ಉಪವಾಸ ಸತ್ಯಾಗ್ರಹ : ಪಿತೂರಿಯಲ್ಲ ಪ್ರಶ್ನೆ!
"ನನಗೆ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಸಾವಿರಾರು ಸಂದೇಶ ಬರುತ್ತಿವೆ, ದಯವಿಟ್ಟು ನನಗೆ ಉಪವಾಸ ನಿಲ್ಲಿಸಲು ಹೇಳಬೇಡಿ ನೀವು ಈ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸಿ" ಕಳೆದ 18 ದಿನಗಳಿಂದ ಅನ್ನ-ಆಹಾರ ಸೇವಿಸದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವೈಫಲ್ಯಕ್ಕೆ ಶಿಕ್ಷಣ ಮಂತ್ರಿಯಾದ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕರ ಮಾತುಗಳಿವು.
ಇಷ್ಟು ದಿನಗಳಲ್ಲಿ ಈಗಾಗಲೇ ಒಂಬತ್ತು ಕೆಜಿ ತೂಕ ಇಳಿದು, ವೈದ್ಯರು ಅಂಗಾಂಗ ವೈಫಲ್ಯಗಳ ಎಚ್ಚರಿಕೆ ನೀಡಿದ್ದರೆ, ವಾಂಗ್ಚುಕ್ ಸರ್ಕಾರದ ಹೊಣೆಗಾರಿಕೆಯನ್ನ ಕೇಳುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಈ ಹರತಾಳಕ್ಕೆ ಬೆಂಬಲ ಸೂಚಿಸಿದ್ದಾರೆ ಆದರೆ ಸರ್ಕಾರ ಮಾತ್ರ ಗುಮ್ಮನೆ ಕುಳಿತಿದೆ.
'ಉಪವಾಸ ಸತ್ಯಾಗ್ರಹ' ಎನ್ನುವುದು ಅಷ್ಟು ಸುಲಭವಾದದ್ದಲ್ಲ. ಯಾರು ಬೇಕಾದರೂ ಮಾಡಬಹುದಾದದ್ದಲ್ಲ. ಜಗತ್ತಿನ ಇತಿಹಾಸದಲ್ಲಿ ಈ ರೀತಿಯ ಚಳುವಳಿಗಳ ನಡೆದದ್ದು ತೀರಾ ವಿರಳ. ಆಧುನಿಕ ಇತಿಹಾಸದಲ್ಲಿ ಇದಕ್ಕೊಂದು ರೂಪ ಕೊಟ್ಟ ನಾಯಕ ಎಂದರೆ ಅದು ಮಹಾತ್ಮ ಗಾಂಧೀಜಿಯವರು.
"ನಾವೇ ಶ್ರೇಷ್ಠರು ಭಾರತೀಯರು ಆಳಿಸಿಕೊಳ್ಳಲಿಕ್ಕೆ ಮಾತ್ರ ಅರ್ಹರು, ನಾವಿಟ್ಟಂತೆ ಇರಬೇಕಾದದ್ದು ಅವರ ಧರ್ಮ" ಎಂಬ ಕಲ್ಪನೆಯಲ್ಲಿ ಭಾರತವನ್ನು ಕೊಳ್ಳೆ ಹೊಡೆಯುತ್ತಾ ಸಂಪೂರ್ಣವಾಗಿ ನಿಸ್ತೇಜ ಗೊಳಿಸುತ್ತಾ ನಡೆದಿದ್ದ ಬ್ರಿಟಿಷರನ್ನ ಹೊರದಬ್ಬಲು ಭಾರತೀಯರು ನಾನಾ ವಿಧದ ಪ್ರಯತ್ನವನ್ನ ನಡೆಸಿದ್ದರು, ಆದರೆ ಯಾವ ಪ್ರಯತ್ನವೂ ಯಶಸ್ಸು ಕಾಣದಾಗಿತ್ತು.
1857ರಲ್ಲಿ ನಡೆದ ಮಹಾ ಸಂಗ್ರಾಮ ಸ್ಪಷ್ಟ ಗುರಿಯಿಲ್ಲದೆ, ದೃಢ ನಾಯಕತ್ವವಿಲ್ಲದೆ 1,50,000ಕ್ಕೂ ಹೆಚ್ಚು ಜೀವಗಳು ಅಸುನೀಗುವುದರೊಂದಿಗೆ ನಂದಿ ಹೋಗಿತ್ತು. ತದನಂತರ ಇವರನ್ನ ಹೊರದೂಡಲು ಬುದ್ದಿಜೀವಿಗಳೆಲ್ಲ ಸೇರಿ ಪ್ರಾರ್ಥನೆ ಮತ್ತು ಅರ್ಜಿಗಳ ವಿಧಾನ ದಾರಿ ಹಿಡಿದಿದ್ದರು. ಇದೆಲ್ಲಾ ಹಾಲಿನ ಮೇಲೆ ತೇಲುವಂತಹ ಕೆನೆಯಾಗಿತ್ತೆ ಹೊರತು, ಭಾರತದ ಬೇರುಗಳಾದ ಹಳ್ಳಿಗಳಿಗೆ ತಲುಪಿರಲಿಲ್ಲ. ಜನಮನ ಮೀಟಿರಲಿಲ್ಲ.
ಆದರೆ ಯಾವಾಗ ಮಹಾತ್ಮ ಗಾಂಧೀಜಿ ಅವರು 1918ರಲ್ಲಿ ಅಹಮದಾಬಾದಿನ ಗಿರಣಿ ಕಾರ್ಮಿಕರಿಗಾಗಿ ಮೂರು ದಿನದ ಉಪವಾಸ ಕುಳಿತರೋ ಅಂದು ಸರ್ಕಾರ ನಡುಗಿತು. ಅನಿರೀಕ್ಷಿತ ಆಯುಧಕ್ಕೆ ದಿಕ್ಕೆಟ್ಟಿತು! ಮಂಡಿಯೂರಿತು!
ತಮ್ಮ ಆರೋಗ್ಯದ ಸುಧಾರಣೆಗಾಗಿಯೋ ಅಥವಾ ದೈವ ಸಾಕ್ಷಾತ್ಕಾರದ ಅಖಂಡ ನಂಬಿಕೆಯಿಂದ ಮಾಡುವ ಉಪವಾಸವನ್ನು, ಸಮಾಜದ ಒಳಿತಿಗೆ ಮತ್ತು ಒಂದು ದೇಶದ ಸ್ವಾತಂತ್ರ್ಯಕ್ಕೆ ಬಳಸಿದ ಮೊದಲ ವ್ಯಕ್ತಿ ಮಹಾತ್ಮ ಗಾಂಧೀಜಿಯವರು. ಇದರಿಂದ ಹಳ್ಳಿ ಹಳ್ಳಿಗಳಿಗೂ ತಲುಪುವಲ್ಲಿ ಯಶಸ್ವಿಯಾದರು. ಭಾರತಕ್ಕೆ ಒಂದು ನವಕಲ್ಪನೆ ನೀಡಿದರು.
ಅಧಿಕಾರದ ಅಮಲೇರಿದ ಅಹಂಕಾರಕ್ಕೆ ಭೌತಿಕ ಬಂದೂಕಿಗಿಂತ ದೊಡ್ಡ ಸವಾಲನ್ನು ಹಸಿವಿನ ಹರತಾಳ ಒಡ್ಡುತ್ತದೆ. ಪಿಸ್ತೂಲಿನಿಂದ ಸಿಡಿದ ಗುಂಡು ಒಂದು ಬಾರಿ ಹಾರಿ ಹೋಗಿ ಯಾರನ್ನೋ ಕೊಂದುಬಿಡಬಹುದು, ತದನಂತರ ಸರ್ಕಾರ ಆ ಬಂದೂಕುಧಾರಿಯನ್ನೇ ಇಲ್ಲವಾಗಿಸಿ ಬಿಡಬಹುದು. ಆದರೆ ಉಪವಾಸದ ಹಸಿವು ಎನ್ನುವುದಿದೆ ನೋಡಿ, ಇದು ಸರ್ಕಾರದ ಆತ್ಮಕ್ಕೆ ಸವಾಲುಡುತ್ತದೆ! ಜನರ ಅಂತಃಕರಣವನ್ನು ಬಡಿದೆಬ್ಬಿಸುತ್ತದೆ!
ಅಂತಹುದೇ ಹೋರಾಟವನ್ನೀಗ ಸೋನಮ್ ವಾಂಗಚುಕ್ರವರು ಮಾಡುತ್ತಿರುವುದು 18 ದಿನಗಳು ಕಳೆದರೂ, ಮಾನವೀಯತೆಯಿಂದಾದರೂ, ಸರ್ಕಾರದಿಂದ ಒಂದೇ ಒಂದು ಪ್ರತಿಕ್ರಿಯೆ ಬಾರದಿರುವುದು ವ್ಯವಸ್ಥೆಯ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿ.
ಉಪವಾಸ ಸತ್ಯಾಗ್ರಹ ಎಂಬುದು ಎದುರಾಳಿಯನ್ನು ಸೋಲಿಸುವ ರಾಜಕೀಯ ತಂತ್ರವಲ್ಲ. ಅದು ಅಧಿಕಾರದ ಮನಸಾಕ್ಷಿಯನ್ನು ಎಚ್ಚರಿಸುವ ಕರೆಗಂಟೆ. ಎಂದೂ ಮುಳುಗದ ಬೃಹತ್ ಬ್ರಿಟಿಷ್ ಸಾಮ್ರಾಜ್ಯದ ಮುಂದೆ ನಿಂತಿದ್ದ ನಿರಾಯುಧ ಗಾಂಧೀಜಿಯನ್ನ ಜಗತ್ತು ಗೌರವಿಸಿದ್ದು, ಅವರ ದೇಹಬಲಕ್ಕಾಗಿ ಅಲ್ಲ. ಉಪವಾಸ ಸತ್ಯಾಗ್ರಹದ ನೈತಿಕ ಬಲದ ಮುಂದೆ ತಲೆದೂಗಿ. ಗಾಂಧೀಜಿಯವರ ಈ ಪರಂಪರೆ ಭಾರತ ಮಾತ್ರವಲ್ಲ ಆಫ್ರಿಕಾದ ನೇಲ್ಸನ್ ಮಂಡೇಲರವರಿಗೂ ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರಿಗೂ ಸ್ಪೂರ್ತಿಯಾದದ್ದು ಅದರ ಶಕ್ತಿಯ ದ್ಯೋತಕ.
ಭಾರತದ ಸ್ವತಂತ್ರ ಹೋರಾಟದಲ್ಲಿ ಒಂದು ಮಹತ್ವದ ಮೈಲಿಗಲ್ಲಾದ ಈ ವಿಧಾನವು ಸ್ವಾತಂತ್ರ್ಯ ನಂತರವೂ ಮುಂದುವರೆಯಿತು. ಪ್ರಭುತ್ವ ಮತ್ತು ಜನರ ನಡುವಿನ ಸಂವಾದದ ಬಿಗಿಕೊಂಡಿಯಾಯಿತು. ಜವಾಹರಲಾಲ್ ನೆಹರುರವರು ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಸಹಜ ಮಹತ್ವ ಮಹತ್ವದ ಲಕ್ಷಣ ಎಂದುಕೊಂಡೆ ಬಂದವರು. ಸದನದಲ್ಲಿ ತಮ್ಮದೇ ಸರ್ಕಾರವನ್ನು ಟೀಕಿಸುತ್ತಿದ್ದ ಅಟಲ್ ಜಿ ಅವರ ವಾದ ಸರಣಿಯನ್ನು ತದೇಕಚಿತ್ತದಿಂದ ಕೇಳುತ್ತಿದ್ದರು.
