ್ಲಿ ಸರ್ಕಾರದ ಬಹುದೊಡ್ಡ ಪಾಲಿದೆ ಎಂದು ರಾಜ್ಯದ ಜನರು ತಿಳಿಯಲಿದ್ದಾರೆ.
ಕರ್ನಾಟಕ ಲೋ(ಪ)ಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, cash-for-job ಹಗರಣದ ತನಿಖೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು SIT ಗೆ ನೀಡಿತ್ತು. SIT ಯನ್ನು ದಕ್ಷ IPS ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಪಶುವೈದ್ಯ ಅಧಿಕಾರಿಗಳ ನೇಮಾಕಾತಿಯಲ್ಲದೆ ಆಯೋಗದಲ್ಲಿ ನಡೆದಿದೆ ಎನ್ನಲಾಗುವ ಎಲ್ಲ ಹಗರಣಗಳು SIT ವ್ಯಾಪ್ತಿಗೆ ಬರುತ್ತದೆ ಎಂದು ಮಾನ್ಯ ನ್ಯಾಯಾಲಯ ತೀರ್ಪಿನಲ್ಲಿ ಹೇಳಿತ್ತು. ತೀರ್ಪು ಪ್ರಕಟವಾದ ಕೂಡಲೇ ಕೆಲವರಿಗೆ ನಡುಕ ಶುರುವಾಗಿದೆ. ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ತಮ್ಮ 'ಬಿಡುವಿಲ್ಲದ' ಕೆಲಸದ ಮಧ್ಯೆಯೂ SIT ಯಲ್ಲಿ ನೇಮಕ ಗೊಂಡಿದ್ದ IPS ಕುಶಾಲ್ ಚೋಕ್ಸೆ ಯನ್ನು ವರ್ಗಾವಣೆ ಮಾಡುತ್ತೀರಿ. ಇದರ timing ಅನುಮಾನಾಸ್ಪದ ಅಲ್ಲವೇ. SIT ಸದ್ಯಸರಾಗಿದ್ದವರನ್ನೇ ವರ್ಗ ಮಾಡುವ ತುರ್ತು ಏನಿತ್ತು ಮುಖ್ಯ ಮಂತ್ರಿಗಳೇ ? ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ನೇಮಕಕ್ಕೆ SIT ಯಲ್ಲಿದ್ದ ಅಧಿಕಾರಿಗಳು ಬಿಟ್ಟರೆ, ಬೇರೆ ಯಾರೂ ಸಿಗಲಿಲ್ಲವೇ ?
ಸ್ವಾಮೀ ಮುಖ್ಯ ಮಂತ್ರಿಗಳೇ ರಾಜ್ಯ ಬರ ಎದುರಿಸುತ್ತಿದೆ, ಅದನ್ನು ನಿರ್ವಹಿಸಲು ಕೆಲಸ ಮಾಡಿ. ಮೂಲಭೂತ ಸೌಕರ್ಯ ಅಭಿವೃದ್ಧಿ, ನೀರಾವರಿ, ಮಹಿಳಾ ಸಬಲೀಕರಣ ಸೇರಿದಂತೆ ಇನ್ನಷ್ಟು ಆದ್ಯತಾ ವಲಯಗಳಿವೆ ಅಲ್ಲಿ ನಿಮ್ಮ ಸಮಯವನ್ನು, ನಿಮ್ಮ ಅಧಿಕಾರಿಗಳ ಸಮಯವನ್ನು ವ್ಯಯಿಸಿ. ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಯಾರಿಗೆ ಸಮಸ್ಯೆಯಾಗಿದೆ ? ನಡುಕ ಯಾರಿಗೆ ಉಂಟಾಗಿದೆ ? ಅದರಲ್ಲೂ SIT ವ್ಯಾಪ್ತಿ ಕೇವಲ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸೀಮಿತವಲ್ಲ ಅಂದ ಮೇಲೆ ಕೆಲ 'ರಾಜಕೀಯ ಗಣ್ಯರ' ರಕ್ತದೊತ್ತಡ ಹೆಚ್ಚಾಗಿದೆ, ರಾತ್ರೋ ರಾತ್ರಿ ವಿಷಮಶೀತ ಜ್ವರ ಬಂದಿದೆ. ಸಾವಿರಾರು ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದ ಆಯೋಗದ ಭ್ರಷ್ಟರನ್ನು SIT ತನಿಖೆಗೆ ಒಳಪಡಿಸಲಿ. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಲಿ.
ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗವುದು 'ಆಡಳಿತಾತ್ಮಕ ನಡೆಯಲ್ಲ' ಬದಲಾಗಿ ಪರೀಕ್ಷಾರ್ಥಿಗಳ ವಿರೋಧಿ ನಡೆ. ನಿಮ್ಮ ಸರ್ಕಾರ ದಲ್ಲಾಳಿಗಳ ಪರ, ಭ್ರಷ್ಟರ ಪರ ಇದೆಯೋ ಪರೀಕ್ಷಾರ್ಥಿಗಳ ಪರ ಇದೆಯೋ ಎಂದು ಹೇಳಿ. ಲೋ(ಪ)ಕ ಸೇವಾ ಆಯೋಗದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು SIT ಯೇ ತನಿಖೆ ಮಾಡಲಿ.
ನಮ್ಮ ನಾಡಿನ ಯುವ ಪೀಳಿಗೆ ಬಗ್ಗೆ ಕಿಂಚಿತ್ತಾದರೂ ನಿಮಗೆ ಚಿಂತನೆ, ಕಾಳಜಿಯಿದ್ದಲ್ಲಿ SIT ಇಂದಲೇ ತನಿಖೆಯಾಗಲಿ. ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದವರು ಕೃಷ್ಣ ಪರಮಾತ್ಮನ ಜನ್ಮ ಸ್ಥಳದಲ್ಲಿ ಕಾಯಂ ಆಗಿ ನೆಲಸಲಿ. ದೇಶದ ಭವಿಷ್ಯವಾದ ಯುವ ಸಮೂಹಕ್ಕೆ ನ್ಯಾಯ ಸಿಗಲಿ.
@AKSSAofficial I @CMofKarnataka I @tv9kannada I
ಧಾರವಾಡದಲ್ಲಿ KPSC ಅಭ್ಯರ್ಥಿಗಳು ಕಳೆದ 3 ದಿನಗಳಿಂದ ನಡೆಸುತ್ತಿರುವ ಹೋರಾಟ ಹಾಗೂ ಶ್ರೀ ಅನಿಲ್ ಕಾಂಬಳೆ ಅವರ ಆಮರಣಾಂತ ಉಪವಾಸ ಸತ್ಯಾಗ್ರಹ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಿರಂತರ ಉಪವಾಸದಿಂದ ಅನಿಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ರಾಜ್ಯ @INCKarnataka ಸರ್ಕಾರ ಕಣ್ಣಿದ್ದು ಕುರುಡಾಗಿದೆ.
384 KAS ಹುದ್ದೆಗಳು ಹಾಗೂ PDO ಪರೀಕ್ಷೆಗಳಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಮತ್ತು ಅಕ್ರಮಗಳ ಬಗ್ಗೆ KPSC ಅಭ್ಯರ್ಥಿಗಳು ಸಿಬಿಐ (CBI) ತನಿಖೆಗೆ ಆಗ್ರಹಿಸುತ್ತಿದ್ದಾರೆ. ಲಕ್ಷಾಂತರ ಬಡ, ಶ್ರಮಜೀವಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಭ್ರಷ್ಟ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು CBIಗೆ ಒಪ್ಪಿಸಬೇಕು.
ನಾವೆಲ್ಲರೂ KPSC ಹೋರಾಟಗಾರರ ಪರವಾಗಿದ್ದೇವೆ. ಅಭ್ಯರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ!