ನಮ್ಮ ಸರ್ಕಾರವು ಉತ್ತಮ ಸಾಧನೆ ಮಾಡುತ್ತಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಕಾಲಕಾಲಕ್ಕೆ ಅಗತ್ಯ ಸಹಕಾರ ನೀಡಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಪೂರಕ ವಾತಾವರಣವನ್ನು ಕಲ್ಪಿಸುತ್ತಾ ಬಂದಿದೆ.
ರಾಜ್ಯದ ಪ್ರತಿ ಕ್ರೀಡಾಪಟುಗಳ ಬೆಳವಣಿಗೆಗೆ ಅಗತ್ಯ ನೆರವು ಒದಗಿಸುತ್ತಾ, ಮಹತ್ತರ ಸಾಧನೆಗೆ ಅಣಿಯಾಗಲು ಯುವಶಕ್ತಿಯನ್ನು ಹುರಿದುಂಬಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾಜ್ಯದಲ್ಲಿ ಮೇಕೆದಾಟು ಜಲಾಶಯದ ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ನೆರೆಯ ರಾಜ್ಯಗಳ ಸಮ್ಮತಿ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ. ಇದರಿಂದಾಗಿ ಕನ್ನಡಿಗರ ದಶಕಗಳ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು, ಮೇಕೆದಾಟು ಜಲಾಶಯವನ್ನು ಕಟ್ಟುವ ಪಣ ತೊಟ್ಟಿದ್ದ ನಮ್ಮ ಸರ್ಕಾರದ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೇಕೆದಾಟು ಯೋಜನೆಯ ಪರಿಷ್ಕೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆವು. ಕೇಂದ್ರದ ತಾಂತ್ರಿಕ ಅನುಮತಿಯ ನಿರೀಕ್ಷೆಯಲ್ಲಿದ್ದ ನಮಗೆ ಜಲಶಕ್ತಿ ಖಾತೆ ಸಚಿವರು ಸಂಸತ್ ಕಲಾಪದಲ್ಲಿ ನೀಡಿರುವ ಉತ್ತರ ಸಂತಸ ತಂದಿದೆ.
ರಾಜ್ಯದ ಈ ಪ್ರಮುಖ ಕುಡಿಯುವ ನೀರಿನ ಯೋಜನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಈ ಯೋಜನೆಯಿಂದಾಗಿ ಪಕ್ಕದ ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳ ಜನಜೀವನಕ್ಕೂ ಅನುಕೂಲವಾಗಲಿದೆ.
ಕೇಂದ್ರದಿಂದ ತಾಂತ್ರಿಕ ಅನುಮತಿ ದೊರೆಯುತ್ತಲೇ ನೆರೆಹೊರೆಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ಸರ್ಕಾರ ಅಣಿಯಾಗಲಿದೆ. ಆ ಮೂಲಕ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ದೃಢ ಸಂಕಲ್ಪ ನಮ್ಮದು.
ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರು ಪಕ್ಷಬೇಧಗಳನ್ನು ಮರೆತು ನಾಡಿನ ಹಿತದೃಷ್ಟಿಯಿಂದ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿ ಎತ್ತಬೇಕು, ಅನುದಾನ ಹಂಚಿಕೆ ಹಾಗೂ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡುವಂತೆ ಒತ್ತಾಯಿಸಬೇಕೆಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೆ ಮನವಿ ಮಾಡಿದ್ದೇನೆ.
ಸೋಮವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಜನಪ್ರತಿನಿಧಿಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ 40 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸಂಸದರು ಶ್ರಮಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು ಬರ ಘೋಷಿಸಲು ನಿಯಮಗಳನ್ನು ಸಡಿಲಿಸಿ ಅಗತ್ಯ ನೆರವು ಒದಗಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದೇವೆ. ಇದಕ್ಕೆ ರಾಜ್ಯದ ಸಂಸದರು ಕೂಡ ದನಿಗೂಡಿಸಬೇಕು ಎಂದು ಒತ್ತಾಯಿಸಿದೆ.
NO ADULTERATION,
STRAIGHT FROM THE ❤️
There are some sensible ppl who have kept this Protest Alive & Meaningful.
This 5 minutes video will change your life, the way you think, your perspective towards Young India ,
"When I woke up in my hut this morning and checked my phone, it felt as though this govt had resorted to complete authoritarianism." as he spoke Honesty n Sincerity reflected on his face."
"In a democratic System, Not Arrogance but Dialogue must be the way, whose doors open on both the Sides, like UPA did with Anna, Indira ji did with Sonam's Father & Britishers did with Mahatma."
"There is a word in the Constitutional Oath "Garima (Self-respect), One's Dignity, Dignity, A person's dignity should not be compromised Sir." he was filled with Anguish.
"What were they asking for, 200 yards of flat in Lutyens Delhi ? An MP seat or a Ministry in Modi's Cabinet..? They're just asking for accountability, asking to Fix the crumbling education system, with responsibility." his voice trembles as he spoke.
-----------------------------------
I was completely shattered while writing this, listening to him tears flow from my eyes as I write this with a heavy heart.
-----------------------------------
"In a democracy, holding a dissenting view is not a crime; it is a fundamental right granted to us by the Indian Constitution."
स्वप्न झरे फूल-से,
मीत चुभे शूल-से,
लुट गये सिंगार सभी बाग़ के बबूल से,
और हम खड़े-खड़े बहार देखते रहे।
कारवाँ गुज़र गया, गुबार देखते रहे!
नींद भी खुली न थी कि हाय धूप ढल गई,
पाँव जब तलक उठे कि ज़िन्दगी फिसल गई,
पात-पात झर गये कि शाख़-शाख़ जल गई,
चाह तो निकल सकी न, पर उमर निकल गई,
— नीरज
If this student's story fails to touch you, fails to shake you to your very core, then something is missing within you; something inside you has died: your humanity, your conscience.
ರಾಜ್ಯದ ಜನರು ಅಗತ್ಯ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಮತ್ತು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಎಸ್ಐಆರ್ ಪ್ರಕ್ರಿಯೆಗೆ ಜನರು ಅಗತ್ಯ ದಾಖಲೆಗಳನ್ನು ಒದಗಿಸಲು ನೆರವಾಗುವ ದೃಷ್ಟಿಯಿಂದ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಮತ್ತು ಶಾಶ್ವತ ನಿವಾಸಿ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸರ್ಕಾರವೇ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವುದರಿಂದ ಜನರಿಗೆ ಖರ್ಚಿಲ್ಲದೆ ಸುಲಭವಾಗಿ ಅಗತ್ಯ ದಾಖಲೆಗಳು ದೊರೆಯುವ ಜೊತೆಗೆ ತಾವು ಕರ್ನಾಟಕದ ಮೂಲ ನಿವಾಸಿಗಳೆಂದು ಸಾಬೀತು ಪಡಿಸಲು ಸಹಕಾರಿಯಾಗಲಿದೆ. ಕರ್ನಾಟಕದಲ್ಲಿ ಹೊರಗಿನವರು ನೆಲೆಸಿದ್ದಲ್ಲಿ ಈ ಪ್ರಕ್ರಿಯೆಯಿಂದ ಅವರ ಬಗ್ಗೆ ಮಾಹಿತಿಯೂ ಲಭ್ಯವಾಗುತ್ತದೆ. ದಾಖಲೆಗಳನ್ನು ಪಡೆಯಲು ವಿಧಿಸಿರುವ ಮಾನದಂಡಗಳಿಗೆ ಒಳಪಡದೇ ಇರುವವರು ರಾಜ್ಯ ಸರ್ಕಾರದ ಯೋಜನೆಗಳಿಂದಲೂ ಹೊರಗುಳಿಯುತ್ತಾರೆ.