ಇದೇ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಸುಮಾರು 58 ದಿನ ಉಪವಾಸ ಮಾಡಿ ಮರಣ ಹೊಂದಿದ ಪೊಟ್ಟಿ ಶ್ರೀರಾಮುಲು ಅವರದ್ದು ಭಾರತ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ನಡೆದ ಒಂದು ಕಹಿ ಘಟನೆ. ತದ ನಂತರದಲ್ಲಿ ಪ್ರಜೆಗಳ ಒತ್ತಾಯಕ್ಕೆ ಮಣಿದು, ಫಜಲ್ ಅಲಿ ಆಯೋಗದ ಶಿಫಾರಸ್ಸಿನಲ್ಲಿ ಪ್ರತ್ಯೇಕ ರಾಜ್ಯಗಳ ರಚನೆಯನ್ನೇ ಮಾಡಿಬಿಟ್ಟಿತ್ತು ಅಂದಿನ ಸರ್ಕಾರ.
2011ರಲ್ಲಿ ಲೋಕಪಾಲಗಾಗಿ ಉಪವಾಸ ಕುಳಿತ ಅಣ್ಣಾ ಹಜಾರೆಯವರತ್ತ ಅಂದಿನ ಯುಪಿಎ ಸರ್ಕಾರ ಹತ್ತೇ ದಿನಕ್ಕೆ ಧಾವಿಸಿ ಬಂದಿತ್ತು. ಉಪವಾಸಕ್ಕೆ ಅಂತ್ಯ ಹೇಳಿಸಿ ಕರಡು ಸಮಿತಿ ರಚನೆ ಮಾಡಿತು. ಸಂಸತ್ತಿನಲ್ಲಿ ಚರ್ಚೆಗಳಾದವು.
ಅಂದಿನ ಸರ್ಕಾರ ಹಜಾರೆ ಅವರ ಕ್ರೆಡಿಬಿಲಿಟಿಯನ್ನ ಪ್ರಶ್ನಿಸಲಿಲ್ಲ, ಅವರನ್ನು ದೇಶದ್ರೋಹಿ ಎನ್ನಲಿಲ್ಲ! ಪಾಕಿಸ್ತಾನಕ್ಕೆ ಹೋಗು ಎನ್ನಲಿಲ್ಲ! ಅವರ ಕೂಗಿಗೆ ಕಿವಿಗೊಟ್ಟಿತು. ಅವರ ಹಂಬಲಕ್ಕೆ ಆಸರೆಯಾಯಿತು.
ಆದರೆ ಇಂದು ಸೋನಮ್ ವಾಂಗ್ಚುಕ್ ವಿಜ್ಞಾನಿಯೇ ಅಲ್ಲ! ಅವರೊಂದಿಗೆ ಇರುವ ಸಿಜೆಪಿ ತುಕುಡೆ ತುಕಡೇ ಗ್ಯಾಂಗ್! ಅಥವಾ ಸಿಜೆಪಿ ಆಪ್ ಪಕ್ಷದ ಹೊಸ ರೂಪ! ಇವರೆಲ್ಲ ದೇಶದ್ರೋಹಿಗಳು! ಎನ್ನುವ ಇಲ್ಲದ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ.
ನೀಟ್ ಪ್ರಶ್ನೆ ಪತ್ರಿಕೆ ಪದೇ ಪದೇ ಸೋರಿಕೆಯಾದರೂ ಅದರ ಬಗ್ಗೆ ಬೇಜವಾಬ್ದಾರಿ ತೋರಿದ ಸರ್ಕಾರ ಮತ್ತು ಮಂತ್ರಿಯವರನ್ನು ಪ್ರಶ್ನಿಸಬೇಕಿದ್ದ ಮಾಧ್ಯಮಗಳು ಪ್ರಜೆಗಳನ್ನು ತೆಪ್ಪಗಿರಲು ಹೇಳುತ್ತಿವೆ.