ಜವಾಬ್ದಾರಿಯುತ ಸರ್ಕಾರವಾಗಿ ನಮ್ಮ ಜನರ ಹಿತ ಕಾಯುವ ಹೊಣೆಗಾರಿಕೆಯನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದೇವೆ ಎಂಬ ಸಾರ್ಥಕತೆ ನಮಗಿದೆ.
ನೊಂದ ಜನರ ಕಷ್ಟಕಾಲದಲ್ಲಿ ಅವರ ಜೊತೆ ನಿಲ್ಲುವುದು ಜನರಿಂದ ಆಯ್ಕೆಯಾದ ಸರ್ಕಾರವೊಂದರ ಕರ್ತವ್ಯ. 59 ಕುರಿಗಳ ಆಕಸ್ಮಿಕ ಸಾವಿನಿಂದ ಕಂಗೆಟ್ಟಿದ್ದ ಬಡ ರೈತ ಕುಟುಂಬಕ್ಕೆ ಕೇವಲ 24 ಗಂಟೆಗಳ ಒಳಗೆ ಪರಿಹಾರದ ಹಣ ತಲುಪಿಸಿ, ಆ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದೇವೆ.
“ಮಾನವೀಯ ಕಾಳಜಿಯ ಜೊತೆಗೆ ತುರ್ತು ಸ್ಪಂದನೆ” – ಇದು ನಮ್ಮ ಆಡಳಿತ ಮಾದರಿ
Inspected the ongoing construction of the Yettinahole Project to review its progress.
Directed officials to expedite the balance works on priority.
This vital project will solve the drinking water crisis for over 75 lakh people across Kolar, Chikkaballapur, Tumakuru, Bengaluru Rural, Ramanagara, Hassan, and Chikkamagaluru districts.
Our Government is committed to fill 527 minor irrigation tanks and lakes to recharge critically low groundwater levels and to deliver water to the drought-prone regions at the earliest.
#RamalingaReddy #YettinaholeProject #WaterSecurity #KarnatakaProgress #Congress #AICC #KPCC #DKShivakumar #Siddaramaiah
ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ನಮ್ಮ ಸರ್ಕಾರವು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೂಡ ಉದ್ಯೋಗ ಸೃಷ್ಟಿಗೆ ಗಮನ ಹರಿಸಿದೆ.
ನಾಡಿನ ಯುವ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ, ಕೌಶಲ್ಯ ತರಬೇತಿ, ಅರ್ಹತೆಗೆ ತಕ್ಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಮ್ಮ ಪ್ರಯತ್ನದ ಫಲವನ್ನು ಪ್ರತಿ ಕನ್ನಡಿಗನ ಬದುಕಿನಲ್ಲಿ ಕಾಣಬಹುದಾಗಿದೆ. ಕರ್ನಾಟಕ ಇಂದು ದೇಶದ ತಲಾದಾಯದಲ್ಲಿ ನಂಬರ್ ಒನ್ ಸ್ಥಾನಕ್ಕೇರಿರುವುದರ ಹಿಂದೆ ನಮ್ಮ ಸರ್ಕಾರದ ಸಂಕಲ್ಪ ಮತ್ತು ರಾಜ್ಯದ ಜನರ ಪರಿಶ್ರಮವಿದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯವನ್ನು ಬಂಡವಾಳ ಹೂಡಿಕೆಯ ಪ್ರಶಸ್ತ ತಾಣವಾಗಿಸಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ ಎನ್ನುವುದನ್ನು ವಿನಮ್ರವಾಗಿ ತಿಳಿಸಬಯಸುತ್ತೇವೆ.
#3YearsOfNavaKarnataka #NavaKarnataka
ಸ್ವಾಮಿ ವಿವೇಕಾನಂದರು ಯುವ ಸಮುದಾಯವನ್ನು ರಾಷ್ಟ್ರದ ಬೆನ್ನೆಲುಬು ಮತ್ತು ಭವಿಷ್ಯದ ಆಶಾಕಿರಣವೆಂದು ನಂಬಿದ್ದರು. ದೇಶದ ಪ್ರಗತಿಗೆ ಚಾರಿತ್ರ್ಯವಂತ, ದೇಶಭಕ್ತಿಯುಳ್ಳ ಹಾಗೂ ನಿಸ್ವಾರ್ಥ ನಾಯಕರ ಅಗತ್ಯವಿದೆ ಎನ್ನುವುದು ಅವರ ವಿಚಾರವಾಗಿತ್ತು. ಅವರ ಮಾತುಗಳ ಮಹತ್ವವನ್ನು ನಾವು ಅರಿತಿದ್ದೇವೆ.
ಜಗತ್ತಿನಲ್ಲೇ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ ದೇಶವಾಗಿರುವ ಭಾರತದಲ್ಲಿ ಯುವ ಸಮೂಹದ್ದೇ ಸಿಂಹಪಾಲು. ಇಂತಹ ಯುವ ಜನರಿಗೆ ಶಿಕ್ಷಣ, ಕೌಶಲ್ಯ, ಉದ್ಯೋಗ, ಆರ್ಥಿಕ ಭದ್ರತೆಯನ್ನು ಒದಗಿಸಿ, ದೇಶದ ಆಸ್ತಿಯಾಗಿ ರೂಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಕಳೆದು ಮೂರು ವರ್ಷಗಳಿಂದ ನಮ್ಮ ಸರ್ಕಾರ ಮಾಡುತ್ತಾ ಬಂದಿದೆ.
ಅತಿ ವೇಗದಲ್ಲಿ ಬೆಳೆಯುತ್ತಿರುವ - ಬದಲಾಗುತ್ತಿರುವ ಇಂದಿನ ಆಧುನಿಕ ಯುಗ, ತಂತ್ರಜ್ಞಾನ ಕ್ಷೇತ್ರ ಹಾಗೂ ಔದ್ಯೋಗಿಕ ವಲಯಕ್ಕೆ ಒಗ್ಗುವ ಕೌಶಲ್ಯಯುತ ಯುವಜನರ ಮೂಲಕ ನವಕರ್ನಾಟಕ ಕಟ್ಟಿದ್ದೇವೆ ಎನ್ನುವ ಹೆಮ್ಮೆ ನಮ್ಮದು.
#3YearsOfNavaKarnataka #NavaKarnataka
ಭಾರತದಲ್ಲಿ ಕೃಷಿ ಒಂದು ಅನಿಶ್ಚಿತ ಕಸುಬು. ಬರ, ಪ್ರವಾಹ, ಸಾಂಕ್ರಾಮಿಕ ರೋಗಗಳು ಇನ್ನು ಮುಂತಾದ ಕಾರಣಗಳಿಂದಾಗಿ ದೇಶದ ರೈತರು ನಿರಂತರ ಸವಾಲುಗಳನ್ನು ಎದುರಿಸುವಂತಾಗಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಕೈಗೊಂಡ ರೈತಪರವಾದ ಕಾರ್ಯಕ್ರಮಗಳು ಹಾಗೂ ನಿಲುವುಗಳಿಂದಾಗಿ ಕರ್ನಾಟಕದಲ್ಲಿ ಕೃಷಿ ಹಾಗೂ ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಲಾಭದಾಯಕ ವೃತ್ತಿಯಾಗಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಕೃಷಿ, ತೋಟಗಾರಿಕೆ, ಹೈನುಗಾರಿಗೆ, ರೇಷ್ಮೆ, ಮೀನುಗಾರಿಗೆ ಹೀಗೆ ಕೃಷಿಗೆ ಪೂರಕವಾಗಿರುವ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಶ್ರಮಿಕ ಜನರ ಸಮಗ್ರ ಕಲ್ಯಾಣದ ಪಣ ನಮ್ಮದಾಗಿದೆ.
ಅನ್ನದಾತರು ದೇಶದ ಬೆನ್ನೆಲುಬು ಮಾತ್ರವಲ್ಲ, ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಕೇಂದ್ರಬಿಂದುವೂ ಆಗಿದ್ದಾರೆ.