ಸರ್ಕಾರಿ ಮಾಧ್ಯಮವಾದ ದೂರದರ್ಶನದಲ್ಲಿ ದೊಡ್ಡ ಸಂಬಳಕ್ಕೆ ನಿಯುಕ್ತಿಗೊಂಡಿರುವ ಸುಧೀರ್ ಚೌದರಿಯಂತೂ "ಸೋನಮ್ ವಾಂಗಚ್ಕರ ಉಪವಾಸ ನಿಲ್ಲಿಸಬೇಕಾದ ಜವಾಬ್ದಾರಿಯನ್ನು ಸಿಜೆಪಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೇಲೆ ಹಾಕಿ ಕೈ ತೊಳೆದುಕೊಂಡಿದ್ದಾರೆ. ಪ್ರಜೆಗಳ ಕಷ್ಟಗಳನ್ನು ಸರ್ಕಾರಕ್ಕೆ ತಲುಪಿಸುವ ಸೇತುವೆಯಾಗಬೇಕಾದ ಮಾಧ್ಯಮಗಳೇ ಹೀಗಾದರೆ, ಪ್ರಜಾಪ್ರಭುತ್ವ ಉಳಿಯುವುದು ಹೇಗೆ? ಆಳುವವರ ಹೊಗಳುಭಟರಂತೆ ಮಾಧ್ಯಮಗಳು ವರ್ತಿಸಿದರೆ, ಅದು ರಾಜಪ್ರಭುತ್ವವಲ್ಲದೆ ಇನ್ನೇನು? ಈ ಪುಣ್ಯಕ್ಕಾಗಿ ನಾವು ಬ್ರಿಟಿಷರನ್ನು ಹೊರದಬಿದ್ದೆ?
ಬರಿ ಚುನಾವಣೆ ಗೆಲ್ಲುವುದರಿಂದ ಮಾತ್ರ ಸಾಧನೆ ಆಗುವುದಿಲ್ಲ. ಆಡಳಿತದಲ್ಲಿ ಸಂವೇದನೆ ಇರಬೇಕು. ಹಿಟ್ಲರ್ ಕೂಡ ಚುನಾವಣೆ ಗೆದ್ದೇ ಸರ್ವಾಧಿಕಾರಿಯಾಗಿದ್ದ. ಉತ್ತರ ಕೋರಿಯಾದಲ್ಲಿ ಕೂಡ ಚುನಾವಣೆಗಳು ನಡೆಯುತ್ತವೆ. ಅಧಿಕಾರ ನಡೆಸುವವರಿಗೆ ಟೀಕೆ ವಿಮರ್ಶೆಗಳನ್ನು ಕೇಳುವ, ತಾಳುವ ಮತ್ತು ಅದಕ್ಕೆ ಬಾಧ್ಯತೆ ತೋರುವ ನೈತಿಕತೆ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವದ ಅಣಕವೇ ಸರಿ.
ಗಂಗಾ ನದಿ ಸಂರಕ್ಷಣೆಗಾಗಿ ಆಮರಣಾಂತ ಉಪವಾಸ ಮಾಡಿ ಜೀವ ತ್ಯಾಗ ಮಾಡಿದ ಪ್ರೊಫೆಸರ್ ಜಿ ಡಿ ಅಗರವಾಲರ ಕೂಗಿಗೆ ಸರ್ಕಾರ ಓಗೊಡದೇ ಹೋಯಿತು. 2020-21 ರಲ್ಲಿ ದೆಹಲಿಯ ಹೊರವಲಯದಲ್ಲಿ ನಡೆದ ಕೃಷಿ ಕಾನೂನುಗಳ ವಿರುದ್ಧದ ರೈತ ಚಳುವಳಿಗಳಲ್ಲಿ ನೂರಾರು ರೈತರು ಜೀವತೆತ್ತರೂ ಸರ್ಕಾರ ಅಲ್ಲಿಗೆ ಧಾವಿಸದೆ, ರಸ್ತೆಗೆ ಗೋಡೆ ಕಟ್ಟುತ್ತಿತ್ತು! ಇವು ಆಳುಗರ ದಪ್ಪ ಚರ್ಮವನ್ನು ಸೂಚಿಸುತ್ತವಲ್ಲವೇ?
ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವರು ರಾಷ್ಟ್ರದ್ರೋಹಿಗಳಲ್ಲ, ಜನಮನದ ಪ್ರತಿನಿಧಿಗಳು ಎಂಬ ಅರಿವು ಸರ್ಕಾರಕ್ಕೆ ಇರಬೇಕು. ಉಪವಾಸ ಎನ್ನುವುದು ಪಿತೂರಿಯಲ್ಲ, ಬದಲಿಗೆ ಅಧಿಕಾರದ ನೈತಿಕತೆಯನ್ನು ಪರೀಕ್ಷಿಸುವ ಪ್ರಶ್ನೆ ಎಂಬ ಸ್ಪಷ್ಟತೆ ಇರಬೇಕು. "ಸತ್ಯದ ಮುಂದೆ ಅಧಿಕಾರವು ತಲೆಬಾಗಲೇಬೇಕು" ಎಂಬ ಗಾಂಧೀಜಿಯವರ ಮಾತಿನಂತೆ ಆದಷ್ಟು ಬೇಗ ಕೇಂದ್ರ ಮಂತ್ರಿಯವರ ತಲೆದಂಡವಾಗಲಿ. ವಾಂಗ್ಚುಕರ ಉಪವಾಸ ಅಂತ್ಯವಾಗಲಿ. ವ್ಯವಸ್ಥೆ ಹಸನಾಗಲಿ ಎಂದು ಆಶಿಸೋಣ.
-
ಪ್ರವೀಣ ಮ ಮಗದುಮ್ಮ
ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ಸಮಾವೇಶದ ಪ್ರಧಾನ ವೇದಿಕೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ನೀಡಿಲ್ಲ. ನಮ್ಮ ನೆಲ, ನೀರು,ಗಾಳಿ, ಜನ ಎಲ್ಲ ಬೇಕು, ಆದರೆ ಭಾಷೆ ಮಾತ್ರ ಬೇಡ. ದತ್ತಾತ್ರೇಯ ಹೊಸಬಾಳೆಯವರು ಕನ್ನಡದವರಾಗಿದ್ದೂ ಹೀಗ್ಯಾಕೆ?
3 ನೇ ಬಾರಿಯೂ ಮೋದಿಯವರೇ ಪ್ರಧಾನಿಯಾಗುವಂತೆ ಆಶೀರ್ವದಿಸಿದ ಪ್ರಭು ಶ್ರೀರಾಮಚಂದ್ರರಿಗೆ ಅನಂತಕೋಟಿ ಪ್ರಣಾಮಗಳು.
2 ನೇ ಅವಧಿಯ ನಂತರ ಇವರು ಸೋತಿದ್ದರೆ, ಅನೇಕರು, ಈ ಮೋದಿಯವರನ್ನು ಅವತಾರ ಪುರುಷರಂತೆ ಪೂಜಿಸುತ್ತಿದ್ದರು! ಈ 3ನೇ ಅವಧಿಯಲ್ಲೇ ಮೋದಿಯವರು ನಿಜವಾದ ಪಪ್ಪು ಯಾರೆಂಬುದನ್ನು ಸಾಬೀತುಪಡಿಸುತ್ತಿದ್ದಾರೆ.
*My Excellency, *Isreal is Fatherland, *2+6=8, 1+7=8 ಇವೆಲ್ಲ ಸಣ್ಣ ಉದಾಹರಣೆ ಮಾತ್ರ.
ಜತೆಗೆ, ಲೇಸರ್ ಕಣ್ಣಿನ ಶಂಕ್ರು ಸರ್ ದೊಡ್ಡ ರಾಜತಾಂತ್ರಿಕರೂ, ಎಥೆನಾಲ್ ದೊರೆ ಗಡ್ಕರಿ ಸರ್ ಬಲು ಪ್ರಾಮಾಣಿಕರೂ, ನಿರ್ಮಲಾ ತಾಯಿ ಪ್ರಬಲ ಸಜಿವೆಯರು ಎನ್ನುವ ತಪ್ಪು ತಿಳುವಳಿಕೆ ಆವರಿಸಿಬಿಡುತ್ತಿತ್ತು!
ನಾನು BJPಯವರಿಗಿಂತ ಹೆಚ್ಚು ದೇವರನ್ನು ನಂಬುತ್ತೇನೆ. ಅದು, BJP ಯ ಕಾರ್ಯಕ್ರಮಗಳೋ ಅಥವಾ RSS ನ ಬೈಠಕಗಳೋ ಕಲಿಸಿದ್ದಲ್ಲ; ನಮ್ಮ ಮನೆಯಲ್ಲಿ ಕಲಿಸಿದ ಸಂಸ್ಕಾರ. ಯಾರು ಏನೇ ಹೇಳಲಿ, ದೇವರು ಇದ್ದಾನೆ. ಈ BJP ಗೆ ಗತಿ ಕಾಣಿಸೋದು ಅವನೇ. ಜೈ ಶ್ರೀರಾಮ್! ಜೈ ಜೈ ಶ್ರೀರಾಮ್! ಜೈ ಸಿಯಾರಾಮ್! ಜೈ ಜೈ ಸಿಯಾರಾಮ್!
Bro Joined Traffic Police
Owned assets of more than ₹700 crores. His driver owns ₹100 crores
All with a salary of ₹ 68,000 per month. The power of disciplined corruption.
I added my family members' profiles to the new Aadhaar application five days ago. However, the profiles are still not displaying in the app. Please assist.
@UIDAI
ಇದು ಕಾಂಟ್ರವರ್ಸಿ ಆಗಬಹುದು, ಆದರೆ, ಕನ್ನಡನಾಡಿನ, ಕನ್ನಡಿಗರ ಮತ್ತು ಕನ್ನಡತನದ ಹಿತಕ್ಕಾಗಿ ಹೇಳಲೇಬೇಕಾದ್ದು, ಪಾಲಿಸಲೇಬೇಕಾದ್ದು!
ಯುರೋಪಿನಿಂದ ಪೋರ್ಚುಗೀಸರು, ಬ್ರಿಟಿಷರು ಮತ್ತು ಫ್ರೆಂಚರು, ಇವರೆಲ್ಲ ಭಾರತಕ್ಕೆ ಬಂದುದು ವ್ಯಾಪಾರಕ್ಕೆಯೇ. ಆದರೆ, ದಿನಗಳೆದಂತೆ, ಇಡೀಯ ವ್ಯವಸ್ಥೆಯನ್ನೇ ಕೈವಶ ಮಾಡಿಕೊಂಡರು.
ಇದೇ ರೀತಿ, ಇಂದು ಉತ್ತರ ಭಾರತೀಯರು ಅಪಾರ ಸಂಖ್ಯೆಯಲ್ಲಿ ಪ್ರತಿದಿನ ಮಿತಿಯಿಲ್ಲದಂತೆ, ದಕ್ಷಿಣಕ್ಕೆ ಬಂದು ವ್ಯಾಪಾರ ಉದ್ಯೋಗಗಳಲ್ಲಿ ವ್ಯಾಪಿಸಿದ್ದಾರೆ. ಅವರ ಒಗ್ಗಟ್ಟಲ್ಲಿನ 10% ನಮ್ಮಲ್ಲಿಲ್ಲ.
ಇನ್ನು, ಬೆಂಗಳೂರು ನಗರದಲ್ಲಂತೂ, ಕೇವಲ ಉತ್ತರ ಭಾರತೀಯರು ಮಾತ್ರವಲ್ಲ, ತಮಿಳರು, ತೆಲುಗರು, ಮಲಯಾಳಿಗಳೂ ತುಂಬಿ ತುಳುಕುತ್ತಿದ್ದಾರೆ.
ಅವರ ವೈಯಕ್ತಿಕ ಜೀವನದ ಹಕ್ಕನ್ನು ಗೌರವಿಸೋಣ, ಆದರೆ, ಬೆಂಗಳೂರು ಕನ್ನಡಿಗರದ್ದು, ಹಾಗಾಗಿ ಕನ್ನಡತನ ಮತ್ತು ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಕನ್ನಡಿಗರು ಒಕ್ಕೋರಲವಾಗಿ ದನಿ ಎತ್ತಬೇಕು. Inner Line Permit is the need of the hour.