#3YearsOfNavaKarnataka #NavaKarnataka
ಸುಸ್ಥಿರ ಕರ್ನಾಟಕ, ಸಮೃದ್ದ ರಾಯಚೂರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ, ಸ್ಥಳೀಯವಾಗಿ ನೀರಿನ ಭದ್ರತೆ ಒದಗಿಸಿ ಸಮೃದ್ದ ಕರ್ನಾಟಕ ನಿರ್ಮಿಸುವ ಸದ್ದುದ್ದೇಶದಿಂದ ನಮ್ಮ ರಾಯಚೂರು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೈತರಿಗೆ, ಜನರಿಗೆ ಕುಡಿಯುವ ನೀರಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ.
✅ 5 ಕೋಟಿ ರೂ.ವೆಚ್ಚದಲ್ಲಿ ಕುರುಬದೊಡ್ಡಿ ಕೆರೆ ಅಭಿವೃದ್ಧಿ ಗೊಳಿಸಿ, ಕೆರೆಯ ವಿಸ್ತೀರ್ಣ ಹೆಚ್ಚಿಸಿರುವುದರಿಂದ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಿದೆ.
✅ಇದರಿಂದ, ಅಂತರ್ಜಲ ವೃದ್ಧಿಯಾಗಿರುವುದರ ಜೊತೆಗೆ ಕುರುಬದೊಡ್ಡಿ ಸುತ್ತಮುತ್ತಲ ಬೋರ್ ವೆಲ್ ಗಳಿಗೆ ಮರುಜೀವ ಬಂದಿರುವುದರಿಂದ ರೈತರು ವಾರ್ಷಿಕವಾಗಿ 2 ಬೆಳೆ ತೆಗೆಯುತ್ತಿದ್ದಾರೆ.
✅ಕುರುಬದೊಡ್ಡಿ ಕೆರೆ ಅಭಿವೃದ್ಧಿಯಿಂದಾಗಿ ಬಿರು ಬೇಸಿಗೆಯಲ್ಲೂ 81 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆತಿದೆ.
#Raichur #kurubadoddikere @siddaramaiah@DKShivakumar@KarnatakaVarthe
ಸುಸ್ಥಿರ ಕರ್ನಾಟಕ, ಸಮೃದ್ದ ಕಲಬುರಗಿ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ, ಸ್ಥಳೀಯವಾಗಿ ನೀರಿನ ಭದ್ರತೆ ಒದಗಿಸಿ ಸಮೃದ್ದ ಕರ್ನಾಟಕ ನಿರ್ಮಿಸುವ ಸದ್ದುದ್ದೇಶದಿಂದ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೈತರಿಗೆ, ಜನರಿಗೆ ಕುಡಿಯುವ ನೀರಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ,
✅ಬೆಣ್ಣೆ ತೊರೆಯ ಹೆಚ್ಚುವರಿ ನೀರನ್ನು ಏತನೀರಾವರಿ ಯೋಜನೆ ಮೂಲಕ
ಕಲಬುರಗಿ ಗ್ರಾಮಾಂತರದ 2, ಕಲಬುರಗಿ ದಕ್ಷಿಣ ಭಾಗದ 6 ಕೆರೆಗಳಿಗೆ ತುಂಬಿಸುವ ಕಾರ್ಯ ಜಾರಿಯಲ್ಲಿದೆ.
✅ಈ ಏತನೀರಾವರಿ ಯೋಜನೆಯಿಂದಾಗಿ ಕೆರೆಗಳು ಭರ್ತಿಯಾಗುವುದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
✅ ಈ ಯೋಜನೆ ಸುಮಾರು 200 ಹೆಕ್ಟೇರ್ ಪ್ರದೇಶಕ್ಕೆ ಬೇಸಿಗೆಯಲ್ಲೂ ನೀರಿನ ಭದ್ರತೆ ಒದಗಿಸುವ ಜೊತೆಗೆ ಕಲಬುರಗಿ ನಗರ ಹಾಗೂ ಕೆಲ ಹಳ್ಳಿಗಳಿಗೆ ಕುಡಿಯುವ ನೀರಿನ ಅವಶ್ಯಕತೆಯನ್ನು ನೀಗಿಸುವಲ್ಲಿ ಸಹಕಾರಿಯಾಗಿದೆ.
@siddaramaiah@DKShivakumar@PriyankKharge@KarnatakaVarthe
#Kalburgi
ಸುಸ್ಥಿರ ಕರ್ನಾಟಕ, ಸಮೃದ್ದ ಶಿವಮೊಗ್ಗ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ, ಸ್ಥಳೀಯವಾಗಿ ನೀರಿನ ಭದ್ರತೆ ಒದಗಿಸಿ ಸಮೃದ್ದ ಕರ್ನಾಟಕ ನಿರ್ಮಿಸುವ ಸದ್ದುದ್ದೇಶದಿಂದ ನಮ್ಮ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೈತರಿಗೆ, ಜನರಿಗೆ ಕುಡಿಯುವ ನೀರಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ.
✅ 9 ಕೋಟಿ 96 ಲಕ್ಷ ರೂ.ವೆಚ್ಚದಲ್ಲಿ, 326ಮೀಟರ್ ಉದ್ದ, 10 ಮೀಟರ್ ಎತ್ತರದ ಮತ್ತೂರು ತಡೆಗೋಡೆಯನ್ನು ನಿರ್ಮಿಸಲಾಗಿದೆ.
✅ಇದರಿಂದ, ಮಳೆಗಾಲದಲ್ಲಿ ತುಂಗಾನದಿಗೆ ಹೊಂದಿಕೊಂಡಿರುವ ಶಿವಮೊಗ್ಗ ನಗರದ ಕೆಲ ಜನವಸತಿ ಪ್ರದೇಶಗಳ 100ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರವಾಹ ಪರಿಸ್ಥಿತಿಯಿಂದ ಮನೆಗಳಿಗೆ ನೀರು ನುಗ್ಗಿ ಉಂಟಾಗುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ, ಇಲ್ಲಿನ ಜನರು ಇಂದು ನೆಮ್ಮದಿಯಾಗಿದ್ದಾರೆ.
#Shivamogga
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯುವ ಶಿವಮೊಗ್ಗ ವಿಭಾಗದಲ್ಲಿ ಬ್ರಿಜ್ ಕಂ ಬ್ಯಾರೇಜ್, ಚೆಕ್ ಡ್ಯಾಂ ನಿರ್ಮಾಣದಂಥ ಅಂತರ್ಜಲ ವೃದ್ಧಿಸುವ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ.
ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಿರುವ ತುಂಗಾನದಿಗೆ ಅಡ್ಡಲಾಗಿ 2 ಕೋಟಿ. 75 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿ, ನಗರದ ಪ್ರತಿ ಕುಟುಂಬಕ್ಕೆ ಕುಡಿಯುವ ನೀರಿನ್ನು ಒದಗಿಸಿದೆ. 5 ಕೋಟಿ ವೆಚ್ಚದಲ್ಲಿ ಅಗಸನ ಹೊಳೆ ಬ್ರಿಜ್ ಕಂ ಚೆಕ್ ಡ್ಯಾಂ ನಿರ್ಮಾಣದಿಂದ ಏಸೂರು- ಸಾಲೂರು ನುಡುವಿನ 10 ಕಿ.ಮೀ ಅಂತರವು 3 ಕಿ.ಮೀಗೆ ಇಳಿದಿದೆ. ಹೀಗೆ, ಸುಸ್ಥಿರ, ಸುಭದ್ರ ಕರ್ನಾಟಕಕ್ಕೆ ನಮ್ಮ ಇಲಾಖೆ ಅಡಿಪಾಯ ಹಾಕುತ್ತಿದೆ.