ಉದ್ಯೋಗಗಳಲ್ಲಿ, ಉದ್ಯಮಗಳಲ್ಲಿ ಒಗ್ಗಟ್ಟಾಗಿ ದುಡಿಯಬೇಕು. ಯುವಕರಿಗೆ ಅರಿವು ಮೂಡಿಸಿ ತರಬೇತಿ ನೀಡಿ ಉದ್ಯೋಗ ನೀಡಬೇಕು. ಯುವಕರೂ ಆಲಸ್ಯ ತೊರೆದು ದುಡಿಯಬೇಕು.
ಮೈಮರೆತರೆ, ಬೆಂಗಳೂರು ಪರರ ಸ್ವತ್ತಾಗುತ್ತದೆ. Be alert!
ಕರ್ಣಾಟ ಬಲ ಅಜೇಯಂ!
Govt has to simply allow normal petrol at 25% higher price. #E20 at 100rs while 125+ for normal #petrol. Let the public choose whatever they want
I assure you after few months public will automatically start using E20, except done rich guys and that will be bonus income for govt.
𝐓𝐡𝐢𝐬 𝐈𝐬 𝐇𝐨𝐰 𝐓𝐡𝐞𝐲 𝐋𝐢𝐞 𝐓𝐨 𝐓𝐡𝐞 𝐍𝐚𝐭𝐢𝐨𝐧
𝐁𝐚𝐜𝐤 𝐢𝐧 𝐉𝐮𝐥𝐲 𝟐𝟎𝟐𝟓, Defence Minister 𝐑𝐚𝐣𝐧𝐚𝐭𝐡 𝐒𝐢𝐧𝐠𝐡 told the Lok Sabha that NO Indian Military Personnel were Harmed or Killed during Operation Sindoor.
𝐍𝐎𝐖 they are claiming that Six Armed Forces Personnel were killed in the same Operation — and their Names have been Published in the Roll of Honour at the National War Memorial:
• Subedar Major Pawan Kumar
• Havildar Sunil Kumar Singh
• Lance Naik Dinesh Kumar
• Rifleman Sunil Kumar
• Agniveer Murali Naik
• Sergeant Surendra Kumar (Indian Air Force)
Will Anyone Demand An Explanation For Rajnath Singh's Lie In The #LokSabha ?
#OperationSindoor #1NewsApp #शुद्ध_जल_पियेगा_हिंदुस्तान
ಈ ದಿನ ಸಂಪಾದಕೀಯ | ಘೋರಿ ಘಜ್ನಿಗೂ ಶ್ರೀರಾಮನ ಸಂಪತ್ತು ಲೂಟಿ ಹೊಡೆದಿರುವವರಿಗೂ ವ್ಯತ್ಯಾಸ ಏನುಳಿಯಿತು?
ಮೊಘಲರು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿ ಸಂಪತ್ತು ದೋಚುತ್ತಿದ್ದರು. ಇದೀಗ ಹಿಂದೂಗಳ ದೇವಸ್ಥಾನವನ್ನು ಹಿಂದೂಗಳೇ ಲೂಟಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ದೇಣಿಗೆ ನೀಡದವರು, ಮಂದಿರಕ್ಕೆ ಭೇಟಿ ಕೊಡದವರಿಗೆ ಆರೋಪ ಮಾಡುವ ಹಕ್ಕಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಇದು ಕೋಟ್ಯಂತರ ರಾಮ ಭಕ್ತರ, ಹಿಂದೂಗಳ ನಂಬಿಕೆಯ ಪ್ರಶ್ನೆ. ದೇವರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಕೆ ಮಾಡಿಕೊಂಡವರು ಇದಕ್ಕೆ ಉತ್ತರಿಸಲೇಬೇಕಿದೆ.
#RamMandir #Ayodhya #RamTemple #Editorial #Opinion #Politics #IndianPolitics #BJP #Hindutva #TempleFunds #TempleGovernance #PublicAccountability #ReligiousInstitutions #FaithAndPolitics #Democracy #SocialJustice #CurrentAffairs #NewsAnalysis #KannadaNews #KarnatakaNews #IndiaNews #Eedina #BreakingNews #PoliticalDebate #EditorialAnalysis