#Shivamogga
ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕವನ್ನು ಜಲಸುಸ್ಥಿರ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಂತೂ ಏತನೀರಾವರಿಗಳ ಮೂಲಕ ಕೆರೆ-ಕಟ್ಟೆಗಳಿಗೆ ಮರುಜೀವ, ಚೆಕ್ ಡ್ಯಾ, ಬ್ರಿಡ್ಜ್ ಕಂ ಬ್ಯಾರೇಜ್ ಗಳ ನಿರ್ಮಾಣದ ಮೂಲಕ ಅಂತರ್ಜಲ ವೃದ್ಧಿಗೊಳಿಸಿ, ನಾಡಿನ ಅಭಿವೃದ್ಧಿ ಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಹತ್ತಿಯ ಬಟ್ಟಲು ರಾಯಚೂರು, ಭತ್ತದ ಕಣಜ ಕೊಪ್ಪಳದಲ್ಲಿ ನಮ್ಮ ಇಲಾಖೆಯ ನೀರಾವರಿ ಸಾಧನೆಗಳ ಕಿರುನೋಟ ಇಲ್ಲಿದೆ.
#Raichur #Koppal #KalyanaKarnataka
@CMofKarnataka@siddaramaiah@DKShivakumar
ಆರೋಗ್ಯ, ಕೃಷಿಯಂಥ ಮೂಲಭೂತ ಕ್ಷೇತ್ರಗಳ ಸಮಸ್ಯೆಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಗ್ರಹಿಸಿ, ಅಧ್ಯಯನ ನಡೆಸಿ ವಿಜ್ಞಾನ-ತಂತ್ರಜ್ಞಾನದ ಮೂಲಕ ಪರಿಹಾರ ಒದಗಿಸುತ್ತಿರುವ, ಸ್ವಾಯುತ್ಥ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿರುವ ನಮ್ಮ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗೆ ಈಗ ಸುವರ್ಣ ಸಂಭ್ರಮ.
1975 ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಆರಂಭವಾದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಜ್ಯದ ಜನರಲ್ಲಿ ವೈಜ್ಞಾನಿಕತೆಯ ಅರಿವು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಒಲವು ಹಾಗೂ ವಿಜ್ಞಾನ- ತಂತ್ರಜ್ಞಾನವನ್ನು ಜನರ ಬದುಕಿಗೆ ಜೋಡಿಸುವ ಮೂಲಕ, ವೈಜ್ಞಾನಿಕ ಕ್ರಾಂತಿಯನ್ನೇ ಮಾಡಿ, ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ರಾಜ್ಯದ ಉದ್ದಗಲಕ್ಕೂ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮಂಡಳಿಯು, ತನ್ನ ವೈಜ್ಞಾನಿಕ ಚಟುವಟಿಕೆಗಳ ಮೂಲಕ, ವಿವಿಧ ಇಲಾಖೆಗಳ ಸಂಪನ್ಮೂಲಗಳ ಸಮನ್ವಯ, ಜನರ ಜೀವನ ಮಟ್ಟ ಸುಧಾರಣೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವಲ್ಲಿ ಹೊಸ ಭಾಷ್ಯ ಬರೆದಿದೆ.
50ರ ಸಂಭ್ರಮದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮಾಡಿರುವ ಅಪರಿಮಿತ ಸಾಧನೆ, ನೆಟ್ಟ ಮೈಲುಗಲ್ಲುಗಳ ಸಂಪೂರ್ಣ ವಿವರ ಈ ವೀಡಿಯೋದಲ್ಲಿದೆ.
#Science #KSCST
@KarnatakaVarthe@DSTKarnataka@KstepsMd
💧ಸುಸ್ತಿರ ಕಲಬುರಗಿ ಸಮೃದ್ದ ಕರ್ನಾಟಕ 💧
ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ,
ಕಲಬುರಗಿ ಜಿಲ್ಲೆಯಲ್ಲಿ
✅ಕೆರೆಗಳ ಸಮಗ್ರ ಅಭಿವೃದ್ಧಿ,
✅ಜಲ ಸಂರಕ್ಷಣಾ ರಚನೆಗಳಿಗೆ ಆದ್ಯತೆ,
✅ಚೆಕ್ ಡ್ಯಾಂ ಹಾಗು ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ, ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೊಳಿಸಲು ಸಮಗ್ರವಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರಲಾಗುತ್ತಿದೆ. ಬಿಸಲನಾಡಿನ ಕಲಬುರಗಿ ಜನತೆಗೆ ಏತನೀರಾವರಿ ಯೋಜನೆಗಳ ಮೂಲಕ ನಮ್ಮ ಇಲಾಖೆಯು ಶಾಶ್ವತ ಪರಿಹಾರವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಆಳಂದ ತಾಲೂಕಿನ ಹಳ್ಳಗಳನ್ನುಸ್ವಚ್ಛ ಗೊಳಿಸಿ, ಚಿಕ್ಕ ಚಿಕ್ಕ ಚೆಡ್ ಡ್ಯಾಮ್ ಗಳು, 5.1ಕೋಟಿ ವೆಚ್ಚದಲ್ಲಿ ಕವಲಗ ನಾಲೆಗೆ ಚೆಕ್ ಡ್ಯಾಂ, 14 ಕೋಟಿ ವೆಚ್ಚದಲ್ಲಿ ನೂತನ ಕೋತನಹಿಪ್ಪರಗ ಕೆರೆ ನಿರ್ಮಾಣದಂಥ ಅನೇಕ ಕಲಬುರಗಿ ಜಿಲ್ಲೆಯನ್ನು ಹಸಿರನಾಡಾಗಿಸುವ ಅಭಿವೃದ್ಧಿ ಯೋಜನೆಗಳ ಸಮಗ್ರ ಮಾಹಿತಿ ಈ ಕಿರು ಚಿತ್ರಣದಲ್ಲಿದೆ.
#kalburgi #KalyanaKarnataka @PriyankKharge@siddaramaiah@DKShivakumar
💧ಸುಸ್ತಿರ ಶಿವಮೊಗ್ಗ ಸಮೃದ್ದ ಕರ್ನಾಟಕ 💧
ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ,
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ
✅ಕೆರೆಗಳ ಸಮಗ್ರ ಅಭಿವೃದ್ಧಿ,
✅ಜಲ ಸಂರಕ್ಷಣಾ ರಚನೆಗಳಿಗೆ ಆದ್ಯತೆ,
✅ಚೆಕ್ ಡ್ಯಾಂ ಹಾಗೂ ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ, ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೊಳಿಸಲು ಸಮಗ್ರವಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರಲಾಗುತ್ತಿದೆ. ಮಲೆನಾಡಿನ ಜನತೆಗೆ ಏತನೀರಾವರಿ ಯೋಜನೆಗಳ ಮೂಲಕ ನಮ್ಮ ಇಲಾಖೆಯು ಶಾಶ್ವತ ಪರಿಹಾರವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 2 ಕೋಟಿ. 75 ಲಕ್ಷ ವೆಚ್ಚದಲ್ಲಿ ತುಂಗನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ, ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು 9.96 ಕೋಟಿರೂ. ವೆಚ್ಚದಲ್ಲಿ ಮತ್ತೂರು ತಡೆಗೋಡೆ, 29 ಕೋಟಿ ವೆಚ್ಚದಲ್ಲಿ ಹೊಳೆ ಹನಸವಾಡಿ ಏತ ನೀರಾವರಿ, 20 ಕೋಟಿ ವೆಚ್ಚದಲ್ಲಿ ಹೊಳಲೂರು ಏತನೀರಾವರಿಯಂಥ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಅಂತರ್ಜಲ ಅಭಿವೃದ್ಧಿಗೆ, ಕೆರೆಗಳ ಸಮಗ್ರ ರಕ್ಷಣೆಗೆ ಮುನ್ನುಡಿ ಬರೆಯಲಾಗಿದೆ. ಈ ಎಲ್ಲಾ ಯೋಜನೆಗಳ ಮಾಹಿತಿ ಈ ಕಿರು ಚಿತ್ರಣದಲ್ಲಿದೆ.
#Shivamogga
@siddaramaiah@DKShivakumar@Madhu_Bangarapp